ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ (IPL 2022) ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ಜೋಸ್ ಬಟ್ಲರ್ ಅದ್ಭುತ ಶತಕ ಸಿಡಿಸಿದ್ದಾರೆ. ಬಟ್ಲರ್ (Jos Buttler Century) ಅವರು ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ತಂಡದ ತಂಡದ (KKR vs RR Live) ವಿರುದ್ಧ 61 ಎಸೆತಗಳಲ್ಲಿ 103 ರನ್ಗಳನ್ನು ಸಿಡಿಸುವ ಮೂಲಕ ಋತುವಿನ ತಮ್ಮ ಎರಡನೇ ಶತಕವನ್ನು ಗಳಿಸಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ RR ತಂಡದ ಆರಂಭಿಕರಾದ ಬಟ್ಲರ್ ಮತ್ತು ದೇವದತ್ ಪಡಿಕ್ಕಲ್ ಮೊದಲ ವಿಕೆಟ್ಗೆ 97 ರನ್ ಸೇರಿಸಿದರು. ಬಟ್ಲರ್ ತಮ್ಮ ಇನ್ನಿಂಗ್ಸ್ನ ಆರಂಭದಿಂದಲೇ ಕೆಕೆಆರ್ ಬೌಲರ್ಗಳನ್ನು ಬೆಂಡೆತ್ತುವಂತೆ ಬ್ಯಾಟ್ ಮಾಡಿದರು.
ಪಡ್ಡಿಕ್ಕಲ್ (24) ಅವರೊಂದಿಗೆ ಮೊದಲ ವಿಕೆಟ್ಗೆ 97 ರನ್ ಸೇರಿಸಿದ ನಂತರ ಬಟ್ಲರ್ ಮಧ್ಯದಲ್ಲಿ ನಾಯಕ ಸಂಜು ಸ್ಯಾಮ್ಸನ್ ಜೊತೆ ಸೇರಿಕೊಂಡರು. ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ನಲ್ಲಿ ಒಂದು ದೊಡ್ಡ ಸಿಕ್ಸರ್ನೊಂದಿಗೆ ತನ್ನ ಶತಕವನ್ನು ಪೂರ್ಣಗೊಳಿಸಿದರ. ಅದಕ್ಕೂ ಮೊದಲು RR ಓಪನರ್ ಸ್ಯಾಮ್ಸನ್ನೊಂದಿಗೆ ಎರಡನೇ ವಿಕೆಟ್ಗೆ 67 ರನ್ ಸೇರಿಸಿದರು.
ಎಬಿ ಡಿವಿಲಿಯರ್ಸ್ ದಾಖಲೆ ಸರಿಗಟ್ಟಿದ ಜೋಸ್ ಬಟ್ಲರ್!
ಬಟ್ಲರ್ ಅವರು ಗಳಿಸಿದ 103 ರನ್ ಒಂಬತ್ತು ಬೌಂಡರಿಗಳು ಮತ್ತು ಐದು ಸಿಕ್ಸರ್ಗಳಿಂದ ಕೂಡಿತ್ತು. ಇಂದು ಗಳಿಸಿದ ಎರಡನೇ ಶತಕದ ಮೂಲಕ ಅವರು ದಂತಕಥೆ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನು ಸರಿಗಟ್ಟಿದರು.
ಇದನ್ನೂ ಓದಿ: IPL 2022 Pandya Brothers: ಪಾಂಡ್ಯ ಬ್ರದರ್ಸ್ ಐಷಾರಾಮಿ ಮನೆ ಹೇಗಿದೆ? ಬನ್ನಿ ಹೋಗಿಬರೋಣ!
ಬಟ್ಲರ್ ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ಶತಕಗಳೊಂದಿಗೆ ಸಾಗರೋತ್ತರ ಬ್ಯಾಟರ್ ಆಗಲು ಎಬಿ ಡಿವಿಲಿಯರ್ಸ್ ಅವರ ಸಾಲಿಗೆ ಸೇರಿದರು. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಐಪಿಎಲ್ನಲ್ಲಿ ಅದ್ಭುತ ಆರು ಶತಕಗಳೊಂದಿಗೆ ಗಣ್ಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ KKR ವಿರುದ್ಧ 217 ರನ್ಗಳ ಬೃಹತ್ ಮೊತ್ತವನ್ನು ಗಳಿಸಲು ಜೋಸ್ ಬಟ್ಲರ್ ಅವರ ಶತಕ ನೆರವಾಯಿತು.
ಐಪಿಎಲ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿರುವ ವಿದೇಶಿ ಆಟಗಾರರ ಪಟ್ಟಿ ಹೀಗಿದೆ
ಸಿಕ್ಸರ್ಗಳು | ಆಟಗಾರ |
6 | ಕ್ರಿಸ್ ಗೇಲ್ |
4 | ಶೇನ್ ವ್ಯಾಟ್ಸನ್ |
4 | ಡೇವಿಡ್ ವಾರ್ನರ್ |
3 | ಎಬಿ ಡಿವಿಲಿಯರ್ಸ್ |
3 | ಜೋಸ್ ಬಟ್ಲರ್ |
Hettie was all of us. 💗 pic.twitter.com/h0RhgAfTjb
— Rajasthan Royals (@rajasthanroyals) April 18, 2022
ಬಟ್ಲರ್ ಐಪಿಎಲ್ 2022 ರ ಪ್ರಮುಖ ಬ್ಯಾಟರ್ ಎನಿಸಿಕೊಂಡಿದ್ದರು. ಅದು ಅವರು ಸಿಡಿಸಿದ ಶತಕದಿಂದ ಮತ್ತೆ ಸಾಬೀತಾಯಿತು. ಈ ಋತುವಿನ ಆರು ಪಂದ್ಯಗಳಲ್ಲಿ 75 ರ ಸರಾಸರಿಯಲ್ಲಿ ಮತ್ತು 156 ಸ್ಟ್ರೈಕ್ ರೇಟ್ನಲ್ಲಿ 375 ರನ್ಗಳೊಂದಿಗೆ ಆರೆಂಜ್ ಕ್ಯಾಪ್ನ ಪ್ರಸ್ತುತ ಮಾಲೀಕರಾಗಿದ್ದಾರೆ. ಈ ಋತುವಿನಲ್ಲಿ 300 ರನ್ಗಳ ಗಡಿಯನ್ನು ದಾಟಿದ ಮೊದಲ ಆಟಗಾರ ಎಂಬ ಹಿರಿಮೆಗೂ ಜೋಸ್ ಬಟ್ಲರ್ ಪಾತ್ರರಾಗಿದ್ದಾರೆ.
ಚಹಾಲ್ ಹ್ಯಾಟ್ರಿಕ್ ದಾಖಲೆ
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ರಾಜಸ್ಥಾನ್ ರಾಯಲ್ಸ್ (KKR vs RR) ಯುಜ್ವೇಂದ್ರ ಚಹಾಲ್ ಐಪಿಎಲ್ 2022 ರ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ. 17ನೇ ಓವರ್ನ ಎರಡನೇ ಎಸೆತದಲ್ಲಿ ಯುಜ್ವೇಂದ್ರ ಚಹಾಲ್ ವೆಂಕಟೇಶ್ ಅಯ್ಯರ್ ಅವರನ್ನು ಔಟ್ ಮಾಡಿದರು. ಅದೇ ಓವರ್ನ ನಾಲ್ಕನೇ ಎಸೆತದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರ ವಿಕೆಟ್ ಸಹ ಯುಜ್ವೇಂದ್ರ ಚಹಾಲ್ (Yuzvendra Chahal) ಪಾಲಾಯಿತು. ಶ್ರೇಯಸ್ ಅಯ್ಯರ್ ಯುಜ್ವೇಂದ್ರ ಚಹಾಲ್ ಅವರ ಬೌಲ್ನಲ್ಲಿ ಬಿಎಲ್ಡಬ್ಲ್ಯು ಆದರು. ನಂತರ ಶಿವಂ ಮಾವಿ (Shivam Mavi) ಸಹ ಯುಜ್ವೇಂದ್ರ ಚಹಾಲ್ ಅವರ ಬೌಲ್ಗೆ ಬಲಿಯಾದರು.
ಕಿತ್ತರೇ ವಿಕೆಟ್?
ಆಗ ಕುತೂಹಲ ಹೆಚ್ಚಿತ್ತು. ಯುಜ್ವೇಂದ್ರ ಚಹಾಲ್ ಹ್ಯಾಟ್ರಿಕ್ ವಿಕೆಟ್ ಕೀಳುವರೇ ಎಂದು ಎಲ್ಲರೂ ಕುತೂಹಲಭರಿತರಾಗಿದ್ದರು. ಎಲ್ಲರೂ ಅಂದುಕೊಂಡಂತೆ ಯುಜ್ವೇಂದ್ರ ಚಹಾಲ್ ಪ್ಯಾಟ್ ಕಮಿನ್ಸ್ (Pat Cummins) ಅವರನ್ನು ಔಟ್ ಮಾಡಿ ಐಪಿಎಲ್ನಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.
ಐಪಿಎಲ್ನಲ್ಲಿ 21ನೇ ಹ್ಯಾಟ್ರಿಕ್!
ಯುಜ್ವೇಂದ್ರ ಚಹಾಲ್ ಅವರ ಹ್ಯಾಟ್ರಿಕ್ ಮೂಲಕ ಈಗ ಐಪಿಎಲ್ನಲ್ಲಿ 21ನೇ ಹ್ಯಾಟ್ರಿಕ್ ದಾಖಲಾಗಿದೆ. ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಮೂರು ಬಾರಿ ಈ ಸಾಧನೆ ಮಾಡಿದ್ದರೆ, ಚಹಾಲ್ಗೆ ಇದು ಮೊದಲನೆಯ ಹ್ಯಾಟ್ರಿಕ್ ವಿಕೆಟ್.
ಇದನ್ನೂ ಓದಿ: Women’s IPL: 2023ರಲ್ಲೇ ಶುರು ಮಹಿಳಾ IPL; ಕಣಕ್ಕಿಳಿಯಲಿರುವ 6 ತಂಡಗಳು ಯಾವುವು?
ಚಾಹಲ್ ಈಗ 17 ವಿಕೆಟ್ಗಳೊಂದಿಗೆ ಪರ್ಪಲ್ ಕ್ಯಾಪ್ ಲೀಡರ್ಬೋರ್ಡ್ನ ಅಗ್ರಸ್ಥಾನದಲ್ಲಿ ತಮ್ಮ ಮುನ್ನಡೆಯನ್ನು ವಿಸ್ತರಿಸಿದ್ದಾರೆ. ಅವರ ನಂತರ ಸನ್ರೈಸರ್ಸ್ ಹೈದರಾಬಾದ್ನ ಟಿ ನಟರಾಜನ್ (12 ವಿಕೆಟ್) ಮತ್ತು ಡಿಸಿಯ ಕುಲದೀಪ್ ಯಾದವ್ (11 ವಿಕೆಟ್) ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ