Glenn Maxwell-Vini Raman: ಬಯೋ ಬಬಲ್​ನಲ್ಲೇ ಮದುವೆ ಪಾರ್ಟಿ! ಮ್ಯಾಕ್ಸ್​ವೆಲ್-ವಿನಿ ರಾಮನ್ ಜೊತೆ ಆರ್​ಸಿಬಿ ಸಂಭ್ರಮ ನೋಡಿ!

ಆರ್‌ಸಿಬಿ ಬಯೋ ಬಬಲ್‌ನಲ್ಲಿ ನಡೆದ ಆಚರಣೆಯಲ್ಲಿ ಎಲ್ಲಾ ಆಹ್ವಾನಿತರು ಸಾಂಪ್ರದಾಯಿಕ ಭಾರತೀಯ ಉಡುಗೆಯನ್ನು ಧರಿಸಿ ರಾತ್ರಿಯವರೆಗೂ ತಮ್ಮ ಮನಸು- ಹೃದಯವನ್ನು ಖುಷಿಖುಷಿಯಾಗಿ ಕುಣಿಸಿದ್ದಾರೆ. ನೀವೇ ಪಾರ್ಟಿ ವಿಡಿಯೋ ನೋಡಿ!

ಪಾರ್ಟಿಲೊಂದು ಫೊಟೊ

ಪಾರ್ಟಿಲೊಂದು ಫೊಟೊ

 • Share this:
  ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇತ್ತೀಚೆಗೆ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಅವರ ಪತ್ನಿ ವಿನಿ ರಾಮನ್ (Glenn Maxwell And Vini Raman’s Wedding) ಅವರ ವಿವಾಹದ ಸಂಭ್ರಮವನ್ನು ಬಯೋ ಬಬಲ್‌ನಲ್ಲಿ ಆಚರಿಸಿದೆ. ನವವಿವಾಹಿತ ಸ್ಟಾರ್ ಜೋಡಿ ಇತ್ತೀಚೆಗೆ ತಮ್ಮ ಒಂದು ತಿಂಗಳ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸಿದ್ದಾರೆ. ಈ ಶುಭ ಸಂಗತಿಯನ್ನೇ ಆರ್​ಸಿಬಿ ಫ್ಯಾಮಿಲಿ (RCB Family) ಬಯೋ ಬಬಲ್​ನಲ್ಲಿ  (Bio-Bubble) ಒಟ್ಟಾಗಿ ಆಚರಿಸಿದೆ. ಮ್ಯಾಕ್ಸ್‌ವೆಲ್ ಈ ವರ್ಷದ ಮಾರ್ಚ್ 27 ರಂದು ತಮ್ಮ ದೀರ್ಘಕಾಲದ ಗೆಳತಿ ವಿನಿ ರಾಮನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  ವಿನಿ ಭಾರತೀಯ ಮೂಲದವಳಾದ ಕಾರಣ ಭಾರತೀಯ ಸಂಪ್ರದಾಯದಂತೆ ಮದುವೆ ನಡೆದಿದೆ. ಆರ್‌ಸಿಬಿ ಬಯೋ ಬಬಲ್‌ನಲ್ಲಿ ನಡೆದ ಆಚರಣೆಯಲ್ಲಿ ಎಲ್ಲಾ ಆಹ್ವಾನಿತರು ಸಾಂಪ್ರದಾಯಿಕ ಭಾರತೀಯ ಉಡುಗೆಯನ್ನು ಧರಿಸಿ ರಾತ್ರಿಯವರೆಗೂ ತಮ್ಮ ಮನಸು- ಹೃದಯವನ್ನು ಖುಷಿಖುಷಿಯಾಗಿ ಕುಣಿಸಿದ್ದಾರೆ.

  ಮನರಂಜನೆಯ ಸುರಿಮಳೆಯೇ ಹರಿದಿದೆ!
  ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಅವರ ಪತ್ನಿ ವಿನಿ ರಾಮನ್ ಅವರ ವಿವಾಹದ ಸಂಭ್ರಮದಲ್ಲಿ RCB ತುಕಡಿಯ ಪ್ರತಿಯೊಬ್ಬ ಸದಸ್ಯರು ಹಾಜರಿದ್ದರು. ಆರ್​ಸಿಬಿ ಮಾಜಿ ನಾಯಕ, ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿಯೂ ಆಗಿರುವ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.  ಇದನ್ನೂ ಓದಿ: Virat Kohli: ಪುಷ್ಪಾ ಸಿನಿಮಾದ 'ಊ ಅಂಟಾವಾ' ಹಾಡಿಗೆ ಕೊಹ್ಲಿ ಡ್ಯಾನ್ಸ್

  ಈ ದಂಪತಿಗಳು ತಮ್ಮ ನೃತ್ಯದ ಮೂಲಕ ವೇದಿಕೆಯಲ್ಲಿ ಮನರಂಜನೆಯ ಸಮುದ್ರವನ್ನೇ ಹರಿಸಿದ್ದಾರೆ. ಬೆಂಗಳೂರಿನ ಫ್ರಾಂಚೈಸ್ ಕೂಡ ಅಭಿಮಾನಿಗಳಿಗೆ ಶುಭ ಸಮಾರಂಭದ ಕಿರು ಕ್ಲಿಪ್ ಅನ್ನು ಹಂಚಿಕೊಂಡಿದೆ.


  ಗುಜರಾತ್ ಟೈಟಾನ್ಸ್ ವಿರುದ್ಧ ಮುಂದಿನ ಪಂದ್ಯ
  ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎರಡು ಬ್ಯಾಕ್ ಟು ಬ್ಯಾಕ್ ಸೋಲುಗಳ ನಂತರ ಬೆಂಗಳೂರಿನ ಆತ್ಮವಿಶ್ವಾಸವು ಸ್ವಲ್ಪ ಕುಸಿದಿದೆಯೇ ಅನಿಸುತ್ತಿದೆ.

  ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ
  ಅಗ್ರ ಆಟಗಾರ ವಿರಾಟ್ ಕೊಹ್ಲಿ ರನ್‌ಗಾಗಿ ಹೆಣಗಾಡುತ್ತಿದ್ದಾರೆ. ಅವರು ಈಬಾರಿಯ ಐಪಿಎಲ್ 2022ರಲ್ಲಿ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಇದುವರೆಗೆ 128 ರನ್ ಗಳಿಸಿದ್ದಾರೆ. RCB ತನ್ನ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಕಳೆದ ಎರಡು ಪಂದ್ಯಗಳಲ್ಲೂ ಸೋಲು ಕಂಡಿರುವುದರಿಂದ ಆರ್​ಸಿಬಿಗೆ ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯ ಬಹಳ ಮಹತ್ವದ್ದೆನಿಸಿದೆ.

  ಇದನ್ನೂ ಓದಿ: Virat Kohli: 101 ಪಂದ್ಯಗಳಾದರೂ ಶತಕ ಸಿಡಿಸದ ವಿರಾಟ್, ಕೊಹ್ಲಿ ಕಳಪೆ ಫಾರ್ಮ್​ಗೆ ಕಾರಣವೇನು?

  ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನ 15 ನೇ ಸೀಸನ್‌ನಲ್ಲಿ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದಾರೆ. ಐಪಿಎಲ್ 2022 ರ ಆರಂಭಿಕ 8 ಪಂದ್ಯಗಳಲ್ಲಿಯೂ ಸಹ ವಿರಾಟ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಐಪಿಎಲ್‌ನಲ್ಲಿ ಸತತ 2 ಪಂದ್ಯಗಳಲ್ಲಿ ಕೊಹ್ಲಿ ಗೋಲ್ಡನ್ ಡಕ್‌ನಿಂದ ಹೊರಬಿದ್ದಿದ್ದಾರೆ. ಅವರ ವೃತ್ತಿಜೀವನದಲ್ಲಿ ಅವರು ಸತತ 2 ಬಾರಿ ಮೊದಲ ಎಸೆತದಲ್ಲಿ ಔಟಾಗಿರುವುದು ಇದೇ ಮೊದಲು. ಸದ್ಯ ಕ್ರಿಕೆಟ್‌ನಲ್ಲಿ ಅವರ ವಿಫಲ ಆಟದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅವರ ಕಳಪೆ ಪ್ರದರ್ಶನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ.
  Published by:guruganesh bhat
  First published: