IPL 2022, KKR vs SRH: ಮನೆ ಹಾದಿ ಹಿಡಿದ ಹೈದರಾಬಾದ್, ಗೆದ್ದ ಕೋಲ್ಕತ್ತಾಗೆ ಪ್ಲೇ ಆಫ್ ಕನಸು
ಈ ಪಂದ್ಯದ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ 13 ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಗೆಲುವು ದಾಖಲಿಸಿದಂತಾಗಿದೆ. ಒಟ್ಟು 6 ಪಂದ್ಯಗಳ ಗೆಲುವಿನಿಂದ 12 ಪಾಯಿಂಟ್ಗಳನ್ನು ಗಳಿಸಿ ಮುಂದಿನ ಹಂತಕ್ಕೆ ಜಿಗಿಯುವ ಆಸೆಯನ್ನು ಇಟ್ಟುಕೊಂಡಿದೆ.
ಐಪಿಎಲ್ 2022 (IPL 2022) ದಿನಕಳೆದಂತೆ ಹೆಚ್ಚೆಚ್ಚು ರೋಚಕವಾಗುತ್ತಿದೆ. ಆಂಡ್ರೆ ರಸೆಲ್ ಅವರ ಆಲ್ರೌಂಡಿಂಗ್ ಆಟದಿಂದ (49* ಮತ್ತು 3/22) ಕೋಲ್ಕತ್ತಾ ನೈಟ್ ರೈಡರ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು (KKR vs SRH Highlights) ಐಪಿಎಲ್ 2022ರ 61ನೇ ಪಂದ್ಯದಲ್ಲಿ 54 ರನ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಕೋಲ್ಕತ್ತಾ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಆ್ಯಂಡ್ರೆ ರಸೆಲ್ (49*) ಅವರ ಉತ್ತಮ ಆಟದ ನೆರವಿನಿಂದ 6 ವಿಕೆಟ್ಗಳ ನಷ್ಟಕ್ಕೆ 177 ರನ್ ಗಳಿಸಿ ಸನ್ರೈಸರ್ಸ್ ಹೈದರಾಬಾದ್ಗೆ ಉತ್ತಮ ಸವಾಲನ್ನೇ ನೀಡಿತು. ಆದರೆ ಹೈದರಾಬಾದ್ ಎಂಟು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲೊಪ್ಪಿಕೊಂಡಿತು.
ಈ ಪಂದ್ಯದ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ 13 ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಗೆಲುವು ದಾಖಲಿಸಿದಂತಾಗಿದೆ. ಒಟ್ಟು 6 ಪಂದ್ಯಗಳ ಗೆಲುವಿನಿಂದ 12 ಪಾಯಿಂಟ್ಗಳನ್ನು ಗಳಿಸಿ ಮುಂದಿನ ಹಂತಕ್ಕೆ ಜಿಗಿಯುವ ಆಸೆಯನ್ನು ಇಟ್ಟುಕೊಂಡಿದೆ. ಹೈದರಾಬಾದ್ ಐಪಿಎಲ್ 2022ರಲ್ಲಿ ಆಡಿದ ಒಟ್ಟು12 ಪಂದ್ಯಗಳಲ್ಲಿ ಏಳನೇ ಪಂದ್ಯದಲ್ಲಿ ಸೋತಂತಾಗಿದೆ.
ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆ್ಯಂಡ್ರೆ ರಸೆಲ್ ಅವರ ಜೊತೆಗೆ ಸ್ಯಾಮ್ ಬಿಲ್ಲಿಂಗ್ಸ್ 34 ರನ್, ಅಜಿಂಕ್ಯಾ ರಹಾನೆ 28 ರನ್ ಗಳಿಸಿ ಉತ್ತಮ ಮೊತ್ತ ಪೇರಿಸಲು ನೆರವಾದರು. ಈ ಮೊತ್ತ ಬೆನ್ನಟ್ಟಿದ ಸನ್ರೈಸರ್ಸ ಹೈದರಾಬಾದ್ ಸಹ ಒಂದು ಹಂತದಲ್ಲಿ ಚೆನ್ನಾಗಿಯೇ ಹೋರಾಡಿತು. ಅಭಿಷೇಕ್ ಶರ್ಮಾ28 ಬೌಲ್ಗಳಲ್ಲಿ 48 ರನ್ ಗಳಿಸಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಅವರ ಹೋರಾಟ ಫಲಗೂಡಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್ಗಳು ಸನ್ರೈಸರ್ಸ್ ಹೈದರಾಬಾದ್ ಬ್ಯಾಟರ್ಗಳ ವಿಕೆಟ್ಗಳನ್ನು ನಿಯಮಿತವಾಗಿ ಪಡೆದು ಗೆಲುವಿನ ವಿಜಯಮಾಲೆಯನ್ನು ತಂಡಕ್ಕೆ ನೀಡಿದರು.
ಎರಡೂ ತಂಡಗಳ ಬೌಲರ್ಗಳ ಪ್ರದರ್ಶನ ಹೀಗಿತ್ತು ಎಸ್ಆರ್ಎಚ್ ಪರ ಉಮ್ರಾನ್ ಮಲಿಕ್ (3/33) ಮೂರು ವಿಕೆಟ್ ಕಬಳಿಸಿ ಫಾರ್ಮ್ಗೆ ಮರಳಿದರೆ, ಭುವನೇಶ್ವರ್ ಕುಮಾರ್ (1/27), ಮಾರ್ಕೊ ಜಾನ್ಸೆನ್ (1/30) ಮತ್ತು ಟಿ ನಟರಾಜನ್ (1/43) ತಲಾ ಒಂದು ವಿಕೆಟ್ ಪಡೆದರು. ಕೋಲ್ಕತ್ತಾ ಪರ ರಸೆಲ್ 22ಕ್ಕೆ ಮೂರು ವಿಕೆಟ್ ಪಡೆದರು. ಉಳಿದ ಬೌಲರ್ಗಳು ಉಮೇಶ್ ಯಾದವ್ (1/19), ಟಿಮ್ ಸೌಥಿ (2/23), ಸುನಿಲ್ ನರೈನ್ (1/34) ಮತ್ತು ವರುಣ್ ಚಕ್ರವರ್ತಿ (1/25) ) ವಿಕೆಟ್ಗಳನ್ನು ಪಡೆದು ಮಿಂಚಿದರು.
A double-wicket over! 👍 👍@Russell12A dismisses Washington Sundar and Marco Jansen. 👌 👌