RCB ಐಪಿಎಲ್ ಗೆದ್ದಾಗ ನೆನಪಾಗೋದು ಕುಚಿಕು ಗೆಳೆಯ! Kohli ಮನದಾಳ ಮಾತು
ತಮ್ಮ ಬ್ಯಾಟಿಂಗ್ನ ಹೊಡೆತಗಳಿಂದಲೇ ಪ್ರಸಿದ್ಧರಾಗಿರುವ ಮಿಸ್ಟರ್ 360 ಡಿಗ್ರಿ ಎಂದು ಕರೆಯಲ್ಪಡುವ, ಮಾಜಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಎಬಿ ಡಿವಿಲಿಯರ್ಸ್ IPL ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ.
ಮುಂಬರುವ ಯಾವುದೇ ಐಪಿಎಲ್ ಆವೃತ್ತಿಯಲ್ಲಿ (IPL) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಆ ಕ್ಷಣದಲ್ಲಿ ನನಗೆ ನೆನಪಾಗುವ ಮೊದಲ ವ್ಯಕ್ತಿ ಎಬಿ ಡಿವಿಲಿಯರ್ಸ್! ಎಂದು ವಿರಾಟ್ ಕೊಹ್ಲಿ (Virat Kohli) ತಿಳಿಸಿದ್ದಾರೆ. ಅಲ್ಲದೇ ಆ ಗೆಲುವಿನ ಕ್ಷಣದಲ್ಲಿ ಆರ್ಸಿಬಿ ಎಬಿ ಡಿವಿಲಿಯರ್ಸ್ (AB de Villiers) ಅವರನ್ನು ನೆನೆಸಿಕೊಳ್ಳುತ್ತದೆ ಎಂದು ಆರ್ಸಿಬಿ (RCB) ಮಾಜಿ ನಾಯಕರೂ ಆಗಿರುವ ವಿರಾಟ್ ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ. 2011 ರಲ್ಲಿ RCB ಯೊಂದಿಗೆ ತನ್ನ ಒಡನಾಟವನ್ನು ಪ್ರಾರಂಭಿಸಿದ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ದಂತಕಥೆ ಎಬಿಡಿ ಒಂದೇ ಫ್ರಾಂಚೈಸಿಯೊಂದಿಗೆ 11 ಆವೃತ್ತಿಗಳನ್ನು ಆಡಿದ್ದಾರೆ. ಅಲ್ಲದೇ ಅವರು ಅಪಾರ ಸಂಖ್ಯೆಯ ಕನ್ನಡಿಗರ ಮನಸೂರೆಗೊಂಡಿದ್ದಾರೆ.
ಸಮಕಾಲೀನ ಕ್ರಿಕೆಟ್ನ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾದ ಡಿವಿಲಿಯರ್ಸ್ ಕಳೆದ ವರ್ಷ ನವೆಂಬರ್ನಲ್ಲಿ ಎಲ್ಲಾ ರೀತಿಯ ಕ್ರಿಕೆಟ್ಗಳಿಗೆ ನಿವೃತ್ತಿ ಘೋಷಿಸಿದರು.
ಎಬಿ ಡಿವಿಲಿಯರ್ಸ್ ಬಗ್ಗೆ ಭಾವನಾತ್ಮಕಗೊಳ್ಳುವೆ ಮುಂಬರುವ ಋತುಗಳಲ್ಲಿ ನಾವು ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ನಾನು ಮೊದಲು ಎಬಿ ಡಿವಿಲಿಯರ್ಸ್ ಬಗ್ಗೆ ತುಂಬಾ ಭಾವನಾತ್ಮಕವಾಗಿ ಯೋಚಿಸುತ್ತೇನೆ ಎಂದು 2021 ರ ಋತುವಿನ ನಂತರ ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ, ಆರ್ಸಿಬಿ ಬೋಲ್ಡ್ ಡೈರೀಸ್ನಲ್ಲಿ ಹೇಳಿದ್ದಾರೆ.
ಕಳೆದ ಐಪಿಎಲ್ನಲ್ಲಿಯೇ ಡಿವಿಲಿಯರ್ಸ್ ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿಲಿದ್ದಾರೆ ಎಂಬ ಸುಳಿವು ತನಗೆ ಇತ್ತು ಎಂದು ಕೊಹ್ಲಿ ಬಹಿರಂಗಪಡಿಸಿದ್ದಾರೆ.
ಕುಚುಕು ಗೆಳೆಯರು ಅವರ RCB ಗಾಗಿ ಆಡುವಾಗ ಡಿವಿಲಿಯರ್ಸ್ 2013-2021 ರವರೆಗೆ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿಯೊಂದಿಗೆ ಬಲವಾದ ಸ್ನೇಹವನ್ನು ಹೊಂದಿದ್ದರು ಇಬ್ಬರೂ ಕೆಲವು ಸ್ಮರಣೀಯ ಕ್ಷಣಗಳಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ ಪರಸ್ಪರ ಗೌರವವನ್ನು ಬೆಳೆಸಿಕೊಂಡಿದ್ದರು.
ತಮ್ಮ ಬ್ಯಾಟಿಂಗ್ನ ಹೊಡೆತಗಳಿಂದಲೇ ಪ್ರಸಿದ್ಧರಾಗಿರುವ ಮಿಸ್ಟರ್ 360 ಡಿಗ್ರಿ ಎಂದು ಕರೆಯಲ್ಪಡುವ, ಮಾಜಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಎಬಿ ಡಿವಿಲಿಯರ್ಸ್ IPL ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ.
ಬೆಂಗಳೂರು ಫ್ರಾಂಚೈಸಿಗೆ ನಿಷ್ಠೆ ತೋರಿದ್ದ ಎಬಿ ಡಿವಿಲಿಯರ್ಸ್ ಐಪಿಎಲ್ 2011 ರ ಹರಾಜಿನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ಅವರನ್ನು ಬಿಡುಗಡೆ ಮಾಡಿದ ನಂತರ RCB ಅವರನ್ನು $1.1 ಮಿಲಿಯನ್ಗೆ ಖರೀದಿಸಿತು. ಅದರ ನಂತರ ಅವರು ಎಂದಿಗೂ ಫ್ರಾಂಚೈಸಿಯನ್ನು ತೊರೆದಿರಲಿಲ್ಲ. ನಿವೃತ್ತಿಯನ್ನು ಘೋಷಿಸುವ ಕೊನೆಯ ಋತುವಿನವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿಯೇ ಆಡಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಋತುವನ್ನು ಕೆಟ್ಟ ದಾಖಲೆಯೊಂದಿಗೆ ಪ್ರಾರಂಭಿಸಿದೆ. ಹೌದು, ಪಂಜಾಬ್ ನಡುವಿನ ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರೆಪಿಸಿದರೂ ಉತ್ತಮ ಬೌಲಿಂಗ್ ಮಾಡದ ಹಿನ್ನಲೆ ಆರ್ಸಿಬಿ ಸೋಲನ್ನಪ್ಪಿತು. ಇದರೊಂದಿಗೆ ಕೆಟ್ಟ ದಾಖಲೆಯನ್ನೂ ದಾಖಲಿಸಿದೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಫಾಪ್ ಡು ಪ್ಲೆಸಿಸ್ ಅವರ ಇನ್ನಿಂಗ್ಸ್ ನೋಡಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯವನ್ನು ಸೋಲುತ್ತದೆ ಎಂದು ಯಾರಾದರೂ ನಿರೀಕ್ಷಿಸಿರಲಿಲ್ಲ. ಆದರೆ, ಬೆಂಗಳೂರು ತಂಡ ಕಳಪೆ ಬೌಲಿಂಗ್ ಮತ್ತು ಕಳಪೆ ಫೀಲ್ಡಿಂಗ್ನಿಂದ ಪಂದ್ಯವನ್ನು ಕಳೆದುಕೊಂಡಿದೆ. ಪಂಜಾಬ್ ಕಿಂಗ್ಸ್ ಕೂಡ 205 ರನ್ ಗಳ ಬೃಹತ್ ಗುರಿ ಬೆನ್ನತ್ತಿ ಇನ್ನೂ ಒಂದು ಓವರ್ ಬಾಕಿ ಉಳಿದಿರುವಂತೆ ಗೆಲುವನ್ನು ದಾಖಲಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸರಣಿಯಲ್ಲಿ ಕೆಟ್ಟ ದಾಖಲೆ ನಿರ್ಮಿಸಿದೆ. ಹೌದು, ಒಂದು ಪಂದ್ಯದಲ್ಲಿ ಅತಿ ಹೆಚ್ಚು ವೈಡ್ಗಳನ್ನು ದಾಖಲಿಸಿದ ತಂಡವಾಗಿದ್ದು, ಈ ಪಂದ್ಯದಲ್ಲಿ ಬೆಂಗಳೂರು ತಂಡ 21 ವೈಡ್ಗಳನ್ನು ಹಾಕಿದೆ. RCB ಬೌಲಿಂಗ್ನಲ್ಲಿ ಒಟ್ಟು 22 ಎಕ್ಸ್ಟ್ರಾಗಳನ್ನು ನೀಡಿದ್ದು, ಅದರಲ್ಲಿ 21 ವೈಡ್ಗಳ ರೂಪದಲ್ಲಿ ಬಂದಿವೆ.
ಈ ಪ್ರದರ್ಶನದ ಮೂಲಕ ಬೆಂಗಳೂರು ತಂಡವು 19 ವೈಡ್ಗಳ ಹಿಂದಿನ ದಾಖಲೆಯನ್ನು ಮುರಿದಿದೆ. 2011ರ ಐಪಿಎಲ್ ಋತುವಿನಲ್ಲಿ, ನಂತರ ಕಿಂಗ್ಸ್ ಇಲೆವೆನ್ ಪಂಜಾಬ್. ಕೊಚ್ಚಿ ಟಸ್ಕರ್ಸ್ ವಿರುದ್ಧದ ಪಂದ್ಯದಲ್ಲಿ 19 ವೈಡ್ಗಳನ್ನು ಹಾಕಿತ್ತು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ