IPLಗೆ ಭಯೋತ್ಪಾದಕರ ಭಯವಿಲ್ಲ; ಮುಂಬೈ ಪೊಲೀಸರ ಸ್ಪಷ್ಟನೆ

ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಮೈದಾನ ಹಾಗೂ ಹೋಟೆಲ್‌ಗಳಲ್ಲಿ ಮುಂಬೈ ಪೊಲೀಸರು ಅಗತ್ಯ ಭದ್ರತೆ ಒದಗಿಸುತ್ತಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಮುಂಬೈ: ಮಾರ್ಚ್ 26ರಂದು ಆರಂಭವಾಗಲಿರುವ ಐಪಿಎಲ್‌ಗೂ (IPL 2022) ಮುನ್ನವೇ ಇಂದು ಆಘಾತಕಾರಿ ಸಂಚಲನ ಮೂಡಿಸಿದ್ದ ಐಪಿಎಲ್ ಟೂರ್ನಿ ಭಯೋತ್ಪಾದಕರ ಹಿಟ್ ಲಿಸ್ಟ್​ನಲ್ಲಿದೆ ಎಂಬ ಸುದ್ದಿಯ ಕುರಿತು ಮುಂಬೈ ಪೊಲೀಸರು (Mumbai Police) ಸ್ಪಷ್ಟನೆ ನೀಡಿದ್ದಾರೆ. ಐಪಿಎಲ್​ ಸರಣಿಗೆ ಯಾವುದೇ ಭಯೋತ್ಪಾದಕ ಭಯ ಇಲ್ಲ (IPL 2022 Terror Threat) ಎಂದು ಸ್ಪಷ್ಟಪಡಿಸಿದ್ದಾರೆ. ಈಮುಂಚೆ ನಿಗದಿಯಾದಂತೆಯೇ ಮುಂಬೈನ ವಾಂಖೆಡೆ ಮತ್ತು ಬ್ರಬೋರ್ನ್ ಸ್ಟೇಡಿಯಂನಲ್ಲಿ ಮಾರ್ಚ್ 26, 2022 ರಂದು ಐಪಿಎಲ್ ಕ್ರಿಕೆಟ್ ಪಂದ್ಯಗಳು (IPL Match) ಪ್ರಾರಂಭವಾಗಲಿವೆ ಎಂದು ಮುಂಬೈ ಪೊಲೀಸರು ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಐಪಿಎಲ್ ಕ್ರಿಕೆಟ್ ಪಂದ್ಯಗಳಿಗೆ ಮೈದಾನ ಹಾಗೂ ಹೋಟೆಲ್‌ಗಳಲ್ಲಿ ಮುಂಬೈ ಪೊಲೀಸರು ಅಗತ್ಯ ಭದ್ರತೆ ಒದಗಿಸುತ್ತಿದ್ದಾರೆ. ಪ್ರಸ್ತುತ, ಹೋಟೆಲ್ ಟ್ರೈಡೆಂಟ್, ವಾಂಖೆಡೆ ಸ್ಟೇಡಿಯಂ, ಹೋಟೆಲ್ ಟ್ರೈಡೆಂಟ್‌ನಿಂದ ವಾಂಖೆಡೆ ಸ್ಟೇಡಿಯಂವರೆಗಿನ ಮಾರ್ಗಕ್ಕೆ ಸಂಬಂಧಿಸಿದಂತೆ ಯಾವುದೇ ಸಂಸ್ಥೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಗುಪ್ತಚರ ಇಲಾಖೆ ಸಹ ಐಪಿಎಲ್​ಗೆ ಭಯೋತ್ಪಾದಕ ಕೃತ್ಯಗಳ ಅಪಾಯವಿದೆ ಎಂಬ ಮಾಹಿತಿ ನೀಡಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

    ಆಟಗಾರರ ಆಗಮನ
    ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಶುರುವಾಗಲು ಇನ್ನೇನು ಎರಡೇ ದಿನ ಬಾಕಿಯಿದೆ. ಆದರೆ ಈ ಹಂತದಲ್ಲಿ ವಿಶ್ವವೇ ತಿರುಗಿ ನೋಡುವ ಕ್ರಿಕೆಟ್ ಸರಣಿಗೆ ಆತಂಕವೊಂದು ಎದುರಾಗಿದೆ.  ಅಲ್ಲದೇ ವಾಂಖೆಡೆ ಸ್ಟೇಡಿಯಂ, ಟ್ರೈಡೆಂಟ್ ಹೋಟೆಲ್ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಯೋಜಿಸಿದ್ದಾರೆ ಎಂದು ಸಹ ಮೂಲಗಳು ತಿಳಿಸಿದ್ದವು. ಪಂದ್ಯಾವಳಿಗಾಗಿ ಎಲ್ಲಾ ತಂಡದ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಮುಂಬೈಗೆ ಆಗಮಿಸಿದ್ದಾರೆ.

    ದೆಹಲಿಯಲ್ಲೂ ಉಗ್ರ  ದಾಳಿ ಎಚ್ಚರಿಕೆ
    ದೆಹಲಿಯಲ್ಲೂ ಸಂಭವನೀಯ ಭಯೋತ್ಪಾದಕ ದಾಳಿಗಳ ಮಾಹಿತಿ ಉತ್ತರ ಪ್ರದೇಶ ಪೊಲೀಸರಿಗೆ ಲಭಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಭದ್ರತೆಯ ಎಚ್ಚರಿಕೆಯನ್ನು ನೀಡಲಾಗಿದೆ.

    ಇದನ್ನೂ ಓದಿ: IPL ಸೃಷ್ಟಿಕರ್ತ ಮೋದಿಗೆ IPLನಿಂದ ನಿಷೇಧ ಹೇರಿದ್ದೇಕೆ? ಇಲ್ಲಿದೆ ಸಂಪೂರ್ಣ ಕಥೆ

    ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಅಧಿಕಾರಿಯ ಪ್ರಕಾರ, ಉತ್ತರ ಪ್ರದೇಶ ಪೊಲೀಸರಿಗೆ ಉಗ್ರ ದಾಳಿಯ ಕುರಿತು ಅನಾಮಧೇಯ ಮೂಲದಿಂದ ಇಮೇಲ್ ಬಂದಿದೆ. ಈ ಇಮೇಲ್ ಅನ್ನು ಭಯೋತ್ಪಾದಕ ಸಂಘಟನೆ ತೆಹ್ರಿಕ್-ಎ-ತಾಲಿಬಾನ್ (ಭಾರತ ಸೆಲ್) ಕಳುಹಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಆಟಗಾರರಿಗೆ ಬೆದರಿಕೆ, ಭದ್ರತೆ ಬಿಗಿ
    ಮಧ್ಯಾಹ್ನ ಹೊತ್ತಿಗೆ ಐಪಿಎಲ್ ಸರಣಿಗೆ ಭಯೋತ್ಪಾದಕರ ಬೆದರಿಕೆ ಕುರಿತ ಸುದ್ದಿ ಬಹಿರಂಗವಾಗುತ್ತಿದ್ದಂತೆ ಎಲ್ಲಾ ಕ್ರೀಡಾಂಗಣಗಳು ಮತ್ತು ಆಟಗಾರರು ತಂಗಿರುವ ಹೋಟೆಲ್‌ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪಂದ್ಯದ ಅಧಿಕಾರಿಗಳು, ಅಂಪೈರ್‌ಗಳು ಮತ್ತು ಇತರ ಸಿಬ್ಬಂದಿಗೆ ಭದ್ರತೆ ಒದಗಿಸಲಾಗುವುದು ಎಂದು ಈಗಾಗಲೇ ಆದೇಶ ನೀಡಲಾಗಿದೆ.

    ಇದನ್ನೂ ಓದಿ: ನಮ್ಮ RCB ತಂಡದ ಮಾಲೀಕರು ಯಾರು? ನಿಮಗೆ ಗೊತ್ತಿಲ್ಲದ ಮಾಹಿತಿ ಇದು!

    ಜೊತೆಗೆ ಪಂದ್ಯ ನಡೆಯುವಾಗ ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಹೋಗುವ ಮಾರ್ಗದಲ್ಲಿ ವಾಹನ ನಿಲುಗಡೆಯನ್ನೂ ನಿಷೇಧಿಸಲಾಗಿದೆ. ಜತೆಗೆ ಯಾವುದೇ ಪರಿಸ್ಥಿತಿ ಎದುರಿಸಲು ಕ್ಷಿಪ್ರ ಕಾರ್ಯಾಚರಣೆ ಪಡೆ, ಬಾಂಬ್ ಸ್ಕ್ವಾಡ್ ಹಾಗೂ ಮುಂಬೈ ಪೊಲೀಸರ ವಿಶೇಷ ತಂಡವನ್ನು ನಿಯೋಜಿಸುವಂತೆ ಆದೇಶಿಸಲಾಗಿದೆ.
    Published by:guruganesh bhat
    First published: