IPL 2022, LSG vs GT: ಶುಭ್​ಮನ್ ಗಿಲ್ ಅರ್ಧಶತಕ! ಪ್ಲೇ ಆಫ್​ಗೆ ಹೋಗೋರ್ಯಾರು?

ಆದರೆ ಲಕ್ನೋ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರಿಂದ ಹೋರಾಟ ಸುಲಭವಾಗಿರಲಿಲ್ಲ. ಆದರೂ ಗಿಲ್ ಅವರು ದುಷ್ಮಂತ ಚಮೀರ ಅವರ ಓವರ್‌ನಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿದರು. ಇದು ಗಿಲ್ ಅವರ ಋತುವಿನ ನಾಲ್ಕನೇ ಅರ್ಧಶತಕವಾಗಿತ್ತು.

ಶುಭ್​ಮನ್ ಗಿಲ್

ಶುಭ್​ಮನ್ ಗಿಲ್

  • Share this:
    ಐಪಿಎಲ್ 2022ರ (IPL 2022) ಪುಣೆಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ (IPL 2022, LSG vs GT) ಸಖತ್ತಾಗೇ ಕೆಲಸ ಮಾಡಿದೆ. ಉತ್ತಮ ಬೌಲಿಂಗ್ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವನ್ನು 144/5 ಗೆ ನಿರ್ಬಂಧಿಸಲು ಶಕ್ತವಾಯಿತು. ಲಕ್ನೋ ಪರ ಅವೇಶ್ ಖಾನ್ ಎರಡು ವಿಕೆಟ್ ಕಬಳಿಸಿದರು. ಗುಜರಾತ್ ಪರ ಶುಭ್​ಮನ್ ಗಿಲ್ (Shubman Gill ) ಅವರು 49 ಬೌಲ್​ಗಳಲ್ಲಿ 63 ರನ್ ಗಳಿಸಿ ಐಪಿಎಲ್ 2022ನೇ ಋತುವಿನ ನಾಲ್ಕನೇ ಅರ್ಧಶತಕವನ್ನು ಸಿಡಿಸಿ ಮಿಂಚಿದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 144 ರನ್ ಗಳಿಸಿ ಸಾಧಾರಣ ಟಾರ್ಗೆಟ್ ನೀಡಿದೆ.

    ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 3ನೇ ಓವರ್‌ನಲ್ಲಿ ವೃದ್ಧಿಮಾನ್ ಸಹಾ ಅವರನ್ನು 5 ರನ್‌ಗಳಿಗೆ ಕಳೆದುಕೊಂಡಿದ್ದರಿಂದ ಉತ್ತಮ ಆರಂಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಡೇವಿಡ್ ಮಿಲ್ಲರ್ ಮತ್ತು ಗಿಲ್ ನಂತರ ಉತ್ತಮ ಬ್ಯಾಟಿಂಗ್ ಮಾಡುವ ಜವಾಬ್ದಾರಿ ಹೊಂದಿದ್ದರು.

    ಹೋರಾಟ ಸುಲಭ ಇದ್ದಿರಲಿಲ್ಲ
    ಆದರೆ ಲಕ್ನೋ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರಿಂದ ಹೋರಾಟ ಸುಲಭವಾಗಿರಲಿಲ್ಲ. ಆದರೂ ಗಿಲ್ ಅವರು ದುಷ್ಮಂತ ಚಮೀರ ಅವರ ಓವರ್‌ನಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿದರು. ಇದು ಗಿಲ್ ಅವರ ಋತುವಿನ ನಾಲ್ಕನೇ ಅರ್ಧಶತಕವಾಗಿತ್ತು.

    ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಐಪಿಎಲ್ 2022 ರ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

    ಇದನ್ನೂ ಓದಿ: Prithvi Shaw New Home: ಲಕಲಕ ಅಂತಿದೆ ಪೃಥ್ವಿ ಶಾ ಕನಸಿನ ಮನೆ! ನೀವೂ ಒಳಹೊಕ್ಕು ಬನ್ನಿ

    ಇದು ಐಪಿಎಲ್ 2022ರ ಹೊಸ ತಂಡಗಳಾದ ಸೂಪರ್ ಜೈಂಟ್ಸ್ ಮತ್ತು ಟೈಟಾನ್ಸ್ ನಡುವಿನ ಘರ್ಷಣೆಯಾಗಿದ್ದು ಇದು ಟೇಬಲ್ ಟಾಪರ್‌ಗಳ ಘರ್ಷಣೆಯಾಗಿದೆ. ಹೊಸಬರಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಪ್ರಯಾಣದ ಕನಸಿನ ಆರಂಭವನ್ನು ಹೊಂದಿದ್ದು, ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಹೋರಾಡುತ್ತಿವೆ. ಈ ಪಂದ್ಯದಲ್ಲಿ ಗೆದ್ದವರು ಪ್ಲೇ ಆಫ್​ಗೆ ಆರಾಮವಾಗಿ ಪ್ರವೇಶಿಸಲಿದ್ದಾರೆ.

    ಇದನ್ನೂ ಓದಿ: IPL 2022: ಈ ಸೀಸನ್​ನ​ಲ್ಲಿ ಧೋನಿ ಲೆಕ್ಕಾಚಾರ ಉಲ್ಟಾ ಆಗಿದ್ದು ಇಲ್ಲೇ! ಈ ತಪ್ಪುಗಳನ್ನು ಮಾಹಿ ಮಾಡ್ಬಾರದಿತ್ತು

    ನಾಯಕ ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ, ಡೇವಿಡ್ ಮಿಲ್ಲರ್, ರಶೀದ್ ಖಾನ್ ಮತ್ತು ಮೊಹಮ್ಮದ್ ಶಮಿ ಗುಜರಾತ್ ಟೈಟಾನ್ಸ್​ಗಾಗಿ ಅಮೋಘ ಫಾರ್ಮ್‌ನಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ನಾಯಕ ರಾಹುಲ್, ಕ್ವಿಂಟನ್ ಡಿ ಕಾಕ್ ಮತ್ತು ಅವೇಶ್ ಖಾನ್ ಮುಂಚೂಣಿಯಲ್ಲಿ ನಿಂತು ಮುನ್ನೆಡೆಗಾಗಿ ಹೋರಾಟ ನಡೆಸುತ್ತಿದ್ದಾರೆ.

    ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲವೆನ್
    ಸಂಭಾವ್ಯ XI: ಕ್ವಿಂಟನ್ ಡಿ ಕಾಕ್ (WK), ಕೆಎಲ್ ರಾಹುಲ್ (c), ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್, ಮೊಹ್ಸಿನ್ ಖಾನ್

    ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲವೆನ್
    ಸಂಭಾವ್ಯ XI: ವೃದ್ಧಿಮಾನ್ ಸಹಾ (WK), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (c), ಸಾಯಿ ಸುದರ್ಶನ್/ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಾಂಗ್ವಾನ್, ಲಾಕಿ ಫರ್ಗುಸನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ
    Published by:guruganesh bhat
    First published: