IPL 2022, RCB vs RR Highlights: ಐಪಿಎಲ್ ಬೌಲರ್​ಗಳ ಆಟ! ಆರ್​ಸಿಬಿ, ರಾಜಸ್ಥಾನ ಬೌಲರ್​ಗಳಿಂದ ಸಾಬೀತು

ರಾಜಸ್ಥಾನ ರಾಯಲ್ಸ್ ಬೌಲರ್​ಗಳೂ ತಾವೇನೂ ಕಡಿಮೆ ಇಲ್ಲ ಎಂಬಂತೆ ಅಮೋಘ ಬೌಲಿಂಗ್ ಪ್ರದರ್ಶಿಸಿ ಆರ್​ಸಿಬಿಯನ್ನು ಕಟ್ಟಿಹಾಕಿದರು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ರಾಜಸ್ಥಾನ ರಾಯಲ್ಸ್ ತಂಡವನ್ನು 144ಕ್ಕೇ ಕಟ್ಟಿಹಾಕಿದರೂ 145 ರನ್ ಗಳಿಸಿ ಗೆಲುವಿನ ಹಾರ ಹಾಕಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB vs RR Highlights) ವಿಫಲವಾಯಿತು. ಇದೊಂಥರಾ ಐಪಿಎಲ್​ನಲ್ಲಿ (IPL 2022) ಬೌಲರ್​ಗಳೇ ಅಧಿಪತ್ಯ ಸಾಧಿಸಿದ ಪಂದ್ಯದಂತೆ ಅನಿಸುವಂತಿತ್ತು.  ರಾಜಸ್ಥಾನ ರಾಯಲ್ಸ್ ಬೌಲಿಂಗ್ ವಿಭಾಗದ ಮಾಂತ್ರಿಕ ಕೈಚಳಕಕ್ಕೆ ಆರ್​ಸಿಬಿ ಬ್ಯಾಟರ್​ಗಳು ಬೆಕ್ಕಸ ಬೆರಗಾಗಿ ಒಬ್ಬೊಬ್ಬರೇ ಪೆವಿಲಿಯನ್ ಸೇರಿದರು. ಜೋಶ್ ಹೇಜಲ್‌ವುಡ್ (2/19) ನೇತೃತ್ವದ ಆಲ್‌ರೌಂಡ್ ಬೌಲಿಂಗ್ ಪ್ರದರ್ಶನದಿಂದಾಗಿ ರಾಯಲ್ ಚಾಲೆಂಜರ್ಸ್ (RCB) ಬೆಂಗಳೂರು 39 ನೇ ಪಂದ್ಯದಲ್ಲಿ 8 ವಿಕೆಟ್‌ಗೆ 144 ಕ್ಕೆ ರಾಜಸ್ಥಾನ್ ರಾಯಲ್ಸ್ ಅನ್ನು ತಡೆದು ನಿಲ್ಲಿಸಿತ್ತು.

    ಆದರೆ ರಾಜಸ್ಥಾನ ರಾಯಲ್ಸ್ (RR) ಬೌಲರ್​ಗಳೂ ತಾವೇನೂ ಕಡಿಮೆ ಇಲ್ಲ ಎಂಬಂತೆ ಅಮೋಘ ಬೌಲಿಂಗ್ ಪ್ರದರ್ಶಿಸಿ ಆರ್​ಸಿಬಿಯನ್ನು ಕಟ್ಟಿಹಾಕಿದರು. ಅಂತಿಮವಾಗಿ ರಾಜಸ್ಥಾನ 29 ರನ್​ಗಳಿಂದ ಆರ್​ಸಿಬಿ ವಿರುದ್ಧ ಗೆಲ್ಲಲು ಯಶಸ್ವಿಯಾಯಿತು.

    ರಾಜಸ್ಥಾನ ಈ ಋತುವಿನಲ್ಲಿ ತಾನು ಗಳಿಸಿದ ಅತ್ಯಂತ ಕಡಿಮೆ ಮೊತ್ತವನ್ನು ಸಹ ಸಮರ್ಥಿಸಿಕೊಂಡಿದೆ. ಮತ್ತು ಈ ಪಂದ್ಯದಲ್ಲಿ ಆರಾಮವಾಗಿ ಜಯಗಳಿಸಿ ಅಗ್ರಸ್ಥಾನದಲ್ಲಿದೆ. ಬೆಂಗಳೂರಿಗೆ ಬ್ಯಾಟಿಂಗ್ ಸಮಸ್ಯೆ ಈ ಪಂದ್ಯದಲ್ಲೂ ಮುಂದುವರೆದಿದೆ.

    ಇಲ್ಲೇನೋ ಸಮಸ್ಯೆ ಇದೆ!
    ಇದೇ ಸಮಸ್ಯೆಯಿಂದ ಈಗ ಸತತ ಎರಡು ಪಂದ್ಯಗಳನ್ನು ಕಳೆದುಕೊಂಡಿದೆ ಆರ್​ಸಿಬಿ, ಆದರೆ ರಾಜಸ್ಥಾನವು ತಮ್ಮ ಸತತ ಮೂರನೇ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ!

    ಇದನ್ನೂ ಓದಿ: Shikar Dhawan: 6,000 ರನ್ ಪೂರೈಸಿದ ಶಿಖರ್ ಧವನ್, ವಿರಾಟ್ ಕೊಹ್ಲಿಗೆ ಭರ್ಜರಿ ಪೈಪೋಟಿ!​

    ಕುಲದೀಪ್ ಸೇನ್ ನೇತೃತ್ವದ ಆಲ್ ರೌಂಡ್ ಬೌಲಿಂಗ್ ಪ್ರದರ್ಶನವು ಪುಣೆಯಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಅದ್ಭುತ ಗೆಲುವಿಗೆ ನೆರವಾಗಿದೆ. ರಾಜಸ್ಥಾನ ರಾಯಲ್ಸ್ ನೀಡಿದ್ದ ಸ್ಕೋರ್ ಬೆನ್ನಟ್ಟಿದ ಬೆಂಗಳೂರು 19.3 ಓವರ್ ಗಳಲ್ಲಿ 115 ರನ್ ಗಳಿಗೆ ಆಲೌಟ್ ಆಯಿತು. ಆರ್ ಅಶ್ವಿನ್ ರಾಯಲ್ಸ್ ಪರ ಮೂರು ವಿಕೆಟ್ ಪಡೆದರು.

    ಆರ್​ಸಿಬಿ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಕಳಿಸಿದ ಆರ್​ಆರ್​
    ರಾಜಸ್ಥಾನ ಪರ ಕುಲದೀಪ್ ಸೇನ್ ನಾಲ್ಕು ವಿಕೆಟ್‌ಗಳನ್ನು ಪಡೆದರೆ ರವಿಚಂದ್ರನ್ ಅಶ್ವಿನ್ ಮೂರು ವಿಕೆಟ್‌ಗಳೊಂದಿಗೆ ಲಯಕ್ಕೆ ಮರಳಿದರು. ಯಾವುದೇ ಆರ್‌ಸಿಬಿ ಬ್ಯಾಟರ್‌ಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ, ಆರ್‌ಆರ್ ಆರಾಮದಾಯಕ ಜಯ ದಾಖಲಿಸಿತು. ಕೇವಲ 9 ರನ್ ಗಳಿಸುವಷ್ಟರಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದರು.

    ಆರ್​ಸಿಬಿ ಬೌಲರ್​ಗಳ ಪರಾಕ್ರಮ
    ಆರ್‌ಸಿಬಿ ಪರ ಜೋಶ್ ಹೇಜಲ್‌ವುಡ್, ವನಿಂದು ಹಸರಂಗ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದು ರಾಜಸ್ಥಾನಕ್ಕೆ ಶಾಕ್ ನೀಡಿದ್ದರು. RR ಪರ, ರಿಯಾನ್ ಪರಾಗ್ 56 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು. ಇದಕ್ಕೂ ಮೊದಲು ಟಾಸ್ ಗೆದ್ದಿದ್ದರೂ ರಾಜಸ್ಥಾನ್ ರಾಯಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ಮಾಡುವಂತೆ ಹೇಳಿತ್ತು.

    ಇದನ್ನೂ ಓದಿ: IPL 2022, RCB vs RR: ವಿರಾಟ್ ಕೊಹ್ಲಿ ಸೆನ್ಸೇಷನಲ್ ಕ್ಯಾಚ್; ಆರ್​ಸಿಬಿ ಬೌಲಿಂಗ್​ಗೆ ರಾಜಸ್ಥಾನ ತತ್ತರ

    0 6 Wd 0 0 0 1 - ಯುಜುವೇಂದ್ರ ಚಹಾಲ್ ಅಂತಿಮ ಓವರ್‌ನಲ್ಲಿ ಕೇವಲ 8 ರನ್‌ಗಳನ್ನಷ್ಟೇ ನೀಡಿ ಬೆಂಗಳೂರಿನ ಬ್ಯಾಟರ್​ಗಳನ್ನು ಸಮರ್ಥವಾಗಿ ಕಂಟ್ರೋಲ್ ಮಾಡಿದರು. ಅವರು 4-0-23-0 ರ ಪ್ರದರ್ಶನ ನೀಡಿ ಅದ್ಭುತ ಬೌಲ್ ಮಾಡಿದರು. ಕುಲದೀಪ್ ಸೇನ್ ಅವರು ಸ್ಟ್ರೈಕ್ ನಲ್ಲಿ ಹರ್ಷಲ್ ಪಟೇಲ್ ಅವರೊಂದಿಗೆ ಪಂದ್ಯದ ಅಂತಿಮ ಓವರ್ ಬೌಲ್ ಮಾಡಿದರು.

    ಬೆಂಗಳೂರು ಅಗ್ರ ಕ್ರಮಾಂಕದಲ್ಲಿ ಬದಲಾವಣೆ
    ಬೆಂಗಳೂರು ಅಗ್ರ ಕ್ರಮಾಂಕದಲ್ಲಿ ಬದಲಾವಣೆಯನ್ನು ಮಾಡಿಕೊಂಡು ಬ್ಯಾಟಿಂಗ್ ಮಾಡಿತ್ತು. ಶುರುವಿನಲ್ಲಿ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರಂಭಿಸಿದರು. ಆದರೆ ಅದು ಅವರ ಪರವಾಗಿ ಕೆಲಸ ಮಾಡಲಿಲ್ಲ. ಆರ್​ಸಿಬಿ ಮೊದಲ ಹತ್ತು ಓವರ್‌ಗಳಲ್ಲಿ ಕೇವಲ 58 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು! ಹೀಗೆ ರಾಜಸ್ಥಾನ ರಾಯಲ್ಸ್ ಬೌಲರ್​ಗಳು ಪರಾಕ್ರಮ ಮೆರೆದರು.
    Published by:guruganesh bhat
    First published: