ಕ್ರಿಕೆಟ್ ಮ್ಯಾಚ್ ನಡೆಯುವಾಗಲೇ ಬೌಲ್ ತಗುಲಿ ಆಟಗಾರರು ಗಾಯಗೊಂಡ ಎಷ್ಟೋ ಉದಾಹರಣೆಗಳಿವೆ. ನಿಮಗೂ ಹೀಗೆ ಆಗಬಹುದು, ದಯವಿಟ್ಟು ಸ್ಟಂಪ್ನ ಹಿಂದೆ ನಿಂತಿರುವಾಗ ಹೆಲ್ಮೆಟ್ ಧರಿಸಿ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ನ ವಿಕೆಟ್ಕೀಪರ್ ಶೆಲ್ಡನ್ ಜಾಕ್ಸನ್ ಅವರನ್ನು (Sheldon Jackson) ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ (Yuvraj Singh) ಎಚ್ಚರಿಸಿದ್ದಾರೆ. ಕೇವಲ ಎಚ್ಚರಿಕೆ ಒಂದೇ ಅಲ್ಲ. ಮನವಿಪೂರ್ವಕವಾಗಿ ಒತ್ತಾಯಿಸಿದ್ದಾರೆ. ಐಪಿಎಲ್ 2022ರ (IPL 2022) ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK vs KKR) ನಡುವೆ ಮೊದಲ ಪಂದ್ಯದ ವೇಳೆ ಯುವರಾಜ್ ಸಿಂಗ್ ಈ ಒತ್ತಾಯಪೂರ್ವಕ ಮನವಿ ಮಾಡಿದ್ದಾರೆ.
ಐಪಿಎಲ್ 2022 ರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಜಾಕ್ಸನ್ ಸ್ಟಂಪ್ಗಳ ಹಿಂದೆ ಮಿಂಚಿನ ವೇಗದ ಪ್ರದರ್ಶನದಿಂದ ಎಲ್ಲರನ್ನೂ ಆಕರ್ಷಿಸಿದರು. ಸೌರಾಷ್ಟ್ರದ 35 ವರ್ಷದ ಸ್ಟಂಪರ್ ಶೆಲ್ಡನ್ ಜಾಕ್ಸನ್ ಅವರು ಲೆಗ್-ಸ್ಟಂಪ್ನ ಹೊರಗೆ ಚೆಂಡು ಇದ್ದರೂ ರಾಬಿನ್ ಉತ್ತಪ್ಪ ಅವರ ಅದ್ಭುತ ಸ್ಟಂಪಿಂಗ್ ಮಾಡಿ ಅಮೋಘ ಪ್ರದರ್ಶನ ನೀಡಿದರು. ಇದು ಕ್ರೀಡಾಭಿಮಾನಿಗಳ ಮನ ಗೆದ್ದಿತ್ತು.
ಗಾಳಿಯಂತೆ ವೇಗವಾಗಿ ಚೆಂಡು ಬ್ಯಾಟರ್ನಿಂದ ತಪ್ಪಿಸಿಕೊಂಡು ಹಿಂದೆ ಚಿಮ್ಮಿದರೂ ಜಾಕ್ಸನ್ ಹೆಲ್ಮೆಟ್ ಅನ್ನು ಬಳಸಲಿಲ್ಲ. ಇದನ್ನು ನೋಡಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗಾಯವನ್ನು ತಪ್ಪಿಸಲು ಸ್ಪಿನ್ನರ್ಗಳ ವಿರುದ್ಧ ಹೆಲ್ಮೆಟ್ ಧರಿಸಲು ಜಾಕ್ಸನ್ ಅವರನ್ನು ಒತ್ತಾಯಿಸಿದ್ದಾರೆ.
After 25yrs in cricket Ive decided to move on. Cricket has given me everythin I have.ThankU 4being a part of this journey.This game taught me how to fight,how to fall,to dust off,to get up again n move forward. It has been a lovely journey. See you on the other side #SteppingOutpic.twitter.com/x3wOhoXcLv
ಇವುಗಳ ಪೈಕಿ ಅತ್ಯಂತ ಪ್ರಸಿದ್ಧ ಉದಾಹರಣೆಯೆಂದರೆ ಸಾಬಾ ಕರೀಮ್ ಎಂಬ ಮಾಜಿ ಭಾರತೀಯ ಕ್ರಿಕೆಟಿಗನ ವೃತ್ತಿಜೀವನ. 2000 ರಲ್ಲಿ ಅನಿಲ್ ಕುಂಬ್ಳೆ ಅವರ ಬೌಲಿಂಗ್ ವೇಳೆ ಬೌಲ್ ಮೂಗಿಗೆ ಹೊಡೆದು ಅವರು ಗಾಯಗೊಂಡಿದ್ದರು.
ಮೊದಲ ಪಂದ್ಯದ ಫಲಿತಾಂಶ ಇಲ್ಲಿದೆ ಮೊದಲ ಪಂದ್ಯದಲ್ಲೇ ಸಾಕಷ್ಟು ರೋಚಕತೆ ಮೂಡಿಸಿದ್ದ ಕೆಕೆಆರ್(KKR) ತಂಡ ಹಾಗೂ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ನಡುವಿನ ರಣರಂಗದಲ್ಲಿ ಕೆಕೆಆರ್ ಗೆದ್ದು ಬೀಗಿದೆ.
ಮೊದಲ ಪಂದ್ಯದಲ್ಲೇ ಚೆನ್ನೈ ತಂಡದ ನೂತನ ನಾಯಕ ರವೀಂದ್ರ ಜಡೇಜಾ(Ravindra Jadega) ಸೋಲಿನ ರುಚಿ ತೋರಿಸಿದ್ದಾರೆ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್(Shreyas Iyer). ಹೌದು, 132 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಕೆಕೆಆರ್ ತಂಡ ಯಾವುದೇ ಟೆನ್ಶನ್ ಇಲ್ಲದೇ ಗುರಿ ಮುಟ್ಟಿ ಗೆಲುವಿನ ನಗೆ ಬೀರಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ