IPL: ಐಪಿಎಲ್ ಹರಾಜಿನಲ್ಲಿ 14 ವರ್ಷದ ಪೋರ; ಈತನನ್ನು ಖರೀದಿಸುವ ತಂಡ ಯಾವುದು ಗೊತ್ತಾ?

IPL 2019 Auction: ಜನವರಿ 3, 2005 ರಂದು ಜನಿಸಿದ ನೂರ್ ಅಹ್ಮದ್ ಸ್ಲೋ ಲೆಫ್ಟ್​ ಆರ್ಮ್​ ಚೈನಾಮನ್ ಬೌಲರ್ ಆಗಿದ್ದಾರೆ. ಟಿ-20 ಈವರೆಗೆ 7 ಪಂದ್ಯಗಳನ್ನು ಇವರು ಆಡಿದ್ದು 8 ವಿಕೆಟ್ ಕಿತ್ತಿದ್ದಾರೆ. ಕೇವಲ 12 ರನ್ ನೀಡಿ 3 ವಿಕೆಟ್ ಪಡೆದಿರುವುದು ಅಹ್ಮದ್​ರ ಶ್ರೇಷ್ಠ ಸಾಧನೆಯಾಗಿದೆ.

ನೂರ್ ಅಹ್ಮದ್,

ನೂರ್ ಅಹ್ಮದ್,

  • Share this:
ಬೆಂಗಳೂರು (ಡಿ. 14): ಐಪಿಎಲ್ 13ನೇ ಆವೃತ್ತಿಯ ಹರಾಜಿಗೆ ದಿನಗಣನೆ ಶುರುವಾಗಿದೆ. ಇದೇ ಡಿಸೆಂಬರ್ 19 ರಂದು ಮೊದಲ ಬಾರಿ ಕೋಲ್ಕತ್ತಾ ಹರಾಜು ಪ್ರಕ್ರಿಯೆಗೆ ತಯಾರಾಗಿದೆ. ಎಲ್ಲ ಫ್ರಾಂಚೈಸಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿವೆ.

ಈಗಾಗಲೇ ಐಪಿಎಲ್ ಮಂಡಳಿ 971 ಆಟಗಾರರು ಸಲ್ಲಿಸದ ಅರ್ಜಿಯನ್ನು ಶಾರ್ಟ್​​ ಲಿಸ್ಟ್​ ಮಾಡಿ 332ಕ್ಕೆ ಇಳಿಸಿದೆ. ಖಾಲಿ ಇರುವ 73 ಸ್ಥಾನಕ್ಕಾಗಿ 332 ಆಟಗಾರರು ಕಾದಾಟ ನಡೆಸಲಿದ್ದಾರೆ. ಈ ಪೈಕಿ ಅತಿ ಕಿರಿಯ ವಯಸ್ಸಿನ ಅಫ್ಘಾನಿಸ್ತಾನ ಆಟಗಾರನ ಮೇಲೆ ಕೆಲವು ಫ್ರಾಂಚೈಸಿ ಕಣ್ಣಿಟ್ಟಿದೆ.

IPL Acution 2019: 14-year-old Afghanistan spinner Noor Ahmad youngest name in 13th IPL
ನೂರ್ ಅಹ್ಮದ್, ಅಫ್ಘಾನಿಸ್ತಾನ ಅಂಡರ್-19 ತಂಡದ ಆಟಗಾರ.


IND vs WI: ಏಕದಿನ ಸರಣಿಯಿಂದ ಭುವನೇಶ್ವರ್ ಔಟ್; ಈ ಆಟಗಾರನಿಗೆ ಸ್ಥಾನ!

ಅಫ್ಘಾನಿಸ್ತಾನ ಅಂಡರ್-19 ತಂಡದಲ್ಲಿ ಸಂಚಲನ ಸೃಷ್ಟಿಸಿದ್ದ 14 ವರ್ಷದ ಪೋರ ನೂರ್ ಅಹ್ಮದ್ ಐಪಿಎಲ್ ಹರಾಜಿನಲ್ಲಿ ಲಭ್ಯವಿರುವ ಅತಿ ಕಿರಿಯ ಆಟಗಾರ. ಕಳೆದ ತಿಂಗಳು ಭಾರತ ಅಂಡರ್-19 ತಂಡದ ವಿರುದ್ಧ ಅಹ್ಮದ್ ಅವರು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 9 ವಿಕೆಟ್ ಕಿತ್ತು ಭಾರೀ ಸುದ್ದಿಯಾಗಿದ್ದರು.

ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ರಾಜಸ್ಥಾನ್ ರಾಯಲ್ಸ್ ತಂಡ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಅಂದಾಜಿನಲ್ಲಿದೆ. ಇತ್ತೀಚೆಗಷ್ಟೆ ​​ ಅಹ್ಮದ್ ಅವರನ್ನು ಆರ್​ಆರ್ ತಂಡ ಸಂಪರ್ಕಿಸಿ ಟ್ರಯಲ್ ಕೂಡ ನಡೆಸಿದೆ.

ಸ್ಯಾಂಡಲ್​ವುಡ್​​ ನಟಿಯೊಂದಿಗೆ ಡೇಟಿಂಗ್​ನಲ್ಲಿದ್ದಾರೆ ರಿಷಭ್ ಪಂತ್? ಜನವರಿ 3, 2005 ರಂದು ಜನಿಸಿದ ನೂರ್ ಅಹ್ಮದ್ ಸ್ಲೋ ಲೆಫ್ಟ್​ ಆರ್ಮ್​ ಚೈನಾಮನ್ ಬೌಲರ್ ಆಗಿದ್ದಾರೆ. ಟಿ-20 ಈವರೆಗೆ 7 ಪಂದ್ಯಗಳನ್ನು ಇವರು ಆಡಿದ್ದು 8 ವಿಕೆಟ್ ಕಿತ್ತಿದ್ದಾರೆ. ಕೇವಲ 12 ರನ್ ನೀಡಿ 3 ವಿಕೆಟ್ ಪಡೆದಿರುವುದು ಅಹ್ಮದ್​ರ ಶ್ರೇಷ್ಠ ಸಾಧನೆಯಾಗಿದೆ.

 ಈ ಬಾರಿಯ ಐಪಿಎಲ್ ಹರಾಜಿಗೆ 7 ವಿದೇಶಿ ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ಎಂದು ತಿಳಿಸಿದ್ದಾರೆ. ಇನ್ನು 9 ಆಟಗಾರರು 1.5 ಕೋಟಿಗೆ ತಮ್ಮ ಬೆಲೆಯನ್ನು ನಿಗದಿ ಮಾಡಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಆಟಗಾರರಾದ ಪ್ಯಾಟ್‌ ಕಮಿನ್ಸ್‌, ಜಾಶ್‌ ಹೇಝಲ್‌ವುಡ್‌, ಕ್ರಿಸ್‌ ಲಿನ್‌, ಮಿಚೆಲ್‌ ಮಾರ್ಷ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇನ್‌ ಮತ್ತು ಶ್ರೀಲಂಕಾದ ಏಂಜಲೊ ಮ್ಯಾಥ್ಯೂಸ್‌ 2 ಕೋಟಿ ಲಿಸ್ಟ್‌ನಲ್ಲಿರುವ ಆಟಗಾರರು.

IPL 2020 Auction: ಐಪಿಎಲ್ ಹರಾಜಿಗೆ ಮ್ಯಾಕ್ಸ್​ವೆಲ್​, ಪ್ಯಾಟ್ ಕಮಿನ್ಸ್​ ಸೇರಿ 332 ಆಟಗಾರರ ಹೆಸರು ಪ್ರಕಟ

ಇನ್ನು 1.5 ಕೋಟಿ ರೂ. ಮೂಲ ಬೆಲೆಯ ಪಟ್ಟಿಯಲ್ಲಿ ರಾಬಿನ್‌ ಉತ್ತಪ್ಪ, ಶಾನ್‌ ಮಾರ್ಷ್‌, ಕೇನ್ ರಿಚರ್ಡ್ಸನ್‌, ಐಯಾನ್ ಮಾರ್ಗನ್‌, ಜೇಸನ್‌ ರಾಯ್‌, ಕ್ರಿಸ್‌ ವೋಕ್ಸ್‌, ಡೇವಿಡ್‌ ವಿಲ್ಲೀ, ಕ್ರಿಸ್‌ ಮಾರಿಸ್‌ ಮತ್ತು ಕೈಲ್‌ ಅಬಟ್‌ ಈ ಪಟ್ಟಿಯಲ್ಲಿ ಇರುವ ಸ್ಟಾರ್‌ ಆಟಗಾರರಾಗಿದ್ದಾರೆ.

ಕೆಕೆಆರ್​ನಿಂದ ಬಿಡುಗಡೆಯಾಗಿರುವ ಪಿಯೂಷ್ ಚಾವ್ಲಾ, ಯೂಸುಫ್ ಪಠಾಣ್ (ಸನ್​ರೈಸರ್ಸ್​​), ಜೈದೇವ್ ಉನಾದ್ಕಟ್ (ಆರ್​ಆರ್​) ಅವರ ಮೂಲಬೆಲೆ 1 ಕೋಟಿ ರೂ. ಆಗಿದೆ. 183 ಹೊಸ ಆಟಗಾರು 20 ಲಕ್ಷ, 40 ಲಕ್ಷದ 7 ಆಟಗಾರರು ಹಾಗೂ 30 ಲಕ್ಷದ 8 ಆಟಗಾರರಿದ್ದಾರೆ.

Published by:Vinay Bhat
First published: