IPL 2022, RCB vs RR Head To Head: ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್​ಸಿಬಿ ಹವಾ ಹೇಗಿದೆ?

ಆರ್​ಸಿಬಿ vs ಆರ್​ಆರ್​ ಪಂದ್ಯದಲ್ಲಿ ಏನೆಲ್ಲ ಆಗಬಹುದು? ಇದುವರೆಗೆ ಈ ಎರಡೂ ತಂಡಗಳು ಮುಖಾಮುಖಿಯಾದಾಗ ಏನೆಲ್ಲ ಆಗಿತ್ತು? ಇಲ್ಲಿದೆ ವಿವರ

ಆರ್​ಸಿಬಿ vs ಆರ್​ಆರ್

ಆರ್​ಸಿಬಿ vs ಆರ್​ಆರ್

 • Share this:
  ಐಪಿಎಲ್​ 2022ರಲ್ಲಿ (IPL 2022) ಇಂದಿನ (ಏಪ್ರಿಲ್ 26) RCB vs RR  ಮ್ಯಾಚ್ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ.  RCB vs RR  ಹೆಡ್ ಟು ಹೆಡ್ ರೆಕಾರ್ಡ್ಸ್ ನೋಡುವುದೇ ಒಂಥರಾ ರೋಚಕತೆ ಹುಟ್ಟಿಸುವಂತಿದೆ.  ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಹೆಡ್-ಟು-ಹೆಡ್ ರೆಕಾರ್ಡ್ (RCB vs RR Head To Head )  ಹೀಗಿದೆ-  IPL 2022- ಪಂದ್ಯ 39. ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೋರಾಡಲಿದೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯಲಿದ್ದು ಪಂದ್ಯ ಸಂಜೆ 7:30ರಿಂದ ಆರಂಭವಾಗಲಿದೆ.

  RCB ಐಪಿಎಲ್ 2022 ರಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿದೆ. ಅವುಗಳ ಪೈಕಿ 5 ಗೆಲುವು ಮತ್ತು 3 ಸೋಲುಗಳೊಂದಿಗೆ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿ ಇದೆ.  ರಾಜಸ್ಥಾನ್ ರಾಯಲ್ಸ್ ಇದುವರೆಗೆ 7 ಪಂದ್ಯಗಳನ್ನು ಆಡಿದ್ದು, 5ರಲ್ಲಿ ಗೆದ್ದು 2ರಲ್ಲಿ ಸೋತಿದೆ. 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

  ಆರ್​ಸಿಬಿ ಹಿಂದಿನ ಮ್ಯಾಚಲ್ಲಿ ಸೋಲು
  ಐಪಿಎಲ್ 2022 ರಲ್ಲಿ ತಮ್ಮ ಹಿಂದಿನ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ಅನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 169-3 ರನ್ ಗಳಿಸಿತು. ಜೋಸ್ ಬಟ್ಲರ್ ಅಜೇಯ 70 ರನ್ ಗಳಿಸಿದರೆ, ಶಿಮ್ರಾನ್ ಹೆಟ್ಮೆಯರ್ 42 ರನ್ ಗಳಿಸಿದರು. ದೇವದತ್ ಪಡಿಕ್ಕಲ್ ಕೂಡ 37 ರನ್ ಗಳಿಸಿದರು.

  ಕಳಪೆ ಪ್ರದರ್ಶನ ನೀಡಿದ್ದ ಆರ್​ಸಿಬಿ
  ನಂತರ ಆರ್‌ಸಿಬಿ ಆರಂಭಿಕರಾದ ಫಾಫ್ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ 26 ಮತ್ತು 29 ರನ್ ಗಳಿಸಿದರು. ಆರ್‌ಸಿಬಿ ಮಧ್ಯದಲ್ಲಿ 3 ವಿಕೆಟ್‌ಗಳನ್ನು ತ್ವರಿತವಾಗಿ ಕಳೆದುಕೊಂಡಿತು. ನಂತರ ಶಹಬಾಜ್ ಅಹ್ಮದ್ 45 ರನ್ ಗಳಿಸಿದರೆ, ದಿನೇಶ್ ಕಾರ್ತಿಕ್ ಅಜೇಯ 44 ರನ್ ಗಳಿಸಿದರು. ಅಂತಿಮ ಓವರ್‌ನಲ್ಲಿ ಆರ್‌ಸಿಬಿ 4 ವಿಕೆಟ್‌ಗಳ ಅಂತರದಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

  ಆದರೂ RCB ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ತನ್ನ ಹಿಂದಿನ ಪಂದ್ಯದಲ್ಲಿ ಹೀನಾಯ ಸೋಲನ್ನು ಎದುರಿಸಿತು. ಮೊದಲು ಬ್ಯಾಟಿಂಗ್ ಮಾಡಿದ RCB ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರ ಅತ್ಯಂತ ಕೆಟ್ಟ ಬ್ಯಾಟಿಂಗ್ ಕುಸಿತವನ್ನು ಎದುರಿಸಿತು. ಅವರು ಕೇವಲ 68 ರನ್‌ಗಳಿಗೆ ಆಲೌಟ್ ಆದರು, 8 ಬ್ಯಾಟ್ಸ್‌ಮನ್‌ಗಳು 3 ಡಕ್‌ಗಳು ಸೇರಿದಂತೆ ಒಂದೇ ಅಂಕೆಯಲ್ಲಿ ಔಟಾದರು.

  ರಾಜಸ್ಥಾನ ಹಿಂದಿನ ಮ್ಯಾಚಲ್ಲಿ ಗೆದ್ದಿತ್ತು
  ರಾಜಸ್ಥಾನ್ ರಾಯಲ್ಸ್ ತನ್ನ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿತು. ಅದು ಒಂಥರಾ ಉಗುರು ಕಚ್ಚಿಕೊಂಡು ವೀಕ್ಷಿಸುವಷ್ಟು ರೋಚಕವಾದ ಹಣಾಹಣಿಯಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ RR 222-2 ರನ್ನುಗಳ ಅದ್ಭುತ ಮೊತ್ತವನ್ನು ದಾಖಲಿಸಿತು. ಜೋಸ್ ಬಟರ್ 65 ಎಸೆತಗಳಲ್ಲಿ 116 ರನ್ ಬಾರಿಸಿ ನಿಷ್ಪಾಪ ಶತಕ ಸಿಡಿಸಿದರು. ದೇವದತ್ ಪಡಿಕಲ್ (54) ಮತ್ತು ಸಂಜು ಸ್ಯಾಮ್ಸನ್ (46*) ಕೂಡ ಸ್ಕೋರ್‌ಬೋರ್ಡ್‌ಗೆ ವೇಗವಾಗಿ ರನ್​ಗಳ ಸೇರ್ಪಡೆ ಮಾಡಿದರು.

  ಇದನ್ನೂ ಓದಿ: IPL 2022 Rohit Sharma: ರೋಹಿತ್ ಶರ್ಮಾ ಭಾವನಾತ್ಮಕ ಪೋಸ್ಟ್; ಮುಂಬೈನೊಂದಿಗೆ ದೃಢವಾಗಿ ನಿಂತ ಅಭಿಮಾನಿಗಳು

  ಐಪಿಎಲ್ ಇತಿಹಾಸದಲ್ಲಿ ಈ ಎರಡು ರಾಯಲ್ ತಂಡಗಳ ನಡುವಿನ 26 ಪಂದ್ಯಗಳಲ್ಲಿ ಬೆಂಗಳೂರು 13 ಬಾರಿ ವಿಜೇತರಾಗಿ ಹೊರಹೊಮ್ಮಿದೆ. ಆದರೆ 10 ಪಂದ್ಯಗಳು ರಾಜಸ್ಥಾನ ಗೆದ್ದಿದೆ.

  ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ ಸಂಭಾವ್ಯ XI:
  ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

  ಇದನ್ನೂ ಓದಿ: Shikar Dhawan: 6,000 ರನ್ ಪೂರೈಸಿದ ಶಿಖರ್ ಧವನ್, ವಿರಾಟ್ ಕೊಹ್ಲಿಗೆ ಭರ್ಜರಿ ಪೈಪೋಟಿ!​

  ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ಸಿ), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಕರುಣ್ ನಾಯರ್, ರವಿಚಂದ್ರನ್ ಅಶ್ವಿನ್, ಒಬೆದ್ ಮೆಕಾಯ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್
  Published by:guruganesh bhat
  First published: