IPL 2022: ಬಾಹುಬಲಿಯಂತೆ ಅಧಿಕಾರ ತ್ಯಾಗ ಮಾಡಿದ ಧೋನಿ! ಇಲ್ಲಿದೆ ಕಚಗುಳಿ ಮೀಮ್​ಗಳ ಸುರಿಮಳೆ

ಈ ವೀಡಿಯೊವು ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಅಲ್ಲದೇ ಲೈಕ್​ಗಳು ಮತ್ತು ಮರುಟ್ವೀಟ್‌ಗಳು ಸೇರಿದಂತೆ ಸರಿಸುಮಾರು 24,000 ಇಂಪ್ರೆಶನ್‌ಗಳನ್ನು ಪಡೆದುಕೊಂಡಿದೆ.

ಚೆನ್ನೈ ಹೊಸ ನಾಯಕನ ಈ ಅವತಾರ ನೋಡಿದ್ರಾ?

ಚೆನ್ನೈ ಹೊಸ ನಾಯಕನ ಈ ಅವತಾರ ನೋಡಿದ್ರಾ?

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಆವೃತ್ತಿಯ (IPL 2022) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯಗಳಿಗೆ ಲೆಕ್ಕವಿಲ್ಲ.. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ (Mahendra Singh Dhoni)  ರಾಜೀನಾಮೆ ಘೋಷಿಸಿದ ನಂತರವಂತೂ ಈ ರಾಜೀನಾಮೆ ಕುರಿತು ತಮಾಷೆಯ ಸಂಗತಿಗಳು ತುಂಬಿ ತುಳುಕುತ್ತಿವೆ. ಇದುವರೆಗೆ ನಾಲ್ಕು ಬಾರಿ ಪ್ರಶಸ್ತಿಯನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್‌ನ (CSK) ನಾಯಕತ್ವವನ್ನು ಆಲ್ ರೌಂಡರ್ ರವೀಂದ್ರ ಜಡೇಜಾಗೆ (Ravindra Jadeja) ಮಹೇಂದ್ರ ಸಿಂಗ್ ಧೋನಿ ಹಸ್ತಾಂತರಿಸಿದರು. ಈ ನಾಯಕತ್ವ ಹಸ್ತಾಂತರಿಸಿದ ಬಗ್ಗೆ ಏನೆಲ್ಲ ಮಜಮಜಾ ವಿಷಯಗಳು (Meme) ಸೃಷ್ಟಿಯಾಗಿವೆ? ಬನ್ನಿ ನೀವು ಮಜಾ ಪಡಿ!

    ಮಹೇಂದ್ರ ಸಿಂಗ್ ಧೋನಿ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮೀಮ್‌ಗಳು ಹೆಚ್ಚು ಹರಿದಾಡಲಾರಂಭಿಸಿದವು. ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅವರ ಟ್ವೀಟ್ ಒಂದು ಹೆಚ್ಚು ವೈರಲ್ ಆಯಿತು. ಅವರು ಬಾಕ್ಸ್ ಆಫೀಸ್ ಬ್ರೇಕರ್ ಬಾಹುಬಲಿ ಸಿನಿಮಾದಿಂದ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದಾರೆ.





    ಅವರು ಹಂಚಿಕೊಂಡಾಗಿನಿಂದ ಈ ವೀಡಿಯೊವು ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಅಲ್ಲದೇ ಲೈಕ್​ಗಳು ಮತ್ತು ಮರುಟ್ವೀಟ್‌ಗಳು ಸೇರಿದಂತೆ ಸರಿಸುಮಾರು 24,000 ಇಂಪ್ರೆಶನ್‌ಗಳನ್ನು ಪಡೆದುಕೊಂಡಿದೆ. ನೆಟಿಜನ್‌ಗಳು ಮೀಮ್ ಜಗತ್ತಿಗೆ ವಾಸಿಮ್ ಅವರ ಕೊಡುಗೆಯನ್ನು  ಯಾರಿಂದಲೂ ತಡೆಯಲು ಸಾಧ್ಯವಾಗಲ್ಲ ಎಂದು ಚೇಷ್ಟೆಯನ್ನೂ ಮಾಡಿದ್ದಾರೆ.





    ಇದನ್ನೂ ಓದಿ: IPL ಸೃಷ್ಟಿಕರ್ತ ಮೋದಿಗೆ IPLನಿಂದ ನಿಷೇಧ ಹೇರಿದ್ದೇಕೆ? ಇಲ್ಲಿದೆ ಸಂಪೂರ್ಣ ಕಥೆ






    ಇದನ್ನೂ ಓದಿ: IPL​ ಕಾಮೆಂಟೇಟರ್​ಗಳ​ ಮೇಲೆ ಹಣದ ಸುರಿಮಳೆ! ಯಾರಿಗೆ ಎಷ್ಟು ಪೇಮೆಂಟ್?

    ಧೋನಿ ಬದಲಿಗೆ ಜಡೇಜಾ ನಾಯಕತ್ವ ವಹಿಸಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಪ್ರಕಟಿಸಿದೆ. ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ಹಸ್ತಾಂತರಿಸಲು ನಿರ್ಧರಿಸಿದ್ದಾರೆ.  ತಂಡವನ್ನು ಮುನ್ನಡೆಸಲು ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿದ್ದಾರೆ. 2012 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಅಂಗವಾಗಿರುವ ಜಡೇಜಾ, ಸಿಎಸ್‌ಎಲ್ ಅನ್ನು ಮುನ್ನಡೆಸುವ ಮೂರನೇ ಆಟಗಾರನಾಗಲಿದ್ದಾರೆ ಎಂದು ತಂಡವು ಹೇಳಿಕೆಯಲ್ಲಿ ತಿಳಿಸಿದೆ.
    Published by:guruganesh bhat
    First published: