IPL 2022, RCB vs RR: ಆರ್​ಸಿಬಿಯಿಂದ ಮಾರಕ ಬೌಲಿಂಗ್, ರಾಜಸ್ಥಾನಕ್ಕೆ ಹೆದರಿಕೆ ಶುರು!

ದೇವದತ್ ಪಡಿಕ್ಕಲ್ ಮತ್ತು ಜೋಸ್ ಬಟ್ಲರ್ ಇಬ್ಬರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್​ಗಳಿಗೆ ಬಲಿಯಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಐಪಿಎಲ್​ 2022 ( IPL 2022) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ (RCB vs RR) ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅನುಜ್ ರಾವತ್ ಬದಲಿಗೆ ರಜತ್ ಪಾಟಿದಾರ್ ಬಂದಿದ್ದರಿಂದ RCB ಒಂದು ಬದಲಾವಣೆ ಮಾಡಿದೆ. ರಾಜಸ್ಥಾನ್ ರಾಯಲ್ಸ್ ಕೂಡ ಒಂದೆರಡು ಬದಲಾವಣೆಗಳನ್ನು ಮಾಡಿಕೊಂಡು ಕಣಕ್ಕಿಳಿದಿದೆ. ಕರುಣ್ ನಾಯರ್ ಸ್ಥಾನಕ್ಕೆ ಡೇರಿಲ್ ಮಿಚೆಲ್ ಮತ್ತು ಓಬೇದ್ ಮೆಕಾಯ್ ಬದಲಿಗೆ ಕುಲದೀಪ್ ಸೇನ್ ಸ್ಥಾನ ಪಡೆದಿದ್ದಾರೆ. ಪಂದ್ಯ ಭರ್ಜರಿ ಹಣಾಹಣಿ ಆಗುವ ಲಕ್ಷಣವಿದೆ.

    ದೇವದತ್ ಪಡಿಕ್ಕಲ್ ಮತ್ತು ಜೋಸ್ ಬಟ್ಲರ್ ಇಬ್ಬರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್​ಗಳಿಗೆ ಬಲಿಯಾಗಿದ್ದಾರೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯಿಂಗ್ ಇಲೆವೆನ್ 

    ಫಾಫ್ ಡು ಪ್ಲೆಸಿಸ್ (ಸಿ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ಡಬ್ಲ್ಯೂ), ಹರ್ಷಲ್ ಪಟೇಲ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್

    ರಾಜಸ್ಥಾನ ರಾಯಲ್ಸ್ ತಂಡದ ಪ್ಲೇಯಿಂಗ್ ಇಲೆವೆನ್ 

    ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(w/c), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಡೆರಿಲ್ ಮಿಚೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್

    ಉತ್ತಮ ಬೌಲಿಂಗ್ ಪ್ರದರ್ಶನ
    ರಾಜಸ್ಥಾನ ರಾಯಲ್ಸ್ ಪರ ರಿಯಾನ್ ಪರಾಗ್ ಅವರ ಅರ್ಧಶತಕದ ಸೆನ್ಸೇಷನಲ್ ಬ್ಯಾಟಿಂಗ್ ರಾಜಸ್ಥಾನ ರಾಯಲ್ಸ್  ಹೋರಾಟದ ಮೊತ್ತ ಪೇರಿಸಲು ಸಹಾಯ ಮಾಡಿತು. ಹಸರಂಗ ಅವರಿಂದ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 144 ರನ್​ಗಳನ್ನು ಗಳಿಸಲು ಶಕ್ತವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 145 ರನ್ ಹೊಡೆದರೆ ಗೆದ್ದಂತೆ!

    ಪಂದ್ಯದ ಫಲಿತಾಂಶ ಹೀಗಿದೆ
    ರಾಜಸ್ಥಾನ ರಾಯಲ್ಸ್ ತಂಡವನ್ನು 144ಕ್ಕೇ ಕಟ್ಟಿಹಾಕಿದರೂ 145 ರನ್ ಗಳಿಸಿ ಗೆಲುವಿನ ಹಾರ ಹಾಕಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB vs RR Highlights) ವಿಫಲವಾಯಿತು. ಇದೊಂಥರಾ ಐಪಿಎಲ್​ನಲ್ಲಿ (IPL 2022) ಬೌಲರ್​ಗಳೇ ಅಧಿಪತ್ಯ ಸಾಧಿಸಿದ ಪಂದ್ಯದಂತೆ ಅನಿಸುವಂತಿತ್ತು.

    ಇದನ್ನೂ ಓದಿ: IPL 2022 Rohit Sharma: ರೋಹಿತ್ ಶರ್ಮಾ ಭಾವನಾತ್ಮಕ ಪೋಸ್ಟ್; ಮುಂಬೈನೊಂದಿಗೆ ದೃಢವಾಗಿ ನಿಂತ ಅಭಿಮಾನಿಗಳು

    ರಾಜಸ್ಥಾನ ರಾಯಲ್ಸ್ ಬೌಲಿಂಗ್ ವಿಭಾಗದ ಮಾಂತ್ರಿಕ ಕೈಚಳಕಕ್ಕೆ ಆರ್​ಸಿಬಿ ಬ್ಯಾಟರ್​ಗಳು ಬೆಕ್ಕಸ ಬೆರಗಾಗಿ ಒಬ್ಬೊಬ್ಬರೇ ಪೆವಿಲಿಯನ್ ಸೇರಿದರು. ಜೋಶ್ ಹೇಜಲ್‌ವುಡ್ (2/19) ನೇತೃತ್ವದ ಆಲ್‌ರೌಂಡ್ ಬೌಲಿಂಗ್ ಪ್ರದರ್ಶನದಿಂದಾಗಿ ರಾಯಲ್ ಚಾಲೆಂಜರ್ಸ್ (RCB) ಬೆಂಗಳೂರು 39 ನೇ ಪಂದ್ಯದಲ್ಲಿ 8 ವಿಕೆಟ್‌ಗೆ 144 ಕ್ಕೆ ರಾಜಸ್ಥಾನ್ ರಾಯಲ್ಸ್ ಅನ್ನು ತಡೆದು ನಿಲ್ಲಿಸಿತ್ತು.

    ಬೌಲರ್​ಗಳೂ ಕಡಿಮೆ ಇಲ್ಲ
    ಆದರೆ ರಾಜಸ್ಥಾನ ರಾಯಲ್ಸ್ (RR) ಬೌಲರ್​ಗಳೂ ತಾವೇನೂ ಕಡಿಮೆ ಇಲ್ಲ ಎಂಬಂತೆ ಅಮೋಘ ಬೌಲಿಂಗ್ ಪ್ರದರ್ಶಿಸಿ ಆರ್​ಸಿಬಿಯನ್ನು ಕಟ್ಟಿಹಾಕಿದರು. ಅಂತಿಮವಾಗಿ ರಾಜಸ್ಥಾನ 29 ರನ್​ಗಳಿಂದ ಆರ್​ಸಿಬಿ ವಿರುದ್ಧ ಗೆಲ್ಲಲು ಯಶಸ್ವಿಯಾಯಿತು.

    ಇದನ್ನೂ ಓದಿ:  IPL 2022 Umran Malik: ಉಮ್ರಾನ್ ಮಲ್ಲಿಕ್ ಗಲ್ಲಿ ಕ್ರಿಕೆಟ್​ನಿಂದ ಸ್ಪೀಡ್ ಬೌಲಿಂಗ್​ನ ಕಿಂಗ್ ಆಗಿದ್ದು ಹೇಗೆ?

    ಕುಲದೀಪ್ ಸೇನ್ ನೇತೃತ್ವದ ಆಲ್ ರೌಂಡ್ ಬೌಲಿಂಗ್ ಪ್ರದರ್ಶನವು ಪುಣೆಯಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಅದ್ಭುತ ಗೆಲುವಿಗೆ ನೆರವಾಗಿದೆ. ರಾಜಸ್ಥಾನ ರಾಯಲ್ಸ್ ನೀಡಿದ್ದ ಸ್ಕೋರ್ ಬೆನ್ನಟ್ಟಿದ ಬೆಂಗಳೂರು 19.3 ಓವರ್ ಗಳಲ್ಲಿ 115 ರನ್ ಗಳಿಗೆ ಆಲೌಟ್ ಆಯಿತು. ಆರ್ ಅಶ್ವಿನ್ ರಾಯಲ್ಸ್ ಪರ ಮೂರು ವಿಕೆಟ್ ಪಡೆದರು.
    Published by:guruganesh bhat
    First published: