IPL 2022: ಪ್ರೀತಿ ಜಿಂಟಾ ಗುಳಿಕೆನ್ನೆಯಲ್ಲಿ ಖುಷಿಯೋ ಖುಷಿ, ಕಾರಣ ರಬಾಡಾ!

ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರಬಾಡ ಭಯಂಕರ ಬೌಲಿಂಗ್ ಮಾಡಿ ಸತತ 5 ವಿಕೆಟ್ ಪಡೆದು ಮಿಂಚಿದ್ದಾರೆ. ಇದು ಪಂಜಾಬ್ ಕಿಂಗ್ಸ್ ಸಹ ಮಾಲೀಕರಾದ ಪ್ರೀತಿ ಜಿಂಟಾಗೆ ಸಂತಸ ತಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಇನ್ನು ಒಂದು ವಾರದೊಳಗೆ ಮುಂಬೈನ ಪ್ರಸಿದ್ ವಾಂಖೆಡೆ ಸ್ಟೇಡಿಯಂನಲ್ಲಿ ಉದ್ಘಾಟನೆಗೊಳ್ಳಲಿದೆ. ಇದೀಗ ಪಂಜಾಬ್ಸ್ ಕಿಂಗ್ಸ್​ ತಂಡದ ಒಡತಿ ಪ್ರೀತಿ ಜಿಂಟಾ (Preity Zinta) ಅವರಿಗೆ ಐಪಿಎಲ್ ಹರಾಜಿನಲ್ಲಿ ರೂ. 9.25 ಕೋಟಿ ಪಾವತಿಸಿ ಖರೀದಿಸಿದ್ದು ಖುಷಿ ತಂದಿದೆಯಂತೆ. ರಬಾಡಾ ತಮ್ಮ ತಂಡದ ಒಡತಿ ಪ್ರೀತಿ ಜಿಂಟಾ ಗುಳಿಕೆನ್ನೆಯಲ್ಲಿ ಖುಷಿಯ ನಗೆ ಉಕ್ಕಿಸಿದ್ದಾರಂತೆ! ಕಳೆದ ತಿಂಗಳು ನಡೆದ ಮೆಗಾ ಹರಾಜಿನಲ್ಲಿ (IPL Mega Auction) ದೆಹಲಿ ಕ್ಯಾಪಿಟಲ್ಸ್​ನ  ಮಾಜಿ ಆಟಗಾರ ಕಗಿಸೋ ರಬಾಡ (Kagiso Rabada) ಅವರನ್ನು ಪಂಜಾಬ್ ಕಿಂಗ್ಸ್ (Punjab Kings) ದೊಡ್ಡ ಮೊತ್ತ ಪಾವತಿಸಿ ತನ್ನ ತಂಡಕ್ಕೆ ಸೇರಿಸಿಕೊಂಡಿತು.

    ಪಂಜಾಬ್ ಅವರಿಗೆ ಸುಮಾರು ರೂ. 9.25 ಕೋಟಿ ಪಾವತಿಸಿತ್ತು. ರಬಾಡ ಸದ್ಯ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರಬಾಡ ಭಯಂಕರ ಬೌಲಿಂಗ್ ಮಾಡಿ ಸತತ 5 ವಿಕೆಟ್ ಪಡೆದು ಮಿಂಚಿದ್ದಾರೆ. ಇದು ಪಂಜಾಬ್ ಕಿಂಗ್ಸ್ ಸಹ ಮಾಲೀಕರಾದ ಪ್ರೀತಿ ಜಿಂಟಾಗೆ ಸಂತಸ ತಂದಿದೆ.

    ನನಗೆ ದೇಶವೇ ಮುಖ್ಯ ಎಂದಿದ್ದ ಆಟಗಾರ
    ಕಳೆದ ಐಪಿಎಲ್ ಸೀಸನ್​ನಲ್ಲಿ ರಬಾಡಾ ಹೇಳಿಕೆ ವೈರಲ್ ಆಗಿತ್ತು. ಅವರು ನನಗೆ ದೇಶ ಮೊದಲು. ಒಂದು ವೇಳೆ ಐಪಿಎಲ್‌ ನಡುವೆಯೇ ಪಾಕಿಸ್ತಾನ ವಿರುದ್ದದ ಸರಣಿ ನಡೆಯುತ್ತದೆ ಎಂತಾದಲ್ಲಿ, ನಾನು ಐಪಿಎಲ್‌ನ ಆರಂಭದ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದರು. ಅವರ ಈ ಹೇಳಿಕೆ ಭರ್ಜರಿ ಶ್ಲಾಘನೆಗೆ ಕಾರಣವಾಗಿತ್ತು.

    ಅಲ್ಲದೇ ಮುಂದುವರೆದು ಮಾತನಾಡಿದ್ದ ಅವರು, ಭಾರತದಲ್ಲಿ ದೆಹಲಿ ನನ್ನ ತವರು ಮನೆ, ಆದರೆ ದೇಶ ನನ್ನ ಮೊದಲ ಆದ್ಯತೆ ಎಂದು ರಬಾಡ ಹೇಳಿದ್ದರು. ಇದು ಅವರ ದೇಶಾಭಿಮಾನದ ಬಗ್ಗೆ ಎಲ್ಲರಿಗೂ ಖುಷಿ ಆಗುವಂತೆ ಮಾಡಿತ್ತು.

    ಏಕೆ ಹಾಗಂದಿದ್ದರು ರಬಾಡಾ?
    ಹಿಂದಿನ ವರ್ಷದ ಐಪಿಎಲ್ ಸೀಸನ್​ ವೇಳೆ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ದೇಶಗಳ ನಡುವೆ ಕ್ರಿಕೆಟ್ ಸರಣಿ ಆರಂಭವಾಗಬೇಕಿತ್ತು. ತಮ್ಮ ದೇಶದ ಪರ ಆಡಬೇಕಿದ್ದ ಕಾರಣ ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು ಐಪಿಎಲ್​ನ ಮೊದಲ ಎರಡು ವಾರಗಳಲ್ಲಿ ನಡೆಯುವ ಪಂದ್ಯಗಳಲ್ಲಿ ಭಾಗವಹಿಸುವುದು ಸಾಧ್ಯವಿರಲಿಲ್ಲ.

    ಇದನ್ನೂ ಓದಿ:ಮೀಸೆ ಮೂಡುವ ಮುನ್ನವೇ IPL ನಲ್ಲಿ ಆಡಿದ ಆಟಗಾರರು ಇವರು!

    ಹೀಗಾಗಿ ರಬಾಡಾ ಐಪಿಎಲ್​ಗಿಂತ ತಮ್ಮ ದೇಶವಾದ ದಕ್ಷಿಣ ಆಫ್ರಿಕಾ ಪರವೇ ಆಡಬಯಸುವುದಾಗಿ ಘಂಟಾಘೋಷವಾಗಿ ಹೇಳಿದ್ದರು.

    ಪ್ರೀತಿ ಜಿಂಟಾಗೆ ಬಲುಖುಷಿ
    ಇದೀಗ ಅವರು ಬಾಂಗ್ಲಾದೇಶದ ವಿರುದ್ಧ ಸಖತ್ ಪ್ರದರ್ಶನ ನೀಡುತ್ತಿರುವುದು ಬಹುಕೋಟಿ ಕೊಟ್ಟು ಅವರನ್ನು ತಮ್ಮ ತಂಡದ ತೆಕ್ಕೆಗೆ ಹಾಕಿಕೊಂಡಿರುವ ಪ್ರೀತಿ ಜಿಂಟಾ ಅವರಿಗೆ ಖುಷಿ ಕೊಟ್ಟಿದೆ.

    ಪಂಜಾಬ್ ಗೆಲ್ಲುವ ತವಕ
    ಕಳೆದ 14 ಸೀಸನ್‌ಗಳಲ್ಲಿ ಕೇವಲ ಎರಡು ಸೀಸನ್‌ಗಳನ್ನು (2008, 2014) ಹೊರತುಪಡಿಸಿ, ಉಳಿದ ಎಲ್ಲಾ ಸೀಸನ್‌ಗಳಲ್ಲಿ ಪಂಜಾಬ್ ತಂಡ ವಿಫಲವಾಗಿತ್ತು. ಈ ಸೀಸನ್​ನಲ್ಲಿ ಮಿಂಚುವ ಸಂಕಲ್ಪ ತೊಟ್ಟಿರುವ ಪಂಜಾಬ್​ಗೆ ರಬಾಡಾ ಕೋಲ್ಮಿಂಚಾಗಿ ಪರಿಣಮಿಸಿದ್ದಾರೆ. ಅದಕ್ಕಾಗಿಯೇ ಕಳೆದ ತಿಂಗಳ ಹರಾಜಿನಲ್ಲಿ ಅತ್ಯಂತ ಬುದ್ದಿವಂತಿಕೆಯಿಂದ ಆಟಗಾರರನ್ನು ಖರೀದಿಸಿದೆ.

    ಕನಸು ನನಸು ಮಾಡುವರೇ ರಬಾಡಾ?
    ಇದೀಗ ರಬಾಡ ಐದು ವಿಕೆಟ್‌ಗಳನ್ನು ಪಡೆದಿರುವುದು ಪಂಜಾಬ್ ಕಿಂಗ್ಸ್‌ಗೆ ಧನಾತ್ಮಕವಾಗಿ ಪರಿಣಮಿಸಿದೆ.  ಆರಂಭದಲ್ಲಿ ರಬಾಡ ಡೆತ್ ಓವರ್‌ಗಳಲ್ಲಿ ಸ್ಥಿರ ಬೌಲಿಂಗ್‌ ಪ್ರದರ್ಶಿಸಿ ದಿಟ್ಟತನ ತೋರಿದರು. ಐಪಿಎಲ್ 15ನೇ ಸೀಸನ್ ನಲ್ಲಿ ಪಂಜಾಬ್ ಕಿಂಗ್ಸ್ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲುವ ಕನಸನ್ನು ನನಸಾಗಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

    ಇದನ್ನೂ ಓದಿ: IPL 2022: ಅತಿ ಹೆಚ್ಚು ರನ್ ಹೊಳೆ ಹರಿಸಿದ ಟಾಪ್ 5 ಆಟಗಾರರು ಇವರೇ!

    ಮೊದಲ ಪಂದ್ಯ ಕಳೆದ ಆವೃತ್ತಿಯ ಫೈನಲಿಸ್ಟ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಕೂಡ ಮುಂಬೈ ತಲುಪಿದ್ದು, ಈಗಾಗಲೇ ಅಭ್ಯಾಸ ಆರಂಭಿಸಿವೆ.
    Published by:guruganesh bhat
    First published: