IPL 2022, RCB vs RR: ವಿರಾಟ್ ಕೊಹ್ಲಿ ಸೆನ್ಸೇಷನಲ್ ಕ್ಯಾಚ್; ಆರ್​ಸಿಬಿ ಬೌಲಿಂಗ್​ಗೆ ರಾಜಸ್ಥಾನ ತತ್ತರ

ಟ್ರೆಂಟ್ ಬೌಲ್ಟ್  ನೀಡಿದ ಕ್ಯಾಚ್ ಅನ್ನು ಪರಿಪೂರ್ಣ ಡೈವ್ ಹೊಡೆದ ವಿರಾಟ್ ಕೊಹ್ಲಿ ಪಂದ್ಯದ ಸೆನ್ಸೇಷನ್ ಕ್ರಿಯೇಟ್ ಮಾಡಿದರು.

ವಿರಾಟ್ ಕೊಹ್ಲಿ ಕ್ಯಾಚ್ ಹಿಡಿದು ಸಂಭ್ರಮಿಸಿದ ಕ್ಷಣ

ವಿರಾಟ್ ಕೊಹ್ಲಿ ಕ್ಯಾಚ್ ಹಿಡಿದು ಸಂಭ್ರಮಿಸಿದ ಕ್ಷಣ

 • Share this:
  ವಿರಾಟ್ ಕೊಹ್ಲಿಯಿಂದ ಸೆನ್ಸೇಷನಲ್ ಕ್ಯಾಚ್! ಭಾರೀ ವೈರಲ್ ಆಗುತ್ತಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ (RCB vs RR) ಶಾರ್ಟ್-ಮಿಡ್ ವಿಕೆಟ್‌ನಲ್ಲಿ ಟ್ರೆಂಟ್ ಬೌಲ್ಟ್ ಅವರ ಕ್ಯಾಚಲ್ಲಿ  (Trent Boult Catch) ಕೊಹ್ಲಿ ಹಿಡಿದ ಪರಿ ಅಮೋಘವಾಗಿತ್ತು. ಹರ್ಷಲ್ ಪಟೇಲ್ (Harshal Patel)  ಬೌಲಿಂಗ್​ನಲ್ಲಿ ಟ್ರೆಂಟ್ ಬೌಲ್ಟ್  ನೀಡಿದ ಕ್ಯಾಚ್ ಅನ್ನು ಪರಿಪೂರ್ಣ ಡೈವ್ ಹೊಡೆದ ವಿರಾಟ್ ಕೊಹ್ಲಿ (Virat Kohli) ಪಂದ್ಯದ ಸೆನ್ಸೇಷನ್ ಕ್ರಿಯೇಟ್ ಮಾಡಿದರು. ಆರ್​ಸಿಬಿ ಬೌಲರ್​ಗಳ ದಾಳಿಗೆ ರಾಜಸ್ಥಾನ ರಾಯಲ್ಸ್ ತತ್ತರಿಸುತ್ತಿದೆ.  ಬೆಂಗಳೂರು ತಂಡದ ಬೌಲರ್​ಗಳ ದಾಳಿಗೆ ವಿಕೆಟ್ ಭಾರಿ ವೇಗದಲ್ಲಿ ಪತನಗೊಳ್ಳುತ್ತಿದ್ದು ರಾಜಸ್ಥಾನ ಅಂತೂ ಇಂತೂ ಶತಕ ರನ್ ಪೇರಿಸಿದೆ.

  ರಾಜಸ್ಥಾನ ರಾಯಲ್ಸ್ ಪರ ರಿಯಾನ್ ಪರಾಗ್ ಅವರ ಅರ್ಧಶತಕದ ಸೆನ್ಸೇಷನಲ್ ಬ್ಯಾಟಿಂಗ್ ರಾಜಸ್ಥಾನ ರಾಯಲ್ಸ್  ಹೋರಾಟದ ಮೊತ್ತ ಪೇರಿಸಲು ಸಹಾಯ ಮಾಡಿತು. ಹಸರಂಗ ಅವರಿಂದ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 144 ರನ್​ಗಳನ್ನು ಗಳಿಸಲು ಶಕ್ತವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 145 ರನ್ ಹೊಡೆದರೆ ಗೆದ್ದಂತೆ!

  ಫಾಫ್ ಡು ಪ್ಲೆಸಿಸ್ ಬೌಲಿಂಗ್ ಆಯ್ಕೆ
  ಐಪಿಎಲ್​ 2022 ( IPL 2022) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ (RCB vs RR) ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.

  ಇದನ್ನೂ ಓದಿ:  IPL 2022 Rohit Sharma: ರೋಹಿತ್ ಶರ್ಮಾ ಭಾವನಾತ್ಮಕ ಪೋಸ್ಟ್; ಮುಂಬೈನೊಂದಿಗೆ ದೃಢವಾಗಿ ನಿಂತ ಅಭಿಮಾನಿಗಳು

  ಅನುಜ್ ರಾವತ್ ಬದಲಿಗೆ ರಜತ್ ಪಾಟಿದಾರ್ ಬಂದಿದ್ದರಿಂದ RCB ಒಂದು ಬದಲಾವಣೆ ಮಾಡಿದೆ. ರಾಜಸ್ಥಾನ್ ರಾಯಲ್ಸ್ ಕೂಡ ಒಂದೆರಡು ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕಿಳಿದಿದೆ. ಕರುಣ್ ನಾಯರ್ ಸ್ಥಾನಕ್ಕೆ ಡೇರಿಲ್ ಮಿಚೆಲ್ ಮತ್ತು ಓಬೇದ್ ಮೆಕಾಯ್ ಬದಲಿಗೆ ಕುಲದೀಪ್ ಸೇನ್ ಸ್ಥಾನ ಪಡೆದಿದ್ದಾರೆ. ಪಂದ್ಯ ಭರ್ಜರಿ ಹಣಾಹಣಿ ಆಗುವ ಲಕ್ಷಣವಿದೆ.  ಪಂದ್ಯದ ಫಲಿತಾಂಶ ಹೀಗಿದೆ
  ರಾಜಸ್ಥಾನ ರಾಯಲ್ಸ್ ತಂಡವನ್ನು 144ಕ್ಕೇ ಕಟ್ಟಿಹಾಕಿದರೂ 145 ರನ್ ಗಳಿಸಿ ಗೆಲುವಿನ ಹಾರ ಹಾಕಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB vs RR Highlights) ವಿಫಲವಾಯಿತು. ಇದೊಂಥರಾ ಐಪಿಎಲ್​ನಲ್ಲಿ (IPL 2022) ಬೌಲರ್​ಗಳೇ ಅಧಿಪತ್ಯ ಸಾಧಿಸಿದ ಪಂದ್ಯದಂತೆ ಅನಿಸುವಂತಿತ್ತು. 

  ರಾಜಸ್ಥಾನ ರಾಯಲ್ಸ್ ಬೌಲಿಂಗ್ ವಿಭಾಗದ ಮಾಂತ್ರಿಕ ಕೈಚಳಕಕ್ಕೆ ಆರ್​ಸಿಬಿ ಬ್ಯಾಟರ್​ಗಳು ಬೆಕ್ಕಸ ಬೆರಗಾಗಿ ಒಬ್ಬೊಬ್ಬರೇ ಪೆವಿಲಿಯನ್ ಸೇರಿದರು. ಜೋಶ್ ಹೇಜಲ್‌ವುಡ್ (2/19) ನೇತೃತ್ವದ ಆಲ್‌ರೌಂಡ್ ಬೌಲಿಂಗ್ ಪ್ರದರ್ಶನದಿಂದಾಗಿ ರಾಯಲ್ ಚಾಲೆಂಜರ್ಸ್ (RCB) ಬೆಂಗಳೂರು 39 ನೇ ಪಂದ್ಯದಲ್ಲಿ 8 ವಿಕೆಟ್‌ಗೆ 144 ಕ್ಕೆ ರಾಜಸ್ಥಾನ್ ರಾಯಲ್ಸ್ ಅನ್ನು ತಡೆದು ನಿಲ್ಲಿಸಿತ್ತು.

  ಬೌಲರ್​ಗಳೂ ಕಡಿಮೆ ಇಲ್ಲ
  ಆದರೆ ರಾಜಸ್ಥಾನ ರಾಯಲ್ಸ್ (RR) ಬೌಲರ್​ಗಳೂ ತಾವೇನೂ ಕಡಿಮೆ ಇಲ್ಲ ಎಂಬಂತೆ ಅಮೋಘ ಬೌಲಿಂಗ್ ಪ್ರದರ್ಶಿಸಿ ಆರ್​ಸಿಬಿಯನ್ನು ಕಟ್ಟಿಹಾಕಿದರು. ಅಂತಿಮವಾಗಿ ರಾಜಸ್ಥಾನ 29 ರನ್​ಗಳಿಂದ ಆರ್​ಸಿಬಿ ವಿರುದ್ಧ ಗೆಲ್ಲಲು ಯಶಸ್ವಿಯಾಯಿತು.

  ಇದನ್ನೂ ಓದಿ: Shikar Dhawan: 6,000 ರನ್ ಪೂರೈಸಿದ ಶಿಖರ್ ಧವನ್, ವಿರಾಟ್ ಕೊಹ್ಲಿಗೆ ಭರ್ಜರಿ ಪೈಪೋಟಿ!​

  ರಾಜಸ್ಥಾನ ಈ ಋತುವಿನಲ್ಲಿ ತಾನು ಗಳಿಸಿದ ಅತ್ಯಂತ ಕಡಿಮೆ ಮೊತ್ತವನ್ನು ಸಹ ಸಮರ್ಥಿಸಿಕೊಂಡಿದೆ. ಮತ್ತು ಈ ಪಂದ್ಯದಲ್ಲಿ ಆರಾಮವಾಗಿ ಜಯಗಳಿಸಿ ಅಗ್ರಸ್ಥಾನದಲ್ಲಿದೆ. ಬೆಂಗಳೂರಿಗೆ ಬ್ಯಾಟಿಂಗ್ ಸಮಸ್ಯೆ ಈ ಪಂದ್ಯದಲ್ಲೂ ಮುಂದುವರೆದಿದೆ.
  Published by:guruganesh bhat
  First published: