Dhoni-Robin Uthappa Friendship: ರಾಬಿನ್ ಉತ್ತಪ್ಪ ಧೋನಿಗೆ ಏನಂತ ಕರೆಯಬೇಕು? ಇದನ್ನು ಓದಿ ನೀವೇನಾದ್ರೂ ಹೆಸರು ಸೂಚಿಸಬಹುದಾ?

ಐಪಿಎಲ್ 2022ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪರವಾಗಿ ಆಡುತ್ತಿರುವ ರಾಬಿನ್ ಉತ್ತಪ್ಪ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜೊತೆ ಅತ್ಯುತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ.

ಗೆಳೆಯರ ಅಪರೂಪದ ಫೋಟೊ!

ಗೆಳೆಯರ ಅಪರೂಪದ ಫೋಟೊ!

 • Share this:
  ಭಾರತ ಕ್ರಿಕೆಟ್ ತಂಡ ಕಂಡ ಮಹಾನ್ ನಾಯಕ, ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (MS Dhoni) ಅವರನ್ನು ಅನೇಕ ಅಡ್ಡಹೆಸರುಗಳಿಂದ ಕರೆಯಲಾಗುತ್ತದೆ, ಅವುಗಳಲ್ಲಿ ತುಂಬಾ ಪ್ರಸಿದ್ಧವಾಗಿದ್ದು ಎಂಎಸ್, ಮಹಿ, ಕ್ಯಾಪ್ಟನ್ ಕೂಲ್, ದಿ ಫಿನಿಶರ್..ಹೀಗೆ ಮುಂದುವರೆಯುತ್ತದೆ.  ಆದರೆ ಅವರನ್ನು ಕರೆಯಲು ಅವರ ಗೆಳೆಯರು ಮತ್ತು ಕಿರಿಯ ಆಟಗಾರರು ಪ್ರೀತಿಯಿಂದ ಬಳಸಿದ ಒಂದು ಹೆಸರು 'ಮಹಿ ಭಾಯ್'(Mahi Bhai) ಉದಯೋನ್ಮುಖ ಯುವ ಆಟಗಾರರು ಧೋನಿ ಅವರೊಂದಿಗೆ ಆಡಿಡುವಾಗ, ಅವರ ಬಗ್ಗೆ ಮಾತನಾಡುವಾಗ ಅವರನ್ನು ಪ್ರೀತಿಯಿಂದ 'ಮಹಿ ಭಾಯ್' ಎಂದು ಕರೆಯುತ್ತಾರೆ. ಮಹಿ ಭಾಯ್ ಹೆಸರು  ಧೋನಿ (Dhoni- Robin Uthappa Friendship)ಬಗ್ಗೆ ಹೊಸ ಆಟಗಾರರಿಗೆ ಇದ್ದ ಗೌರವವನ್ನು ಸೂಚಿಸುತ್ತದೆ.

  ಆದರೆ ಇಲ್ಲೊಂದು ಅಚ್ಚರಿಯ ವಿಚಾರವಿದೆ! ಭಾರತ ಕ್ರಿಕೆಟ್ ತಂಡದ ಒಬ್ಬ ಆಟಗಾರನಿಗೆ ಮಾತ್ರ ಮಹೇಂದ್ರ ಸಿಂಗ್ ಧೋನಿ ಅವರನ್ನು'ಮಹಿ ಭಾಯ್' ಎಂದು ಕರೆಯುವುದು ಈ ಆಟಗಾರನಿಗೆ ಅವರಿಗೆ ಸುಲಭವಲ್ಲ. ಏಕೆಂದರೆ ಈ ಆಟಗಾರ ಕಳೆದ 18 ವರ್ಷಗಳಿಂದ ಮಹೇಂದ್ರ ಸಿಂಗ್ ಧೋನಿಯೊಂದಿಗೆ ಸಹ ಆಟಗಾರನಾಗಿ ಜೊತೆಗಿದ್ದಾನೆ. ಅವರೇ ರಾಬಿನ್ ಉತ್ತಪ್ಪ!

  ಗೆಳೆತನ ಬೆಳೆದಿದ್ದು ಹೇಗೆ?
  ಐಪಿಎಲ್ 2022ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪರವಾಗಿ ಆಡುತ್ತಿರುವ ರಾಬಿನ್ ಉತ್ತಪ್ಪ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜೊತೆ ಅತ್ಯುತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಬರೋಬ್ಬರಿ 18 ವರ್ಷಗಳ ಸುದೀರ್ಘಾವಧಿಯಲ್ಲಿ ಈ ಇಬ್ಬರ ಸಂಬಂಧಗಳು ಸಾಕಷ್ಟು ಬೆಳೆದಿವೆ. ಇಬ್ಬರೂ ಅತ್ಯುತ್ತಮ ಗೆಳೆಯರಾಗಿ ಹೊರಹೊಮ್ಮಿದ್ದಾರೆ.

  ಏನಂತ ಕರಿಯಲಿ ಗೆಳೆಯಾ?
  "ಇಂದು, ನನಗೆ ಅವನನ್ನು ಮಹಿ ಭಾಯ್ ಎಂದು ಕರೆಯುವುದು ತುಂಬಾ ಕಷ್ಟ, ಏಕೆಂದರೆ ನಾನು ಅವನನ್ನು ತಿಳಿದಾಗ ಅವನು ಮಹಿ ಆಗಿದ್ದ!  ನಾನು ಅವನೊಂದಿಗೆ 10-12 ಅಥವಾ 13 ವರ್ಷಗಳ ನಂತರ ಜೊತೆಗೆ ಆಡಿದ್ದೇನೆ. ಹಾಗಾಗಿ ಈ ಸುದೀರ್ಘಾವಧಿಯ ನಂತರ ಒಟ್ಟಿಗೆ ಒಂದೇ ತಂಡದಲ್ಲಿ ಆಡುವಾಗ ನಾನು ನಿನ್ನನ್ನು ಏನಂತ ಕರೆಯಬೇಕು ಎಂದು ಸ್ವತಃ ಧೋನಿಯನ್ನೇ ನಾನು ಕೇಳಿದೆ. ಇತರ ಆಟಗಾರರಂತೆ ನಾನು ನಿನ್ನನ್ನು ಮಹಿ ಭಾಯ್ ಎಂದು ಕರೆಯಬೇಕೇ?

  ನನ್ನ ಸುತ್ತಮುತ್ತಲಿನವರೆಲ್ಲರೂ ನಿನ್ನನ್ನು ಹಾಗೆ ಕರೆಯುತ್ತಿದ್ದಾರೆ. ಹೀಗಾಗಿ ನಾನೂ ಮಹಿ ಭಾಯ್ ಎಂದೇ ನಿನ್ನನ್ನು ಕರೆಯಲೆ ಎಂದು ಧೋನಿಯನ್ನು ಕೇಳಿದರೆ, ಅವನು ನನ್ನನ್ನು ಎಂಎಸ್ ಎಂದು ಕರೆ, ಅಥವಾ ನನ್ನನ್ನು ಮಹಿ ಎಂದು ಕರೆ ಅಥವಾ ನಿನಗೆ ಬೇಕಾದಂತೆ ನನ್ನನ್ನು ಕರೆ ಎಂದೇ ಉತ್ತರಿಸಬಹುದು ಎಂದು, ರಾಬಿನ್ ಉತ್ತಪ್ಪ  ಆರ್ ಅಶ್ವಿನ್ ಅವರ ಯೂಟ್ಯೂಬ್ ಚಾನಲ್​ನಲ್ಲಿ ತಿಳಿಸಿದ್ದಾರೆ.  ಮುಂದುವರೆದು ಮಾತನಾಡಿದ ರಾಬಿನ್ ಉತ್ತಪ್ಪ, ನಾನು 2004 ರಲ್ಲಿ ಮೊದಲ ಬಾರಿಗೆ ಧೋನಿಯನ್ನು ಭೇಟಿಯಾದೆ. ಆ ಸಮಯದಲ್ಲಿ ಬಾಂಬೆಯಲ್ಲಿ ನಾನು ನನ್ನ ಮೊದಲ ಚಾಲೆಂಜರ್ಸ್ ಟ್ರೋಫಿಯನ್ನು ಆಡಿದ್ದೆ. ಆ ಸರಣಿಯಲ್ಲಿ ಶ್ರೀಧರನ್ ಶ್ರೀರಾಮ್ ಕೂಡ ಇದ್ದರು. ನಾನು ಅವರಿಗೆ ತುಂಬಾ ಆತ್ಮೀಯನಾಗಿದ್ದೆ. ಶ್ರೀ ಭಾಯ್ ಸಹ ಎಂಎಸ್ ಧೋನಿಗೆ ಹತ್ತಿರವಾಗಿದ್ದರು. ಅವರೂ ಚೆನ್ನಾಗಿ ಬೆರೆಯುತ್ತಿದ್ದರು. ನಾನು ಅವರ ಮೂಲಕ ಎಂಎಸ್ ಅನ್ನು ಭೇಟಿಯಾದೆ. ನಂತರ ನಾವು ಒಟ್ಟಿಗೆ ಸುತ್ತಾಡಲು ಪ್ರಾರಂಭಿಸಿದೆವು ಎಂದು ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

  ಉತ್ತಪ್ಪ ಎಂಟ್ರಿ ವೇಳೆಗೆ ಧೋನಿ ಮಿಂಚುತ್ತಿದ್ರು..
  ರಾಬಿನ್ ಉತ್ತಪ್ಪ 2006 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ODI ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದರು. ಆ ಹೊತ್ತಿಗೆಲ್ಲ ಧೋನಿ ವಿಕೆಟ್‌ಕೀಪರ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಸಖತ್ತಾಗಿ ಮಿಂಚುತ್ತಿದ್ದರು. ಭಾರತ ತಂಡದ ವಿವಿಧ ಪ್ರವಾಸ ಉತ್ತಪ್ಪ ಮತ್ತು ಧೋನಿ ಆಪ್ತ ಗೆಳೆತನ ಹಾಗೇ ಮುಂದುವರೆದಿತ್ತು. ಅದು ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಮುಂದುವರೆಯುತ್ತಿದೆ.

  ಇದನ್ನೂ ಓದಿ: IPL 2022: ಕಡಿಮೆ ಹಣಕ್ಕೆ ಸಖತ್ ಆಟ! ಪ್ರಸಿದ್ಧ ದುಬಾರಿ ಆಟಗಾರರಿಗಿಂತ ಇವರೇ ಬೆಸ್ಟ್!

  ನಾನು ಭಾರತೀಯ ತಂಡವನ್ನು ಸೇರಿದಾಗ ಭಾರತದ ಹೊರಗಿನ ನನ್ನ ಮೊದಲ ಪ್ರವಾಸ ವೆಸ್ಟ್ ಇಂಡೀಸ್‌ ಆಗಿತ್ತು. ನಂತರ ನಾವು ಪಾಕಿಸ್ತಾನದ ವಿರುದ್ಧ ಮೂರು ಪಂದ್ಯಗಳನ್ನು ಆಡಲು ದುಬೈಗೆ ಹೋದೆವು. ಅಲ್ಲಿಂದ ನೇರವಾಗಿ ವೆಸ್ಟ್ ಇಂಡೀಸ್‌ಗೆ ಹೋದೆವು. ಎಂಎಸ್ ಮತ್ತು ನಾನು ಆ ಸರಣಿಯ ಅವಧಿಯಲ್ಲಿ ನಿಜವಾಗಿಯೂ ಉತ್ತಮ ಸ್ನೇಹಿತರಾದೆವು ಎಂದು ರಾಬಿನ್ ಉತ್ತಪ್ಪ ಹಳೆಯ ಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

  ಇದನ್ನೂ ಓದಿ:IPL 2022: ರಸ್ತೆಯಲ್ಲೇ ಬಸ್ ನಿಲ್ಲಿಸಿದ Dhoni ಜಾಹೀರಾತು ಬ್ಯಾನ್! ಕಾರಣವೇನು?

  ಎಂಎಸ್, ಇರ್ಫಾನ್ ನಾಥನ್, ಆರ್​ಪಿ ಸಿಂಗ್ ಮತ್ತು ಪಿಯೂಷ್ ಚಾವ್ಲಾ ಎಲ್ಲರೂ ಒಟ್ಟಿಗೆ ಇದ್ದೇವೆ. ನಮ್ಮ ದೈನಂದಿನ ಮೆನು ನಾನ್ ಮತ್ತು ದಾಲ್ ಮಖ್ನಿ. ಆರ್ಪಿ ಜೀರಾ ಆಲೂ ಅನ್ನು ಪ್ರೀತಿಸುತ್ತೇವೆ. ಇರ್ಫಾನ್ ಬಟರ್ ಚಿಕನ್ ಅನ್ನು ಇಷ್ಟಪಡುತ್ತಾರೆ ಎಂದು ರಾಬಿನ್ ಉತ್ತಪ್ಪ ಮೆಲುಕು ಹಾಕಿದ್ದಾರೆ.
  Published by:guruganesh bhat
  First published: