IPL 2022: ಐಪಿಎಲ್​ ಮೇಲೆ ಉಗ್ರರ ನೆರಳು, ಆಟಗಾರರ ಹತ್ಯೆಗೆ ಪ್ಲಾನ್! ಓರ್ವ ಅರೆಸ್ಟ್, ಎಲ್ಲೆಡೆ ಹೈ ಅಲರ್ಟ್

ಈ ವರ್ಷದ ಐಪಿಎಲ್‌ನಲ್ಲಿ ಭಯೋತ್ಪಾದಕರ ದಾಳಿಯ ಬಗ್ಗೆ ಮುಂಬೈ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದ್ದು, ನಂತರ ಆರ್ಥಿಕ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಐಪಿಎಲ್ 2022

ಐಪಿಎಲ್ 2022

 • Share this:
  ಈ ವರ್ಷ ಐಪಿಎಲ್ ಸರಣಿಯ (IPL 2022) ಎಲ್ಲಾ ಪಂದ್ಯಗಳು ಮುಂಬೈ, ನವಿ ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿವೆ. ಆದರೆ ಇದೇ ಹೊತ್ತಿನಲ್ಲಿ ಐಪಿಎಲ್ ಟೂರ್ನಿ ಉಗ್ರರ ಹಿಟ್ ಲಿಸ್ಟ್ ನಲ್ಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಮುಂಬೈ ಪೊಲೀಸ್ ಮೂಲಗಳ ಪ್ರಕಾರ ಭಯೋತ್ಪಾದನಾ ನಿಗ್ರಹ ದಳ (Maharashtra ATS) ಓರ್ವ ವ್ಯಕ್ತಿಯನ್ನು ಬಂಧಿಸಿದೆ. ಬಂಧಿತನ ಹೇಳಿಕೆಯ ಆಧಾರದ ಮೇಲೆ ವಾಂಖೆಡೆ ಸ್ಟೇಡಿಯಂ (Wankhede Stadium) ಟ್ರೈಡೆಂಟ್ ಹೋಟೆಲ್, ನಾರಿಮನ್ ಪಾಯಿಂಟ್ ಹಾಗೂ ಆಟಗಾರರ ಹೋಟೆಲ್ ಸ್ಟೇಡಿಯಂ ಸುತ್ತಮುತ್ತಲ ಪ್ರದೇಶಗಳ ಮಾಹಿತಿಯನ್ನು ಸಂಗ್ರಹಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ (Terror Threat)ಎಂದು ವರದಿಯಾಗಿದೆ.

  ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಶುರುವಾಗಲು ಇನ್ನೇನು ಎರಡೇ ದಿನ ಬಾಕಿಯಿದೆ. ಆದರೆ ಈ ಹಂತದಲ್ಲಿ ವಿಶ್ವವೇ ತಿರುಗಿ ನೋಡುವ ಕ್ರಿಕೆಟ್ ಸರಣಿಗೆ ಆತಂಕವೊಂದು ಎದುರಾಗಿದೆ.  ಅಲ್ಲದೇ ವಾಂಖೆಡೆ ಸ್ಟೇಡಿಯಂ, ಟ್ರೈಡೆಂಟ್ ಹೋಟೆಲ್ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಯೋಜಿಸಿದ್ದಾರೆ ಎಂದು ಸಹ ಮೂಲಗಳು ತಿಳಿಸಿವೆ. ಪಂದ್ಯಾವಳಿಗಾಗಿ ಎಲ್ಲಾ ತಂಡದ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಮುಂಬೈಗೆ ಆಗಮಿಸಿದ್ದಾರೆ.

  ಭದ್ರತೆ ಹೆಚ್ಚಳ
  ಈ ವರ್ಷದ ಐಪಿಎಲ್‌ನಲ್ಲಿ ಭಯೋತ್ಪಾದಕರ ದಾಳಿಯ ಬಗ್ಗೆ ಮುಂಬೈ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದ್ದು, ನಂತರ ಆರ್ಥಿಕ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

  ಭಯೋತ್ಪಾದಕರ ಈ ತಪ್ಪೊಪ್ಪಿಗೆ ಹಿನ್ನೆಲೆಯಲ್ಲಿ ಐಪಿಎಲ್ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕ್ವಿಕ್ ರೆಸ್ಪಾನ್ಸ್ ಟೀಮ್, ಬಾಂಬ್ ಸ್ಕ್ವಾಡ್, ರಾಜ್ಯ ಮೀಸಲು ಪೊಲೀಸ್ ಪಡೆಗಳನ್ನು ಮಾರ್ಚ್ 26 ರಿಂದ ಮೇ 22 ರವರೆಗೆ ಭದ್ರತೆಗಾಗಿ ನಿಯೋಜಿಸಲಾಗಿದೆ.

  ಇದನ್ನೂ ಓದಿ: IPL 2022: 1.70 ಕೋಟಿ ಹಣವನ್ನು ಹೇಗೆ ಖರ್ಚು ಮಾಡುವಿರಿ? ಅಪ್ಪನಿಗೆ ಮನೆ ಕೊಡಿಸುವೆ ಎಂದು ಭಾವುಕನಾದ ಕ್ರಿಕೆಟಿಗ!

  ಐಪಿಎಲ್‌ಗೆ ಸಂಬಂಧಿಸಿದ ಫ್ರಾಂಚೈಸಿಗಳು ಮತ್ತು ಸಿಬ್ಬಂದಿಗಳು ಅನುಸರಿಸಬೇಕಾದ ಆಂತರಿಕ ಸುತ್ತೋಲೆಯಲ್ಲಿ ಭದ್ರತಾ ಮಾರ್ಗಸೂಚಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

  ಆಟಗಾರರಿಗೆ ಬೆದರಿಕೆ, ಭದ್ರತೆ ಬಿಗಿ
  ಎಟಿಎಸ್ ಪ್ರಕಾರ, ಎಲ್ಲಾ ಕ್ರೀಡಾಂಗಣಗಳು ಮತ್ತು ಆಟಗಾರರು ತಂಗಿರುವ ಹೋಟೆಲ್‌ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪಂದ್ಯದ ಅಧಿಕಾರಿಗಳು, ಅಂಪೈರ್‌ಗಳು ಮತ್ತು ಇತರ ಸಿಬ್ಬಂದಿಗೆ ಭದ್ರತೆ ಒದಗಿಸಲಾಗುವುದು ಎಂದು ಈಗಾಗಲೇ ಆದೇಶ ನೀಡಲಾಗಿದೆ.

  ಜೊತೆಗೆ ಪಂದ್ಯ ನಡೆಯುವಾಗ ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಹೋಗುವ ಮಾರ್ಗದಲ್ಲಿ ವಾಹನ ನಿಲುಗಡೆಯನ್ನೂ ನಿಷೇಧಿಸಲಾಗಿದೆ. ಜತೆಗೆ ಯಾವುದೇ ಪರಿಸ್ಥಿತಿ ಎದುರಿಸಲು ಕ್ಷಿಪ್ರ ಕಾರ್ಯಾಚರಣೆ ಪಡೆ, ಬಾಂಬ್ ಸ್ಕ್ವಾಡ್ ಹಾಗೂ ಮುಂಬೈ ಪೊಲೀಸರ ವಿಶೇಷ ತಂಡವನ್ನು ನಿಯೋಜಿಸುವಂತೆ ಆದೇಶಿಸಲಾಗಿದೆ.

  ದೆಹಲಿಯಲ್ಲೂ ಉಗ್ರ  ದಾಳಿ ಎಚ್ಚರಿಕೆ
  ದೆಹಲಿಯಲ್ಲೂ ಸಂಭವನೀಯ ಭಯೋತ್ಪಾದಕ ದಾಳಿಗಳ ಮಾಹಿತಿ ಉತ್ತರ ಪ್ರದೇಶ ಪೊಲೀಸರಿಗೆ ಲಭಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ಭದ್ರತೆಯ ಎಚ್ಚರಿಕೆಯನ್ನು ನೀಡಲಾಗಿದೆ. ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಅಧಿಕಾರಿಯ ಪ್ರಕಾರ, ಉತ್ತರ ಪ್ರದೇಶ ಪೊಲೀಸರಿಗೆ ಉಗ್ರ ದಾಳಿಯ ಕುರಿತು ಅನಾಮಧೇಯ ಮೂಲದಿಂದ ಇಮೇಲ್ ಬಂದಿದೆ. ಈ ಇಮೇಲ್ ಅನ್ನು ಭಯೋತ್ಪಾದಕ ಸಂಘಟನೆ ತೆಹ್ರಿಕ್-ಎ-ತಾಲಿಬಾನ್ (ಭಾರತ ಸೆಲ್) ಕಳುಹಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

  ಇದನ್ನೂ ಓದಿ: ನಮ್ಮ RCB ತಂಡದ ಮಾಲೀಕರು ಯಾರು? ನಿಮಗೆ ಗೊತ್ತಿಲ್ಲದ ಮಾಹಿತಿ ಇದು!

  ಕೆಲವು ಭದ್ರತಾ ಬೆದರಿಕೆಯಿಂದಾಗಿ ಮಾರುಕಟ್ಟೆಗಳನ್ನು ಮುಚ್ಚಲಾಗುವುದು ಎಂದು ದೆಹಲಿಯ ಸರೋಜಿನಿ ನಗರ ಮಿನಿ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕ್ ರಾಂಧವ ಮಂಗಳವಾರ ಹೇಳಿದ್ದಾರೆ.
  Published by:guruganesh bhat
  First published: