Sachin Tendulkar vs Virat Kohli: ಇಬ್ಬರಲ್ಲಿ ಯಾರು ಬೆಸ್ಟ್ ಎಂದ ಪಾಕ್ ಆಟಗಾರ!

ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಆಯಾ ಕಾಲಘಟ್ಟದಲ್ಲಿ ಟ್ರೆಂಡ್ ಸೆಟ್ಟರ್‌ಗಳಾಗಿ ಹೊರಹೊಮ್ಮಿದ್ದಾರೆ. ಹಾಗಿದ್ದರೆ ಇಬ್ಬರಲ್ಲಿ ಯಾರು ಬೆಸ್ಟ್?

ವಿರಾಟ್ ಕೊಹ್ಲಿ vs ಸಚಿನ್ ತೆಂಡೂಲ್ಕರ್

ವಿರಾಟ್ ಕೊಹ್ಲಿ vs ಸಚಿನ್ ತೆಂಡೂಲ್ಕರ್

 • Share this:
  ಟೀಂ ಇಂಡಿಯಾ ಮತ್ತು ಆರ್‌ಸಿಬಿಯ (RCB) ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು (Virat Kohli) ಹೆಚ್ಚಾಗಿ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್‌ಗೆ (Sachin Tendulkar) ಹೋಲಿಸಲಾಗುತ್ತದೆ. ಸಚಿನ್ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದು, ಕ್ರಿಕೆಟ್‌ನ (Cricket) ಎಲ್ಲಾ ದಾಖಲೆಗಳು ಅವರ ಹೆಸರಿನಲ್ಲಿ ದಾಖಲಾಗಿವೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಬ್ಯಾಟಿಂಗ್‌ನೊಂದಿಗೆ ಸಚಿನ್ ಅವರ ಅನೇಕ ದಾಖಲೆಗಳನ್ನು ಸರಿಗಟ್ಟಿದ್ದಾರೆ. ಕೆಲವರು ವಿರಾಟ್ ಅವರನ್ನು ಟೀಮ್ ಇಂಡಿಯಾದ ಎರಡನೇ ಸಚಿನ್ ತೆಂಡೂಲ್ಕರ್ ಎಂದೂ ಕರೆಯುತ್ತಾರೆ. ಇದೀಗ ಈ ಇಬ್ಬರು ಆಟಗಾರರ ಬಗ್ಗೆ ಪಾಕಿಸ್ತಾನದ (Pakistan) ಮಾಜಿ ನಾಯಕ ರಶೀದ್ ಲತೀಫ್ (Rashid Latif) ದೊಡ್ಡ ಹೇಳಿಕೆ ನೀಡಿದ್ದಾರೆ.

  ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಹಳ ದಿನಗಳಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 2 ವರ್ಷಗಳಿಗಿಂತಲೂ ಹೆಚ್ಚು ಕಾಲ ಕೊಹ್ಲಿಗೆ ಏಕದಿನ ಅಥವಾ ಟೆಸ್ಟ್‌ನಲ್ಲಿ ಯಾವುದೇ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಇತ್ತೀಚಿನ ಐಪಿಎಲ್‌ ಸೀಸನ್‌ನಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಕೇವಲ 106 ರನ್‌ಗಳು ಮಾತ್ರ ಅವರ ಬ್ಯಾಟ್‌ನಿಂದ ಹೊರಬಂದಿವೆ.

  ಯಾರು ಬೆಸ್ಟ್ ಆಟಗಾರ?
  ವಿರಾಟ್ ಕೊಹ್ಲಿ ತಮ್ಮ ಕಳಪೆ ಫಾರ್ಮ್‌ನೊಂದಿಗೆ ದೀರ್ಘಕಾಲ ಹೋರಾಡುತ್ತಿದ್ದಾರೆ. ಪಾಕಿಸ್ತಾನದ ಮಾಜಿ ದಿಗ್ಗಜ ರಶೀದ್ ಲತೀಫ್ ಸಚಿನ್ ಮತ್ತು ಕೊಹ್ಲಿ ಅವರನ್ನು ಹೋಲಿಸಿದ್ದಾರೆ. ಇಬ್ಬರು ಆಟಗಾರರಲ್ಲಿ ಯಾರು ಉತ್ತಮ ಬ್ಯಾಟ್ಸ್‌ಮನ್ ಎಂಬುದನ್ನು ಅವರು ಹೇಳಿದ್ದಾರೆ.

  ಕೆಟ್ಟ ಪಿಚ್‌ಗಳಲ್ಲಿಯೂ ಅದ್ಭುತವಾಗಿ ಬ್ಯಾಟಿಂಗ್
  ಹಲವು ವಿಷಯಗಳಲ್ಲಿ ವಿರಾಟ್ ಕೊಹ್ಲಿಗಿಂತ ಸಚಿನ್ ತೆಂಡೂಲ್ಕರ್ ಉತ್ತಮ ಎಂದು ರಶೀದ್ ಲತೀಫ್ ಹೇಳಿದ್ದಾರೆ. ಲತೀಫ್ ಪ್ರಕಾರ, ಸಚಿನ್ ತೆಂಡೂಲ್ಕರ್ ಕೆಟ್ಟ ಪಿಚ್‌ಗಳಲ್ಲಿಯೂ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದರು.

  ಇದನ್ನೂ ಓದಿ: Deepak Chahar CSK: 14 ಕೋಟಿಗೆ ಖರೀದಿಸಿದರೂ ಒಂದೂ ಮ್ಯಾಚ್ ಆಡಲಿಲ್ಲ!

  ಸಚಿನ್ ತೆಂಡೂಲ್ಕರ್ ತಮ್ಮ ಆಟದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದರು. ವಿರಾಟ್ ಕೊಹ್ಲಿ ಸ್ಟಂಪ್ ಹೊರಗೆ ಆಡಲು ಪ್ರಯತ್ನಿಸಿ ಔಟಾಗುತ್ತಾರೆ ಎಂದು ರಶೀದ್ ಲತೀಫ್ ಹೇಳಿದ್ದಾರೆ. ಈ ಕಾರಣದಿಂದಲೇ ಅವರು ದೀರ್ಘಕಾಲ ಬೃಹತ್ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತಿಲ್ಲ.

  ಇದನ್ನೂ ಓದಿ:Explained: ರಿಟೈರ್ಡ್ ಹರ್ಟ್ - ರಿಟೈಡ್ ಔಟ್ ನಡುವಿನ ವ್ಯತ್ಯಾಸವೇನು? ಏನು ಹೇಳುತ್ತದೆ ಕ್ರಿಕೆಟ್ ನಿಯಮ?

  ವಿರಾಟ್ ಕೊಹ್ಲಿ ಈ ನ್ಯೂನತೆಗಳನ್ನು ಸರಿಪಡಿಸಲು ಯಶಸ್ವಿಯಾದರೆ, ಅವರು ಶೀಘ್ರದಲ್ಲೇ ಉತ್ತಮ ಲಯಕ್ಕೆ ಮರಳಬಹುದು ಎಂದು ಪಾಕಿಸ್ತಾನದ ಮಾಜಿ ನಾಯಕ ಹೇಳಿದರು.

  ಕೊಹ್ಲಿ vs  ಸಚಿನ್ ತೆಂಡೂಲ್ಕರ್: ಹೀಗಿದೆ ಅಂಕಿಅಂಶ
  257 ಏಕದಿನ ಪಂದ್ಯಗಳನ್ನು ಆಡಿದ ಸಚಿನ್ 26 ಶತಕ ಮತ್ತು 49 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಮತ್ತೊಂದೆಡೆ ಕೊಹ್ಲಿ ಒಂದೇ ಹಂತದಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತ 17 ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಗಮನಾರ್ಹವೆಂದರೆ ಏಕದಿನ ಶತಕಗಳ ವಿಷಯದಲ್ಲಿ ಕೊಹ್ಲಿ (43) ಮಾತ್ರ ತೆಂಡೂಲ್ಕರ್ (49) ಅವರಿಗಿಂತ ಹಿಂದಿದ್ದಾರೆ.  ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಆಯಾ ಕಾಲಘಟ್ಟದಲ್ಲಿ ಟ್ರೆಂಡ್ ಸೆಟ್ಟರ್‌ಗಳಾಗಿ ಹೊರಹೊಮ್ಮಿದ್ದಾರೆ.
  Published by:guruganesh bhat
  First published: