IPL 2022 RCB vs LSG: ಗೋಲ್ಡನ್ ಡಕ್ ಔಟ್ ಆದ ಕೊಹ್ಲಿ ಹಾಗೇಕೆ ಮಾಡಿದ್ರು?

ಒಂದೇ ಎಸೆತಕ್ಕೆ ಔಟ್ ಆದ ನಂತರ ವಿರಾಟ್ ಕೊಹ್ಲಿ ಮುಖಭಾವದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ನೀವೂ ಒಮ್ಮೆ ನೋಡಿಬಿಡಿ.

ವಿರಾಟ್ ಕೊಹ್ಲಿ ಮುಖಭಾವ

ವಿರಾಟ್ ಕೊಹ್ಲಿ ಮುಖಭಾವ

 • Share this:
  ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022 ರ (IPL 2022)  31 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ (IPL 2022 RCB vs LSG) ತಾವು ಎದುರಿಸಿದ  ಮೊದಲ ಎಸೆತದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli)  ಔಟಾಗಿ ಮತ್ತೆ ಕಳಪೆ ಸಾಧನೆಗೆ ಶರಣಾದರು. ಈಮೂಲಕ ಐಪಿಎಲ್ 2022ರಲ್ಲಿ ಕಿಂಗ್ ಕೊಹ್ಲಿ ಕಳಪೆ ಪ್ರದರ್ಶನ (Virat Kohli Golden Duck) ಮುಂದುವರೆಸಿದ್ದಾರೆ. ಔಟ್ ಆದ ತಕ್ಷಣ ಅವರ ಮುಖಭಾವ ಹೇಗಿತ್ತು ಎಂಬುದನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ.

  ಔಟಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಮುಖಭಾವ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಈಬಾರಿಯೂ ಅದೃಷ್ಟ ತಮ್ಮ ಕೈಬಿಟ್ಟಿದೆ ಎಂದು ಅವರ ಮುಖಭಾವ ಹೇಳುವಂತಿತ್ತು. ಒಂದೇ ಎಸೆತಕ್ಕೆ ಔಟ್ ಆದ ನಂತರ ವಿರಾಟ್ ಕೊಹ್ಲಿ ಮುಖಭಾವದ ಫೋಟೊ ಎಲ್ಲೆಡೆ ವೈರಲ್ ಆಗಿದ್ದು ನೀವೂ ಒಮ್ಮೆ ನೋಡಿಬಿಡಿ.

  ಈ ಮೂಲಕ ಇಂದಿನ ಪಂದ್ಯದಲ್ಲಿ ಗೋಲ್ಡನ್ ಟಕ್ ಆದ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ನಾಲ್ಕನೆ ಬಾರಿ ಗೋಲ್ಡನ್ ಡಕ್ ಆದಂತಾಗಿದೆ.

  ಐಪಿಎಲ್​ 2022ರಲ್ಲಿ ಕಳಪೆ ಫಾರ್ಮ್
  ಇಂದಿನ ಪಂದ್ಯಕ್ಕೂ ಮೊದಲು ಮುಂಬೈ ಇಂಡಿಯನ್ಸ್ (2008), ಪಂಜಾಬ್ ಕಿಂಗ್ಸ್ (2014), ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (2017) ವಿರುದ್ಧ ವಿರಾಟ್ ಕೊಹ್ಲಿ ಗೋಲ್ಡನ್ ಡಕ್‌ಗೆ ಔಟಾಗಿದ್ದರು. ಐಪಿಎಲ್ 2022 ವಿರಾಟ್ ಕೊಹ್ಲಿಗೆ ದುಃಸ್ವಪ್ನವಾಗಿದೆ. ಪಂದ್ಯಾವಳಿಯ ಅರ್ಧದಾರಿಯವರೆಗೂ ಈ ಸೀಸನ್ ಅವರ IPL ವೃತ್ತಿಜೀವನದಲ್ಲಿ ಅತ್ಯಂತ ಕೆಟ್ಟದಾಗಿದೆ. ಇದುವರೆಗೆ ಐಪಿಎಲ್ 2022ರಲ್ಲಿ 7 ಪಂದ್ಯಗಳಲ್ಲಿ ಕೊಹ್ಲಿ ಒಂದೇ ಒಂದು ಅರ್ಧಶತಕವನ್ನು ಬಾರಿಸದೆ 119 ರನ್ ಗಳಿಸಿದ್ದಾರೆ.

  ಇದನ್ನೂ ಓದಿ: IPL 2022: RCB ಗೆ ಪ್ರಧಾನಿ ಬೆಂಬಲ! ಮ್ಯಾಚ್ ನೋಡೋಕೆ ಬಂದ ಅಧೀರ

  ಯುವ ಆಟಗಾರರ ಅಬ್ಬರ!
  ಇನ್ನು ಯಂಗ್​ಸ್ಟರ್ಸ್​ಗಳಾದ ಅನೂಜ್​​ ರಾವತ್​​​, ಶಹಬಾಜ್​​​ ಅಹ್ಮದ್​​​ ಹಾಗೂ ಸುಯಾಶ್​ ಪ್ರಭುದೇಸಾಯಿ ಆಕರ್ಷಕ​​ ಆಟವಾಡ್ತಿದ್ದಾರೆ. ಇದು RCB ಬ್ಯಾಟಿಂಗ್​ ವಿಭಾಗಕ್ಕೆ ಹೊಸ ಚೈತನ್ಯ ತುಂಬಿದೆ. ಇನ್ನುಳಿದ ಪಂದ್ಯಗಳಲ್ಲೂ ಈ ಯಂಗ್​ಸ್ಟರ್ಸ್​ ಘರ್ಜಿಸಿದ್ರೆ, ಆರ್​ಸಿಬಿಗೆ ಕಪ್​ ಮಿಸ್ಸಾಗೋ ಮಾತೇ ಇಲ್ಲ.

  ಬ್ಯಾಟಿಂಗ್​​ & ಬೌಲಿಂಗ್ ಲೈನ್​ಅಪ್​​
  ಇನ್ನು ಕಳೆದ ಬಾರಿಗೆ ಹೋಲಿಸಿದ್ರೆ ಈ ಸಲ ಬ್ಯಾಟಿಂಗ್​​ನಲ್ಲಿ ಪ್ಲೆಸಿಸ್​​​, ಕೊಹ್ಲಿ, ಮ್ಯಾಕ್ಸ್​ವೆಲ್​​ ಎದುರಾಳಿಯನ್ನ ಡೆಸ್ಟ್ರಾಯ್​ ಮಾಡಿದ್ರೆ, ಬೌಲಿಂಗ್​​ನಲ್ಲಿ ಹರ್ಷಲ್​​ ಪಟೇಲ್​​​, ಜೋಶ್​ ಹೆಜಲ್​ವುಡ್​​, ಸಿರಾಜ್​ ವಿಕೆಟ್ ಬೇಟೆಯಾಡ್ತಿದ್ದಾರೆ. ಇದರಿಂದಾಗಿ ಸಾಂಘಿಕ ಪ್ರದರ್ಶನ ಮೂಡಿ ಬರ್ತಿದೆ. ಇದು ಹೀಗೆ ಮುಂದುವರಿದಿದ್ದೇ ಆದಲ್ಲಿ ಆರ್​ಸಿಬಿಯ 14 ವರ್ಷದ ಕಪ್​ ವನವಾಸ ಕೊನೆಗೊಳ್ಳುತ್ತೆ.

  ಇದನ್ನೂ ಓದಿ: RCB: ಇಷ್ಟೂ ಸೀಸನ್​ ಒಂದ್​ ಲೆಕ್ಕ.. ಈ ಸೀಸನ್​ ಒಂದು ಲೆಕ್ಕ! ಈ ಕಾರಣಗಳಿಂದ ಗೆದ್ದೇ ಗೆಲ್ತಾರೆ ನಮ್​ ಹುಡುಗ್ರು ಬಾಸ್​

  ಕೆಜಿಎಫ್ ಚಿತ್ರತಂಡದ ಪ್ರಧಾನಿ, ಅಧೀರ ಕ್ರೀಡಾಂಗಣಕ್ಕೆ
  ಕೆಜಿಎಫ್ ಚಾಪ್ಟರ್-2 (KGF Chapter-2) ಜೋರಾಗಿದೆ. ರಾಕಿ ಭಾಯ್ ರಾಕಿಂಗ್ ಸ್ಟಾರ್ ಯಶ್ ಆರ್ಭಟ (Rocking Star Yash) ಮತ್ತು ಸಂಜಯ್ ದತ್ (Sanjay Dutt) ಅವರ ಘರ್ಜನೆಗೆ ಅಭಿಮಾನಿಗಳು ಸಾಕ್ಷಿಯಾಗುತ್ತಿದ್ದಾರೆ. ಈ ಮಧ್ಯೆ, RCB ಆಟಗಾರರು ರಾಕಿ ಭಾಯ್ ಸಾಮ್ರಾಜ್ಯ ಸೇರಿಕೊಂಡಿದ್ದರು. ಹೌದು, RCB ಆಟಗಾರರಿಗೆ ಎಂದೇ ಕೆಲವೇ ದಿನಗಳ ಹಿಂದೆ ಬ್ಲಾಸ್ಟ್ ಫಿಲ್ಮ್ಸ್ ಕೆಜಿಎಫ್ ಚಾಪ್ಟರ್ 2 ರ ವಿಶೇಷ (KGF Chapter 2 Special Show) ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈಗ ಸಂಜಯ್ ದತ್ ಮತ್ತು ರವೀನಾ ಟಂಡನ್ (Raveena Tandon)  ಐಪಿಎಲ್​ನಲ್ಲಿ (IPL 2022) ಆರ್​ಸಿಬಿ ಅಬ್ಬರಕ್ಕೆ ಸಾಕ್ಷಿಯಾಗುತ್ತಿದ್ದಾರೆ.
  Published by:guruganesh bhat
  First published: