IPL 2022: RCB ಗೆ ಪ್ರಧಾನಿ ಬೆಂಬಲ! ಮ್ಯಾಚ್ ನೋಡೋಕೆ ಬಂದ ಅಧೀರ

ವಿರಾಟ್​, ಫಾಫ್​ ಡು ಪ್ಲೆಸಿಸ್​

ವಿರಾಟ್​, ಫಾಫ್​ ಡು ಪ್ಲೆಸಿಸ್​

ಹೌದು, ಕೆಜೆಎಫ್ ಸಿನಿಮಾದ ಸಂಜಯ್ ದತ್ ಮತ್ತು ಪ್ರಧಾನಿ ರವೀನಾ ಟಂಡನ್ ಸಿಬಿ ಮ್ಯಾಚ್ ವೀಕ್ಷಿಸಲು ಬರುತ್ತಿದ್ದಾರೆ.

  • Share this:

ಕೆಜಿಎಫ್ ಚಾಪ್ಟರ್-2 (KGF Chapter-2) ಜೋರಾಗಿದೆ. ರಾಕಿ ಭಾಯ್ ರಾಕಿಂಗ್ ಸ್ಟಾರ್ ಯಶ್ ಆರ್ಭಟ (Rocking Star Yash) ಮತ್ತು ಸಂಜಯ್ ದತ್ (Sanjay Dutt) ಅವರ ಘರ್ಜನೆಗೆ ಅಭಿಮಾನಿಗಳು ಸಾಕ್ಷಿಯಾಗುತ್ತಿದ್ದಾರೆ. ಈ ಮಧ್ಯೆ, RCB ಆಟಗಾರರು ರಾಕಿ ಭಾಯ್ ಸಾಮ್ರಾಜ್ಯ ಸೇರಿಕೊಂಡಿದ್ದರು. ಹೌದು, RCB ಆಟಗಾರರಿಗೆ ಎಂದೇ ಕೆಲವೇ ದಿನಗಳ ಹಿಂದೆ ಬ್ಲಾಸ್ಟ್ ಫಿಲ್ಮ್ಸ್ ಕೆಜಿಎಫ್ ಚಾಪ್ಟರ್ 2 ರ ವಿಶೇಷ (KGF Chapter 2 Special Show) ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈಗ ಸಂಜಯ್ ದತ್ ಮತ್ತು ರವೀನಾ ಟಂಡನ್ (Raveena Tandon)  ಐಪಿಎಲ್​ನಲ್ಲಿ (IPL 2022) ಆರ್​ಸಿಬಿ ಅಬ್ಬರಕ್ಕೆ ಸಾಕ್ಷಿಯಾಗುತ್ತಿದ್ದಾರೆ.


ಹೌದು, ಕೆಜೆಎಫ್ ಸಿನಿಮಾದ ಸಂಜಯ್ ದತ್ ಮತ್ತು ಪ್ರಧಾನಿ ರವೀನಾ ಟಂಡನ್ ಸಿಬಿ ಮ್ಯಾಚ್ ವೀಕ್ಷಿಸಲು ಬರುತ್ತಿದ್ದಾರೆ. ಸಂಜು ಬಾಬಾ ಮತ್ತು ಮಸ್ತ್ ಮಾಸ್ಟರ್ ರವೀನಾ ಟಂಡನ್ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಆರ್‌ಸಿಬಿ ಮ್ಯಾಚ್​ ವೀಕ್ಷಿಸಲಿದ್ದಾರೆ.


ನಿರ್ಮಾಪಕರಿಂದಲೇ ಅಧಿಕೃತ ಘೋಷಣೆ
ಈಕುರಿತು ಕೆಜಿಎಫ್ ನಿರ್ಮಾಪಕರಾದ ಹೊಂಬಾಳೆ ಫೀಲ್ಮ್ಸ್​ ಅಧಿಕೃತ ಘೋಷಣೆ ಮಾಡಿದೆ ಅವರು ಚಿತ್ರದ ಪ್ರಚಾರಕ್ಕಾಗಿ RCB ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಕೆಜಿಎಫ್ 2 ನಲ್ಲಿ ಯಶ್, ಸಂಜಯ್ ದತ್, ರವೀನಾ ಟಂದನ್ ಅವರನ್ನು ಹೊರತುಪಡಿಸಿ ಶ್ರೀನಿಧಿ ಶೆಟ್ಟಿ, ರಾವ್ ರಮೇಶ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ.ಇದನ್ನೂ ಓದಿ:KGF 2: ಬಾಲಿವುಡ್​​ನ​ 'ಆ' ಲೆಜೆಂಡ್ ಜಾಗಕ್ಕೆ ಯಶ್​ ಬಂದ್ರಂತೆ! ರಾಕಿ ಭಾಯ್ ಬಗ್ಗೆ ಕೊಂಡಾಡಿದ ನಟಿ ಕಂಗನಾ


ಅದೇ ರೀತಿ ಆರ್ ಸಿಬಿ-ಲಖನೌ ನಡುವಿನ ಕದನದಲ್ಲಿ ಅಧೀರನ ಉಪಸ್ಥಿತಿ ಇರುತ್ತದೆ. ರಾಮಿಕಾ ಸೇನ್ ಅಲಿಯಾಸ್ ರವೀನಾ ಟಂಡನ್ ಕೂಡ ಕ್ರಿಕೆಟ್ ಯುದ್ಧಭೂಮಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್ ಸಿಬಿ-ಲಕ್ನೋ ಪಂದ್ಯದ ವೇಳೆ ಸಂಜಯ್ ದತ್ ಮತ್ತು ರವೀನಾ ಟಂಡನ್ ವಿಶೇಷ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಇದೇ ಮೊದಲ ಬಾರಿಗೆ ಐಪಿಎಲ್ ತಂಡ ಮತ್ತು ಚಿತ್ರ ನಿರ್ಮಾಣ ಸಂಸ್ಥೆ ಕೈಜೋಡಿಸಿ ಪ್ರಚಾರ ಮಾಡುತ್ತಿದೆ.


ಇದನ್ನೂ ಓದಿ: KGF 2 ಸಕ್ಸಸ್​ ಬೆನ್ನಲ್ಲೇ ಸಿಕ್ತು ಪ್ರಶಾಂತ್​ ನೀಲ್​ ನೆಕ್ಸ್ಟ್​ ಸಿನಿಮಾ ಬಿಗ್​ ಅಪ್​ಡೇಟ್​! ಇವ್ರೇ ನೋಡಿ ಹೀರೋ


ಕೆಜಿಎಫ್​ 2 ಸಿನಿಮಾ ನೋಡಿದ ಆರ್​​ಸಿಬಿ!
ಕೆಲವು ದಿನಗಳ ಹಿಂದಷ್ಟೇ 'KGF 2' ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಾಗೂ RCB ಟೀಮ್ವ ಒಟ್ಟಿಗೆ ಸೇರಿತ್ತು. ಈ ಎರಡೂ ಸಂಸ್ಥೆಗಳೂ ಒಟ್ಟಿಗೆ ಸೇರಿ ಹಲವು ಕ್ಷೇತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಲಿದೆ ಎಂದು ಹೇಳಿತ್ತು. ಅದರ ಮೊದಲ ಭಾಗವಾಗಿ 'ಕೆಜಿಎಫ್ 2' ಸಿನಿಮಾವನ್ನು ಆರ್‌ಸಿಬಿ ಆಟಗಾರರು ಸಿನಿಮಾ ನೋಡಿದ್ದಾರೆ. ಭಾನುವಾರ (ಏಪ್ರಿಲ್ 17) 'ಕೆಜಿಎಫ್ 2' ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಆರ್‌ಸಿಬಿ ಆಟಗಾರರು ಸಿನಿಮಾ ನೋಡಿದ್ದಾರೆ. ಸಿನಿಮಾ ನೋಡಿದ ಬೆಂಗಳೂರು ಬಾಯ್ಸ್​ ಸಖತ್​ ಥ್ರಿಲ್​ ಆಗಿದ್ದಾರೆ.


ಬಯೋ ಬಬಲ್​ನಲ್ಲೇ ರಾಕಿ ಭಾಯ್​ ದರ್ಶನ!
ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವುದರಿಂದ ಆಟಗಾರರೆಲ್ಲರೂ ಬಯೋ ಬಬಲ್‌ನಲ್ಲಿದ್ದಾರೆ. ಹೀಗಾಗಿ 'ಕೆಜಿಎಫ್ 2' ಸಿನಿಮಾವನ್ನೂ ಕೂಡ ಬಯೋ ಬಬಲ್‌ ಒಳಗೆನೇ ಸಿನಿಮಾ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಅದರಂತೆಯೇ ಆರ್‌ಸಿನಿ ಆಟಗಾರರು ಏಪ್ರಿಲ್ 17ರಂದು ರಾತ್ರಿ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ.ಪೋಸ್ಟರ್‌, ಸ್ಯಾಂಡೀಸ್‌ ಇಟ್ಟು ಪ್ರಚಾರ ಮಾಡಿತ್ತು. ರಾತ್ರಿ ಆರ್‌ಸಿಬಿ ಆಟಗಾರರಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದ್ದರು. ಅದರಂತೆ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಹಲವು ಆಟಗಾರರು ಸಿನಿಮಾ ವೀಕ್ಷಿಸಿದ್ದಾರೆ.

First published: