IPL 2022, LSG vs GT: ದಿಗ್ಗಜರ ಕಾಳಗದಲ್ಲಿ ಗೆದ್ದ ಗುಜರಾತ್, ಈ ಪಂದ್ಯದಲ್ಲೂ ಬೌಲರ್​ಗಳ ಮೇಲುಗೈ!

ಮಾರಕ ಬೌಲಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೇವಲ 82 ರನ್​ಗಳಿಗೆ ಕಟ್ಟಿಹಾಕಲು ಯಶಸ್ವಿಯಾಯಿತು. ಈಮೂಲಕ ಗುಜರಾತ್ 62 ರನ್​ಗಳ ಭಾರೀ ಗೆಲುವು ದಾಖಲಿಸಿತು.

ಪಂದ್ಯದ ದೃಶ್ಯ

ಪಂದ್ಯದ ದೃಶ್ಯ

 • Share this:
  ಐಪಿಎಲ್ 2022ರ (IPL 2022) ಎರಡು ಹೊಸ ಆದರೆ ಬಲಿಷ್ಠ ತಂಡಗಳ ನಡುವಿನ ಕದನದಲ್ಲಿ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿದೆ. 145 ರನ್​ಗಳ ಟಾರ್ಗೆಟ್ ಅನ್ನು ಮುಟ್ಟಲಾರದೇ ಲಕ್ನೋ ಸೂಪರ್ ಜೈಂಟ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ (LSG vs GT Highlights) ಸೋಲೊಪ್ಪಿಕೊಂಡಿದೆ. ಈಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದ ತಂಡಗಳ ನಡುವಿನ ಹಣಾಹಣಿಯಲ್ಲಿ ಗುಜರಾತ್ (Gujarat Titans) ಗೆಲುವು ಸಾಧಿಸಿದಂತಾಗಿದೆ. ಮಾರಕ ಬೌಲಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೇವಲ 82 ರನ್​ಗಳಿಗೆ ಕಟ್ಟಿಹಾಕಲು ಯಶಸ್ವಿಯಾಯಿತು. ಈಮೂಲಕ ಗುಜರಾತ್ 62 ರನ್​ಗಳ ಭಾರೀ ಗೆಲುವು ದಾಖಲಿಸಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿ ಮೊದಲ ತಂಡ ಎನಿಸಿಕೊಂಡಿತು.

  ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 3ನೇ ಓವರ್‌ನಲ್ಲಿ ವೃದ್ಧಿಮಾನ್ ಸಹಾ ಅವರನ್ನು 5 ರನ್‌ಗಳಿಗೆ ಕಳೆದುಕೊಂಡಿದ್ದರಿಂದ ಉತ್ತಮ ಆರಂಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಡೇವಿಡ್ ಮಿಲ್ಲರ್ ಮತ್ತು ಗಿಲ್ ನಂತರ ಉತ್ತಮ ಬ್ಯಾಟಿಂಗ್ ಮಾಡುವ ಜವಾಬ್ದಾರಿ ಹೊಂದಿದ್ದರು.

  ಹೋರಾಟ ಸುಲಭ ಇದ್ದಿರಲಿಲ್ಲ
  ಆದರೆ ಲಕ್ನೋ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರಿಂದ ಹೋರಾಟ ಸುಲಭವಾಗಿರಲಿಲ್ಲ. ಆದರೂ ಗಿಲ್ ಅವರು ದುಷ್ಮಂತ ಚಮೀರ ಅವರ ಓವರ್‌ನಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿದರು. ಇದು ಗಿಲ್ ಅವರ ಋತುವಿನ ನಾಲ್ಕನೇ ಅರ್ಧಶತಕವಾಗಿತ್ತು.

  ಇದನ್ನೂ ಓದಿ Prithvi Shaw New Home: ಲಕಲಕ ಅಂತಿದೆ ಪೃಥ್ವಿ ಶಾ ಕನಸಿನ ಮನೆ! ನೀವೂ ಒಳಹೊಕ್ಕು ಬನ್ನಿ

  ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಐಪಿಎಲ್ 2022 ರ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.  ಇದು ಐಪಿಎಲ್ 2022ರ ಹೊಸ ತಂಡಗಳಾದ ಸೂಪರ್ ಜೈಂಟ್ಸ್ ಮತ್ತು ಟೈಟಾನ್ಸ್ ನಡುವಿನ ಘರ್ಷಣೆಯಾಗಿತ್ತು. ಇದು ಟೇಬಲ್ ಟಾಪರ್‌ಗಳ ಘರ್ಷಣೆಯಾಗಿದ್ದ ಕಾರಣ ಭಾರೀ ಮಹತ್ವದ ಪಂದ್ಯವಾಗಿತ್ತು.

  ಹೊಸಬರು, ಆದರೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಜರು!
  ಹೊಸಬರಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಪ್ರಯಾಣದ ಕನಸಿನ ಆರಂಭವನ್ನು ಹೊಂದಿದ್ದು, ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಹೋರಾಡುತ್ತಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನಿರಾಯಾಸವಾಗಿ ಪ್ಲೇ ಆಫ್​ಗೆ ಆರಾಮವಾಗಿ ಪ್ರವೇಶಿಸಲಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಗೆದ್ದ ಗುಜರಾತ್ ಟೈಟಾನ್ಸ್ ಪ್ಲೇ ಆಫ್ ಪ್ರವೇಶಿಸುವುದು ಖಚಿತವಾದಂತಾಗಿದೆ.

  ಇದನ್ನೂ ಓದಿ: IPL 2022: ಈ ಸೀಸನ್​ನ​ಲ್ಲಿ ಧೋನಿ ಲೆಕ್ಕಾಚಾರ ಉಲ್ಟಾ ಆಗಿದ್ದು ಇಲ್ಲೇ! ಈ ತಪ್ಪುಗಳನ್ನು ಮಾಹಿ ಮಾಡ್ಬಾರದಿತ್ತು

  ರಶೀದ್ ಖಾನ್ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟರ್​ಗಳನ್ನು ಬೆಂಬಿಡದೇ ಕಾಡಿದರು. ತಮ್ಮ ನಾಲ್ಕನೇ ವಿಕೆಟ್ ಪಡೆದು ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಗೆದ್ದು ಪ್ಲೇಆಫ್‌ಗೆ ಅರ್ಹತೆ ಪಡೆಯುವಂತೆ ಮಾಡಿದರು.  ಈಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಐಪಿಎಲ್ 2022 ಪ್ಲೇಆಫ್‌ಗೆ ಪ್ರವೇಶಿಸಿದ ಮೊದಲ ತಂಡವಾಗಿದೆ.
  Published by:guruganesh bhat
  First published: