ಐಪಿಎಲ್ 2022 ರಲ್ಲಿ (IPL 2022) ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಮುಗ್ಗರಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಇಂದಿನ ಪಂದ್ಯದಲ್ಲಿ (IPL 2022, GT vs CSK) ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ಗಳಿಂದ ಸೋಲನುಭವಿಸಿದೆ. ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯಾ (Hardik Pandya) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಗೆಲುವಿನಿಂದ ಕ್ವಾಲಿಫೈಯರ್ 1ರಲ್ಲಿ ಆಡುವ ಸಂತಸ ಅನುಭವಿಸುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವುದನ್ನು ಆರಿಸಿಕೊಂಡಿತಾದರೂ ಕೇವಲ 133 ರನ್ಗಳಷ್ಟನ್ನೇ ಪೇರಿಸಲು ಶಕ್ಯವಾಯಿತು. ಅಷ್ಟೇನೂ ಸವಾಲಿನ ಗುರಿ ನೀಡದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗುಜರಾತ್ ಟೈಟಾನ್ಸ್ ಸುಲಭವಾಗಿ ಮಣಿಸಿ ಗೆಲುವಿನ ನಗೆ ಬೀರಿತು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಋತುರಾಜ್ ಗಾಯಕವಾಡ್ 53 ರನ್ ಗಳಿಸಿ ಕೊಂಚ ಉತ್ತಮ ಮೊತ್ತ ಗಳಿಸುವ ಭರವಸೆ ಮೂಡಿಸಿದರು. ಆದರೆ ಅವರ ಆಟಕ್ಕೆ ತಕ್ಕ ಜೊತೆಯಾಟ ದೊರೆಯಲಿಲ್ಲ. 49 ರನ್ಗಳಲ್ಲಿ ಋತುರಾಜ್ ಗಾಯಕವಾಡ್ 53 ರನ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ 133 ರನ್ ಗಳಿಸಲು ನೆರವಾಯಿತು.
ಗುಜರಾತ್ ಟೈಟಾನ್ಸ್ ತಂಡದ ಪರ ವೃದ್ಧಿಮಾನ ಸಹಾ 67 ರನ್ 134 ರನ್ಗಳ ಗುರಿ ಬೆನ್ನತ್ತಿದ ಗುಜರಾಟ್ ಟೈಟಾನ್ಸ್ ತಂಡಕ್ಕೆ ಒಂದು ಮಟ್ಟಿಗೆ ಚೆನ್ನೈ ಬೌಲರ್ಗಳು ಕಾಟ ಕೊಟ್ಟರು. ಕಡಿಮೆ ಗುರಿಯಿದ್ದರೂ ನಿಯಂತ್ರಿಸುವ ನಿರೀಕ್ಷೆ ಮೂಡಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ಗಳ ಪ್ರಯತ್ನ ವಿಫಲಗೊಳಿಸಿ ಗುಜರಾತ್ ಟೈಟಾನ್ಸ್ ಬ್ಯಾಟರ್ಗಳು ಗೆಲುವು ತಂದುಕೊಟ್ಟರು. ಗುಜರಾತ್ ಟೈಟಾನ್ಸ್ ತಂಡದ ಪರ ವೃದ್ಧಿಮಾನ ಸಹಾ 67 ರನ್ಗಳಿಸಿ ಅಜೇತರಾಗಿಯೂ ಉಳಿದು ಗೆಲುವು ತಂದುಕೊಟ್ಟರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಪ್ರಸಕ್ತ ಐಪಿಎಲ್ ಋತುವಿನ 62 ನೇ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಗುಜರಾತ್ ಟೈಟಾನ್ಸ್ ಗೆ ಗೆಲುವಿಗೆ 134 ರನ್ ಟಾರ್ಗೆಟ್ ನೀಡಿತು. ಗುಜರಾತ್ 19 ಓವರ್ ಮತ್ತು ಒಂದು ಎಸೆತದಲ್ಲಿ ಪೂರ್ಣಗೊಳಿಸಿತು.
ಆದರೆ ಚೆನ್ನೈ ಸೂಪರ್ ಕಿಂಗ್ಸ್ಗೆ ಉತ್ತಮ ಆರಂಭ ಸಿಗಲಿಲ್ಲ. ಇನಿಂಗ್ಸ್ನ ಮೂರನೇ ಓವರ್ನಲ್ಲಿ ವೇಗಿ ಮೊಹಮ್ಮದ್ ಶಮಿ ಡೆವೊನ್ ಕಾನ್ವೆ ಅವರನ್ನು ಔಟ್ ಮಾಡಿದರು. ಅವರು 9 ಎಸೆತಗಳಲ್ಲಿ 5 ರನ್ ಗಳಿಸಿದ್ದರು. ಇದಾದ ನಂತರ ಋತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ ಎರಡನೇ ವಿಕೆಟ್ಗೆ 57 ರನ್ಗಳ ಜೊತೆಯಾಟವಾಡುವ ಮೂಲಕ ಸ್ಕೋರ್ ಅನ್ನು 60 ರನ್ಗಳಿಗೆ ತಲುಪಿಸಿದರು. ಮೊಯಿನ್ ಸಾಯಿ ಕಿಶೋರ್ 17 ಎಸೆತಗಳಲ್ಲಿ 21 ರನ್ ಗಳಿಸಿ ಬಲಿಯಾದರು. ಅವರು 2 ಸಿಕ್ಸರ್ ಬಾರಿಸಿದರು. ಕೊನೆಗೂ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿತು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ