IPL 2022: 4 ಸ್ಟೇಡಿಯಂ, 2 ಟೀಮ್: ಯಾವ ರಾಜ್ಯದಿಂದ ಹೊಸ ಐಪಿಎಲ್ ತಂಡ..?

ಈ ಹಿಂದೆ ಪುಣೆ ಸೂಪರ್ ಜೈಂಟ್ಸ್ ಹಾಗೂ ಪುಣೆ ವಾರಿಯರ್ಸ್​​ ಹೆಸರಿನಲ್ಲಿ ಪುಣೆ ಕ್ರಿಕೆಟ್ ಸ್ಡೇಡಿಯಂ ಅನ್ನು ಕೇಂದ್ರವನ್ನಾಗಿಸಿ ತಂಡವನ್ನು ಪರಿಚಯಿಸಲಾಗಿತ್ತು.

IPL

IPL

  • Share this:
    ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ಗಾಗಿ ದಿನಗಣನೆ ಆರಂಭವಾಗಿದ್ದರೆ, ಮತ್ತೊಂದೆಡೆ ಐಪಿಎಲ್ ಸೀಸನ್ 15 ಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಎರಡು ಹೊಸ ತಂಡಗಳ ಸೇರ್ಪಡೆಯನ್ನು ಬಿಸಿಸಿಐ ಮೂಲಗಳು ಖಚಿತಪಡಿಸಿದೆ. ಹೀಗಾಗಿ ಮುಂದಿನ ಸೀಸನ್​ನಲ್ಲಿ 10 ತಂಡಗಳು ಇರಲಿದೆ. ಈ ಹೊಸ ತಂಡಗಳಿಗಾಗಿ ಬಿಸಿಸಿಐ ನಾಲ್ಕು ಹೋಮ್​ ಗ್ರೌಂಡ್​ಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಅಂದರೆ ನಾಲ್ಕು ಪ್ರಮುಖ ಸ್ಟೇಡಿಯಂಗಳನ್ನು ಕೇಂದ್ರವಾಗಿಸಿ ಎರಡು ತಂಡಗಳ ಹರಾಜು ನಡೆಯಲಿದೆ.

    ಈ ಪಟ್ಟಿಯಲ್ಲಿರುವ ಪ್ರಮುಖ ಸ್ಟೇಡಿಯಂಗಳೆಂದರೆ...

    1- ಕಾನ್ಫುರ್​-ಲಖನೌ​: ಉತ್ತರ ಪ್ರದೇಶದ ಕಾನ್ಪುರ್​ನಲ್ಲಿರುವ ಗ್ರೀನ್ ಪಾರ್ಕ್ ಸ್ಡೇಡಿಯಂ ಅನ್ನು ಬಿಡ್ಡಿಂಗ್​ಗಾಗಿ ನಮೂದಿಸಲು ಬಿಸಿಸಿಐ ಚಿಂತಿಸಿದೆ. ಈಗಾಗಲೇ ಕಾನ್ಪುರ್-ಲಖನೌ ಕೇಂದ್ರವಾಗಿಸಿ ಆಡಿದ ಮೊಹಮ್ಮದ್ ಕೈಫ್, ಸುರೇಶ್ ರೈನಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಪ್ರಿಯಂ ಗರ್ಗ್​ನಂತಹ ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ ಇದೇ ಸ್ಟೇಡಿಯಂ ಅನ್ನು ಐಪಿಎಲ್ ತಾಣವನ್ನಾಗಿ ಮಾಡಿದ್ರೆ ಫ್ಯಾನ್ ಬೇಸ್ ಕಾರಣದಿಂದ ಕ್ಲಿಕ್ ಆಗಲಿದೆ. ಹೀಗಾಗಿ ಬಿಸಿಸಿಐ ಹಿಟ್​ಲೀಸ್ಟ್​ನಲ್ಲಿ ಕಾನ್ಫುರ್​ಗೆ ಸ್ಥಾನ ನೀಡಲಾಗಿದೆ.

    2- ಕೊಚ್ಚಿ: ಕೇರಳ ಕೊಚ್ಚಿನ್ ಕೇಂದ್ರವಾಗಿಸಿ ಈ ಹಿಂದೆ ಕೊಚ್ಚಿನ್ ಟಸ್ಕರ್ಸ್ ಎಂಬ ತಂಡವನ್ನು ಪರಿಚಯಿಸಲಾಗಿತ್ತು. 50 ಸಾವಿರ ಪ್ರೇಕ್ಷಕರು ಕೂರಬಹುದಾದ ಸ್ಡೇಡಿಯಂ ಇರುವ ಕಾರಣ ಮತ್ತೊಮ್ಮೆ ಕೊಚ್ಚಿನ್ ಅನ್ನು ಬಿಸಿಸಿಐ ಕೇಂದ್ರವಾಗಿಸಿದೆ.

    3-ಅಹಮದಾಬಾದ್; ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಗುಜರಾತ್​ನಲ್ಲಿದೆ. ಆದರೆ ಅಹಮದಾಬಾದ್​ನ್ನು ಕೇಂದ್ರಿಕರಿಸಿ ಯಾವುದೇ ತಂಡವಿಲ್ಲ. ಈ ಹಿಂದೆ ಗುಜರಾತ್ ಲಯನ್ಸ್ ಎಂಬ ತಂಡವನ್ನು ಪರಿಚಯಿಸಲಾಗಿತ್ತು. ಇದೀಗ ಮತ್ತೊಮ್ಮೆ ಇದೇ ಕೇಂದ್ರವನ್ನು ತಾಣವಾಗಿಸಿ ಐಪಿಎಲ್ ತಂಡ ಬರುವುದು ಬಹುತೇಕ ಖಚಿತ ಎನ್ನಬಹುದು.

    4-ಪುಣೆ: ಈ ಹಿಂದೆ ಪುಣೆ ಸೂಪರ್ ಜೈಂಟ್ಸ್ ಹಾಗೂ ಪುಣೆ ವಾರಿಯರ್ಸ್​​ ಹೆಸರಿನಲ್ಲಿ ಪುಣೆ ಕ್ರಿಕೆಟ್ ಸ್ಡೇಡಿಯಂ ಅನ್ನು ಕೇಂದ್ರವನ್ನಾಗಿಸಿ ತಂಡವನ್ನು ಪರಿಚಯಿಸಲಾಗಿತ್ತು. ಆ ಬಳಿಕ ಈ ತಂಡಗಳನ್ನು ಕೈ ಬಿಡಲಾಗಿತ್ತು. ಇದೀಗ ಮತ್ತೊಮ್ಮೆ ಇದೇ ಸ್ಡೇಡಿಯಂ ಮೂಲಕ ಹೊಸ ತಂಡ ಸೇರ್ಪಡೆಯಾದರೂ ಅಚ್ಚರಿಪಡಬೇಕಿಲ್ಲ.

    ಒಟ್ಟಿನಲ್ಲಿ ನಾಲ್ಕು ಪ್ರಮುಖ ಸ್ಟೇಡಿಯಂಗಳು ಮುಂದಿದ್ದು, ಇದರಲ್ಲಿ 2 ಸ್ಡೇಡಿಯಂ ಮೂಲಕ ತಂಡಗಳನ್ನು ಪರಿಚಯಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:zahir
    First published: