ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ (MI vs CSK) ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲೇ ಇದುವರೆಗೂ ನಡೆದಿರದ ವಿಚಿತ್ರ ಘಟನೆಯೊಂದು ನಡೆದಿದೆ. ಐಪಿಎಲ್ 2022 ರ (IPL 2022) ಋತುವಿನಲ್ಲಿ ಚೆನ್ನೈ ಮತ್ತು ಮುಂಬೈ ನಡುವೆ ನಡೆಯುತ್ತಿರುವ ಕದನದಲ್ಲಿ ಧೋನಿಗೆ ದುರಾದೃಷ್ಟವು ಎದುರಾಗಿದೆ. ಚೆನ್ನೈ ತಂಡದ ಆರಂಭಿಕ ಆಟಗಾರ ಡ್ವೇನ್ ಕಾನ್ವೇ ಮೊದಲ ಓವರ್ನಲ್ಲಿ ಎಲ್ಬಿಡಬ್ಲ್ಯೂ ಆದರು. ಅಂಪೈರ್ ಔಟ್ ಕೊಟ್ಟರು, ಡಿಆರ್ಎಸ್ ತೆಗೆದುಕೊಳ್ಳಲು ಬಯಸಿದರೂ ಸ್ಟೇಡಿಯಂನಲ್ಲಿ ಕರೆಂಟ್ ಇರಲಿಲ್ಲ! ವಿದ್ಯುತ್ ಇಲ್ಲದಿರುವುದು (Power Cut) ಡಿಆರ್ಎಸ್ (DRS) ಪಡೆಯಲು ಕಾನ್ವೆ ಅವರಿಗೆ ಅವಕಾಶ ಸಿಗಲೇ ಇಲ್ಲ! ಇದರೊಂದಿಗೆ ಹತಾಶೆಯಿಂದ ಡ್ವೇನ್ ಕಾನ್ವೇ ಪೆವಿಲಿಯನ್ನತ್ತ ಹೊರಟರು.
ರಾಬಿನ್ ಉತ್ತಪ್ಪ ಕ್ಯಾಚ್ ನೀಡಿ ಜಸ್ಪ್ರೀತ್ ಬೂಮ್ರಾ ಎಲ್ಬಿಡಬ್ಲ್ಯೂ ಆದರು. ಅವರಿಗೂ ಡಿಆರ್ಎಸ್ ತೆಗೆದುಕೊಳ್ಳಲು ಆಗಲಿಲ್ಲ. ಹೀಗೆ ಇಬ್ಬರು ಆಟಗಾರರು ಡಿಆರ್ಎಸ್ ತೆಗೆದುಕೊಳ್ಳಲು ಆಗದೇ ಪೆವಿಲಿಯನ್ಗೆ ನಿರ್ಗಮಿಸುವಂತಾಯಿತು. ಈ ಘಟನೆ ನೋಡಿದ ನೆಟ್ಟಿಗರು ಫುಲ್ ಟ್ರೋಲ್ ಮಾಡುತ್ತಿದ್ದಾರೆ.
Wow Due To Power Cut Issue Devon Conway and Uthappa Were given Out 😶🌫😶🌫😶🌫 And Now Drs is Available After Uthappa's Wicket
What a Stadium Management? 👏👏👏👏👏
ಮುಂಬೈ ಇಂಡಿಯನ್ಸ್ ತಂಡದ ಭರ್ಜರಿ ಬೌಲಿಂಗ್ನಿಂದ ಚೆನ್ನೈ ಸೂಪರ್ ಕಿಂಗ್ಸ್ 16 ಓವರ್ಗಳಲ್ಲಿ ಕೇವಲ 97 ರನ್ಗಳಿಗೆ ಆಲ್ ಔಟ್ ಆಗಿದೆ. ಅಚ್ಚರಿಯ ಹಲವು ಕ್ಷಣಗಳಿಗೆ ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಸಾಕ್ಷಿಯಾಗಿದೆ.
ಹೆಡ್ ಟು ಹೆಡ್ ರೆಕಾರ್ಡ್ಸ್: ಉಭಯ ತಂಡಗಳು 33 ಬಾರಿ ಮುಖಾಮುಖಿಯಾಗಿವೆ. ರೋಹಿತ್ ಸೇನೆ 19 ಬಾರಿ ಗೆದ್ದಿದೆ. ಧೋನಿ ಸೇನೆ 14 ಬಾರಿ ಗೆದ್ದಿದೆ. ಈವರೆಗೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಒಟ್ಟು 33 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 14 ಬಾರಿ ಚೆನ್ನೈ ಮತ್ತು 19 ಬಾರಿ ಮುಂಬೈ ತಂಡಗಳು ಗೆದ್ದಿವೆ. ಕಳೆದ ಬಾರಿ ನಡೆದ 1 ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿತ್ತು, ಅಂಕಿಅಂಶಗಳ ಪ್ರಕಾರ ಉಭಯ ತಂಡಗಳೆರಡೂ ಬಲಿಷ್ಠವಾಗಿದೆ ಎನ್ನಬಹುದು.
ಉಭಯ ತಂಡಗಳ ಐಪಿಎಲ್ 2022ರ ಪ್ರದರ್ಶನ IPL 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ 11 ಪಂದ್ಯಗಳನ್ನು ಆಡಿದೆ. ಅವರು 4 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು 7 ರಲ್ಲಿ ಸೋತಿದ್ದಾರೆ. CSK 8 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಅದರಂತೆ ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೆ 11 ಪಂದ್ಯಗಳನ್ನು ಆಡಿದೆ, ಅವರು 2 ಪಂದ್ಯಗಳನ್ನು ಗೆದ್ದು 9 ರಲ್ಲಿ ಸೋತಿದ್ದಾರೆ. ಅವರು 4 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮೊಯಿನ್ ಅಲಿ, ಶಿವಂ ದುಬೆ, ಎಂಎಸ್ ಧೋನಿ(w/c), ಡ್ವೇನ್ ಬ್ರಾವೋ, ಮಹೇಶ್ ತೀಕ್ಷಣ, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ