ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ (IPL 2022 RCB vs CSK Results) ರೋಚಕ ಹಣಾಹಣಿಯಲ್ಲಿ ಅಂತೂ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯದ ಒಂದು ಹಂತದಲ್ಲಿ ದಿನೇಶ್ ಕಾರ್ತಿಕ್ RCB ಗೆ ಚೆನ್ನೈ ನೀಡಿದ್ದ 217 ರನ್ನುಗಳ ಭರ್ಜರಿ ಗುರಿಯನ್ನು ಬೆನ್ನಟ್ಟಿದ ಭರವಸೆಯನ್ನು ಮೂಡಿಸಿದ್ದರು. ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಅವರ ಸುಂಟರಗಾಳಿ ಮೂರನೇ ವಿಕೆಟ್ ಜೊತೆಯಾಟವು ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು 216/4 ಸ್ಕೋರ್ ತಲುಪಿಸಿತ್ತು. ಸಿಎಸ್ಕೆ ವಿರುದ್ಧದ ಗೆಲುವಿನ ಆಸೆ ಆರ್ಸಿಬಿ ಅಭಿಮಾನಿಗಳ ಪಾಲಿಗೆ ಹೆಚ್ಚು ಹೊತ್ತು ನಿಲ್ಲಲಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬ್ಯಾಟರ್ಸ್ ಮೇಲೆ. ಆರ್ಸಿಬಿ ಪವರ್ಪ್ಲೇಯೊಳಗೆ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ಅನುಜ್ ರಾವತ್ ಅವರನ್ನು ಕಳೆದುಕೊಂಡಿತು. ಗ್ಲೆನ್ ಮ್ಯಾಕ್ಸ್ವೆಲ್ ಅವರು ತಮ್ಮ ಹೊಡೆತಗಳನ್ನು ಕನೆಕ್ಟ್ ಮಾಡುತ್ತಿರುವಂತೆ ತೋರುತ್ತಿದ್ದರು ಆದರೆ ರವೀಂದ್ರ ಜಡೇಜಾ ಅವರಿಂದ ಬೌಲ್ಗೆ ನಂತರ ಅವರೂ ನಡೆಯಬೇಕಾಯಿತು.
ದುಬೇ ಅಜೇಯ 95 ರನ್! ಉತ್ತಪ್ಪ 88 ರನ್ ಇದಕ್ಕೂ ಮುನ್ನ ದುಬೆ 46 ಎಸೆತಗಳಲ್ಲಿ 95 ರನ್ ಗಳಿಸಿ ಅಜೇಯರಾಗುಳಿದರೆ, ಉತ್ತಪ್ಪ 50 ಎಸೆತಗಳಲ್ಲಿ 88 ರನ್ ಸಿಡಿಸಿದ್ದರು. ಈ ಜೋಡಿಯು 74 ಎಸೆತಗಳಲ್ಲಿ 165 ರನ್ಗಳನ್ನು ಒಟ್ಟುಗೂಡಿಸಿತು. ಸ್ಕೋರ್ 36/2 ಆಗಿದ್ದಾಗ ಫೀಲ್ಡ್ಗಿಳಿದಿದ್ದ ಈ ಜೋಡಿ ಚೆನ್ನೈ ಸೂಪರ್ ಕಿಂಗ್ಸ್ (CSK) 200 ದಾಟಿದಾಗ ಬೇರ್ಪಟ್ಟಿತು. ರಾಬಿನ್ ಉತ್ತಪ್ಪ 88 ರನ್ಗಳನ್ನು ಕಲೆಹಾಕಿದ್ದು, ಶಿವಂ ದುಬೆ ಸಹ ತಾವ್ಯಾರಿಗೂ ಕಡಿಮೆ ಇಲ್ಲದಂತೆ ಅಜೇಯ 95 ರನ್ಗಳನ್ನು ಬಾರಿಸಿ ಔಟ್ ಆಗದೇ ಇನ್ನಿಂಗ್ಸ್ ಮುಗಿಸಿದ್ದು ಚೆನ್ನೈ ಪಾಲಿಗೆ ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿ ಬದಲಾಗಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ್ದೇ ಮುಳುವಾಯ್ತಾ? ಇದಕ್ಕೂ ಮೊದಲು ಈ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅನ್ನು ಮುನ್ನಡೆಸುತ್ತಿರುವ ಮಾಜಿ CSK ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ತಮ್ಮ ತಂಡವು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮೊದಲು ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿದ್ದು ಮುಳುವಾಯಿತು.
ಆರ್ಸಿಬಿ ಪರ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಿದರೂ 17 ರನ್ ಗಳಿಸಿ ಮಾಜಿ CSK ವೇಗಿ ಜೋಶ್ ಹ್ಯಾಜಲ್ವುಡ್ಗೆ ಶರಣಾದರು.
ಪಂದ್ಯಶ್ರೇಷ್ಠ ಆಟಗಾರ ಯಾರು? ಶಿವಂ ದುಬೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ತಮ್ಮ ತಂಡದ ಮೊದಲ ಗೆಲುವಿಗೆ ಕೊಡುಗೆ ನೀಡಲು ಖಂಡಿತವಾಗಿಯೂ ಸಂತೋಷವಾಗುತ್ತದೆ ಎಂದು ಅವರು ಪಂದ್ಯದ ನಂತರ ಖುಷಿ ವ್ಯಕ್ತಪಡಿಸಿದರು. ಮಾಹಿ ಭಾಯ್ ತನ್ನ ಆಟವನ್ನು ಸುಧಾರಿಸಲು ಸಾಕಷ್ಟು ಸಹಾಯ ಮಾಡಿದರು ಎಂದು ಸಹ ಅವರು ಹೇಳಿದರು.
ಪಂದ್ಯದ ನಂತರ ಮಾತನಾಡಿದ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಬೌಲಿಂಗ್ ಮಾಡುವಾಗ 7 ನೇ ಓವರ್ನವರೆಗೂ ಉತ್ತಮವಾಗಿ ಆಡುತ್ತಿದ್ದೆವು, ಆದರೆ ದುಬೆ ಮತ್ತು ಉತ್ತಪ್ಪ ಸುಮಾರು 160 ರನ್ಗಳನ್ನು ಒಟ್ಟುಗೂಡಿಸಿದರು. ಆ ಸಮಯದಲ್ಲಿ ನಮ್ಮ ಬೌಲಿಂಗ್ ಆಕ್ರಮಣಕಾರಿಯಾಗಿರಲಿಲ್ಲ. ಚೆನ್ನೈ ಬ್ಯಾಟರ್ಗಳು ತಮ್ಮ ಸ್ಪಿನ್ನರ್ಗಳನ್ನು ಚೆನ್ನಾಗಿ ಬಳಸಿಕೊಂಡರು. ಇದುವೇ ನಮ್ಮ ಸೋಲಿಗೆ ಮುಖ್ಯ ಕಾರಣವಾಯಿತು ಎಂದು ಹೇಳಿದರು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ