IPL 2022, PBKS vs DC: ಡೆಲ್ಲಿ ಕ್ಯಾಪಿಟಲ್ಸ್​ಗೆ 17 ರನ್​ಗಳ ಗೆಲುವು, ಹೆಚ್ಚಿದ ಪ್ಲೇ ಆಫ್​ ಕುತೂಹಲ

ಲೀಗ್ ಹಂತದ ಈ ಪಂದ್ಯದ ನಂತರ ಬಹುತೇಕ ಅಂತ್ಯಕ್ಕೆ ಹತ್ತಿರವಾಗಿರುವುದರಿಂದ ಪಂದ್ಯವು ಎರಡೂ ತಂಡಗಳಿಗೆ ಗೆಲ್ಲಲೇಬೇಕಾದ ಆಟವಾಗಿತ್ತು.

ಪಂದ್ಯದ ದೃಶ್ಯ

ಪಂದ್ಯದ ದೃಶ್ಯ

 • Share this:
  ಐಪಿಎಲ್ 2022ರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂಜಾಬ್ ಮ್ಯಾಚಲ್ಲಿ (IPL 2022, PBKS vs DC) ಡೆಲ್ಲಿ ಗೆಲುವು ಕಂಡಿದೆ.  ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 160 ರನ್​ಗಳ ಗುರಿಯನ್ನು ಬೆನ್ನೆಟ್ಟಲಾಗದೇ ಪಂಜಾಬ್ ಕಿಂಗ್ಸ್ ರನ್​ಗಳಿಗೆ ಪಂದ್ಯವನ್ನು ಬಿಟ್ಟುಕೊಟ್ಟಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 2022 ಋತುವಿನ 64 ನೇ ಪಂದ್ಯದಲ್ಲಿ  ಪಂಜಾಬ್ ಕಿಂಗ್ಸ್ ಸೋತಿದೆ. ಡೆಲ್ಲಿ ಪರ ಶಾರ್ದೂಲ್ ಠಾಕೂರ್ ಎರಡು ವಿಕೆಟ್ ಪಡೆದಿದ್ದಾರೆ ಅನ್ರಿಚ್ ನಾರ್ಟ್ಜೆ, ಅಕ್ಸರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಮಿಚೆಲ್ ಮಾರ್ಷ್ ಅವರ 48 ಎಸೆತಗಳಲ್ಲಿ 63 ರನ್‌ಗಳ ನೆರವಿನಿಂದ ಡೆಲ್ಲಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 159 ರನ್ ಗಳಿಸಿತು. 

  ಪಂಜಾಬ್ ಕಿಂಗ್ಸ್ ಪರ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಅರ್ಶ್‌ದೀಪ್ ಸಿಂಗ್ ತಲಾ ಮೂರು ವಿಕೆಟ್ ಪಡೆದರು. ಇನ್ನೂ ಪ್ಲೇಆಫ್‌ಗಾಗಿ ಪೈಪೋಟಿ ನಡೆಯುತ್ತಿದ್ದು ಐಪಿಎಲ್ 2022 ರೋಚಕ ಘಟ್ಟ ತಲುಪುತ್ತಿದೆ. ಲೀಗ್ ಹಂತದ ಈ ಪಂದ್ಯದ ನಂತರ ಬಹುತೇಕ ಅಂತ್ಯಕ್ಕೆ ಹತ್ತಿರವಾಗಿರುವುದರಿಂದ ಪಂದ್ಯವು ಎರಡೂ ತಂಡಗಳಿಗೆ ಗೆಲ್ಲಲೇಬೇಕಾದ ಆಟವಾಗಿತ್ತು.

  ಅಕ್ಷರ್ ಪಟೇಲ್ 100 ವಿಕೆಟ್​ಗಳ ಸಂಭ್ರಮ
  ಈ ಪಂದ್ಯದ ಮೂಲಕ ಐಪಿಎಲ್​ನಲ್ಲಿ ಅಕ್ಷರ್ ಪಟೇಲ್ 100 ವಿಕೆಟ್​ಗಳ ಸಾಧನೆ ಮಾಡಿದರು.  ಇದನ್ನೂ ಓದಿ: IPL 2022: ಅಯ್ಯೋ! ನೋವಾಯ್ತಾ? ಆರ್​ಸಿಬಿ ಆಟಗಾರ ಸಿಡಿಸಿದ ಸಿಕ್ಸರ್ ಅಭಿಮಾನಿಯ ತಲೆಗೇ ಬಡೀತು!

  ಇದನ್ನೂ ಓದಿ: Dinesh Karthik: ದಿನೇಶ್ ಕಾರ್ತಿಕ್​ ಕುರಿತು RCB ತಂಡಕ್ಕೆ ಸಲಹೆ ನೀಡಿದ ಆರ್​ಪಿ ಸಿಂಗ್

  ಪಂಜಾಬ್ ಪ್ರಸ್ತುತ ಐಪಿಎಲ್ 2022 ಪಾಯಿಂಟ್ಸ್ ಟೇಬಲ್‌ನಲ್ಲಿ 12 ಪಂದ್ಯಗಳಿಂದ 12 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಇದರಲ್ಲಿ ಆರು ಗೆಲುವುಗಳು ಮತ್ತು ಆರು ಸೋಲುಗಳು ಸೇರಿವೆ. ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳಿಂದ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.   ಇವುಗಳ ಪೈಕಿ ಆರು ಪಂದ್ಯಗಳಲ್ಲಿ ಗೆಲುವು ಕಂಡಿದ್ದು ಇನ್ನುಳಿದ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

  ನಿನ್ನೆಯ ಪಂದ್ಯದಲ್ಲಿ ಏನಾಗಿತ್ತು?


  ನಿನ್ನೆ ನಡೆದ ಐಪಿಎಲ್ 2022ರ  ನಡೆದ ಲಕ್ನೋ ಸೂಪರ್ ಜೈಂಟ್ಸ್ vs ರಾಜಸ್ಥಾನ ರಾಯಲ್ಸ್ ಪಂದ್ಯದಲ್ಲಿ (IPL 2022, LSG vs RR) ರಾಜಸ್ಥಾನ ಲಕ್ನೋ ತಂಡವನ್ನು 34 ರನ್​ಗಳಿಂದ ಸೋಲಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ (Sanju Samson) ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಲು ಆಯ್ಕೆ ಮಾಡಿಕೊಂಡಿದ್ದರು. ರಾಜಸ್ಥಾನ ಪಂದ್ಯಕ್ಕಾಗಿ ಮೂರು ಬದಲಾವಣೆಗಳನ್ನು ಮಾಡಿಕೊಂಡಿತ್ತು. ಲಕ್ನೋ ಸೂಪರ್ ಜೈಂಟ್ಸ್ ಪರ ದೀಪಕ್ ಹೂಡಾ 39 ಬೌಲ್​ಗಳಿಗೆ 59 ರನ್ ಸಿಡಿಸಿದ್ದು ತಂಡಕ್ಕೆ ಪ್ರಯೋಜನ ನೀಡಲಿಲ್ಲ.

  ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ 63 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಲಕ್ನೋ ಸೂಪರ್ ಕಿಂಗ್ಸ್ (ಎಲ್‌ಎಸ್‌ಜಿ) ತಂಡವನ್ನು 24 ರನ್‌ಗಳಿಂದ ಸೋಲಿಸಿತು.
  Published by:guruganesh bhat
  First published: