IPL 2022 LSG vs MI: ಕೆ ಎಲ್ ರಾಹುಲ್ ಅಮೋಘ ಶತಕ, ಲಕ್ನೋಗೆ ಬೆಂಗಾವಲಾಗಿ ನಿಂತ ನಾಯಕ

ಟ್ವೆಂಟಿ 20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ರೋಹಿತ್ ಶರ್ಮಾ ಅವರ ದಾಖಲೆಯನ್ನು ರಾಹುಲ್ ಸರಿಗಟ್ಟಿದರು. ರಾಹುಲ್ ಅವರು ತಮ್ಮ 4 ಐಪಿಎಲ್ ಶತಕಗಳೊಂದಿಗೆ ಭಾರತಕ್ಕೆ 2 ಅಂತಾರಾಷ್ಟ್ರೀಯ ಶತಕಗಳನ್ನು ಹೊಂದಿದ್ದಾರೆ.

ಕೆ ಎಲ್ ರಾಹುಲ್

ಕೆ ಎಲ್ ರಾಹುಲ್

  • Share this:
    IPL 2022 ರ ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ ಕೆಎಲ್ ರಾಹುಲ್ (KL Rahul) ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧ (LSG vs MI)  62 ಎಸೆತಗಳಲ್ಲಿ 103 ರನ್ ಗಳಿಸಿ ಭರ್ಜರಿ ಶತಕ ದಾಖಲಿಸಿದರು. ಕೆ.ಎಲ್. ರಾಹುಲ್ ಅವರ ಅಮೋಘ ಶತಕ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 168 ರನ್​ಗಳನ್ನು ಕೇವಲ 6  ವಿಕೆಟ್ ನಷ್ಟಕ್ಕೆ ರನ್ ಗಳಿಸಲು ಸಫಲವಾಯಿತು. ಈಮೂಲಕ ಕೆ.ಎಲ್. ರಾಹುಲ್ ಐಪಿಎಲ್​ 2022ರಲ್ಲಿ 2ನೇ ಶತಕ, ಒಟ್ಟಾರೆ 4ನೇ ಶತಕ ಬಾರಿಸಿದಂತಾಗಿದೆ. ಈ  ಶತಕದ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ ಲಖ್ನೋ ಸೂಪರ್ ಜೈಂಟ್ಸ್ ಉತ್ತಮ ಮೊತ್ತ ಪೇರಿಸಲು ಸಹಕರಿಸಿದರು.

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 37 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 169 ರನ್‌ಗಳ ಗುರಿಯನ್ನು ಬೆನ್ನಟ್ಟುವ ಮೂಲಕ ಉತ್ತಮ ಆರಂಭವನ್ನು ಪಡೆಯಿತು.

    ಪಟಪಟನೇ ವಿಕೆಟ್ ಕಳೆದುಕೊಂಡರೂ ನಿಂತರು ಕೆ.ಎಲ್.ರಾಹುಲ್
    ಮೊದಲು ಬ್ಯಾಟ್ ಮಾಡಿದ ಎಲ್‌ಎಸ್‌ಜಿ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇದ್ದರೂ ಕೆ.ಎಲ್.ರಾಹುಲ್ ಕೇವಲ 62 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ಪರ ಕೀರಾನ್ ಪೊಲಾರ್ಡ್ ಮತ್ತು ರಿಲೆ ಮೆರೆಡಿತ್ ತಲಾ ಎರಡು ವಿಕೆಟ್ ಪಡೆದರು. ಎಲ್‌ಎಸ್‌ಜಿ ತನ್ನ ಹಿಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತ ನಂತರ ಗೆಲುವಿನ ಹಾದಿಗೆ ಮರಳಲು ನೋಡುತ್ತಿದೆ.

    ಇದನ್ನೂ ಓದಿ: RCB Wishes Dr. Rajkumar Birthday: ಇದು ಆರ್​ಸಿಬಿ ಕನ್ನಡಾಭಿಮಾನ! ವರನಟನ ಸ್ಮರಿಸಿದ ಬೆಂಗಳೂರು

    ಕ್ರಿಸ್ ಗೇಲ್ - 142 ಪಂದ್ಯಗಳಲ್ಲಿ 6
    ವಿರಾಟ್ ಕೊಹ್ಲಿ - 215 ಪಂದ್ಯಗಳಲ್ಲಿ 5
    ಜೋಸ್ ಬಟ್ಲರ್ - 72 ಪಂದ್ಯಗಳಲ್ಲಿ 4
    ಕೆಎಲ್ ರಾಹುಲ್ - 102 ಪಂದ್ಯಗಳಲ್ಲಿ 4
    ಶೇನ್ ವ್ಯಾಟ್ಸನ್ - 145 ಪಂದ್ಯಗಳಲ್ಲಿ 4
    ಡೇವಿಡ್ ವಾರ್ನರ್ - 155 ಪಂದ್ಯಗಳಲ್ಲಿ 4

    ರೋಹಿತ್ ಶರ್ಮಾ ಅವರ ದಾಖಲೆಯನ್ನು ರಾಹುಲ್ ಸರಿಗಟ್ಟಿದ ಕೆ ಎಲ್ ರಾಹುಲ್
    ಟ್ವೆಂಟಿ 20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ರೋಹಿತ್ ಶರ್ಮಾ ಅವರ ದಾಖಲೆಯನ್ನು ರಾಹುಲ್ ಸರಿಗಟ್ಟಿದರು. ರಾಹುಲ್ ಅವರು ತಮ್ಮ 4 ಐಪಿಎಲ್ ಶತಕಗಳೊಂದಿಗೆ ಭಾರತಕ್ಕೆ 2 ಅಂತಾರಾಷ್ಟ್ರೀಯ ಶತಕಗಳನ್ನು ಹೊಂದಿದ್ದಾರೆ.

    ಮುಂಬೈ ವಿರುದ್ಧವೇ ಎರಡು ಶತಕ!
    ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಮುಂಬೈ ಇಂಡಿಯನ್ಸ್ ವಿರುದ್ಧದ IPL 2022 ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದರು.

    ಇದನ್ನೂ ಓದಿ: IPL 2022: ಕೊಹ್ಲಿಯ 14 ವರ್ಷಗಳ ವೃತ್ತಿಜೀವನದಲ್ಲಿ ಇದೇ ಮೊದಲು, ಬೇಡದ ದಾಖಲೆ ಮಾಡಿದ ವಿರಾಟ್

    ಪ್ರಸಕ್ತ ಐಪಿಎಲ್ ಋತುವಿನಲ್ಲಿ ಇದು ಅವರ ಎರಡನೇ ಶತಕವಾಗಿದೆ. ಅಲ್ಲದೇ ಕೆ.ಎಲ್.ರಾಹುಲ್. ಸಿಕ್ಸರ್ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಅವರು ಮುಂಬೈ ವಿರುದ್ಧvಏ ತಮ್ಮ ಎರಡೂ ಶತಕಗಳನ್ನು ಗಳಿಸಿದಂತಾಗಿದೆ.

    ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲು
    ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಋತುವಿನಲ್ಲಿ ರಾಹುಲ್ 2 ಶತಕ ಸಿಡಿಸಿದ್ದಾರೆ. ಇದು ಐಪಿಎಲ್‌ನಲ್ಲಿ ಅವರ ನಾಲ್ಕನೇ ಶತಕವಾಗಿದೆ. ಭಾರತೀಯ ಬ್ಯಾಟ್ಸ್‌ಮನ್ ಆಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿರಾಟ್ ಕೊಹ್ಲಿ ನಂತರ ಅವರು ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 5 ಶತಕ ಬಾರಿಸಿದ್ದಾರೆ.

    ಅಂತಿಮವಾಗಿ ಪಂದ್ಯದ ಫಲಿತಾಂಶ ಹೀಗಿದೆ
    ಲಕ್ನೋ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ರನ್ ಗಳಿಸಿತ್ತು. ಈ ಸವಾಲಿಗೆ ಉತ್ತರವಾಗಿ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಕಳಪೆ ಫಾರ್ಮ್​ನಿಂದ ಸತತ ಎಂಟನೇ ಸೋಲುಂಡು ಈ ಋತುವಿನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಲಕ್ನೋಗೆ ಗೆಲುವಿನ ಹಾರದಿಂದ ಪಾಯಿಂಟ್ ಪಟ್ಟಿಯಲ್ಲಿ ಮೇಲೇರಿದೆ.
    Published by:guruganesh bhat
    First published: