IPL 2022, MI vs KKR Highlights: ಮುಂಬೈಗೆ ಮತ್ತೆ ಸೋಲು, ಕೋಲ್ಕತ್ತಾ ಭರ್ಜರಿ ಜಯಭೇರಿ

ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 43 ಬೌಲ್​ಗೆ 51 ರನ್​ಗಳನ್ನು ಪೇರಿಸಿ ಒಂದು ಹಂತದಲ್ಲಿ ಮುಂಬೈಗೆ ಭರವಸೆ ತುಂಬಿದ್ದರು. ಆದರೂ ಸೋತು ಮುಂಬೈ ಇಂಡಿಯನ್ಸ್ ಮತ್ತೆ ನಿರಾಸೆ ಅನುಭವಿಸಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ 165 ರನ್​ಗಳ ಸವಾಲನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ (IPL 2022, MI vs KKR Highlights) 17.3 ಓವರ್​ಗಳಲ್ಲಿ 113 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಮತ್ತೊಂದು ಸೋಲು ಅನುಭವಿಸಿತು. ನಿಧಾನವಾಗಿಯೇ ಬ್ಯಾಟಿಂಗ್ ಆರಂಭಿಸಿ ಮುಂಬೈ ಇಂಡಿಯನ್ಸ್ (Mumbai Indians) ಮುಂದಿನ ಹಂತದಲ್ಲಿಯೂ ಬ್ಯಾಟಿಂಗ್​ಗೆ ಚುರುಕು ನೀಡಲೇ ಇಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ (165/9) ಮುಂಬೈ ಇಂಡಿಯನ್ಸ್ (17.3 ಓವರ್‌ಗಳಲ್ಲಿ 113 ಆಲೌಟ್) ಅನ್ನು 52 ರನ್‌ಗಳಿಂದ ಸೋಲಿಸಿ ಪ್ಲೇ-ಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ಇಂದಿನ ಸೋಲಿನ ಮೂಲಕ ಮುಂಬೈ ಇಂಡಿಯನ್ಸ್ ಮತ್ತೆ ನಿರಾಸೆ ಅನುಭವಿಸಿದೆ. 

    ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ 43 ಬೌಲ್​ಗೆ 51 ರನ್​ಗಳನ್ನು ಪೇರಿಸಿ ಒಂದು ಹಂತದಲಲ್ಲಿ ಮುಂಬೈಗೆ ಭರವಸೆ ತುಂಬಿದ್ದರು. ಆದರೆ ಇಶಾನ್ ಕಿಶನ್ ಪ್ರಯತ್ನಕ್ಕೆ ತಕ್ಕ ಜೊತೆಯಾಟ ಸಿಗಲಿಲ್ಲ. ಕೋಲ್ಕತ್ತಾ ಪರ ಕಮ್ಮಿನ್ಸ್ 22ರನ್ ನೀಡಿ 4 ಓವರ್​ಗಳಲ್ಲಿ 3 ವಿಕೆಟ್ ಕಿತ್ತರೆ ಆಂಡ್ರೆ ರಸೆಲ್ 2 ವಿಕೆಟ್, ಟಿಮ್ ಸೌಥಿ 1 ವಿಕೆಟ್ ಕಬಳಿಸಿದರು.

    ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ
    ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು.

    ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲಿ (IPL 2022, MI vs KKR) ಮುಂಬೈ ಪರ ಪರ ಜಸ್ಪ್ರೀತ್ ಬೂಮ್ರಾ (Jasprit Bumrah) ಭರ್ಜರಿ ಬರೋಬ್ಬರಿ 5 ವಿಕೆಟ್ ಕಬಳಿಸಿ ಆಟದ ಕೇಂದ್ರಬಿಂದುವಾದರು. ಈಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ (KKR) ಪಡೆಯನ್ನು ಪತರಗುಟ್ಟುವಂತೆ ಮಾಡಿದ ಜಸ್ಪ್ರೀತ್ ಬೂಮ್ರಾ ಕೆಕೆಆರ್​ ಬ್ಯಾಟರ್​ಗಳಿಗೆ ಪೆವಿಲಿಯನ್​ನಲ್ಲಿ ವಿಶ್ರಾಂತಿ ನೀಡಿದರು. ಆದರೆ ಇದಕ್ಕೆ ಉತ್ತರವಾಗಿ ಕೋಲ್ಕತ್ತಾ ಬೌಲರ್​ಗಳು ಸಹ ಅಷ್ಟೇ ಖಡಕ್ ಆಗಿ ಬೌಲ್ ಮಾಡಿ ಗೆಲುವನ್ನು ತಂದುಕೊಟ್ಟರು.

    ಯಾವೆಲ್ಲ ವಿಕೆಟ್​ಗಳು?
    ತಮ್ಮ ನಾಲ್ಕು ಓವರ್​ಗಳಲ್ಲಿ ಜಸ್ಪ್ರೀತ್ ಬೂಮ್ರಾ ಕೇವಲ 10 ರನ್​ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ.  ಐದು ವಿಕೆಟ್​ಗಳನ್ನು ಕಿತ್ತಿದ್ದಾರೆ. ಸುನೀಲ್ ನರೈನ್, ಪ್ಯಾಟ್ ಕಮಿನ್ಸ್, ಶೆಲ್ಡನ್ ಜಾಕ್ಸನ್ ನಿತೀಶ್ ರಾಣಾ, ಆಂಡ್ರೆ ರಸೆಲ್ ಅವರ ವಿಕೆಟ್​ಗಳನ್ನು ಜಸ್ಪ್ರಿತ್ ಬೂಮ್ರಾ ಕಿತ್ತಿದ್ದಾರೆ.

    ಎಂಐ ಪರ ಜಸ್ಪ್ರೀತ್ ಬುಮ್ರಾ ಐದು ಮತ್ತು ಕುಮಾರ್ ಕಾರ್ತಿಕೇಯ ಎರಡು ವಿಕೆಟ್ ಪಡೆದುಕೊಂಡಿದ್ದಾರೆ. ಟಿಮ್ ಸೌಥಿ ಮತ್ತು ರಿಂಕು ಸಿಂಗ್ ಕೆಕೆಆರ್ ಪರ ಕೊನೆಯ ಜೊತೆಯಾಟ ಆಡಿ ಕೋಲ್ಕತ್ತಾದ ಬ್ಯಾಟಿಂಗ್ ಮುಗಿಸಿದ್ದರು.

    ಇದನ್ನೂ ಓದಿ: MS Dhoni: ಬ್ಯಾಟಿಂಗ್​ಗೂ ಮುನ್ನ ಧೋನಿ ಬ್ಯಾಟ್ ಕಚ್ಚಿದ್ದು ಏಕೆ? ಇದರ ಹಿಂದಿನ ರಹಸ್ಯ ಬಿಚ್ಚಿಟ್ಟ ಅಮಿತ್ ಮಿಶ್ರಾ

    ಇದೇ ರೀತಿ ಕೋಲ್ಕತ್ತಾ ಬೌಲರ್​ಗಳು ಸಹ ಮುಂಬೈ ಇಂಡಿಯನ್ಸ್ ಬ್ಯಾಟರ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಿ ಗೆಲುವು ತಂದುಕೊಟ್ಟರು. ಕೋಲ್ಕತ್ತಾ ಪರ ಕಮ್ಮಿನ್ಸ್ 22ರನ್ ನೀಡಿ 4 ಓವರ್​ಗಳಲ್ಲಿ 3 ವಿಕೆಟ್ ಕಿತ್ತರೆ ಆಂಡ್ರೆ ರಸೆಲ್ 2 ವಿಕೆಟ್, ಟಿಮ್ ಸೌಥಿ 1 ವಿಕೆಟ್ ಕಿತ್ತು ಗೆಲುವಿಗೆ ಕೊಡುಗೆ ನೀಡಿದರು.

    ಇದನ್ನೂ ಓದಿ:Dinesh Karthik: ಐಪಿಎಲ್​ನಲ್ಲಿ ಧೂಳೆಬ್ಬಿಸುತ್ತಿರುವ RCB ಪ್ಲೇಯರ್​, ಟೀಂ ಇಂಡಿಯಾಗೆ ಕಮ್​ಬ್ಯಾಕ್​ ಮಾಡ್ತಾರಾ ಕಾರ್ತಿಕ್?

    MI ಇದೀಗ ಈ ಋತುವಿನಲ್ಲಿ ಒಂಬತ್ತನೇ ಪಂದ್ಯವನ್ನು ಕಳೆದುಕೊಂಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಐಪಿಎಲ್ 2022ರಲ್ಲಿ ಬಹುತೇಕ ಅಂತ್ಯ ಕಂಡಿದೆ. ಇಶಾನ್ ಕಿಶನ್ ಅವರಿಗೆ 51 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದ್ದರು. ಆದರೆ MI ಚೇಸ್ ಸ್ಫೋಟಗೊಂಡಂತೆ ಪ್ಯಾಟ್ ಕಮ್ಮಿನ್ಸ್ ಒಂದು ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ KKR ಬಲವಾಗಿ ಪುಟಿದೇಳಿತು.
    Published by:guruganesh bhat
    First published: