Gautam Gambhir: ಕೆಎಲ್ ರಾಹುಲ್​ ಫಾರ್ಮ್​ಗೆ ಮರಳುವ ಬಗ್ಗೆ ಗಂಭೀರ ಸೂಚನೆ!

ಗೌತಮ್ ಗಂಭೀರ್ ಮತ್ತು ಕೆ ಎಲ್ ರಾಹುಲ್

ಗೌತಮ್ ಗಂಭೀರ್ ಮತ್ತು ಕೆ ಎಲ್ ರಾಹುಲ್

ನೀವು ಐಪಿಎಲ್ ಅನ್ನು ಕೇವಲ ಒಂದು ಕ್ರಿಕೆಟ್ ಪಂದ್ಯಾವಳಿಯಾಗಿ ನೋಡಬೇಕು. ನೀವು ಹೋಗಿ ನಿಮ್ಮ ಫಾರ್ಮ್ ಅನ್ನು ಕಂಡುಕೊಳ್ಳುವ ಒಂದು ವೇದಿಕೆಯಾಗಿ ನೋಡಬೇಕು ಎಂದಿದ್ದಾರೆ ಗೌತಮ್ ಗಂಭೀರ್.

 • Share this:

  ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್  (Gautam Gambhir) ಯಾವಾಗಲೂ ತಮ್ಮ ನೇರ ಕಾಮೆಂಟ್ ಗಳಿಂದ ಸುದ್ದಿಯಲ್ಲಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಬಾರಿಯೂ ಅವರು ಸುದ್ದಿಯಲ್ಲಿರುವುದು ಒಬ್ಬ ಆಟಗಾರನ ಫಾರ್ಮ್ ನ ಬಗ್ಗೆ ಕಾಮೆಂಟ್ ಮಾಡಿಯೇ! ಹೌದು, ಟೀಮ್ ಇಂಡಿಯಾ (Team India) ಪ್ರಸ್ತುತ ಆಸ್ಟ್ರೇಲಿಯಾ ತಂಡದ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು (Border Gavaskar Trophy) ಆಡುತ್ತಿದ್ದು, ಪ್ರಸ್ತುತ ಸರಣಿಯಲ್ಲಿ ಆರಂಭಿಕ ಬ್ಯಾಟರ್ ಆಗಿರುವ ಕೆ ಎಲ್ ರಾಹುಲ್ ಅವರ (KL Rahul) ಬ್ಯಾಟ್​ನಿಂದ ರನ್ ಬಾರದೇ ಇರುವುದು ಸ್ವತಃ ಅವರಿಗೂ. ಅನೇಕರಿಗೆ ಇದೊಂದು ದೊಡ್ಡ ತಲೆ ನೋವಾಗಿದೆ ಅಂತ ಹೇಳಬಹುದು.


  ಕ್ರಿಕೆಟ್​ನಲ್ಲಿ ನಡೆಯುವಂತಹ ಅನೇಕ ರೀತಿಯ ವಿಷಯಗಳ ಬಗ್ಗೆ ಗಂಭೀರ್ ಪದೇ ಪದೇ ಮಾಧ್ಯಮಗಳಲ್ಲಿ ಮಾತಾಡುವುದರೊಂದಿಗೆ ಸುದ್ದಿಯಲ್ಲಿ ಇರುತ್ತಾರೆ. ಕೆಎಲ್ ರಾಹುಲ್ ಕಳಪೆ ಫಾರ್ಮ್​ನಿಂದ ರನ್ ಹೊಡೆಯಲು ಹೆಣಗಾಡುತ್ತಿರುವುದರ ಬಗ್ಗೆ ರಾಹುಲ್ ಅವರ ಐಪಿಎಲ್ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್​ನ ಮಾರ್ಗದರ್ಶಕರಾದ ಗಂಭೀರ್ ಈ ವಿಷಯದ ಬಗ್ಗೆ ಪ್ರಾಮಾಣಿಕ ಅಭಿಪ್ರಾಯವನ್ನು ನೀಡಿದ್ದಾರೆ ನೋಡಿ.


  ರಾಹುಲ್ ಅವರ ಕಳಪೆ ಫಾರ್ಮ್ ಬಗ್ಗೆ ಮಾತಾಡಿದ್ರು ಗೌತಮ್
  ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ನ ಫಾರ್ಮ್ ಬಗ್ಗೆ ಮಾತನಾಡಿದ ಗಂಭೀರ್ ಅವರು “ಇಂತಹ ಪರಿಸ್ಥಿತಿಯು ರಾಹುಲ್ ಗೆ ನೋವುಂಟು ಮಾಡುತ್ತದೆ, ಏಕೆಂದರೆ ಅವರ ಸ್ಥಾನದಲ್ಲಿ ಬೇರೊಬ್ಬರು ಆಡುತ್ತಿದ್ದಾರೆ” ಎಂದು ಒತ್ತಿ ಹೇಳಿದರು. ಸ್ಪೋರ್ಟ್ಸ್ ತಕ್ ಚಾಟ್​ನಲ್ಲಿ ಮಾತನಾಡಿದ ಗಂಭೀರ್, “ರಾಹುಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅವಕಾಶವನ್ನು ತಮ್ಮ ಕಳೆದು ಹೋಗಿರುವ ಫಾರ್ಮ್ ಅನ್ನು ಮತ್ತೆ ಕಂಡುಕೊಳ್ಳಲು ಬಳಸಿಕೊಳ್ಳಬೇಕು, ಅದು ತಮ್ಮ ರಾಷ್ಟ್ರೀಯ ತಂಡಕ್ಕೂ ಸಹ ಸಹಾಯವಾಗುತ್ತದೆ” ಎಂದು ಗಂಭೀರ್ ಹೇಳಿದರು.


  "ಪ್ರತಿಯೊಬ್ಬ ಆಟಗಾರನು ತನ್ನ ವೃತ್ತಿಜೀವನದಲ್ಲಿ ಈ ರೀತಿಯ ಸಂದರ್ಭವನ್ನು ಎದುರಿಸುತ್ತಾನೆ. ತನ್ನ ವೃತ್ತಿಜೀವನದ ಆರಂಭದಿಂದ ಅಂತ್ಯದವರೆಗೆ ಸ್ಥಿರ ಪ್ರದರ್ಶನ ನೀಡಿದ ಒಬ್ಬ ಆಟಗಾರನನ್ನು ಹೆಸರಿಸಿ ನೋಡೋಣ. ಕೆಲವೊಮ್ಮೆ ಈ ವಿಷಯಗಳು ವೃತ್ತಿಜೀವನಕ್ಕೆ ಒಳ್ಳೆಯದು. ಈ ವಿಷಯಗಳು ನಿಮ್ಮನ್ನು ನೋಯಿಸಬೇಕು ಮತ್ತು ಅವು ನೋಯಿಸುತ್ತಿದ್ದರೆ, ಅದು ನಿಮಗೆ ಒಳ್ಳೆಯದು" ಎಂದು ಗಂಭೀರ್ ಒತ್ತಿ ಹೇಳಿದರು.


  ನಿಮ್ಮ ಫಾರ್ಮ್ ಅನ್ನು ಮರಳಿ ಪಡೆಯಿರಿ
  "ನೀವು ಈಗಾಗಲೇ ಐಪಿಎಲ್​ನಲ್ಲಿ ಒಂದು ಫ್ರಾಂಚೈಸಿಯ ನಾಯಕ ಮತ್ತು ಐಪಿಎಲ್​ನಲ್ಲಿ 4-5 ಶತಕಗಳನ್ನು ಹೊಂದಿದ್ದೀರಿ ಎಂದು ನಿಮಗೆ ತಿಳಿದಿದೆ. ಆದರೆ, ನೀವು ಟ್ವೆಂಟಿ 20 ಕ್ರಿಕೆಟ್ ಆಡಲು ತಂಡದಲ್ಲಿ ಇಲ್ಲದಿದ್ದರೆ ಮತ್ತು ಟೆಸ್ಟ್ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಇಲ್ಲದಿದ್ದರೆ ಹೇಗೆ ಹೇಳಿ? ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ರನ್​ಗಳನ್ನು ರಾಹುಲ್ ಗಳಿಸುವ ಅಗತ್ಯವಿದೆ” ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.


  ಇದನ್ನೂ ಓದಿ: IPL 2023: ಧೋನಿ-ಕೊಹ್ಲಿಯನ್ನೇ ಹಿಂದಿಕ್ಕಿದ ಕೆಎಲ್‌ ರಾಹುಲ್! ಕನ್ನಡಿಗನ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಿ!
  "ನೀವು ಐಪಿಎಲ್ ಅನ್ನು ಕೇವಲ ಒಂದು ಕ್ರಿಕೆಟ್ ಪಂದ್ಯಾವಳಿಯಾಗಿ ನೋಡಬೇಕು. ನೀವು ಹೋಗಿ ನಿಮ್ಮ ಫಾರ್ಮ್ ಅನ್ನು ಕಂಡುಕೊಳ್ಳುವ ಒಂದು ವೇದಿಕೆಯಾಗಿ ನೋಡಬೇಕು. ನಿಮ್ಮ ತಂಡವು ನಿರೀಕ್ಷಿಸುವ ರೀತಿಯಲ್ಲಿ ನೀವು ಬ್ಯಾಟಿಂಗ್ ಮಾಡಬಹುದೇ ಎಂದು ನಿಮ್ಮನ್ನು ಕೇಳಿಕೊಳ್ಳಿ. ಸರಣಿಯಲ್ಲಿ 600 ರನ್ ಗಳಿಸುವುದು ಮುಖ್ಯವಲ್ಲ. ನೀವು ಗಳಿಸುವ ರನ್ ಗಳು ನಿಮ್ಮ ತಂಡದ ಗೆಲುವಿಗೆ ಕಾರಣವಾಗಬೇಕು" ಎಂದು ಅವರು ಹೇಳಿದರು.


  ಇದನ್ನೂ ಓದಿ: IND vs AUS 4th Test: ಟೀಂ ಇಂಡಿಯಾಗೆ ಮೋದಿ ಸಾಥ್​​, ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪಂದ್ಯ ವೀಕ್ಷಣೆ!


  ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದ ನಂತರ, ರಾಹುಲ್ ಅವರನ್ನು ಮೂರನೇ ಟೆಸ್ಟ್​ಗೆ ತಂಡದಿಂದ ಕೈಬಿಡಲಾಯಿತು. ಅವರ ಸ್ಥಾನದಲ್ಲಿ ಶುಭಮನ್ ಗಿಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು.

  Published by:ಗುರುಗಣೇಶ ಡಬ್ಗುಳಿ
  First published: