DC vs MI Head to Head: ಡೆಲ್ಲಿ vs ಮುಂಬೈ ಪಂದ್ಯದಲ್ಲಿ ಜಯದ ಮಾಲೆ ಯಾರಿಗೆ?

ಇಲ್ಲಿಯವರೆಗಿನ ಐಪಿಎಲ್ ಇತಿಹಾಸದಲ್ಲಿ, ಎರಡೂ ತಂಡಗಳು ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ 14 ಪಂದ್ಯಗಳನ್ನು ಡೆಲ್ಲಿ ಕ್ಯಾಪಿಟಲ್ಸ್ (ಹಿಂದಿನ ಡೆಲ್ಲಿ ಡೇರ್‌ಡೆವಿಲ್ಸ್) ಗೆದ್ದಿದೆ.  ಉಳಿದ 16 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆದ್ದಿದೆ.

ಗೆಲ್ಲೋರಾರು?

ಗೆಲ್ಲೋರಾರು?

 • Share this:
  ಐಪಿಎಲ್​ನ (IPL 2022) ಎರಡನೆ ದಿನ ಅಂದರೆ ಭಾನುವಾರ ಎರಡು ಜಿದ್ದಾಜಿದ್ದಿನ ಪಂದ್ಯಗಳು ನಡೆಯಲಿವೆ. ಮೊದಲನೆಯ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ (DC vs MI) ವಿರುದ್ಧ ನಡೆಯಲಿದೆ. IPL 2020 ರನ್ನರ್ಸ್ ಅಪ್ ತಂಡ ಮಾರ್ಚ್ 27 ರಂದು ತನ್ನ ಆರಂಭಿಕ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ಸ್ ಮತ್ತು IPL ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್‌ನೊಂದಿಗೆ ಸೆಣಸಾಡಲಿದೆ. ಹಾಗಾದರೆ ಐಪಿಎಲ್ 2022ರಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಬಲಾಬಲಗಳ (DC vs MI Head to Head) ನೋಟ ಇಲ್ಲಿದೆ.

  ಇಲ್ಲಿಯವರೆಗಿನ ಐಪಿಎಲ್ ಇತಿಹಾಸದಲ್ಲಿ, ಎರಡೂ ತಂಡಗಳು ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ 14 ಪಂದ್ಯಗಳನ್ನು ಡೆಲ್ಲಿ ಕ್ಯಾಪಿಟಲ್ಸ್ (ಹಿಂದಿನ ಡೆಲ್ಲಿ ಡೇರ್‌ಡೆವಿಲ್ಸ್) ಗೆದ್ದಿದೆ.  ಉಳಿದ 16 ಮುಂಬೈ ಇಂಡಿಯನ್ಸ್ ಗೆದ್ದಿದೆ.

  IPL 2022 ಲೈವ್: ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ಹೆಡ್ ಟು ಹೆಡ್ ಅಂಕಿಅಂಶಗಳು

  ಕಳೆದ ವರ್ಷ 2021 ರಲ್ಲಿ, ಐದು ಬಾರಿಯ ಚಾಂಪಿಯನ್‌ಗಳ ವಿರುದ್ಧ DC ಎರಡು ಆರಾಮದಾಯಕ ಗೆಲುವು ಕಂಡಿತ್ತು.

  ಟಾಪ್ ಪರ್ಫಾರ್ಮರ್ಸ್
  ರೋಹಿತ್ ಶರ್ಮಾ ಐಪಿಎಲ್‌ನಲ್ಲಿನ ಟಿ 20 ಪಂದ್ಯಗಳ ಬ್ಯಾಟಿಂಗ್ ವಿಭಾಗದಲ್ಲಿ ಎರಡು ತಂಡಗಳ ನಡುವಿನ ಪ್ರಮುಖ ರನ್ ಸ್ಕೋರರ್. ಅವರು ಇಲ್ಲಿಯವರೆಗೆ 684 ರನ್ ಗಳಿಸಿದ್ದಾರೆ. ದೆಹಲಿಯ ವೀರೇಂದ್ರ ಸೆಹ್ವಾಗ್ (375), ಮುಂಬೈನ ಕೀರಾನ್ ಪೊಲಾರ್ಡ್ (360) ಮತ್ತು ದೆಹಲಿಯ ಶ್ರೇಯಸ್ ಅಯ್ಯರ್ (359) ನಂತರದ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಲಸಿತ್ ಮಾಲಿಂಗ (22), ಹರ್ಭಜನ್ ಸಿಂಗ್ (21) ಮತ್ತು ಜಸ್ಪ್ರೀತ್ ಬುಮ್ರಾ (20 ವಿಕೆಟ್) ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂವರು ಮುಂಬೈ ಪರ ಆಡಿದ್ದರು.

  ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​ಗಳು ಇವರೇ
  ರೋಹಿತ್ ಶರ್ಮಾ 684 ರನ್, ವೀರೇಂದ್ರ ಸೆಹ್ವಾಗ್ 375 ರನ್, ಕೀರಾನ್ ಪೊಲಾರ್ಡ್ 380 ರನ್, ಶ್ರೇಯಸ್ ಅಯ್ಯರ್ 359 ರನ್

  ಹೆಚ್ಚಿನ ವಿಕೆಟ್ ಗಳಿಸಿದ ಬೌಲರ್​ಗಳು
  ಲಸಿತ್ ಮಾಲಿಂಗ 22, ಹರ್ಭಜನ್ ಸಿಂಗ್ 21, ಜಸ್ಪ್ರೀತ್ ಬುಮ್ರಾ 20, ಅಮಿತ್ ಮಿಶ್ರಾ 19, ಟ್ರೆಂಟ್ ಬೌಲ್ಟ್ 14

  ಇದನ್ನು ಓದಿ: IPL Cheer Girls: ಸೌಂದರ್ಯದ ಹಿಂದಿನ ವಿಷಾದ; ಐಪಿಎಲ್ ಚಿಯರ್ ಲೀಡರ್​ಗಳ ಮಾಯಾಲೋಕ!

  ಮುಂಬೈ ಇಂಡಿಯನ್ಸ್ ಸಂಭಾವ್ಯ XI ಹೀಗಿದೆ
  ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (WK), ತಿಲಕ್ ವರ್ಮಾ, ಟಿಮ್ ಡೇವಿಡ್, ಕೀರಾನ್ ಪೊಲಾರ್ಡ್, ಡೇನಿಯಲ್ ಸಾಮ್ಸ್, ಸಂಜಯ್ ಯಾದವ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್

  ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ XI ಹೀಗಿದೆ
  ಟಿಮ್ ಸೀಫರ್ಟ್, ಪೃಥ್ವಿ ಶಾ, ಮನ್‌ದೀಪ್ ಸಿಂಗ್/ಕೆಎಸ್ ಭರತ್, ರಿಷಭ್ ಪಂತ್ (ನಾಯಕ), ರೋವ್‌ಮನ್ ಪೊವೆಲ್, ಸರ್ಫ್ರಾಜ್ ಖಾನ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಚೇತನ್ ಸಕರಿಯಾ/ಕುಲದೀಪ್ ಯಾದವ್, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್

  ಕೊನೆಯ ಪಂದ್ಯದ ಫಲಿತಾಂಶ ಏನು?
  ಶಾರ್ಜಾದಲ್ಲಿ ಐಪಿಎಲ್ 2021 ರ ಲೀಗ್​ನ 46 ನೇ ಪಂದ್ಯದಲ್ಲಿ ಎಂಐ ಮತ್ತು ಡಿಸಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ವೇಗಿ ಅವೇಶ್ ಖಾನ್ ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ತಲಾ ಮೂರು ವಿಕೆಟ್‌ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 129/8 ಮಾತ್ರ ಸಾಧ್ಯವಾಗಿತ್ತು.

  ಇದನ್ನೂ ಓದಿ: IPL ಎಂಬ ಚಿನ್ನದ ಕೋಳಿ! ಇಲ್ಲಿ ಹಣದ ಹೊಳೆ ಹರಿಯೋದು ಎಲ್ಲಿಂದ?

  ನಾಯಕ ರಿಷಭ್ ಪಂತ್ ಮತ್ತು ಮಾಜಿ ನಾಯಕ ಶ್ರೇಯಸ್ ಅಯ್ಯರ್ ಕ್ರಮವಾಗಿ 26 ಮತ್ತು 33 ರನ್ ಗಳಿಸಿ ನಾಲ್ಕು ವಿಕೆಟ್‌ಗಳಿಂದ DC ಗೆ ಪಂದ್ಯವನ್ನು ಗೆದ್ದಿದ್ದರು. ಇದೀಗ ಐಪಿಎಲ್ 2022ನೇ ಆವೃತ್ತಿಯಲ್ಲಿ ಈ ಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದು ಫಲಿತಾಂಶ ಕುತೂಹಲ ಮೂಡಿಸಿದೆ.
  Published by:guruganesh bhat
  First published: