IPL 2022, LSG vs GT Head to Head: ಲಕ್ನೋ ಗೆಲ್ಲುತ್ತೋ ಗುಜರಾತೋ? ಗೆದ್ದೋರಿಗುಂಟು ಲಕ್!

IPL 2022 ರಲ್ಲಿಯೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಈ ಎರಡೂ ತಂಡಗಳು ಆಡಿದ ಮೊದಲ ಪಂದ್ಯದಲ್ಲಿ GT 5 ವಿಕೆಟ್‌ಗಳಿಂದ ಜಯಗಳಿಸಿತ್ತು. ಇಂದಿನ IPL ಪಂದ್ಯವನ್ನು ಯಾರು ಗೆಲ್ಲುತ್ತಾರೆ? ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪುಣೆಯ MCA ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2022  (IPL 2022) 57 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಗುಜರಾತ್ ಟೈಟಾನ್ಸ್ (GT) ಇಂದು (ಮೇ 10) ಮುಖಾಮುಖಿಯಾಗಲಿದೆ. ಸೂಪರ್ ಜೈಂಟ್ಸ್ ಇದುವರೆಗೆ ಆಡಿದ 11 ಪಂದ್ಯಗಳಲ್ಲಿ (LSG vs GT Head To Head) ಎಂಟು ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೇಲ್ಮಟ್ಟದಲ್ಲಿ ರಾರಾಜಿಸುತ್ತಿದೆ. ಮತ್ತೊಂದೆಡೆ, ಟೈಟಾನ್ಸ್ ಸಹ ಸೂಪರ್​ ಜೈಂಟ್ಸ್​ನಷ್ಟೇ ಮೇಲ್ಮಟ್ಟದಲ್ಲಿದ್ದು ಆದರೆ ನಿವ್ವಳ ರನ್ ರೇಟ್‌ನಲ್ಲಿ ಹಿಂದುಳಿದಿದೆ. ನಿವ್ವಳ ರನ್​ ರೇಟ್​ನ ಕಾರಣದಿಂದ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

  ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಇಂದಿನ IPL ಪಂದ್ಯವನ್ನು ಯಾರು ಗೆಲ್ಲುತ್ತಾರೆ? ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.

  IPL 2022 ರಲ್ಲಿ KL ರಾಹುಲ್ ನೇತೃತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಇಲ್ಲಿಯವರೆಗೆ 11 ಪಂದ್ಯಗಳನ್ನು ಆಡಿದೆ. ಈಪೈಕಿ 8 ಪಂದ್ಯಗಳನ್ನು ಗೆದ್ದು 3 ಪಂದ್ಯಗಳಲ್ಲಿ ಸೋತಿದ್ದಾರೆ. LSG 16 ಅಂಕಗಳನ್ನು ಹೊಂದಿದೆ. ಗುಜರಾತ್ ಟೈಟಾನ್ಸ್ ಇದುವರೆಗೆ 11 ಪಂದ್ಯಗಳನ್ನು ಆಡಿದೆ. 8 ಪಂದ್ಯ ಗೆದ್ದು 3 ಪಂದ್ಯ ಸೋತಿದೆ.

  ಮೊದಲ ಪಂದ್ಯದಲ್ಲಿ ಗೆದ್ದಿದ್ದ ಗುಜರಾತ್
  IPL 2022 ರಲ್ಲಿಯೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಈ ಎರಡೂ ತಂಡಗಳು ಆಡಿದ ಮೊದಲ ಪಂದ್ಯದಲ್ಲಿ GT 5 ವಿಕೆಟ್‌ಗಳಿಂದ ಜಯಗಳಿಸಿತ್ತು. ಆ ಪಂದ್ಯದಲ್ಲಿ LSG ಮೊದಲು ಬ್ಯಾಟ್ ಮಾಡಿ 158 ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು. ನಾಯಕ ಕೆಎಲ್ ರಾಹುಲ್ ಡಕ್ ಔಟ್ ಆದರೂ ದೀಪಕ್ ಹೂಡಾ ಮತ್ತು ಆಯುಷ್ ಬಡೋನಿ ಕ್ರಮವಾಗಿ 55 ಮತ್ತು 54 ರನ್ ಗಳಿಸಿ ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ದರು.

  5 ವಿಕೆಟ್‌ಗಳಿಂದ ಗೆದ್ದಿದ್ದೇ ರೋಚಕ
  ಅದೇ ರೀತಿ ಗುಜರಾತ್ ಟೈಟಾನ್ಸ್‌ನ ಆರಂಭಿಕ ಆಟಗಾರ ಶುಭಮನ್ ಗಿಲ್ ಕೂಡ ಡಕ್‌ಗೆ ಔಟಾದರು. ಮ್ಯಾಥ್ಯೂ ವೇಡ್ 30 ಮತ್ತು ಹಾರ್ದಿಕ್ ಪಾಂಡ್ಯ 33 ರನ್ ಗಳಿಸಿದರು. ಡೇವಿಡ್ ಮಿಲ್ಲರ್ 30 ರನ್ ಗಳಿಸಿದರೆ, ರಾಹುಲ್ ತೆವಾಟಿಯಾ 40 ರನ್ ಗಳಿಸಿದರು. ಅಂತಿಮವಾಗಿ ಗುರಿ ಬೆನ್ನತ್ತಿದ ಜಿಟಿ 5 ವಿಕೆಟ್‌ಗಳಿಂದ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

  ಬೌಲರ್​ಗಳ ಭರ್ಜರಿ ಪ್ರದರ್ಶನ
  ಎಲ್‌ಎಸ್‌ಜಿ ತಮ್ಮ ಆಲ್‌ರೌಂಡ್ ಪ್ರದರ್ಶನದಿಂದ ಪ್ರಭಾವಶಾಲಿ ತಂಡವಾಗಿ ಹೊರಹೊಮ್ಮಿದೆ.  ಬ್ಯಾಟಿಂಗ್ ವಿಭಾಗದಲ್ಲಿರುವ ಬಹುತೇಕ ಎಲ್ಲ ಆಟಗಾರರು ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಮತ್ತೊಂದೆಡೆ ವೇಗದ ಬೌಲರ್‌ಗಳು ಇಕ್ಕಟ್ಟಿನ ಕ್ಷಣಗಳಲ್ಲಿ ವಿಕೆಟ್‌ಗಳನ್ನು ಪಡೆಯುತ್ತಿರುವುದು ತಂಡವನ್ನು ಉತ್ತಮ ಹಂತಕ್ಕೆ ಕೊಂಡೊಯ್ಯೊತ್ತಿದೆ.

  ಟಾಸ್ ಗೆಲ್ಲೋದು ಯಾರು?
  ಇಂದಿನ ಮ್ಯಾಚ್​ನಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳಬಹುದು. IPL 2022 ರಲ್ಲಿ ಚೇಸಿಂಗ್ ಮಾಡುವುದು ಉತ್ತಮ ಆಯ್ಕೆಯಾಗಿದೆ ಬಹುತೇಕ ತಂಡಗಳು ಭಾವಿಸಿರುವುದರಿಂದ ಅನೇಕ ಪಂದ್ಯಗಳಲ್ಲಿ ಟಾಸ್ ಗೆದ್ದ ನಂತರ ಚೇಸ್ ಮಾಡಲು ಹಲವು ತಂಡಗಳು ಆಯ್ಕೆ ಮಾಡಿಕೊಳ್ಳುತ್ತಿವೆ. ಆದರೂ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಇಲ್ಲಿಯವರೆಗೆ ಗಮನಾರ್ಹ ಸಂಖ್ಯೆಯ ಪಂದ್ಯಗಳನ್ನು ಗೆದ್ದಿವೆ. ಕಳೆದ ಬಾರಿ IPL 2022 ರಲ್ಲಿ LSG vs GT ಪಂದ್ಯದ ಸಮಯದಲ್ಲಿ, GT ಎರಡನೇ ಬ್ಯಾಟಿಂಗ್ ಪಂದ್ಯವನ್ನು ಗೆದ್ದಿತ್ತು.

  ಇದನ್ನೂ ಓದಿMS Dhoni: ಬ್ಯಾಟಿಂಗ್​ಗೂ ಮುನ್ನ ಧೋನಿ ಬ್ಯಾಟ್ ಕಚ್ಚಿದ್ದು ಏಕೆ? ಇದರ ಹಿಂದಿನ ರಹಸ್ಯ ಬಿಚ್ಚಿಟ್ಟ ಅಮಿತ್ ಮಿಶ್ರಾ

  ಮುಂಬೈ ಇಂಡಿಯನ್ಸ್ (MI) ವಿರುದ್ಧ 177 ರನ್ ಗಳಿಸಲು ಟೈಟಾನ್ಸ್ ಅವರ ಬೌಲಿಂಗ್ ಪ್ರದರ್ಶನ ಸರಾಸರಿಯಾಗಿತ್ತು, ರಶೀದ್ ಖಾನ್ ಎರಡು ವಿಕೆಟ್ ಪಡೆದುಕೊಂಡಿದ್ದರು. ಆರಂಭಿಕರಾದ ಶುಭಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಅರ್ಧಶತಕ ಗಳಿಸಿದರಾದರೂ, ಕೊನೆಯ ಕೆಲವು ಓವರ್‌ಗಳಲ್ಲಿ ಇತರ ಬ್ಯಾಟ್ಸ್‌ಮನ್‌ಗಳು ಎಸೆತದಲ್ಲಿ ವಿಫಲವಾದರು. ತಂಡವು ಐದು ರನ್‌ಗಳ ಅಂತರದಲ್ಲಿ ಕುಸಿಯಿತು.

  ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲವೆನ್
  ಸಂಭಾವ್ಯ XI: ಕ್ವಿಂಟನ್ ಡಿ ಕಾಕ್ (WK), ಕೆಎಲ್ ರಾಹುಲ್ (c), ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್, ಮೊಹ್ಸಿನ್ ಖಾನ್

  ಇದನ್ನೂ ಓದಿ: MS Dhoni: ಯಾರೂ ಮಾಡಿರದ ದಾಖಲೆ ಮಾಡಿದ ಮಾಹಿ! ಅದಕ್ಕೆ ಇವ್ರನ್ನು ಬೆಸ್ಟ್​ ಫಿನಿಶರ್​ ಅನ್ನೋದು

  ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲವೆನ್
  ಸಂಭಾವ್ಯ XI: ವೃದ್ಧಿಮಾನ್ ಸಹಾ (WK), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (c), ಸಾಯಿ ಸುದರ್ಶನ್/ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಾಂಗ್ವಾನ್, ಲಾಕಿ ಫರ್ಗುಸನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ
  Published by:guruganesh bhat
  First published: