IPL 2022 RCB vs CSK: ರಾಬಿನ್ ಉತ್ತಪ್ಪ 88, ಶಿವಂ ದುಬೆ 95: RCBಗೆ 217 ಟಾರ್ಗೆಟ್

ಪಂದ್ಯದ ದೃಶ್ಯ

ಪಂದ್ಯದ ದೃಶ್ಯ

ಕೇವಲ 33 ಬೌಲ್​ಗಳಲ್ಲಿ ರಾಬಿನ್ ಉತ್ತಪ್ಪ ಅರ್ಧಶತಕ ಬಾರಿಸಿದ್ದಾರೆ. ಈಮೂಲಕ ಐಪಿಎಲ್‌ನಲ್ಲಿ ಉತ್ತಪ್ಪ 27ನೇ ಅರ್ಧಶತಕ ಸಿಡಿಸಿದಂತಾಗಿದೆ. 

  • Share this:

    ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ಪಂದ್ಯದ ಹಣಾಹಣಿ ಬಾರೀ ರೋಚಕತೆ ಹುಟ್ಟಿಸುತ್ತಿದೆ. ಮೊದಲು ಬ್ಯಾಟಿಂಗ್ ಮಾಡುತ್ತಿರುವ ರವೀಂದ್ರ ಜಡೇಜಾ (Ravindra Jadeja) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಧಾನವಾಗಿಯಾದರೂ ಉತ್ತಮ ಮೊತ್ತ (IPL 2022 RCB vs CSK) ದಾಖಲಿಸುವ ಹಂತದಲ್ಲಿದೆ. ಕೇವಲ 33 ಬೌಲ್​ಗಳಲ್ಲಿ ರಾಬಿನ್ ಉತ್ತಪ್ಪ ಅರ್ಧಶತಕ ಬಾರಿಸಿದ್ದಾರೆ. ಅಲ್ಲದೇ ರಾಬಿನ್ ಉತ್ತಪ್ಪ 88 ರ್ನ್​ಗಳನ್ನು ಕಲೆಹಾಕಿದ್ದು, ಶಿವಂ ದುಬೆ ಸಹ ತಾವ್ಯಾರಿಗೂ ಕಡಿಮೆ ಇಲ್ಲದಂತೆ ಅಜೇಯ 95 ರನ್​ಗಳನ್ನು ಬಾರಿಸಿ ಔಟ್ ಆಗದೇ ಇನ್ನಿಂಗ್ಸ್ ಮುಗಿಸಿದ್ದಾರೆ.


    ಈಮೂಲಕ ಐಪಿಎಲ್‌ನಲ್ಲಿ ಉತ್ತಪ್ಪ 27ನೇ ಅರ್ಧಶತಕ ಸಿಡಿಸಿದಂತಾಗಿದೆ.  ಐಪಿಎಲ್​ನ 15ನೇ ಆವೃತ್ತಿಯಲ್ಲಿ ರಾಬಿನ್ ಉತ್ತಪ್ಪ (Robin Uthappa) ಬೌಂಡರಿಯೊಂದಿಗೆ ಎರಡನೇ ಬಾರಿಗೆ ಅರ್ಧಶತಕವನ್ನು ಗಳಿಸಿದರು.



    ಅಷ್ಟೇ ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್​ನ ಇನ್ನೋರ್ವ ಆಟಗಾರ ಶಿವಂ ದುಬೆ ಸಹ ಆಕರ್ಷಕ ಅರ್ಧಶತಕ ಗಳಿಸಿದ್ದಾರೆ. ಈಮೂಲಕ ಶಿವಂ ದುಬೆ ಈ ಋತುವಿನ ಎರಡನೇ ಅರ್ಧಶತಕ ಗಳಿಸಿದಂತಾಗಿದೆ.  ಅಲ್ಲದೇ ಅವರು ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಸಖತ್ ಆಟ ಪ್ರದರ್ಶಿಸಿದ್ದಾರೆ.


    ಇದನ್ನೂ ಓದಿ: Sachin Tendulkar vs Virat Kohli: ಇಬ್ಬರಲ್ಲಿ ಯಾರು ಬೆಸ್ಟ್ ಎಂದ ಪಾಕ್ ಆಟಗಾರ!


    ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ (IPL 2022 RCB vs CSK Results) ರೋಚಕ ಹಣಾಹಣಿಯಲ್ಲಿ ಅಂತೂ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯದ ಒಂದು ಹಂತದಲ್ಲಿ ದಿನೇಶ್ ಕಾರ್ತಿಕ್ RCB ಗೆ ಚೆನ್ನೈ ನೀಡಿದ್ದ 217 ರನ್ನುಗಳ ಭರ್ಜರಿ ಗುರಿಯನ್ನು ಬೆನ್ನಟ್ಟಿದ ಭರವಸೆಯನ್ನು ಮೂಡಿಸಿದ್ದರು. ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಅವರ ಸುಂಟರಗಾಳಿ ಮೂರನೇ ವಿಕೆಟ್ ಜೊತೆಯಾಟವು ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು 216/4 ಸ್ಕೋರ್‌ ತಲುಪಿಸಿತ್ತು.  ಸಿಎಸ್​ಕೆ ವಿರುದ್ಧದ ಗೆಲುವಿನ ಆಸೆ ಆರ್​ಸಿಬಿ ಅಭಿಮಾನಿಗಳ ಪಾಲಿಗೆ ಹೆಚ್ಚು ಹೊತ್ತು ನಿಲ್ಲಲಿಲ್ಲ.


    ಇದನ್ನೂ ಓದಿ: Deepak Chahar CSK: 14 ಕೋಟಿಗೆ ಖರೀದಿಸಿದರೂ ಒಂದೂ ಮ್ಯಾಚ್ ಆಡಲಿಲ್ಲ!


    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬ್ಯಾಟರ್ಸ್ ಮೇಲೆ. ಆರ್‌ಸಿಬಿ ಪವರ್‌ಪ್ಲೇಯೊಳಗೆ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ಅನುಜ್ ರಾವತ್ ಅವರನ್ನು ಕಳೆದುಕೊಂಡಿತು. ಗ್ಲೆನ್ ಮ್ಯಾಕ್ಸ್‌ವೆಲ್ ಅವರು ತಮ್ಮ ಹೊಡೆತಗಳನ್ನು ಕನೆಕ್ಟ್ ಮಾಡುತ್ತಿರುವಂತೆ ತೋರುತ್ತಿದ್ದರು ಆದರೆ ರವೀಂದ್ರ ಜಡೇಜಾ ಅವರಿಂದ ಬೌಲ್​ಗೆ ನಂತರ ಅವರೂ ನಡೆಯಬೇಕಾಯಿತು.


    ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ್ದೇ ಮುಳುವಾಯ್ತಾ?
    ಇದಕ್ಕೂ ಮೊದಲು ಈ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅನ್ನು ಮುನ್ನಡೆಸುತ್ತಿರುವ ಮಾಜಿ CSK ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್  ಟಾಸ್ ಗೆದ್ದು ತಮ್ಮ ತಂಡವು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮೊದಲು ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿದ್ದು ಮುಳುವಾಯಿತು.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು