IPL 2022 Mystery Girl: ಮುಂಬೈ vs ಚೆನ್ನೈ ಮ್ಯಾಚಲ್ಲಿ ಹೊಸ ಮಿಸ್ಟರಿ ಗರ್ಲ್! ಯಾರು ಈ ಚೆಲುವೆ?

'ಮಿಸ್ಟರಿ ಗರ್ಲ್' ತೆರೆ ಮೇಲೆ ಕಾಣಿಸಿಕೊಂಡ ತಕ್ಷಣ ಟ್ವಿಟರ್‌ನಲ್ಲಿ ಅಭಿಮಾನಿಗಳು ಸುಂದರ ಮುಖದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ! ಆದರೆ ಈ ಸುಂದರ ಯುವತಿ ಯಾರೆಂಬುದು ಎಲ್ಲೂ ಇನ್ನೂ ಬಹಿರಂಗಗೊಂಡಿಲ್ಲ.

ಯಾರೀ ಮಿಸ್ಟರಿ ಗರ್ಲ್?

ಯಾರೀ ಮಿಸ್ಟರಿ ಗರ್ಲ್?

  • Share this:
    ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್  (MI vs CSK) ವಿರುದ್ಧದ ಗುರುವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಬಹಳ ಕುತೂಹಲಕರವಾಗಿತ್ತು. ಹಲವು ರೋಚಕ, ಅಷ್ಟೇ ವಿಚಿತ್ರ ಕ್ಷಣಗಳಿಗೂ ಸಾಕ್ಷಿಯಾಗಿತ್ತು. ಈ ಎಲ್ಲ ವಿಷಯಗಳ ಹೊರತಾಗಿಯೂ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯದಲ್ಲಿ ಕಾಣಿಸಿಕೊಂಡ'ಮಿಸ್ಟರಿ ಗರ್ಲ್' (Mystery Girl) ಓರ್ವರು ಫುಲ್ ವೈರಲ್ ಆಗುತ್ತಿದ್ದಾರೆ.  ಈ ಋತುವಿನಲ್ಲಿ ಈಗಾಗಲೇ ಹಲವು ಬಾರಿ, ನಿಗೂಢ ಹುಡುಗಿಯರು ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ. ಈ ಪಟ್ಟಿಗೆ ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಮಿಸ್ಟರಿ ಗರ್ಲ್ (MI vs CSK Match Mystery Girl) ಹೊಸ ಸೇರ್ಪಡೆಯಾಗಿದ್ದಾರೆ.

    'ಮಿಸ್ಟರಿ ಗರ್ಲ್' ತೆರೆ ಮೇಲೆ ಕಾಣಿಸಿಕೊಂಡ ತಕ್ಷಣ ಟ್ವಿಟರ್‌ನಲ್ಲಿ ಅಭಿಮಾನಿಗಳು ಸುಂದರ ಮುಖದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ! ಆದರೆ ಈ ಸುಂದರ ಯುವತಿ ಯಾರೆಂಬುದು ಎಲ್ಲೂ ಇನ್ನೂ ಬಹಿರಂಗಗೊಂಡಿಲ್ಲ.



    ಮುಂಬೈ ಇಂಡಿಯನ್ಸ್ ಸಿಎಸ್‌ಕೆ ಇನ್ನಿಂಗ್ಸ್‌ನಲ್ಲಿ ಪವರ್‌ಪ್ಲೇನಲ್ಲಿ ಐದು ವಿಕೆಟ್‌ಗಳನ್ನು ಪಡೆದು ಒಟ್ಟು 97 ರನ್‌ಗಳಿಗೆ ಸೀಮಿತಗೊಳಿಸಿತು. ಇದು ಐಪಿಎಲ್ ಇತಿಹಾಸದಲ್ಲಿ ಚೆನ್ನೈ ತಂಡದ ಎರಡನೇ ಅತಿ ಕಡಿಮೆ ಮೊತ್ತವಾಗಿತ್ತು. ಮುಂಬೈ ಸಹ ಅತ್ಯಂತ ಆರಾಮದಲ್ಲಿ ಈ ಮೊತ್ತವನ್ನು ಗಳಿಸಿ ಗೆಲುವು ಸಾಧಿಸಿತಾದರೂ ಐದು ವಿಕೆಟ್​ಗಳನ್ನು ಸಹ ಕಳೆದುಕೊಂಡಿತ್ತು.

    ಪಂದ್ಯ ಹೇಗಿತ್ತು?
    ಭಯಂಕರ ಕುತೂಹಲ ಹುಟ್ಟಿಸಿದ್ದಐಪಿಎಲ್ 2022 ರ (IPL 2022) ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ(MI vs CSK) ಧೋನಿ ನೇತೃತ್ವದ ಬಳಗ ಸೋಲಿಗೆ ಶರಣಾಗಿದೆ. ಮುಂಬೈ ಇಂಡಿಯನ್ಸ್ ಸುಲಿದ ಬಾಳೆಹಣ್ಣು ತಿಂದಷ್ಟೇ ಸಲೀಸಾಗಿ ಗೆಲುವನ್ನು ತನ್ನದಾಗಿಸಿಕೊಂಡಿದೆ.

    ಚೆನ್ನೈ  ಕಳಪೆ ಬ್ಯಾಟಿಂಗ್
    ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್​ಗಳು ಕೇವಲ 97 ರನ್​ಗಳಿಗೆ ಆಲ್ ಔಟ್ ಆಗಿ ನೂರು ರನ್​ಗಳನ್ನೂ ಗಳಿಸದೇ ಎರಡನೇ ಇನ್ನಿಂಗ್ಸ್​ಗೂ ಮುನ್ನವೇ ಬಹುತೇಕ ಸೋಲೊಪ್ಪಿಕೊಂಡಿತು. ಮುಂಬೈ ಇಂಡಿಯನ್ಸ್ ಇನ್ನೂ 31 ಬೌಲ್​ಗಳು ಇರುವಾಗಲೇ 103 ರನ್​ ಗಳಿಸಿ 5 ವಿಕೆಟ್​ಗಳ ಅಂತರದಿಂದ ಅತ್ಯಂತ ಸಲೀಸಾಗಿ ಗೆಲುವಿನ (MI Won Against CSK) ನಗೆ ಬೀರಿತು.

    ಇದನ್ನೂ ಓದಿ: Rahul Dravid: ರಾಹುಲ್ ದ್ರಾವಿಡ್ ಸರಳತೆಗೆ ಇನ್ನೊಂದು ಸಾಕ್ಷಿ! ಪಕ್ಕದಲ್ಲಿ ಕೂತೋರಿಗೆ ಇವರೇ ಅವರಂತ ಗೊತ್ತೇ ಆಗಿಲ್ಲ!

    ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದುರಾದೃಷ್ಟವು ಸಹ ಎದುರಾಯಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಪವರ್ ಕಟ್​ನಿಂದ ಡಿಆರ್​ಎಸ್ (Power Cut Isse DRS) ತೆಗೆದುಕೊಳ್ಳಲೂ ಆಗದೇ ತನ್ನ ಪ್ರಮುಖ ಎರಡು ಬ್ಯಾಟರ್​ಗಳು ಪೆವಿಲಿಯನ್​ಗೆ ಮರಳುವುದು ಕಂಡು ಚೆನ್ನೈ ಅಭಿಮಾನಿಗಳು ಬಲು ಬೇಸರಗೊಂಡರು. ಚೆನ್ನೈ ಪರ ನಾಯಕ ಧೋನಿ 33 ಬೌಲ್​ಗಳಲ್ಲಿ 36 ರನ್ ಗಳಿಸಿದ ಏಕಾಂಗಿ ಹೋರಾಟವೊಂದೇ ಸ್ಪರ್ಧೆ ನೀಡಿತು. ಮುಂಬೈ ಬೌಲರ್​ಗಳಾದ ಡೇನಿಯಲ್ ಸ್ಯಾಮ್ಸ್ 3 ವಿಕೆಟ್, ಕುಮಾರ್ ಕಾರ್ತಿಕೇಯ 2 ವಿಕೆಟ್ ಕಿತ್ತು ಮಿಂಚಿದರು.

    ಡಿಆರ್​ಎಸ್ ಎಂಬ ದುರಾದೃಷ್ಟ
    ಚೆನ್ನೈ ತಂಡದ ಆರಂಭಿಕ ಆಟಗಾರ ಡ್ವೇನ್ ಕಾನ್ವೇ ಮೊದಲ ಓವರ್‌ನಲ್ಲಿ ಎಲ್‌ಬಿಡಬ್ಲ್ಯೂ ಆದರು. ಅಂಪೈರ್ ಔಟ್ ಕೊಟ್ಟರು, ಡಿಆರ್​ಎಸ್ ತೆಗೆದುಕೊಳ್ಳಲು ಬಯಸಿದರೂ ಸ್ಟೇಡಿಯಂನಲ್ಲಿ ಕರೆಂಟ್ ಇರಲಿಲ್ಲ! ವಿದ್ಯುತ್ ಇಲ್ಲದಿರುವುದು ಡಿಆರ್‌ಎಸ್ (DRS) ಪಡೆಯಲು ಕಾನ್ವೆ ಅವರಿಗೆ ಅವಕಾಶ ಸಿಗಲೇ ಇಲ್ಲ! ಇದರೊಂದಿಗೆ ಹತಾಶೆಯಿಂದ ಡ್ವೇನ್ ಕಾನ್ವೇ ಪೆವಿಲಿಯನ್​ನತ್ತ ಹೊರಟರು.

    ಇದನ್ನೂ ಓದಿ: IPL 2022, CSK vs MI Highlights: ಸುಲಿದ ಬಾಳೆಹಣ್ಣು ತಿಂದಷ್ಟೇ ಸುಲಭಕ್ಕೆ ಚೆನ್ನೈ ವಿರುದ್ಧ ಗೆದ್ದ ಮುಂಬೈ!

    ರಾಬಿನ್ ಉತ್ತಪ್ಪ ಕ್ಯಾಚ್ ನೀಡಿ ಜಸ್​ಪ್ರೀತ್ ಬೂಮ್ರಾ ಎಲ್​ಬಿಡಬ್ಲ್ಯೂ ಆದರು. ಅವರಿಗೂ ಡಿಆರ್​ಎಸ್​ ತೆಗೆದುಕೊಳ್ಳಲು ಆಗಲಿಲ್ಲ. ಹೀಗೆ ಇಬ್ಬರು ಆಟಗಾರರು ಡಿಆರ್​ಎಸ್ ತೆಗೆದುಕೊಳ್ಳಲು ಆಗದೇ ಪೆವಿಲಿಯನ್​ಗೆ ನಿರ್ಗಮಿಸುವಂತಾಯಿತು. ಈ ಘಟನೆ ನೋಡಿದ ನೆಟ್ಟಿಗರು ಫುಲ್ ಟ್ರೋಲ್ ಮಾಡುತ್ತಿದ್ದಾರೆ.

     
    Published by:guruganesh bhat
    First published: