IPL 2022, PBKS vs CSK Highlights: ಚೆನ್ನೈಗೆ 6ನೇ ಸೋಲು, ಜಯಭೇರಿ ಮೊಳಗಿಸಿದ ಪಂಜಾಬ್

ಶಿಖರ್ ಧವನ್ 59 ಎಸೆತಗಳಲ್ಲಿ ಔಟಾಗದೆ 88ರನ್ 9 ಬೌಂಡರಿ 2 ಸಿಕ್ಸರ್ ಸಮೇತವಾಗಿ ಪಂಜಾಬ್ ಬೃಹತ್ ಮೊತ್ತ ದಾಖಲಿಸಲು ನೆರವಾದರು.

ಪಂದ್ಯದ ದೃಶ್ಯ

ಪಂದ್ಯದ ದೃಶ್ಯ

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2022) ಮತ್ತೊಂದು ಥ್ರಿಲ್ಲರ್ ಮಾದರಿಯ ಪಂದ್ಯವು ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿತು. ಸೋಮವಾರ ವಾಂಖೆಡೆಯಲ್ಲಿ ನಡೆದ ಕದನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ (IPL 2022, PBKS vs CSK Highlights) 11 ರನ್‌ಗಳಿಂದ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿತು. ಕೊನೆಯ ಓವರ್ ವರೆಗೂ ನಡೆದ ಪಂದ್ಯ ನೋಡುಗರ ಮನಸೂರೆಗೊಂಡಿತು. ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 27 ರನ್‌ಗಳ ಅಗತ್ಯವಿತ್ತು. ಧೋನಿ (Dhoni) ಸ್ಟ್ರೈಕಿಂಗ್ ಎಂಡ್‌ನಲ್ಲಿದ್ದರು. ಧೋನಿ ಮುಂಬೈ ವಿರುದ್ಧ ಕೊನೆಯ ಓವರ್ ನಲ್ಲಿ ಆಡಿದಂತೆ ಆಡಿ ತಂಡಕ್ಕೆ ಗೆಲುವು ತಂದುಕೊಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಧೋನಿ ಮೇಲಿದ್ದ ನಿರೀಕ್ಷೆ ಸಫಲವಾಗಲಿಲ್ಲ.

  ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪಂಜಾಬ್ ಕಿಂಗ್ಸ್ ಬೃಹತ್ ಸ್ಕೋರ್ ಗಳಿಸಿತ್ತು. ಶಿಖರ್ ಧವನ್ 59 ಎಸೆತಗಳಲ್ಲಿ ಔಟಾಗದೆ 88ರನ್ 9 ಬೌಂಡರಿ 2 ಸಿಕ್ಸರ್ ಸಮೇತವಾಗಿ ಪಂಜಾಬ್ ಬೃಹತ್ ಮೊತ್ತ ದಾಖಲಿಸಲು ನೆರವಾದರು.

  ಶಿಖರ್ ಧವನ್ ಸೂಪರ್ ಆಟ
  ಭಾನುಕಾ ರಾಜಪಕ್ಸೆ (32 ಎಸೆತಗಳಲ್ಲಿ 42; 2 ಬೌಂಡರಿ, 2 ಸಿಕ್ಸರ್) ಮತ್ತು ಲಿಯಾಮ್ ಲಿವಿಂಗ್ಸ್ಟೋನ್ (7 ಎಸೆತಗಳಲ್ಲಿ 19; 1 ಬೌಂಡರಿ, 2 ಸಿಕ್ಸರ್) ಕೂಡ ಪಂಜಾಬ್ ಕಿಂಗ್ಸ್ ಗೆಲುವಿಗೆ ಕಾರಣರಾದರು. ಐಪಿಎಲ್‌ನಲ್ಲಿ ಶಿಖರ್ ಧವನ್‌ಗೆ ಇದು 200ನೇ ಪಂದ್ಯವಾಗಿತ್ತು. ಈ ಪಂದ್ಯದ ಮೂಲಕ ಶಿಖರ್ ಧವನ್ ಹಲವು ಮೈಲುಗಲ್ಲುಗಳನ್ನು ಸಾಧಿಸಿದರು. ಅವರು ಐಪಿಎಲ್‌ನಲ್ಲಿ 6,000 ರನ್ ಪೂರೈಸಿದರು. ಜೊತೆಗೆ ಚೆನ್ನೈ ವಿರುದ್ಧ 1000 ರನ್ ಗಳಿಸಿದರು. ಚೆನ್ನೈ ಬೌಲರ್‌ಗಳ ಪೈಕಿ ಡ್ವೇನ್ ಬ್ರಾವೋ 2 ವಿಕೆಟ್ ಪಡೆದರು.

  ಚೆನ್ನೈ ಬ್ಯಾಟಿಂಗ್ ಅಂತಿಮ ಹಂತದಲ್ಲಿ ಕುತೂಹಲ
  ರಿಷಿ ಧವನ್ ಎಸೆದ 20ನೇ ಓವರ್ ನ ಮೊದಲ ಎಸೆತದಲ್ಲಿ ಧೋನಿ ಬೃಹತ್ ಸಿಕ್ಸರ್ ಬಾರಿಸಿದರು. ಆದರೆ ನಂತರದಲ್ಲಿ ರಿಷಿ ಧವನ್ ಧೋನಿಯನ್ನು ಪೆವಿಲಿಯನ್​ಗೆ ಸೇರಿಸಿದರು. ರವೀಂದ್ರ ಜಡೇಜಾ ಸಿಕ್ಸರ್ ಬಾರಿಸಿದರೂ ಚೆನ್ನೈ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

  188 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 176 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಅಂಬಟಿ ರಾಯುಡು (39 ಎಸೆತಗಳಲ್ಲಿ 78; 7 ಬೌಂಡರಿ, 6 ಸಿಕ್ಸರ್) ಧನಾಧನ್ ಹೊಡೆತಗಳಿಂದ ಕೆರಳಿದರು.

  ಇದನ್ನೂ ಓದಿ: IPL 2022 Rohit Sharma: ರೋಹಿತ್ ಶರ್ಮಾ ಭಾವನಾತ್ಮಕ ಪೋಸ್ಟ್; ಮುಂಬೈನೊಂದಿಗೆ ದೃಢವಾಗಿ ನಿಂತ ಅಭಿಮಾನಿಗಳು

  ಒಂದು ರೀತಿಯಲ್ಲಿ ರಾಯುಡು ಚೆನ್ನೈ ತಂಡವನ್ನು ಪಂದ್ಯದ ಕೊನೆಯ ಓವರ್‌ಗೆ ಕರೆದೊಯ್ದರು. ಪಂಜಾಬ್ ಬ್ಯಾಟಿಂಗ್ ವೇಳೆ ರಾಯುಡು ಕೈಗೆ ಗಾಯವಾಗಿತ್ತು. ಹೀಗಾಗಿ ಅವರು ಫೀಲ್ಡ್​  ತೊರೆಯಬೇಕಾಯಿತು.

  ಪಂಜಾಬ್ ತಂಡದಲ್ಲಿ ಬದಲಾವಣೆ
  ಕಳೆದೆರಡು ಪಂದ್ಯಗಳಲ್ಲಿ ಸೋತಿರುವ ಪಂಜಾಬ್ ಕಿಂಗ್ಸ್ ಈ ಪಂದ್ಯಕ್ಕಾಗಿ ಮೂರು ಬದಲಾವಣೆ ಮಾಡಿಕೊಂಡಿತ್ತು. ಈ ಬದಲಾವಣೆಯ ಅಂಗವಾಗಿ ಮಯಾಂಕ್ ಅಗರ್ವಾಲ್ (18) ಮತ್ತು ಶಿಖರ್ ಧವನ್ ಆರಂಭಿಕರಾಗಿ ಕಣಕ್ಕೆ ಇಳಿದರು. ಮಯಾಂಕ್ ಕಡಿಮೆ ಸ್ಕೋರ್ ಗೆ ಔಟಾದರು. ಈ ಹಂತದಲ್ಲಿ ಕ್ರೀಸ್ ಗೆ ಬಂದ ಭಾನುಕಾ ರಾಜಪಕ್ಸೆ ಜತೆಗೂಡಿ ಧವನ್ ತಂಡವನ್ನು ಮುನ್ನಡೆಸಿದರು. ಚೆನ್ನೈ ಫೀಲ್ಡರ್‌ಗಳು ರಾಜಪಕ್ಸೆ ಅವರ ಹಲವಾರು ಕ್ಯಾಚ್‌ಗಳನ್ನು ಕೈಬಿಟ್ಟರು. ಇವರಿಬ್ಬರು ಸರಣಿಯಲ್ಲಿ ಎರಡನೇ ವಿಕೆಟ್‌ಗೆ 110 ರನ್ ಜೊತೆಯಾಟ ನಡೆಸಿದರು.

  ಇದನ್ನೂ ಓದಿ: IPL 2022 Umran Malik: ಉಮ್ರಾನ್ ಮಲ್ಲಿಕ್ ಗಲ್ಲಿ ಕ್ರಿಕೆಟ್​ನಿಂದ ಸ್ಪೀಡ್ ಬೌಲಿಂಗ್​ನ ಕಿಂಗ್ ಆಗಿದ್ದು ಹೇಗೆ?

  ರಾಜಪಕ್ಸೆ ಔಟಾದ ನಂತರ ಪ್ರಿಟೋರಿಯಸ್ ಓವರ್‌ನಲ್ಲಿ ಲಿವಿಂಗ್‌ಸ್ಟೋನ್ ಎರಡು ಬೃಹತ್ ಸಿಕ್ಸರ್‌ಗಳನ್ನು ಬಾರಿಸಿದರು. ಇದರೊಂದಿಗೆ ಪಂಜಾಬ್ ಕಿಂಗ್ಸ್ ಬೃಹತ್ ಸ್ಕೋರ್ ಗಳಿಸಿತು. ಇನ್ನೊಂದು ತುದಿಯಲ್ಲಿದ್ದ ಶಿಖರ್ ಧವನ್ ಮೊದಲು ನಿಧಾನವಾಗಿ ಆಡಿದರಾದರೂ ನಂತರ ಭಾರೀ ಪ್ರದರ್ಶನ ನೀಡಿದರು. ಈಮೂಲಕ ಶಿಖರ್ ಧವನ್ ಐಪಿಎಲ್‌ ವೃತ್ತಿಜೀವನದಲ್ಲಿ 46ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು.
  Published by:guruganesh bhat
  First published: