IPL 2022 DC vs RR, Jos Buttler: ರೊಚ್ಚಿಗೆದ್ದ ಬಟ್ಲರ್, 3ನೇ ಸೆಂಚುರಿಲಿ ಸಿಕ್ಸ್, ಫೋರ್ಗಳ ಲೆಕ್ಕ ಇಡೋದೇ ಕಷ್ಟ!
ದೇವದತ್ ಪಡಿಕ್ಕಲ್ (54 ರನ್) ಜೋಸ್ ಬಟ್ಲರ್ ಜೊತೆಗೂಡಿ ಮೊದಲ ವಿಕೆಟ್ಗೆ 155 ರನ್ ಸೇರಿಸಿದರು. ಬಟ್ಲರ್ ಅವರ ವಿಕೆಟ್ (116) ನಂತರ ನಾಯಕ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ಗೆ ಬಲಿಷ್ಠ ಫಿನಿಶ್ ನೀಡಿದರು.
ಜೋಸ್ ಬಟ್ಲರ್ ಅವರ ಬ್ಯಾಟ್ನಿಂದ ಐಪಿಎಲ್ 2022ರಲ್ಲಿ ಮತ್ತೊಂದು ಸ್ಫೋಟಕ ಸೆಂಚುರಿ ಸಿಡಿದಿದೆ. ಈಮೂಲಕ ಅವರು ಈ ಐಪಿಎಲ್ನಲ್ಲಿ ಮೂರನೇ (IPL 2022) ಶತಕವನ್ನು ಬಾರಿಸಿದಂತಾಗಿದೆ. ಅವರು ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗಳ ಮೇಲೆ ಭರ್ಜರಿ ಸ್ಟ್ರೋಕ್ ಆಟದ (Jos Buttler 3rd Century) ಮೂಲಕ 20 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ (IPL 2022 DC vs RR) ಕೇವಲ 2 ವಿಕೆಟ್ ನಷ್ಟಕ್ಕೆ ಭರ್ಜರಿಯಾಗಿ 222 ರನ್ ಕಲೆಹಾಕಲು ಸಹಾಯ ಮಾಡಿದರು. ಜೋಸ್ ಬಟ್ಲರ್ ತಮ್ಮ ಸ್ಫೋಟಕ ಇನ್ನಿಂಗ್ಸ್ನಲ್ಲಿ 9 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಬಾರಿಸಿದರು.
ದೇವದತ್ ಪಡಿಕ್ಕಲ್ (54 ರನ್) ಜೋಸ್ ಬಟ್ಲರ್ ಜೊತೆಗೂಡಿ ಮೊದಲ ವಿಕೆಟ್ಗೆ 155 ರನ್ ಸೇರಿಸಿದರು. ಬಟ್ಲರ್ ಅವರ ವಿಕೆಟ್ (116) ನಂತರ ನಾಯಕ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ಗೆ ಬಲಿಷ್ಠ ಫಿನಿಶ್ ನೀಡಿದರು.
ಮತ್ತೂ ಮುನ್ನುಗ್ಗುವ ಉಮೇದಿಯಲ್ಲಿ ರಾಜಸ್ಥಾನ ರಾಯಲ್ಸ್ ರಾಜಸ್ಥಾನ ರಾಯಲ್ಸ್ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಮತ್ತೊಂದು ನಿರ್ಣಾಯಕ ಗೆಲುವನ್ನು ಪಡೆಯುವ ರೀತಿಯಲ್ಲಿ ರಾಜಸ್ಥಾನ ಬ್ಯಾಟ್ ಮಾಡಿ ಭರ್ಜರಿ ಮೊತ್ತ ಕಲೆಹಾಕಿದೆ. ಭರ್ಜರಿ ಬ್ಯಾಟಿಂಗ್ನಿಂದ ಪಾಯಿಂಟ್ ಪಟ್ಟಿಯಲ್ಲಿ ಮೇಲೆ ಜಿಗಿಯುವ ಹುಕಿಯಲ್ಲಿ ರಾಜಸ್ಥಾನ ಇದೆ.
ಈ ಐಪಿಎಲ್ ಸೀಸನ್ನ ಗರಿಷ್ಠ ಮೊತ್ತ ರಾಜಸ್ಥಾನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗಳಿಸಿದ 222 ರನ್ಗಳು ಈ ಐಪಿಎಲ್ ಋತುವಿನಲ್ಲಿ ಗಳಿಸಿದ ಗರಿಷ್ಠ ಮೊತ್ತವಾಗಿದೆ.
ರಾಜಸ್ಥಾನ ರಾಯಲ್ಸ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 15 ರನ್ಗಳಿಂದ ಸೋಲಿಸಿತು. ಕೊನೆಯ ಎರಡು ಓವರ್ಗಳಲ್ಲಿ 36 ರನ್ಗಳ ಅಗತ್ಯವಿದ್ದಾಗ, ವೇಗಿ ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಮೇಡನ್ ಬೌಲ್ ಮಾಡಿದರು. ರೋವ್ಮೆನ್ ಪೊವಲ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವಿನಿಂದ 15 ರನ್ಗಳಿಂದ ವಂಚಿತವಾಯಿತು. ಆದರೆ ರಾಜಸ್ಥಾನ ರಾಯಲ್ಸ್ ತನ್ನ ಪರಿಶ್ರಮಕ್ಕೆ ತಕ್ಕಂತೆ ಭರ್ಜರಿ ಜಯವನ್ನೇ ಗಳಿಸಿತು.
That's that from Match 34. @rajasthanroyals take this home by a 15-run win.
ಗೆಲುವಿಗೆ 223 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕರಾದ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಉತ್ತಮ ಆರಂಭ ನೀಡಿದರು. ಮುಂದಿನ ಹಂತದಲ್ಲಿ ನಾಯಕ ರಿಷಬ್ ಪಂತ್ 44 ರನ್ಗಳಿಗೆ ನಿರ್ಗಮಿಸುವ ಮೂಲಕ ಡಿಸಿ ಭರವಸೆಗೆ ಮತ್ತೆ ದೊಡ್ಡ ಹೊಡೆತ ಬಿದ್ದಿತು.
ಈ ಹಿಂದೆ ಎರಡು ಸೆಂಚುರಿ ಮೂಲಕ ದಾಖಲೆ ಮಾಡಿದ್ದ ಬಟ್ಲರ್ ಬಟ್ಲರ್ ಅವರು ಐಪಿಎಲ್ 2022ರಲ್ಲೆ ಈ ಹಿಂದಿನ ಪಂದ್ಯಗಳಲ್ಲಿ ಎರಡು ಸೆಂಚುರಿ ಗಳಿಸಿದ್ದರು. ಒಂದು ಸೆಂಚುರಿಯಲ್ಲಿ ಗಳಿಸಿದ 103 ರನ್ ಒಂಬತ್ತು ಬೌಂಡರಿಗಳು ಮತ್ತು ಐದು ಸಿಕ್ಸರ್ಗಳಿಂದ ಕೂಡಿತ್ತು. ಆ ಸೆಂಚುರಿ ಮೂಲಕ ಅವರು ದಂತಕಥೆ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದರು.
ಬಟ್ಲರ್ ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ಶತಕಗಳೊಂದಿಗೆ ಸಾಗರೋತ್ತರ ಬ್ಯಾಟರ್ ಆಗಲು ಎಬಿ ಡಿವಿಲಿಯರ್ಸ್ ಅವರ ಸಾಲಿಗೆ ಸೇರಿದ್ದರು.. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಐಪಿಎಲ್ನಲ್ಲಿ ಅದ್ಭುತ ಆರು ಶತಕಗಳೊಂದಿಗೆ ಗಣ್ಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ