IPL 2022: ಹಾರ್ದಿಕ್​ ವಿಕೆಟ್ ಕಿತ್ತಿದ್ದಕ್ಕೆ ಕೃನಾಲ್​ ಪಾಂಡ್ಯಗೆ ಮನೆಲಿ ಬೈದ್ರಾ? ಮ್ಯಾಚ್ ಮುಗಿದ ಮೇಲೆ ಏನಾಯ್ತು?

ಈಕುರಿತು ಟ್ವಿಟರ್​ನಲ್ಲಿ ಮೀಮ್​ಗಳು ತುಂಬಿ ತುಳುಕಾಡುತ್ತಿವೆ. ನೀವೂ ಒಮ್ಮೆ ನೋಡಿ ಬನ್ನಿ.

ಅಣ್ಣ ತಮ್ಮಂದಿರು

ಅಣ್ಣ ತಮ್ಮಂದಿರು

  • Share this:
    ಐಪಿಎಲ್‌ನಲ್ಲಿ (IPL 2022) ಬಹು ನಿರೀಕ್ಷಿತ "ಬ್ಯಾಟಲ್ ಆಫ್ ದಿ ಬ್ರದರ್ಸ್'' ಅನ್ನು ಕೃನಾಲ್ ಪಾಂಡ್ಯ  (Krunal Pandya) ಗೆದ್ದುಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (GT vs LSG) ನಡುವಿನ ಪಂದ್ಯದ ವೇಳೆ ಕೃನಾಲ್ ಮೊದಲ ಎಸೆತದಲ್ಲಿ ಅವರ ಸಹೋದರ ಹಾರ್ದಿಕ್ ಅವರ ವಿಕೆಟ್ ಪಡೆದರು.  ಗುಜರಾತ್ ಟೈಟಾನ್ಸ್‌ಗೆ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಕಡಿಮೆ ಮೊತ್ತಕ್ಕೆ ಪತನವಾಗುತ್ತಿದ್ದ ತಮ್ಮ ತಂಡಕ್ಕೆ ಆಧಾರವಾಗುತ್ತಿದ್ದರು. ಆ ವೇಳೆ 15 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು ಗುಜರಾತ್ ಟೈಟಾನ್ಸ್. ಆದರೆ ಈ ವೇಳೆ ಬೌಲಿಂಗ್ ಆರಂಭಿಸಿದ ಕೃನಾಲ್ ಪಾಂಡ್ಯ ತಮ್ಮ ಸಹೋದರ ಹಾರ್ದಿಕ್​ರನ್ನು ಒಂದೇ ಎಸೆತದಲ್ಲಿ ಪೆವಿಲಿಯನ್​ಗೆ ಕಳಿಸಿಬಿಟ್ಟರು.

    ಆದರೆ ತಮ್ಮ ಸಹೋದರನನ್ನು ಔಟ್ ಮಾಡಿದ ನಂತರ ಕೃನಾಲ್ ಪಾಂಡ್ಯ ಅಷ್ಟೊಂದು ಖುಷಿಗೊಳ್ಳಲಿಲ್ಲ. ತಮ್ಮ ಎರಡು ಕೈಗಳ ಹಸ್ತದಿಂದ ಮುಖ ಮುಚ್ಚಿಕೊಂಡಿದ್ದರು ಅವರು. ಆನಂತರ ಸ್ವಲ್ಪ ನಗುಮುಖದಲ್ಲಿ ಕಾಣಿಸಿಕೊಂಡರು.

    ಇಬ್ಬರ ಹಿಸ್ಟರಿ ಹೀಗಿದೆ!
    ಪಾಂಡ್ಯ ಬ್ರದರ್ಸ್ ಅಂತಲೇ ಪ್ರಸಿದ್ಧರಾಗಿರುವ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಚಿರಪರಿಚಿತ ಹೆಸರು. ಅವರ ತವರು ರಾಜ್ಯ ಗುಜರಾತ್ ಆಗಿದ್ದರೂ, ಮುಂಬೈ ಇಂಡಿಯನ್ಸ್ (MI) ಮೂಲಕ ಈ ಇಬ್ಬರೂ ಐಪಿಎಲ್ ಪ್ರವೇಶಿಸಿದರು.

    2015ರಲ್ಲಿ ಮುಂಬೈ ವಿರುದ್ಧ ಆಲ್ರೌಂಡರ್ ಆಗಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದ ಹಾರ್ದಿಕ್ ತಕ್ಷಣವೇ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದರು. ನಂತರದ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಕೃನಾಲ್ ಅವರನ್ನು ಕೂಡ ತನ್ನ ತೆಕ್ಕೆಗೆ ಹಾಕಿಕೊಂಡಿತು. ಅಂದಿನಿಂದ 2021ರ ಐಪಿಎಲ್ವರೆಗೆ ಇವರಿಬ್ಬರು ಮುಂಬೈ ತಂಡದ ಪ್ರಮುಖ ಆಟಗಾರರಾಗಿದ್ದರು.

    ಅಣ್ಣ ತಮ್ಮಂದಿರ ಜೋಡಿ
    ಆದರೆ ಈ ಅಣ್ಣ ತಮ್ಮಂದಿರ ಜೋಡಿಯು 2022 ರಲ್ಲಿ ಕೊನೆಗೊಂಡಿತು. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಅವರನ್ನು ಕೈಬಿಟ್ಟಿದ್ದರಿಂದ ಗುಜರಾತ್ ಟೈಟಾನ್ಸ್ ಹಾರ್ದಿಕ್ ಅವರನ್ನು ಆಯ್ಕೆ ಮಾಡಿಕೊಂಡಿತು.

    ಇದನ್ನೂ ಓದಿ: Glenn Maxwell Wedding: ತಮಿಳು ಸಂಪ್ರದಾಯದಂತೆ ವಿವಾಹವಾದ RCB ಸ್ಟಾರ್ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್

    ಈಕುರಿತು ಟ್ವಿಟರ್​ನಲ್ಲಿ ಮೀಮ್​ಗಳು ತುಂಬಿ ತುಳುಕಾಡುತ್ತಿವೆ. ನೀವೂ ಒಮ್ಮೆ ನೋಡಿ ಬನ್ನಿ.











    ಇದನ್ನೂ ಓದಿ: IPL 2022: ಸೋತರೂ ಸಂತಸದಲ್ಲಿರುವ ಚೆನ್ನೈ, ಗೆದ್ದರೂ ಸಂಕಷ್ಟದಲ್ಲಿದೆ ಡೆಲ್ಲಿ.. ಕಾರಣವೇನು?

    ಐಪಿಎಲ್ (IPL)​ 2022 15ನೇ ಆವೃತ್ತಿಯ ಮೊದಲ ರಣ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಯಾಕೆಂದರೆ ಎರಡು ತಂಡಗಳು ಈ ಬಾರಿ ಐಪಿಎಲ್​ಗೆ ಹೊಸದಾಗಿ ಸೇರ್ಪಡೆಗೊಂಡಿದ್ದರು. ಹೀಗಾಗಿ ಇಂದಿನ ಪಂದ್ಯದ ಮೇಲೆ ಭಾರೀ ನೀರಿಕ್ಷೆ ಇತ್ತು. ಹೊಸದಾಗಿ ಸೇರ್ಪಡೆಗೊಂಡಿದ್ದ ಲಕ್ನೋ ಸೂಪರ್​ ಜೈಂಟ್ಸ್ (Lucknow Super Giants)​ ಹಾಗೂ ಗುಜರಾತ್​ ಟೈಟನ್ಸ್ (Gujarat Titans)​ ಮೊಟ್ಟ ಮೊದಲ ಬಾರಿಗೆ ಐಪಿಎಲ್​ ರಣರಂಗದಲ್ಲಿ ಹಣಾಹಣಿ ನಡೆಸಿತು. ಹಾರ್ದಿಕ್​ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಗುಜರಾತ್​ ಟೈಟಾನ್ಸ್​ ಕಣಕ್ಕಿಳಿದಿದ್ದರು, ಅತ್ತ ಕೆ.ಎಲ್​ ರಾಹುಲ್​ (KL Rahul) ನಾಯಕತ್ವದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ಅಖಾಡಕ್ಕೆ ಇಳಿದಿತ್ತು. ಈ ಹೊಸ ತಂಡಗಳ ರಣರೋಚಕ ಪಂದ್ಯದಲ್ಲಿ ಗುಜರಾತ್​ ಜೈಂಟ್ಸ್​ ಜಯ (Win) ದಾಖಲಿಸಿದೆ.
    Published by:ಗುರುಗಣೇಶ ಡಬ್ಗುಳಿ
    First published: