10.75 ಕೋಟಿಗೆ ಹರಾಜಾದ ಬೆನ್ನಲ್ಲೆ ಅಬ್ಬರಿಸಿದ ಮ್ಯಾಕ್ಸ್​ವೆಲ್; 39 ಎಸೆತಗಳಲ್ಲಿ ಸಿಡಿಸಿದ ರನ್ ಎಷ್ಟು ಗೊತ್ತಾ?

Glenn Maxwell: ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮ್ಯಾಕ್ಸ್​ವೆಲ್ ಅವರನ್ನು ಕೊಂಡುಕೊಳ್ಳಲು ಹೆಚ್ಚಿನ ಫ್ರಾಂಚೈಸಿ ಮುಂದೆಬಂತು. ಆದರೆ, ಅಂತಿಮವಾಗಿ ಕಿಂಗ್ಸ್​ ಇಲೆವೆನ್ ಪಂಜಾಬ್ ಫ್ರಾಂಚೈಸಿ 10 ಕೋಟಿ 75 ಲಕ್ಷ ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

Vinay Bhat | news18-kannada
Updated:December 21, 2019, 8:28 AM IST
10.75 ಕೋಟಿಗೆ ಹರಾಜಾದ ಬೆನ್ನಲ್ಲೆ ಅಬ್ಬರಿಸಿದ ಮ್ಯಾಕ್ಸ್​ವೆಲ್; 39 ಎಸೆತಗಳಲ್ಲಿ ಸಿಡಿಸಿದ ರನ್ ಎಷ್ಟು ಗೊತ್ತಾ?
ಗ್ಲೆನ್ ಮ್ಯಾಕ್ಸ್​ವೆಲ್​
  • Share this:
ಬೆಂಗಳೂರು (ಡಿ. 21): ಗುರುವಾರವಷ್ಟೆ ಮುಕ್ತಾಯಗೊಂಡ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್​​ವೆಲ್​ ದುಬಾರಿ ಮೊತ್ತಕ್ಕೆ ಸೇಲ್ ಆದ ಎರಡನೇ ಆಟಗಾರ. ಇದಾದ ಬೆನ್ನಲ್ಲೆ ಬಿಗ್​ಬ್ಯಾಷ್ ಟಿ-20 ಲೀಗ್​ನಲ್ಲಿ ಮ್ಯಾಕ್ಸ್​​ವೆಲ್​ ಸ್ಫೋಟಕ ಬ್ಯಾಟಿಂಗ್ ನಡೆಸಿ ಸುದ್ದಿಯಲ್ಲಿದ್ದಾರೆ.

ಈ ಮೂಲಕ ಕಳೆದ ಕೆಲವು ತಿಂಗಳುಗಳಿಂದ ಕ್ರಿಕೆಟ್​​ನಿಂದ ವಿಶ್ರಾಂತಿ ಪಡೆದು ಮಾನಸಿಕ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಮ್ಯಾಕ್ಸ್​ವೆಲ್​​ ಭರ್ಜರಿ ಕಮ್​ಬ್ಯಾಕ್ ಮಾಡಿದ್ದಾರೆ. ಅಲ್ಲದೆ ಐಪಿಎಲ್​ನಲ್ಲೂ ತನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವ ಭರವಸೆ ನೀಡಿದ್ದಾರೆ.

 


IPL 2020 Auction: ಐಪಿಎಲ್ ಹರಾಜಿನಲ್ಲಿ ಕಂಗೊಳಿಸಿದ ಹೈದರಾಬಾದ್ ಚೆಲುವೆ; ಅಷ್ಟಕ್ಕು ಯಾರು ಈಕೆ?

ಬಿಗ್​ಬ್ಯಾಷ್​ನಲ್ಲಿ ಮೆಲ್ಬೋರ್ನ್​​ ಸ್ಟಾರ್ಸ್​ ತಂಡದ ಪರ ಬ್ಯಾಟ್ ಬೀಸುತ್ತಿರುವ ಮ್ಯಾಕ್ಸ್​ವೆಲ್​ ಬ್ರಿಸ್ಬೇನ್ ಹೀಟ್ ವಿರುದ್ಧದ ಪಂದ್ಯದಲ್ಲಿ ಕೇವಲ 39 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಅಮೋಘ ಸಿಕ್ಸ್​ ಸಿಡಿಸಿ 83 ರನ್ ಚಚ್ಚಿದ್ದಾರೆ. ಅಲ್ಲದೆ 23 ಎಸೆತಗಳಲ್ಲಿ ವೇಗದ ಅರ್ಧಶತಕ ಬಾರಿಸಿ ತನ್ನದೇ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು.

ಇವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮೆಲ್ಬೀರ್ನ್​ ತಂಡ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಬ್ರಿಸ್ಬೇನ್ ತಂಡ 20 ಓವರ್​ನಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ ಗಳನ್ನಷ್ಟೆ ಗಳಿಸಲು ಶಕ್ತವಾಗಿ ಸೋಲೊಪ್ಪಿಗೊಂಡಿತು. ಬ್ರಿಸ್ಬೇನ್ ಪರ ಟಾಮ್ ಬಾಂಟಮ್ 36 ಎಸೆತಗಳಲ್ಲಿ 64 ರನ್ ಗಳಿಸಿದರು. ಮೆಲ್ಬೋರ್ನ್​ ಸ್ಟಾರ್ಸ್​​ 22 ರನ್​ಗಳ ಜಯ ತನ್ನದಾಗಿಸಿತು.

 ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ; ಮನುಷ್ಯನಾಗಿರುವುದೇ ಆತನ ಅಪರಾಧ: ಹರ್ಭಜನ್ ಸಿಂಗ್

ಗುರುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮ್ಯಾಕ್ಸ್​ವೆಲ್ ಅವರನ್ನು ಕೊಂಡುಕೊಳ್ಳಲು ಹೆಚ್ಚಿನ ಫ್ರಾಂಚೈಸಿ ಮುಂದೆಬಂತು. ಆದರೆ, ಅಂತಿಮವಾಗಿ ಕಿಂಗ್ಸ್​ ಇಲೆವೆನ್ ಪಂಜಾಬ್ ಫ್ರಾಂಚೈಸಿ 10 ಕೋಟಿ 75 ಲಕ್ಷ ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತು.

ಇನ್ನು ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲ್ ಆದ ಆಟಗಾರ ಆಸೀಸ್​ನ ವೇಗಿ ಪ್ಯಾಟ್ ಕಮಿನ್ಸ್​. ಇವರು ಬರೋಬ್ಬರಿ 15 ಕೋಟಿ 50 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್​ ಪಾಲಾದರು. ಇದು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತಕ್ಕೆ ಸೇಲ್ ಆದ ಮೊದಲ ವಿದೇಶಿ ಆಟಗಾರ.

ಗ್ಲೆನ್ ಮ್ಯಾಕ್ಸ್​ವೆಲ್ ಸ್ಫೋಟಕ ಬ್ಯಾಟಿಂಗ್​ನ ಹೈಲೇಟ್ಸ್​ ಇಲ್ಲಿದೆ:

First published:December 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ