• Home
  • »
  • News
  • »
  • sports
  • »
  • IPL 2023 ಹರಾಜಿನಲ್ಲಿ ಈ ಆಟಗಾರರು ಮೂಲೆಗುಂಪು? ಶುರುವಾಗಿದೆ ಗುಸುಗುಸು

IPL 2023 ಹರಾಜಿನಲ್ಲಿ ಈ ಆಟಗಾರರು ಮೂಲೆಗುಂಪು? ಶುರುವಾಗಿದೆ ಗುಸುಗುಸು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಐದು ಕ್ರಿಕೆಟಿಗರು ಮಾರಾಟವಾಗದೆ ಹೋಗಬಹುದು ಎಂಬ ಗುಸುಗುಸು ಶುರುವಾಗಿದೆ. ಈ ಐದು ಜನ ಕ್ರಿಕೆಟಿಗರು ಯಾರು ಅಂತ ಇಲ್ಲಿ ತಿಳಿಯಿರಿ.

  • News18 Kannada
  • Last Updated :
  • Karnataka, India
  • Share this:

ಪ್ರತಿ ವರ್ಷದಂತೆ ಈ ವರ್ಷವು ಸಹ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಹರಾಜಿನಲ್ಲಿ ಫಾರ್ಮ್​ನಲ್ಲಿರುವ ಆಟಗಾರರನ್ನು ತಮ್ಮ ತಮ್ಮ ತಂಡಕ್ಕೆ ದೊಡ್ಡ ಮೊತ್ತವನ್ನು ನೀಡಿ ಖರೀದಿಸಲು ಆಯಾ ಫ್ರಾಂಚೈಸಿಗಳು ತುದಿಗಾಲಿನ ಮೇಲೆ ನಿಂತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ವರದಿಗಳ ಪ್ರಕಾರ ಐಪಿಎಲ್ 2023 (IPL 2023 Auction) ಮಿನಿ ಹರಾಜಿಗೆ ಒಟ್ಟು 991 ಆಟಗಾರರು ಈಗಾಗಲೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಬಿಡ್ಡಿಂಗ್ ಈವೆಂಟ್ (IPL Auction) ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ  ನಡೆಯಲಿದೆ ಎಂದು ವರದಿಯಾಗಿದೆ. ಯಾವ ಆಟಗಾರ ಎಷ್ಟು ಮೊತ್ತಕ್ಕೆ, ಯಾವ ತಂಡದವರು ಖರೀದಿಸಿದರು ಅಂತ ನೋಡೋದಕ್ಕೆ ತುಂಬಾನೇ ಕಾತುರರಾಗಿದ್ದಾರೆ ಕ್ರಿಕೆಟ್ ಅಭಿಮಾನಿಗಳು.


ಈ ಹಿಂದೆ 2022 ರ ಐಪಿಎಲ್ ಹರಾಜಿನಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ರೊಮಾರಿಯೊ ಶೆಫರ್ಡ್ ಅವರಿಗೆ 7.75 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು. ಆದರೆ ಅವರನ್ನು ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಸಲು ಸಾಧ್ಯವಾಯಿತು.


ಶಿವಂ ಮಾವಿ ಕಥೆ ಏನು?
ಕೋಲ್ಕತ್ತಾ ನೈಟ್ ರೈಡರ್ಸ್ ಕಳೆದ ವರ್ಷ ಶಿವಂ ಮಾವಿ ಅವರನ್ನು 7.25 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು. ಆದರೆ ಅವರು ಬೌಲಿಂಗ್​ನಲ್ಲಿ ತುಂಬಾನೇ ರನ್ ನೀಡಿದ್ದರು. ಹೀಗಾಗಿ ಫ್ರಾಂಚೈಸಿ ಆರು ಪಂದ್ಯಗಳ ನಂತರ ಅವರನ್ನು ತಂಡದಿಂದ ಕೈಬಿಡಬೇಕಾಯಿತು. ಕೆಲವು ಕ್ರಿಕೆಟಿಗರು ಪ್ರತಿಭಾನ್ವಿತರು ಮತ್ತು ಫಾರ್ಮ್​ನಲ್ಲಿದ್ದರೂ ಸಹ ಫ್ರಾಂಚೈಸಿಗಳು ತಮ್ಮ ಹಣವನ್ನು ಅವರಿಗಾಗಿ ಖರ್ಚು ಮಾಡಲು ಹಿಂಜರಿಯುತ್ತಾರೆ ಅಂತಾನೆ ಹೇಳಬಹುದು.


ಇತಿಹಾಸವನ್ನು ಗಮನಿಸಿದರೆ ತಂಡಗಳು ಈ ದಿನಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಕ್ರಿಕೆಟಿಗರನ್ನು ಬಿಡ್ ಮಾಡುವ ಮೊದಲು ಸಾಕಷ್ಟು ಸಂಶೋಧನೆ ಮಾಡಲು ಕಲಿತಿವೆ. ಇದು ವಾಸ್ತವವಾಗಿ ಮುಂಬರುವ ಐಪಿಎಲ್ 2023 ರ ಹರಾಜಿನಲ್ಲಿ 2 ಕೋಟಿ ಬ್ರಾಕೆಟ್​ನಲ್ಲಿರುವ ಐದು ಕ್ರಿಕೆಟಿಗರು ಮಾರಾಟವಾಗದೆ ಹೋಗಬಹುದು ಎಂಬ ಗುಸುಗುಸು ಶುರುವಾಗಿದೆ. ಈ ಐದು ಜನ ಕ್ರಿಕೆಟಿಗರು ಯಾರು ಅಂತ ಇಲ್ಲಿ ತಿಳಿಯಿರಿ.


1. ಕ್ರಿಸ್ ಲಿನ್
ಪ್ರಸ್ತುತ ನಡೆಯುತ್ತಿರುವ ಅಬುಧಾಬಿ ಟೆನ್10 ಲೀಗ್​ನಲ್ಲಿ ಆಸೀಸ್ ಬ್ಯಾಟರ್ ಕ್ರಿಸ್ ಲಿನ್ ಅದ್ಭುತ ಫಾರ್ಮ್ ಅನ್ನು ತೋರಿಸಿದ್ದಾರೆ. ಆದರೆ ಅದರ ಹೊರತಾಗಿಯೂ, ಮುಂಬರುವ ಐಪಿಎಲ್ ಹರಾಜಿನಲ್ಲಿ 32 ವರ್ಷದ ಆಟಗಾರನನ್ನು ತಂಡಗಳು ಕಡೆಗಣಿಸಬಹುದು.


ಬಹುತೇಕ ಎಲ್ಲಾ ತಂಡಗಳು ಮುಂದಿನ ಋತುವಿನಲ್ಲಿ ತಮ್ಮ ಆರಂಭಿಕರನ್ನು ವಿಂಗಡಿಸಿರುವುದರಿಂದ, ಲಿನ್ ಅವರ ಅಗತ್ಯವಿಲ್ಲ ಅಂತಾಗಬಹುದು. ಅದಕ್ಕಿಂತ ಹೆಚ್ಚಾಗಿ, ಇತ್ತೀಚಿನ ಭಾರತೀಯ ಪರಿಸ್ಥಿತಿಗಳಲ್ಲಿ ಅವರ ಪ್ರದರ್ಶನದಿಂದಾಗಿಯೂ ಸಹ ಅವರನ್ನು ತಂಡದವರು ಕಡೆಗಣಿಸಬಹುದು.


ಎಷ್ಟು ರನ್​ ಗಳಿಸಿದ್ದಾರೆ?
42 ಐಪಿಎಲ್ ಪಂದ್ಯಗಳಲ್ಲಿ ಲಿನ್ 140.63 ರ ಸ್ಟ್ರೈಕ್ ರೇಟ್​ನಲ್ಲಿ 1329 ರನ್ ಗಳಿಸಿದ್ದಾರೆ. ಅದೇನೇ ಇದ್ದರೂ ಅವರ ಗತ ವೈಭವವು ರೋಮಾಂಚಕ ಭವಿಷ್ಯವನ್ನು ಬರೆಯಲು ಸಹಾಯ ಮಾಡದಿರಬಹುದು. 2022 ರಂತೆಯೇ ಮಾರಾಟವಾಗದೆ ಉಳಿಯಬಹುದು ಎಂದು ಅನೇಕರು ಊಹೆ ಮಾಡುತ್ತಿದ್ದಾರೆ.


2. ನೇಥನ್ ಕೌಲ್ಟರ್ನೈಲ್
35 ವರ್ಷದ ನೇಥನ್ ಕೌಲ್ಟರ್‌ನೈಲ್ ಹಲವಾರು ವರ್ಷಗಳಿಂದ ಐಪಿಎಲ್ ನಲ್ಲಿ ಹಾಟ್ ಪ್ರಾಪರ್ಟಿಯಾಗಬಹುದಿತ್ತು. ಆದರೆ ಅವರು ಆಗಾಗ ಗಾಯಾಳುವಾಗಿದ್ದರಿಂದ ಇದು ಸಾಧ್ಯವಾಗಿಲ್ಲ.


ಆಸೀಸ್ ಆಟಗಾರ 146 ಟ್ವೆಂಟಿ20 ಪಂದ್ಯಗಳಲ್ಲಿ 7.78 ಎಕಾನಮಿ ದರದಲ್ಲಿ 170 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಐಪಿಎಲ್ ನಲ್ಲಿ ಕೌಲ್ಟರ್‌ನೈಲ್ 39 ಪಂದ್ಯಗಳಿಂದ 48 ವಿಕೆಟ್ ಗಳನ್ನು ಸಹ ಪಡೆದಿದ್ದಾರೆ ಮತ್ತು ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದುಕೊಂಡು ಟ್ರೋಫಿಯನ್ನು ಎತ್ತಿ ಹಿಡಿಯುವ ಅವಕಾಶವನ್ನು ಇವರು ಪಡೆದಿದ್ದರು. 2022 ರ ಋತುವಿನಲ್ಲಿ, ಅವರು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಭಾಗವಾಗಿದ್ದರು, ಆದರೆ ಮೊದಲ ಪಂದ್ಯದ ನಂತರ ಇವರು ಗಾಯಗೊಂಡರು. ಪಂದ್ಯಾವಳಿಯಿಂದ ಹೊರಗುಳಿದರು.


ಹೀಗಾಗಿ ಅವರು ಆಗಾಗ ಫ್ರಾಂಚೈಸಿಗೆ ಅಪಾಯವಾಗಿ ಪರಿಣಮಿಸುತ್ತಾರೆ ಈ ಋತುವಿನಲ್ಲಿ ಅವರನ್ನು ಯಾವ ತಂಡದವರು ಖರೀದಿಸುತ್ತಾರೆ ಅಂತ ಹೇಳುವುದು ಸ್ವಲ್ಪ ಕಷ್ಟವಾಗಬಹುದು.


3. ಏಂಜೆಲೊ ಮ್ಯಾಥ್ಯೂಸ್
ಶ್ರೀಲಂಕಾದ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ ತಮ್ಮ ರಾಷ್ಟ್ರೀಯ ಟ್ವೆಂಟಿ20 ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೆ ಅವರ ದಾಖಲೆಯನ್ನು ಗಮನಿಸಿದರೆ, 35 ವರ್ಷದ ಆಟಗಾರ ಇನ್ನೂ ಯಾವುದೇ ತಂಡಕ್ಕೆ ತಮ್ಮ ಸೇರ್ಪಡೆಯಿಂದ ಬಲವನ್ನು ತುಂಬಬಹುದು ಅಂತ ಹೇಳಬಹುದು.


ಆದರೂ ಕಳೆದ ಆರು ತಿಂಗಳಲ್ಲಿ ಯಾವುದೇ ಟ್ವೆಂಟಿ20 ಪಂದ್ಯದಲ್ಲಿ ಕಾಣಿಸಿಕೊಳ್ಳದ ಈ ಕ್ರಿಕೆಟಿಗನಿಗೆ ಯಾವುದೇ ಫ್ರಾಂಚೈಸಿಗಳು 2 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಸಾಧ್ಯತೆ ಕಡಿಮೆ ಅಂತಾನೆ ಹೇಳಬಹುದು.


ಚುಟುಕು ಕ್ರಿಕೆಟ್​ನಲ್ಲಿ ಆಡಿದ 173 ಪಂದ್ಯಗಳಲ್ಲಿ ಮ್ಯಾಥ್ಯೂಸ್ 119.55ರ ಸ್ಟ್ರೈಕ್ ರೇಟ್ ನೊಂದಿಗೆ 2788 ರನ್ ಗಳಿಸಿದ್ದಾರೆ. ಅದೇ ಪ್ರಮಾಣದ ಪಂದ್ಯಗಳಲ್ಲಿ ಅವರು 85 ವಿಕೆಟ್ ಗಳನ್ನು ಪಡೆದಿದ್ದರಿಂದ ಅವರ ಬೌಲಿಂಗ್ ಕೌಶಲ್ಯವು ಅವರಿಗೆ ಪ್ಲಸ್ ಪಾಯಿಂಟ್ ಆಗಬಹುದು. ಮ್ಯಾಥ್ಯೂ ಅವರ ವಯಸ್ಸು, ಫಾರ್ಮ್ ಮತ್ತು ಆಧುನಿಕ ದಿನದ ಟ್ವೆಂಟಿ20 ಕ್ರಿಕೆಟ್ ನಲ್ಲಿನ ಪ್ರಸ್ತುತತೆಯು ಮುಂಬರುವ ಐಪಿಎಲ್ ಹರಾಜಿನಲ್ಲಿ ಅವರನ್ನು ಸ್ವಲ್ಪ ಮಟ್ಟಿಗೆ ಹಿಂದಕ್ಕೆ ತಳ್ಳಬಹುದು. ಅವರು ತುಂಬಾ ಗಾಯಗೊಳ್ಳುವ ಸಾಧ್ಯತೆ ಸಹ ಇದೆ, ಅದೇ ಕಾರಣಕ್ಕಾಗಿ ಇವರು ಹರಾಜಿನಲ್ಲಿ ಮಾರಾಟವಾಗದೆ ಹೋಗಬಹುದು.


4. ಕ್ರೇಗ್ ಓವರ್ಟನ್
ಇಂಗ್ಲೆಂಡ್ ಬೌಲಿಂಗ್ ಆಲ್‌ರೌಂಡರ್ ಕ್ರೇಗ್ ಓವರ್ಟನ್ 2 ಕೋಟಿ ರೂಪಾಯಿ ವಿಭಾಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಚುಟುಕು ಮಾದರಿಯ ಕ್ರಿಕೆಟ್ ನಲ್ಲಿ 70 ವಿಕೆಟ್ ಗಳನ್ನು ಕಬಳಿಸಿರುವ 28 ವರ್ಷದ ಆಟಗಾರ ಐಪಿಎಲ್ 2023 ರಲ್ಲಿ ಯಾವುದೇ ತಂಡದಲ್ಲಿ ಸ್ಥಾನ ಪಡೆಯದೆ ಸಹ ಇರುವ ಸಾಧ್ಯತೆಗಳಿವೆ.


ಕಳೆದ ಋತುವಿನಲ್ಲಿಯೂ ಸಹ, ಓವರ್ಟನ್ ಕೇವಲ ಒಂದು ಪಂದ್ಯವನ್ನು ಆಡಿದ್ದು, ಎರಡು ವಿಕೆಟ್​ಗಳನ್ನು ಕಬಳಿಸಿದ್ದರು. ಅವರ ಆಟದ ಸಮಯದ ಕೊರತೆ ಮತ್ತು ಭಾರತೀಯ ಉಪಖಂಡದಲ್ಲಿ ಆಡುವಲ್ಲಿ ಅನನುಭವವು ಅಂತಿಮವಾಗಿ ಹರಾಜು ಪಟ್ಟಿಯಲ್ಲಿ ಬಿಡ್ಡರ್​ಗಳನ್ನು ಹಿಂಜರಿಯುವಂತೆ ಮಾಡಬಹುದು.


ಇದನ್ನೂ ಓದಿ: HBD Shikhar Dhawan: ಟೀಂ ಇಂಡಿಯಾ ಗಬ್ಬರ್ ಸಿಂಗ್​ಗೆ ಹುಟ್ಟುಹಬ್ಬದ ಸಂಭ್ರಮ, ಧವನ್ ಫೇಸ್​ಬುಕ್​ ಲವ್​ ಸ್ಟೋರಿ ಸಖತ್​ ಇಂಟ್ರೆಸ್ಟಿಂಗ್​


ಇನ್ನೂ ಅವರ ಬ್ಯಾಟಿಂಗ್ ವಿಷಯಕ್ಕೆ ಬಂದಾಗ, ಓವರ್ಟನ್ ಇದುವರೆಗೆ ಆಡಿದ 70 ಪಂದ್ಯಗಳಲ್ಲಿ 123.04ರ ಸ್ಟ್ರೈಕ್ ರೇಟ್ ನಲ್ಲಿ 347 ರನ್ ಗಳಿಸಿದ್ದಾರೆ. ಹೀಗಾಗಿ, ಕೊನೆಯ ಓವರ್ ಗಳಲ್ಲಿ ಉತ್ತಮ ಫಿನಿಶರ್ ಗಾಗಿ ಹುಡುಕುತ್ತಿರುವ ತಂಡವು ಅದೇ ಬೆಲೆ ಶ್ರೇಣಿಯಲ್ಲಿ ಇತರ ಪರ್ಯಾಯ ಆಯ್ಕೆಗಳನ್ನು ಹುಡುಕಬಹುದು.


5. ಜೇಮಿ ಓವರ್ಟನ್
ಕ್ರೇಗ್ ಅವರ ಸಹೋದರ ಜೇಮಿ ಕೂಡ ಮುಂಬರುವ ಐಪಿಎಲ್ ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು 2 ಕೋಟಿಗೆ ನಿಗದಿಪಡಿಸಿಕೊಂಡಿದ್ದಾರೆ. ಆಲ್‌ರೌಂಡರ್ ಆಗಿರುವ ಜೇಮಿ ಟ್ವೆಂಟಿ20 ಕ್ರಿಕೆಟ್ ನಲ್ಲಿ 83 ಪಂದ್ಯಗಳಿಂದ 67 ವಿಕೆಟ್ ಗಳನ್ನು ಕಬಳಿಸಿದ್ದಾರೆ. 9.37 ರ ಎಕಾನಾಮಿ ರೇಟ್​ನೊಂದಿಗೆ ಜೇಮಿ ನಿಜವಾಗಿಯೂ ದುಬಾರಿಯಾಗಿದ್ದಾರೆ. ಹೀಗಾಗಿ, ಫ್ರಾಂಚೈಸಿಗಳು ಹರಾಜಿನಲ್ಲಿ ಅವರ ಬಗ್ಗೆ ಆಸಕ್ತಿ ತೋರದೆ ಇರುವ ಸಾಧ್ಯತೆಗಳಿವೆ.


ಇದನ್ನೂ ಓದಿ: IND vs BAN: ನಟಿಯರನ್ನೂ ಮೀರಿಸಿದ ಕ್ರಿಕೆಟಿಗರ ಪತ್ನಿಯರ ಸೌಂದರ್ಯ, ಬಾಂಗ್ಲಾದಲ್ಲಿ ಭಾರತೀಯ ಜೋಡಿಯ ಪ್ರೇಮ್ ಕಹಾನಿ


ಅವರ ಪ್ರಸ್ತುತ ಫಾರ್ಮ್ ಸಹ ಫ್ರಾಂಚೈಸಿಗಳಿಗೆ ಈ ಕ್ರಿಕೆಟಿಗನನ್ನು ಬಿಡ್ ಮಾಡಲು ಮನವೊಲಿಸುತ್ತಿಲ್ಲ. ಅವರು ಕಳೆದ ಐದು ತಿಂಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಕ್ರೇಗ್ ನಂತೆಯೇ ಜೇಮಿಗೂ ಸಹ ಭಾರತದಲ್ಲಿ ಆಡಿದ ಅನುಭವವಿಲ್ಲ. ಹೀಗಾಗಿ ಇವರು ನಿಗದಿಪಡಿಸಿಕೊಂಡ ಬೆಲೆಯಲ್ಲಿಯೇ ತಂಡಗಳು ಇತರ ಆಯ್ಕೆಗಳನ್ನು ಹುಡುಕುತ್ತವೆ ಅಂತ ಹೇಳಬಹುದು.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು