IPL 2022, CSK vs MI Highlights: ಸುಲಿದ ಬಾಳೆಹಣ್ಣು ತಿಂದಷ್ಟೇ ಸುಲಭಕ್ಕೆ ಚೆನ್ನೈ ವಿರುದ್ಧ ಗೆದ್ದ ಮುಂಬೈ!
ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ಗಳು ಕೇವಲ 97 ರನ್ಗಳಿಗೆ ಆಲ್ ಔಟ್ ಆಗಿ ನೂರು ರನ್ಗಳನ್ನೂ ಗಳಿಸದೇ ಎರಡನೇ ಇನ್ನಿಂಗ್ಸ್ಗೂ ಮುನ್ನವೇ ಬಹುತೇಕ ಚೆನ್ನೈ ಸೋಲೊಪ್ಪಿಕೊಂಡಿತು.
ಭಯಂಕರ ಕುತೂಹಲ ಹುಟ್ಟಿಸಿದ್ದಐಪಿಎಲ್ 2022 ರ (IPL 2022) ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ(MI vs CSK) ಧೋನಿ ನೇತೃತ್ವದ ಬಳಗ ಸೋಲಿಗೆ ಶರಣಾಗಿದೆ. ಮುಂಬೈ ಇಂಡಿಯನ್ಸ್ ಸುಲಿದ ಬಾಳೆಹಣ್ಣು ತಿಂದಷ್ಟೇ ಸಲೀಸಾಗಿ ಗೆಲುವನ್ನು ತನ್ನದಾಗಿಸಿಕೊಂಡಿದೆ. ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ಗಳು ಕೇವಲ 97 ರನ್ಗಳಿಗೆ ಆಲ್ ಔಟ್ ಆಗಿ ನೂರು ರನ್ಗಳನ್ನೂ ಗಳಿಸದೇ ಎರಡನೇ ಇನ್ನಿಂಗ್ಸ್ಗೂ ಮುನ್ನವೇ ಬಹುತೇಕ ಸೋಲೊಪ್ಪಿಕೊಂಡಿತು. ಮುಂಬೈ ಇಂಡಿಯನ್ಸ್ ಇನ್ನೂ 31 ಬೌಲ್ಗಳು ಇರುವಾಗಲೇ 103 ರನ್ ಗಳಿಸಿ 5 ವಿಕೆಟ್ಗಳ ಅಂತರದಿಂದ ಅತ್ಯಂತ ಸಲೀಸಾಗಿ ಗೆಲುವಿನ (MI Won Against CSK) ನಗೆ ಬೀರಿತು.
ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದುರಾದೃಷ್ಟವು ಸಹ ಎದುರಾಯಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಪವರ್ ಕಟ್ನಿಂದ ಡಿಆರ್ಎಸ್ (Power Cut Isse DRS) ತೆಗೆದುಕೊಳ್ಳಲೂ ಆಗದೇ ತನ್ನ ಪ್ರಮುಖ ಎರಡು ಬ್ಯಾಟರ್ಗಳು ಪೆವಿಲಿಯನ್ಗೆ ಮರಳುವುದು ಕಂಡು ಚೆನ್ನೈ ಅಭಿಮಾನಿಗಳು ಬಲು ಬೇಸರಗೊಂಡರು. ಚೆನ್ನೈ ಪರ ನಾಯಕ ಧೋನಿ 33 ಬೌಲ್ಗಳಲ್ಲಿ 36 ರನ್ ಗಳಿಸಿದ ಏಕಾಂಗಿ ಹೋರಾಟವೊಂದೇ ಸ್ಪರ್ಧೆ ನೀಡಿತು. ಮುಂಬೈ ಬೌಲರ್ಗಳಾದ ಡೇನಿಯಲ್ ಸ್ಯಾಮ್ಸ್ 3 ವಿಕೆಟ್, ಕುಮಾರ್ ಕಾರ್ತಿಕೇಯ 2 ವಿಕೆಟ್ ಕಿತ್ತು ಮಿಂಚಿದರು.
ಡಿಆರ್ಎಸ್ ಎಂಬ ದುರಾದೃಷ್ಟ ಚೆನ್ನೈ ತಂಡದ ಆರಂಭಿಕ ಆಟಗಾರ ಡ್ವೇನ್ ಕಾನ್ವೇ ಮೊದಲ ಓವರ್ನಲ್ಲಿ ಎಲ್ಬಿಡಬ್ಲ್ಯೂ ಆದರು. ಅಂಪೈರ್ ಔಟ್ ಕೊಟ್ಟರು, ಡಿಆರ್ಎಸ್ ತೆಗೆದುಕೊಳ್ಳಲು ಬಯಸಿದರೂ ಸ್ಟೇಡಿಯಂನಲ್ಲಿ ಕರೆಂಟ್ ಇರಲಿಲ್ಲ! ವಿದ್ಯುತ್ ಇಲ್ಲದಿರುವುದು ಡಿಆರ್ಎಸ್ (DRS) ಪಡೆಯಲು ಕಾನ್ವೆ ಅವರಿಗೆ ಅವಕಾಶ ಸಿಗಲೇ ಇಲ್ಲ! ಇದರೊಂದಿಗೆ ಹತಾಶೆಯಿಂದ ಡ್ವೇನ್ ಕಾನ್ವೇ ಪೆವಿಲಿಯನ್ನತ್ತ ಹೊರಟರು.
ರಾಬಿನ್ ಉತ್ತಪ್ಪ ಕ್ಯಾಚ್ ನೀಡಿ ಜಸ್ಪ್ರೀತ್ ಬೂಮ್ರಾ ಎಲ್ಬಿಡಬ್ಲ್ಯೂ ಆದರು. ಅವರಿಗೂ ಡಿಆರ್ಎಸ್ ತೆಗೆದುಕೊಳ್ಳಲು ಆಗಲಿಲ್ಲ. ಹೀಗೆ ಇಬ್ಬರು ಆಟಗಾರರು ಡಿಆರ್ಎಸ್ ತೆಗೆದುಕೊಳ್ಳಲು ಆಗದೇ ಪೆವಿಲಿಯನ್ಗೆ ನಿರ್ಗಮಿಸುವಂತಾಯಿತು. ಈ ಘಟನೆ ನೋಡಿದ ನೆಟ್ಟಿಗರು ಫುಲ್ ಟ್ರೋಲ್ ಮಾಡುತ್ತಿದ್ದಾರೆ.
— Ranjeet - Wear Mask😷 (@ranjeetsaini7) May 12, 2022
ಮುಂಬೈ ಇಂಡಿಯನ್ಸ್ ತಂಡದ ಭರ್ಜರಿ ಬೌಲಿಂಗ್ನಿಂದ ಚೆನ್ನೈ ಸೂಪರ್ ಕಿಂಗ್ಸ್ 16 ಓವರ್ಗಳಲ್ಲಿ ಕೇವಲ 97 ರನ್ಗಳಿಗೆ ಆಲ್ ಔಟ್ ಆಗಿದೆ. ಅಚ್ಚರಿಯ ಹಲವು ಕ್ಷಣಗಳಿಗೆ ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಸಾಕ್ಷಿಯಾಗಿತ್ತು.
ಚೆನ್ನೈ ಪ್ಲೇ ಆಫ್ಗೆ ಹೋಗಲ್ವಾ? ಚೆನ್ನೈ ಸೂಪರ್ ಕಿಂಗ್ಸ್ಗೆ ಈ ಪಂದ್ಯ ಅತ್ಯಂತ ನಿರ್ಣಾಯಕ ಪಂದ್ಯವಾಗಿತ್ತು. ಪ್ಲೇ ಆಫ್ ಪ್ರವೇಶಿಸಲು ಚೆನ್ನೈ ಈ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಆದರೆ ಇಂತಹ ನಿರ್ಣಾಯಕ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲೊಪ್ಪಿಕೊಂಡಂತಾಗಿದೆ. ಈಮೂಲಕ ಐಪಿಎಲ್ 2022ರಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಕನಸು ಇಲ್ಲಿಗೆ ಮುಗಿದಂತಾಗಿದೆ. ಯಾವುದೇ ರೀತಿಯಲ್ಲೂ ಹೋರಾಟವನ್ನೇ ನಡೆಸದೇ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ಪ್ಲೇ ಆಫ್ ಪ್ರವೇಶುವ ಅವಕಾಶವನ್ನು ಕಳೆದುಕೊಂಡಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ