• Home
  • »
  • News
  • »
  • sports
  • »
  • RCB-ಹೊಂಬಾಳೆ ಫಿಲ್ಮ್ಸ್​ ಒಟ್ಟಿಗೆ ಏನು ಮಾಡಲಿವೆ? ಪೋಸ್ಟರ್ ನೋಡಿ

RCB-ಹೊಂಬಾಳೆ ಫಿಲ್ಮ್ಸ್​ ಒಟ್ಟಿಗೆ ಏನು ಮಾಡಲಿವೆ? ಪೋಸ್ಟರ್ ನೋಡಿ

ಈ ಪೋಸ್ಟರ್​ ಏನು ಹೇಳುತ್ತಿದೆ?

ಈ ಪೋಸ್ಟರ್​ ಏನು ಹೇಳುತ್ತಿದೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹೊಂಬಾಳೆ ಫಿಲ್ಮ್ಸ್​ ಒಟ್ಟೊಟ್ಟಿಗೆ ಈ ರೀತಿ ಒಂದೇ ಅರ್ಥದ ಟ್ವೀಟ್ ಮಾಡಿರುವುದು ಅಭಿಮಾನಿಗಳ ಪಾಲಿಗೆ ಕುತೂಹಲಕ್ಕೆ ಕಾರಣವಾಗಿದೆ. 

  • Share this:

    ಕೆಜಿಎಫ್ 2 ಬಿಡುಗಡೆಗೆ ಇನ್ನೇನು ಬಹಳ ದಿನ ಉಳಿದಿಲ್ಲ. ಇತ್ತ ಐಪಿಎಲ್ 2022  (IPL 2022) ಸಹ ಭರಾಟೆಯಿಂದ ಸಾಗುತ್ತಿದೆ. ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಬ್ಬರವೂ ಜೋರಾಗಿದೆ. ಕೆಜಿಎಫ್ 2 ಮತ್ತು ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡಕ್ಕೂ ಅಭಿಮಾನಿಗಳ ಕ್ರೇಜ್ ಬಹಳ ದೊಡ್ಡದಿದೆ. ಇದೇ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೆಜಿಎಫ್ (KGF 2)  ಸಿನಿಮಾ ನಿರ್ಮಾಪಕರಾಗಿರುವ ಹೊಂಬಾಳೆ ಫಿಲ್ಮ್ಸ್​ (Hombale Films) ಒಂದೇ ಸಲ ಭರ್ಜರಿ ಘೋಷಣೆ ಮಾಡಿವೆ. ಪ್ರಾಜೆಕ್ಟ್ ಒಂದಕ್ಕೆ  ಒಟ್ಟಿಗೆ ಕೆಲಸ ಮಾಡುವುದಾಗಿ  ಪೋಸ್ಟರ್ ಬಿಡುಗಡೆ ಮಾಡಿರುವ ಈ ಎರಡೂ ಸಂಸ್ಥೆಗಳು ಕುತೂಹಲ ಹೆಚ್ಚಿಸಿವೆ.


    ಎರಡು ಕನಸುಗಳ ಸಂಗಮ! ಕ್ರೀಡೆ, ಚಲನಚಿತ್ರ, ಜೀವನಶೈಲಿ ಇನ್ನೂ ಮೊದಲಾದ ವಿಷಯಗಳ  ಒಟ್ಟುಗೂಡಿಸುವಿಕೆ. ನಾಳೆ (ಏಪ್ರಿಲ್ 10) 11:15 AM ಕ್ಕೆ ಎದುರು ನೋಡುತ್ತಿರಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ವೀಟ್ ಮಾಡಿದ್ದವು


    ಎರಡು ದೊಡ್ಡ ಕನಸುಗಳ ಸಮ್ಮಿಲನ! ಮನರಂಜನೆಯ ಹೊಸ ಯುಗಕ್ಕೆ ನಾಂದಿ ಎಂದು ಕೆಜಿಎಫ್ ನಿರ್ಮಾತೃ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಹ ಅದೇ ಸಮಯಕ್ಕೆ ಟ್ವೀಟ್ ಮಾಡಿತ್ತು.




    ಇದನ್ನೂ ಓದಿ: Exclusive: ಎಲ್ಲಾ ಭಾಷೆಯಲ್ಲೂ ಸೌಂಡ್ ಮಾಡ್ತಿರೋ ಕೆಜಿಎಫ್​ 2 ಇಂಗ್ಲಿಷಲ್ಲಿ ಯಾಕಿಲ್ಲ? ಕೇಳಿದ್ದಕ್ಕೆ ಯಶ್ ಹೀಗಂದ್ರು ನೋಡಿ


    ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹೊಂಬಾಳೆ ಫಿಲ್ಮ್ಸ್​ ಒಟ್ಟೊಟ್ಟಿಗೆ ಈ ರೀತಿ ಒಂದೇ ಅರ್ಥದ ಟ್ವೀಟ್ ಮಾಡಿರುವುದು ಅಭಿಮಾನಿಗಳ ಪಾಲಿಗೆ ಕುತೂಹಲಕ್ಕೆ ಕಾರಣವಾಗಿದೆ.


    12 ಗಂಟೆಯಲ್ಲಿ 5000 ಸಾವಿರ ಟಿಕೆಟ್
    ಹೌದು, ಕೆಜಿಎಫ್​ ಸಿನಿಮಾ ಬಂದಮೇಲೆ ಹೊರ ದೇಶಗಳಲ್ಲೂ ಕನ್ನಡ ಸಿನಿಮಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಹೆಚ್ಚಿದೆ. ದಕ್ಷಿಣ ಭಾರತದ ಸಿನಿಮಾಗಳು ವಿದೇಶಗಳಲ್ಲಿ ಹೇಗೆ ದುಡ್ಡು ಮಾಡುತ್ತವೆ ಅನ್ನುವುದಕ್ಕೆ ಇತ್ತೀಚೆಗೆ ತೆರೆಕಂಡಿರುವ ‘ಆರ್​ಆರ್​ಆರ್​’ ಸಿನಿಮಾಗಿಂತ ದೊಡ್ಡ ಉದಾಹರಣೆ ಬೇಕಿಲ್ಲ.


    ಇದೀಗ ನಮ್ಮ ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್​ ಸರದಿ. ಕೆಜಿಎಫ್​ 2 ನೋಡಲು ಇಡೀ ವಿಶ್ವದ ಜನರು ಕಾಯುತ್ತಿದ್ದಾರೆ. ಹೌದು, ಯುಕೆಯಲ್ಲಿ ಕೇವಲ 12 ಗಂಟೆಗಳಲ್ಲಿ 5000 ಸಾವಿರ ಟಿಕೆಟ್​ ಸೋಲ್ಡ್​ಔಟ್​ ಆಗಿದೆ. ಇದನ್ನು ನೋಡಿದರೆ ತಿಳಿಯುತ್ತೆ ರಾಕಿಭಾಯ್​ನ ಹವಾ ಎಷ್ಟಿದೆ ಅಂತ.


    ಇದನ್ನೂ ಓದಿ: KGF Chapter 2 ಜೊತೆಗೆ ಚಿತ್ರತಂಡದಿಂದ ಬಿಗ್​ ಸರ್​ಪ್ರೈಸ್​! Prabhas ಫ್ಯಾನ್ಸ್​ ಖುಷಿ ಪಡೋ ವಿಚಾರ ಬಾಸ್​..


    ಕೆಜಿಎಫ್​ 2 ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ಕೆಜಿಎಫ್​2 ಅಬ್ಬರಿಸೋಕೆ ರೆಡಿಯಾಗಿದೆ. ಇದೀಗ ಈ ಚಿತ್ರತಂಡ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಈ ಒಂದು ಪ್ರಶ್ನೆ ಕೇಳಿಬರುತ್ತಿದೆ. ಅದು ಏನು ಅಂದರೆ, ಎಲ್ಲಾ ಭಾಷೆಯಲ್ಲಿರುವ ಕೆಜಿಎಫ್​ 2 ಇಂಗ್ಲಿಷ್​ನಲ್ಲಿ ಯಾಕೆ ಬಂದಿಲ್ಲ ಎಂದು ಹಲವರು ಕೇಳಿದ್ದಾರೆ. ಈ ಪ್ರಶ್ನೆ ಸ್ವತಃ ರಾಕಿ ಭಾಯ್​ ಉತ್ತರ ನೀಡಿದ್ದಾರೆ. ಯಶ್​ ಕೊಟ್ಟ ಉತ್ತರ ಕೇಳಿ ಕೆಲವರು ನಕ್ಕಿದ್ದಾರೆ. ಹೌದು, ‘ಇಂಗ್ಲಿಷ್​ನಲ್ಲಿ ಯಾಕಿಲ್ಲ ಅಂದರೆ, ನಮ್ದು ಬಟ್ಲರ್​ ಇಂಗ್ಲಿಷ್​ ಕಣಪ್ಪಾ’ ಅದಕ್ಕೆ ಎಂದು ಯಶ್​​ ಹೇಳಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: