ಕಾಲಿಗೆ ಫ್ರಾಕ್ಚರ್ ಆಗಿ IPLನಲ್ಲಿ ಆಡೋಕಾಗಿಲ್ಲ..ಬೇಜಾರಾಗಿದೆ ಎಂದ ಸ್ಯಾಮ್ ಕರನ್

ನಾನು ಮುಂದೆ ಖಂಡಿತ ಮತ್ತೆ ಐಪಿಎಲ್ ಆಡುವೆ, ಏಕೆಂದರೆ ಇದು ಸಾಕಷ್ಟು ವಿಷಯಗಳನ್ನು ಕಲಿಸುತ್ತದೆ. ಈ ಪಂದ್ಯಾವಳಿಗಳಲ್ಲಿ ನಾವು ಕ್ರಿಕೆಟ್ ಅನ್ನೇ ಜೀವಿಸುತ್ತೇವೆ.

ಸ್ಯಾಮ್ ಕರನ್

ಸ್ಯಾಮ್ ಕರನ್

  • Share this:
ಜಗತ್ತಿನ ಅತಿ ಪ್ರಸಿದ್ಧ ಹಾಗೂ ಅತಿ ಸಿರಿವಂತ ಕ್ರೀಡೆ (Richest Sports) ಎಂಬ ಖ್ಯಾತಿಗೆ ಪಾತ್ರವಾಗಿರುವ ಕ್ರಿಕೆಟ್ ಆಟದ ಅಣುಕು ರೂಪವಾದ ಐಪಿಎಲ್ ಪಂದ್ಯಾವಳಿ ಈಗ ಆರಂಭವಾಗಿದೆ. ನಿರೀಕ್ಷಿಸಲಾದಂತೆಯೇ ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳು (Cricket Fans) ತಮ್ಮ ನೆಚ್ಚಿನ ಆಟಗಾರರು ಹಾಗೂ ನೆಚ್ಚಿನ ತಂಡಗಳು ಹೇಗೆ ಪ್ರದರ್ಶನ ತೋರಲಿವೆ ಎಂಬುದನ್ನು ಕಾತುರದಿಂದ ವೀಕ್ಷಿಸಲು ಟಿವಿ ಹಾಗೂ ಮೊಬೈಲ್ ಮೊರೆ ಹೊಕ್ಕಿದ್ದಾರೆ. ಇತರೆ ದೇಶಗಳ ಕ್ರಿಕೆಟಿಗರೂ ಸಹ ಐಪಿಎಲ್ ಆಟಗಳಲ್ಲಿ (IPL 2022) ಆಡುವ ಅವಕಾಶವಿದ್ದು, ನಿಜ ಹೇಳಬೇಕೆಂದರೆ ಬೇರೆ ಬೇರೆ ದೇಶಗಳ ಕ್ರಿಕೆಟ್ ಆಟಗಾರರು (Foreign Players in IPL 2022) ಐಪಿಎಲ್ ಕ್ರೀಡೆಗಳಲ್ಲಿ ಆಡಲು ತುದಿಗಾಲಲ್ಲಿ ನಿಂತಿರುತ್ತಾರೆ.

ಅಂತಹ ಆಟಗಾರರ ಪೈಕಿ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಸ್ಯಾಮ್ ಕರನ್ (Sam Curran) ಸಹ ಒಬ್ಬರು. ಇವರು ಕಳೆದ ಎರಡು ಋತುಮಾನಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದು ಉತ್ತಮವಾಗಿಯೇ ಪ್ರದರ್ಶನ ತೋರಿದ್ದಾರೆ.

ದೂರ ಉಳಿಯಲು ಕಾರಣವೇನು?
ಆದರೆ, ದುರದೃಷ್ಟವಶಾತ್ ಫಿಟ್ನೆಸ್ ವಿಷಯಕ್ಕೆ ಬಂದಾಗ ಅವರು ಈ ಬಾರಿ ನತದೃಷ್ಟರಾಗಿದ್ದಾರೆಂದೇ ಹೇಳಬಹುದು. ಹಾಗಾಗಿ, ಈ ಬಾರಿಯ ಐಪಿಎಲ್ ಆವೃತ್ತಿಯಿಂದ ಕರನ್ ದೂರ ಉಳಿದಿದ್ದಾರೆ. 2021ರ ಐಪಿಎಲ್ ಪಂದ್ಯಾವಳಿಯಲ್ಲಿ ಈ ಪ್ರತಿಭಾವಂತ 23ರ ಹರೆಯದ ಆಟಗಾರ ತಮ್ಮ ಕಾಲಿನ ಕೆಳ ಭಾಗದಲ್ಲಿ ಫ್ರ್ಯಾಕ್ಚರ್ ಅನುಭವಿಸಿದ್ದು ಸದ್ಯ ಅದರಿಂದ ಇನ್ನೂ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅವರು ಅಲಭ್ಯರಾಗಿದ್ದು ಪ್ರಸ್ತುತ ತಾವು ಈ ಪಂದ್ಯಗಳನ್ನು ಆಡುತ್ತಿಲ್ಲ ಎಂಬುದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ವೈದ್ಯರು ಹೇಳಿದ್ದೇನು?
ಹಾಗೆ ನೋಡಿದರೆ ಅವರು ಐಪಿಎಲ್‌ನಲ್ಲಿ ಮೊದಲ ಬಾರಿಗೆ ಗಾಯಗೊಂಡ ನಂತರ ಅವರು ಇಂಗ್ಲೆಂಡ್ ಪರವಾಗಿ T20 ವಿಶ್ವಕಪ್ ಕ್ರಿಕೆಟ್ ಹಾಗೂ ಆಸ್ಟ್ರೇಲಿಯಾದೊಂದಿಗಿನ ಆ್ಯಶಸ್ ಸರಣಿಯಿಂದಲೂ ದೂರ ಉಳಿದಿದ್ದರು.

ಆದರೆ 2022ರ ಐಪಿಎಲ್ ಆರಂಭವಾಗುವ ತನಕ ಅವರು ಮತ್ತೆ ತಮ್ಮ ಫಾರ್ಮ್‌ಗೆ ಮರಳಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ ವೈದ್ಯಕೀಯ ಸಿಬ್ಬಂದಿ ಇವರನ್ನು ಪರೀಕ್ಷಿಸಿದ ನಂತರ ಐಪಿಎಲ್ ಪಂದ್ಯಾವಳಿಗಳಿಗೆ ಹೆಸರು ನೋಂದಣಿ ಮಾಡದಂತೆ ಸಲಹೆ ನೀಡಿದ್ದರು. ಇದರಿಂದಾಗಿ ಕರನ್ ಸದ್ಯ ನಡೆಯುತ್ತಿರುವ ಕ್ರೀಡೆಗಳನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ನಾನು ಖಂಡಿತ ಐಪಿಎಲ್ ಕ್ರಿಕೆಟ್‍ಗೆ ಮರಳುವೆ
ಈ ಮಧ್ಯೆ ಕ್ರೀಡಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕರನ್ ಮುಂದಿನ ದಿನಗಳಲ್ಲಿ ಅವರು ಖಂಡಿತ ಐಪಿಎಲ್ ಆವೃತ್ತಿಯನ್ನು ಸೇರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಕ್ಕೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಮೊದಲಿಗೆ ನಾನು ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲು ಬಯಸಿದ್ದೆ, ಆದರೆ ದಿನದ ಅಂತ್ಯದಲ್ಲಿ ನನಗೆ ಇದು ಸರಿ ಎನಿಸಲಿಲ್ಲ ಹಾಗೂ ಅದರಿಂದ ದೂರ ಉಳಿದೆ. ಇದು ಒಂದು ಉತ್ತಮ ನಿರ್ಧಾರವಾಗಿದೆಯಾದರೂ ನನಗೆ ಐಪಿಎಲ್ ಆಡದೆ ಇರುತ್ತಿರುವುದಕ್ಕೆ ಬೇಸರವಾಗಿದೆ. ಮನೆಯಿಂದಲೇ ಪಂದ್ಯಗಳನ್ನು ವೀಕ್ಷಿಸುವುದು ನನಗೆ ತುಂಬ ಹತಾಶೆ ಉಂಟು ಮಾಡಿದೆ, ಆದರೆ ನಾನು ಚೇತರಿಸಿಕೊಳ್ಳುತ್ತಿದ್ದು ಖಂಡಿತವಾಗಿ ಮತ್ತೆ ಐಪಿಎಲ್‌ಗೆ ಮರಳುತ್ತೇನೆ" ಎಂದಿದ್ದಾರೆ.

ಇದನ್ನೂ ಓದಿ: Dhanashree Verma : ಎಷ್ಟು ಮುದ್ದಾಗಿದ್ದಾರೆ ನೋಡಿ ಚಹಾಲ್​ ಪತ್ನಿ! ಧನಶ್ರೀ ಬಗ್ಗೆ ನಿಮಗೆ ತಿಳಿದಿರದ ಸಂಗತಿಗಳು ಇಲ್ಲಿದೆ..

ತಮ್ಮ ಮಾತುಗಳನ್ನು ಮುಂದುವರಿಸುತ್ತ "ನಾನು ಇನ್ನೂ ಚಿಕ್ಕವನು, ನನಗೆ ಫಿಟ್ನೆಸ್ ಮೊದಲ ಆದ್ಯತೆಯಾಗಿದೆ. ನಾನು ಬೇಕಿದ್ದರೆ ಈ ಬಾರಿಯ ಹರಾಜಿನಲ್ಲಿ ಭಾಗವಹಿಸಿ ಈಗ ಪಂದ್ಯಗಳನ್ನಾಡುತ್ತಿರಬಹುದಾಗಿತ್ತು. ಆದರೆ ಅದು ಇನ್ನೊಂದು ರೀತಿಯಲ್ಲಿ ಅಪಾಯಕರವಾಗುತ್ತಿತ್ತು. ಮತ್ತೆ ನನಗೆ ಹೆಚ್ಚಿನ ಗಾಯವಾಗಿರುತ್ತಿದ್ದರೆ ಬಹುಕಾಲ ನಾನು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗುತ್ತಿತ್ತು. ಹಾಗಾಗಿ ನನ್ನ ನಿರ್ಧಾರ ಸರಿಯಾಗಿತ್ತು ಎಂಬ ಭಾವನೆ ನನ್ನದಾಗಿದೆ ಎಂದು ಅವರು ಹೇಳಿದ್ದಾರೆ.

ಐಪಿಎಲ್​ನಿಂದ ಏನು ಪ್ರಯೋಜನ?
ಇದೇ ಸಂದರ್ಭದಲ್ಲಿ ಐಪಿಎಲ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುವ ಈ ಆಟಗಾರ ಮುಂದೆ ಮತ್ತೆ ಖಂಡಿತ ಐಪಿಎಲ್ ಆವೃತ್ತಿಗೆ ಮರಳುವುದಾಗಿ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಅವರ ಪ್ರಕಾರ T20 ಪಂದ್ಯಗಳಲ್ಲಿ ಹೇಗೆ ಮತ್ತು ಯಾವ ರೀತಿ ಆಡಬೇಕೆಂಬುದನ್ನು ಐಪಿಎಲ್‌ನಿಂದ ಅದ್ಭುತವಾಗಿ ಕಲಿಯಬಹುದಾಗಿದೆ.

ಇದನ್ನೂ ಓದಿ: IPL 2022 Latest Updates: RCB ಅಭಿಮಾನಿಗಳಿಗೆ ಗುಡ್ ನ್ಯೂಸ್, ಮುಂದಿನ ಪಂದ್ಯಕ್ಕೆ ಮ್ಯಾಕ್ಸ್​ವೆಲ್ ಕಮ್​ಬ್ಯಾಕ್

"ನಾನು ಮುಂದೆ ಖಂಡಿತ ಮತ್ತೆ ಐಪಿಎಲ್ ಆಡುವೆ, ಏಕೆಂದರೆ ಇದು ಸಾಕಷ್ಟು ವಿಷಯಗಳನ್ನು ಕಲಿಸುತ್ತದೆ. ಈ ಪಂದ್ಯಾವಳಿಗಳಲ್ಲಿ ನಾವು ಕ್ರಿಕೆಟ್ ಅನ್ನೇ ಜೀವಿಸುತ್ತೇವೆ. ನೀವು ಏನೇ ಮಾಡಿದರೂ ಅದರಲ್ಲಿ ಕ್ರಿಕೆಟ್ ಬಗ್ಗೆಯ ವಿಷಯವೇ ಇರುತ್ತದೆ, ದೊಡ್ಡ ದೊಡ್ಡ ಕ್ರೀಡಾಪಟುಗಳೊಂದಿಗೆ ಕ್ರಿಕೆಟ್ ಕುರಿತು ಜ್ಞಾನ ವಿನಿಮಯ ಮಾಡಿಕೊಳ್ಳುತ್ತೇವೆ. ಅವರಿಂದ ಹಲವು ವಿಷಯಗಳನ್ನು ಕಲಿಯುತ್ತೇವೆ, ಹಾಗಾಗಿ ಇದು ಒಂದು ಉತ್ತಮ ವೇದಿಕೆಯಾಗಿದೆ" ಎಂದು ಆ ಬಗ್ಗೆ ಅವರು ನುಡಿಯುತ್ತಾರೆ.
Published by:guruganesh bhat
First published: