IPL 2022: ಅನುಜ್ ರಾವತ್ ಮೊದಲ ಫಿಫ್ಟಿ, RCB ಗೆ ಹ್ಯಾಟ್ರಿಕ್ ಗೆಲುವು

ಚೇಸಿಂಗ್ ವೇಳೆ ಆರ್​ಸಿಬಿ ಮಾಜಿ ಕಪ್ತಾನ ವಿರಾಟ್ ಕೊಹ್ಲಿ (Virat Kohli) 36 ಎಸೆತಗಳಲ್ಲಿ 48 ರನ್​ಗಳಿಸಿ ಕೇವಲ ಎರಡೇ ಎರಡು ವರ್ಷಗಳಲ್ಲಿ ಅರ್ಧಶತಕದಿಂದ ವಂಚಿತರಾದರು.

ಅನುಜ್ ರಾವತ್

ಅನುಜ್ ರಾವತ್

 • Share this:
  ಅನುಜ್ ರಾವತ್ ಅವರ 66 ರನ್​ಗಳ ಭರ್ಜರಿ ಆಟದ ನೆರವಿನಿಂದ ಆರ್​ಸಿಬಿ ಮುಂಬೈ ಇಂಡಿಯನ್ಸ್​ (Royal Challengers Bangalore vs Mumbai Indians Highlights) ವಿರುದ್ಧ ಅಮೋಘ ಜಯಗಳಿಸಿದೆ. ಅದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಸೂರ್ಯ ಕುಮಾರ್ ಯಾದವ್ (Suryakumar Yadav) ಅವರ 68 ರನ್​ಗಳ ಉತ್ತಮ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 151 ರನ್​ ಟಾರ್ಗೆಟ್ ನೀಡಿತ್ತು. ಆದರೆ ಆರ್​ಸಿಬಿ ಪಡೆ ಈ ಮೊತ್ತವನ್ನು ಸುಲಭವಾಗಿ ಚೇಸ್ ಮಾಡುವಲ್ಲಿ ಯಶಸ್ವಿಯಾಯಿತು. ಈಮೂಲಕ ಆರ್​ಸಿಬಿ ಐಪಿಎಲ್ 2022ರಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದಂತಾಗಿದೆ.

  ಆದರೆ ಚೇಸಿಂಗ್ ವೇಳೆ ಆರ್​ಸಿಬಿ ಮಾಜಿ ಕಪ್ತಾನ ವಿರಾಟ್ ಕೊಹ್ಲಿ (Virat Kohli) 36 ಎಸೆತಗಳಲ್ಲಿ 48 ರನ್​ಗಳಿಸಿ ಕೇವಲ ಎರಡೇ ಎರಡು ವರ್ಷಗಳಲ್ಲಿ ಅರ್ಧಶತಕದಿಂದ ವಂಚಿತರಾದರು.

  ಇದನ್ನೂ ಓದಿ: RCB-ಹೊಂಬಾಳೆ ಫಿಲ್ಮ್ಸ್​ ಒಟ್ಟಿಗೆ ಏನು ಮಾಡಲಿವೆ? ಹೆಚ್ಚಾಯ್ತು ಅಭಿಮಾನಿಗಳ ಕುತೂಹಲ!

  MI ಉತ್ತಮ ಆರಂಭವನ್ನು ಪಡೆದಿತ್ತಾದರೂ RCB ಯ ಉತ್ತಮ ಬೌಲಿಂಗ್ ಮತ್ತು ಫೀಲ್ಡಿಂಗ್ ಸ MI ಅಗ್ರ ಕ್ರಮಾಂಕದ ಕುಸಿಯುವಂತೆ ಮಾಡಿತು. ಮೊದಲು ರೋಹಿತ್ ಶರ್ಮಾ ಅವರನ್ನು ಹರ್ಷಲ್ ಪಟೇಲ್ ಔಟ್ ಮಾಡಿದ್ದು ಮುಂಬೈ ಇಂಡಿಯನ್ಸ್​ಗೆ ಆಘಾತ ನೀಡಿತು. ಮುಂಬೈ ಇಂಡಿಯನ್ಸ್ ತಂಡ 79 ರನ್‌ ಗಳಿಸುವಷ್ಟರಲ್ಲಿ ಮಹತ್ವದ 6 ವಿಕೆಟ್‌ ಕಳೆದುಕೊಂಡು ಕಷ್ಟಕ್ಕೆ ಸಿಲುಕಿತ್ತು.

  ವನಿಂದು ಹಸರಂಗಾ ಮತ್ತು ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್ ಪಡೆದರೆ, ಆಕಾಶ್ ದೀಪ್ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ MI ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.

  ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಮಿಂಚುತ್ತಿರುವ ಯುವ ಪ್ರತಿಭೆಗಳು, ಇವರೇ ಟೀಂ ಇಂಡಿಯಾ ಭವಿಷ್ಯದ ಪ್ಲೇಯರ್ಸ್​..!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಇಂದಿನ ಪಂದ್ಯವನ್ನೂ ಸೇರಿ ಈವರೆಗೆ ಐಪಿಎಲ್​ ನಲ್ಲಿ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡವು 17 ಬಾರಿ ಗೆಲುವನ್ನು ಸಾಧಿಸಿದರೆ, ಬೆಂಗಳೂರು ತಂಡವು 123 ಪಂದ್ಯಗಳನ್ನು ಮಾತ್ರ ಗೆದ್ದಂತಾಗಿದೆ. ಅಂಕಿಅಂಶಗಳ ಪ್ರಕಾರ ಮುಂಬೈ ಮೇಲುಗೈ ಸಾಧಿಸಿದೆ. ಆದರೆ ಇಂದಿನ ಪಂದ್ಯ ನಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಒಲಿದಂತಾಗಿದೆ.

  ಕೊಹ್ಲಿ ಮತ್ತು ಅನುಜ್ ತಮ್ಮ ಆಕ್ರಮಣಕಾರಿ ಆಟವಾಡಿ ಸ್ಕೋರ್ ಬೋರ್ಡ್ ಗೆ ಲಗ್ಗೆ ಇಟ್ಟರು. ಆದರೆ, ಕೊನೆಯಲ್ಲಿ 66 ರನ್ ಗಳಿಸಿದ್ದ ಅನುಜ್ ರನೌಟ್ ಆದರು. ಡೆವಾಲ್ಡ್ ಬ್ರೆವಿಸ್ 8 ರನ್ ಅಂತರದಲ್ಲಿ ವಿರಾಟ್ ಕೊಹ್ಲಿಯನ್ನು ಎಲ್ ಬಿಡಬ್ಲ್ಯೂ ಮಾಡಿಸಿ ಪೆವಿಲಿಯನ್ ಗೆ ಕಳುಹಿಸಿದರು. ನಂತರ ಮ್ಯಾಕ್ಸಿ ಎರಡು ಹೊಡೆತಗಳ ಮೂಲಕ ಆರ್‌ಸಿಬಿಗೆ ಜಯ ತಂದುಕೊಟ್ಟರು.  ಪಂದ್ಯದ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಸಿಡಿಸಿದ ಸಿಕ್ಸರ್ ಭರ್ಜರಿಯಾಗಿತ್ತು.

  ಎರಡೂ ತಂಡಗಳಲ್ಲಿ ಸೆಣಸಿದ್ದ ಆಟಗಾರರು
  ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಡೇವಿಡ್ ವಿಲ್ಲಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ಹರ್ಷಲ್ ಪಟೇಲ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್

  ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (WK), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ರಮಣದೀಪ್ ಸಿಂಗ್ ಎಂ ಅಶ್ವಿನ್, ಬಾಸಿಲ್ ಥಂಪಿ, ಜಸ್ಪ್ರೀತ್ ಬುಮ್ರಾ, ಜಯದೇವ್ ಉನದ್ಕತ್
  Published by:guruganesh bhat
  First published: