IPL 2022, MI vs KKR: ಜಸ್ಪ್ರೀತ್ ಬೂಮ್ರಾ ದಾಳಿಗೆ 5 ಬಲಿ! ಐಪಿಎಲ್​ನಲ್ಲಿ ಬೌಲರ್​ಗಳ ಪ್ರತಾಪ!

Jasprit Bumrah: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ (KKR) ಪಡೆಯನ್ನು ಪತರಗುಟ್ಟುವಂತೆ ಮಾಡಿದ ಜಸ್ಪ್ರೀತ್ ಬೂಮ್ರಾ ಕೆಕೆಆರ್​ ಬ್ಯಾಟರ್​ಗಳಿಗೆ ಪೆವಿಲಿಯನ್​ನಲ್ಲಿ ವಿಶ್ರಾಂತಿ ನೀಡಿದರು.

ಬೂಮ್ರಾ

ಬೂಮ್ರಾ

 • Share this:
  ಐಪಿಎಲ್​ ಬ್ಯಾಟರ್​ಗಳ ಆಟ ಅಂತಾರೆ, ಸಿಕ್ಸರ್, ಫೋರ್​ಗಳಿಂದ ಐಪಿಎಲ್ ವೀಕ್ಷಕರು ಹುಚ್ಚೆದ್ದು ಕುಣಿಯುತ್ತಾರೆ. ಆದರೆ ಐಪಿಎಲ್​ ಅನ್ನು (IPL 2022) ಬೌಲರ್​ಗಳೂ ವಶಪಡಿಸಿಕೊಳ್ಳಬಹುದು  ಅನ್ನೋದಕ್ಕೆ ಉದಾಹರಣೆ ಇಂದಿನ ಜಸ್ಪ್ರೀತ್ ಬೂಮ್ರಾ ಬೌಲಿಂಗ್! ಹೌದು, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲಿ (IPL 2022, MI vs KKR) ಮುಂಬೈ ಪರ ಪರ ಜಸ್ಪ್ರೀತ್ ಬೂಮ್ರಾ (Jasprit Bumrah) ಭರ್ಜರಿ ಬರೋಬ್ಬರಿ 5 ವಿಕೆಟ್ ಕಬಳಿಸಿ ಆಟದ ಕೇಂದ್ರಬಿಂದುವಾದರು. ಈಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ (KKR) ಪಡೆಯನ್ನು ಪತರಗುಟ್ಟುವಂತೆ ಮಾಡಿದ ಜಸ್ಪ್ರೀತ್ ಬೂಮ್ರಾ ಕೆಕೆಆರ್​ ಬ್ಯಾಟರ್​ಗಳಿಗೆ ಪೆವಿಲಿಯನ್​ನಲ್ಲಿ ವಿಶ್ರಾಂತಿ ನೀಡಿದರು.

  ಸೋಮವಾರ ನವಿ ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಋತುವಿನ 56 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 165 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿದೆ.

  ಯಾವೆಲ್ಲ ವಿಕೆಟ್​ಗಳು?
  ತಮ್ಮ ನಾಲ್ಕು ಓವರ್​ಗಳಲ್ಲಿ ಜಸ್ಪ್ರೀತ್ ಬೂಮ್ರಾ ಕೇವಲ 10 ರನ್​ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ.  ಐದು ವಿಕೆಟ್​ಗಳನ್ನು ಕಿತ್ತಿದ್ದಾರೆ. ಸುನೀಲ್ ನರೈನ್, ಪ್ಯಾಟ್ ಕಮಿನ್ಸ್, ಶೆಲ್ಡನ್ ಜಾಕ್ಸನ್ ನಿತೀಶ್ ರಾಣಾ, ಆಂಡ್ರೆ ರಸೆಲ್ ಅವರ ವಿಕೆಟ್​ಗಳನ್ನು ಜಸ್ಪ್ರಿತ್ ಬೂಮ್ರಾ ಕಿತ್ತಿದ್ದಾರೆ.

  ಎಂಐ ಪರ ಜಸ್ಪ್ರೀತ್ ಬುಮ್ರಾ ಐದು ಮತ್ತು ಕುಮಾರ್ ಕಾರ್ತಿಕೇಯ ಎರಡು ವಿಕೆಟ್ ಪಡೆದುಕೊಂಡಿದ್ದಾರೆ. ಟಿಮ್ ಸೌಥಿ ಮತ್ತು ರಿಂಕು ಸಿಂಗ್ ಕೆಕೆಆರ್ ಪರ ಕೊನೆಯ ಜೊತೆಯಾಟ ಆಡಿ ಕೋಲ್ಕತ್ತಾದ ಬ್ಯಾಟಿಂಗ್ ಮುಗಿಸಿದ್ದಾರೆ.

  ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ
  ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

  ಇದನ್ನೂ ಓದಿ: MS Dhoni: ಬ್ಯಾಟಿಂಗ್​ಗೂ ಮುನ್ನ ಧೋನಿ ಬ್ಯಾಟ್ ಕಚ್ಚಿದ್ದು ಏಕೆ? ಇದರ ಹಿಂದಿನ ರಹಸ್ಯ ಬಿಚ್ಚಿಟ್ಟ ಅಮಿತ್ ಮಿಶ್ರಾ

  ವಿವಿಧ ಬದಲಾವಣೆ
  ಎಡ ಮುಂಗೈ ಸ್ನಾಯುವಿನ ಗಾಯದಿಂದಾಗಿ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿರುವ ಗಾಯಗೊಂಡ ಸೂರ್ಯಕುಮಾರ್ ಯಾದವ್‌ಗಾಗಿ ರಮಣದೀಪ್ ಸಿಂಗ್ ಬರುವುದರೊಂದಿಗೆ MI ಒಂದು ಬದಲಾವಣೆಯನ್ನು ಮಾಡಿಕೊಂಡಿತ್ತು.

  ಇದನ್ನೂ ಓದಿ: Dinesh Karthik: ಐಪಿಎಲ್​ನಲ್ಲಿ ಧೂಳೆಬ್ಬಿಸುತ್ತಿರುವ RCB ಪ್ಲೇಯರ್​, ಟೀಂ ಇಂಡಿಯಾಗೆ ಕಮ್​ಬ್ಯಾಕ್​ ಮಾಡ್ತಾರಾ ಕಾರ್ತಿಕ್?

  KKR ತಮ್ಮ ಆಡುವ XI ಗೆ ಐದು ಬದಲಾವಣೆಗಳನ್ನು ಮಾಡಿಕೊಂಡಿದೆ. ಅಜಿಂಕ್ಯ ರಹಾನೆ, ಪ್ಯಾಟ್ ಕಮಿನ್ಸ್, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ ಮತ್ತು ಶೆಲ್ಡನ್ ಜಾಕ್ಸನ್ ಅವರು ಇಂದು ಕಣಕ್ಕಿಳಿದಿದ್ದಾರೆ.

  ಪಂದ್ಯದ ಫಲಿತಾಂಶ ಹೀಗಿದೆ
  ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ 165 ರನ್​ಗಳ ಸವಾಲನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ (IPL 2022, MI vs KKR Highlights) 17.3 ಓವರ್​ಗಳಲ್ಲಿ 113 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಮತ್ತೊಂದು ಸೋಲು ಅನುಭವಿಸಿತು. ನಿಧಾನವಾಗಿಯೇ ಬ್ಯಾಟಿಂಗ್ ಆರಂಭಿಸಿ ಮುಂಬೈ ಇಂಡಿಯನ್ಸ್ (Mumbai Indians) ಮುಂದಿನ ಹಂತದಲ್ಲಿಯೂ ಬ್ಯಾಟಿಂಗ್​ಗೆ ಚುರುಕು ನೀಡಲೇ ಇಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ (165/9) ಮುಂಬೈ ಇಂಡಿಯನ್ಸ್ (17.3 ಓವರ್‌ಗಳಲ್ಲಿ 113 ಆಲೌಟ್) ಅನ್ನು 52 ರನ್‌ಗಳಿಂದ ಸೋಲಿಸಿ ಪ್ಲೇ-ಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ಇಂದಿನ ಸೋಲಿನ ಮೂಲಕ ಮುಂಬೈ ಇಂಡಿಯನ್ಸ್ ಮತ್ತೆ ನಿರಾಸೆ ಅನುಭವಿಸಿದೆ. 
  Published by:guruganesh bhat
  First published: