IPL 2022, CSK vs DC: ಒರಿಜಿನಲ್ ಆಟ ಪ್ರದರ್ಶಿಸಿದ ಚೆನ್ನೈ! ಡೆವೋನ್ ಕಾನ್ವೆ ಸೆಂಚುರಿ ಮಿಸ್, ಧೋನಿ ಅಬ್ಬರ

ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಾವೂ ಏನು ಕಡಿಮೆ ಇಲ್ಲ ಎಂಬಂತೆ ಆಡಿದ 8 ಬೌಲ್​ಗಳಲ್ಲೇ 21 ರನ್ ಪೇರಿಸಿ ಆರ್ಭಟ ತೋರಿಸಿದರು. 

ಪಂದ್ಯದ ದೃಶ್ಯ

ಪಂದ್ಯದ ದೃಶ್ಯ

  • Share this:
    ಪ್ರಸ್ತುತ IPL 2022ರ ಪಾಯಿಂಟ್ ಟೇಬಲ್​ ಐದನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್  ಮತ್ತು ಮರಳಿ ಕ್ಯಾಪ್ಟನ್ಸಿ ಜವಾಬ್ದಾರಿ ಪಡೆದುಕೊಂಡಿರುವ  ಪಾಯಿಂಟ್ ಟೇಬಲ್​ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ  ಧೋನಿಯ CSK ನಡುವಿನ ಹಣಾಹಣಿ (IPL 2022, CSK vs DC Live Score Updates) ಭಾರೀ ಕುತೂಹಲ ಹುಟ್ಟಿಸುವಂತಿದೆ. ಅಬ್ಬರದ ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್  20 ಓವರ್​ಗಳಲ್ಲಿ  ಬರೋಬ್ಬರಿ 208 ರನ್​ಗಳನ್ನು ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಸವಾಲಿನ ಟಾರ್ಗೆಟ್ ಅನ್ನೇ ನೀಡಿದೆ. ಡೆಲ್ಲಿ ಬೌಲರರ್ಗಳಿಗೆ ಗೋಡೆಯಂತೆ ಸವಾಲಾಗಿ ನಿಂತಿದ್ದು ಸ್ಫೋಟಕ ಬ್ಯಾಟರ್ ಡೆವೋನ್ ಕಾನ್ವೆ, 49 ಬೌಲ್​ಗಳಲ್ಲಿ 87 ರನ್​ಗಳನ್ನು ಸಿಡಿಸಿದರು. ಅವರು ರನ್​ ಪರ್ವತದಲ್ಲಿ  5 ಸಿಕ್ಸರ್ ಮತ್ತು 7 ಬೌಂಡರಿಗಳೇ ಇದ್ದವು!

    ಅಲ್ಲದೇ ಚೆನ್ನೈ ಪರ ಋತುರಾಜ್ ಗಾಯಕ್ವಾಡ್ 33 ಬೌಲ್​ಗಳಲ್ಲಿ 41 ರನ್​ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್​ಗಳನ್ನು ಕಾಡಿದರು. ಚೆನ್ನೈ ಪರ ಶಿವಂ ದುಬೆ ಸಹ 19 ಬೌಲ್​ಗಳಿಗೆ 32 ರನ್ ಸಿಡಿಸಿದರು. ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಾವೂ ಏನು ಕಡಿಮೆ ಇಲ್ಲ ಎಂಬಂತೆ ಆಡಿದ 8 ಬೌಲ್​ಗಳಲ್ಲೇ 21 ರನ್ ಪೇರಿಸಿ ಆರ್ಭಟ ತೋರಿಸಿದರು.

    ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. DC ತನ್ನ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 21 ರನ್‌ಗಳ ಜಯದೊಂದಿಗೆ ಪ್ಲೇಆಫ್ ಅರ್ಹತೆಗಾಗಿ ಕಣದಲ್ಲಿ ಉಳಿದಿದೆ.

    CSK vs DC ಹೆಡ್ ಟು ಹೆಡ್:
    ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 26
    DC ಗೆದ್ದ ಪಂದ್ಯಗಳು: 10
    CSK ಗೆದ್ದ ಪಂದ್ಯಗಳು: 16
    CSK ವಿರುದ್ಧ DC ಸರಾಸರಿ ಸ್ಕೋರ್: 148

    ಇದನ್ನೂ ಓದಿ: RCB vs SRH: ಸೂಪರ್​ ಡೂಪರ್​ ಡು ಪ್ಲೆಸಿಸ್​, ಕೊನೆಯಲ್ಲಿ ಡಿಕೆ ದರ್ಬಾರ್​! ಇದು ಆ್ಯಕ್ಚುಲಿ ಚೆನ್ನಾಗಿರೋದು

    DC ವಿರುದ್ಧ CSK ಸರಾಸರಿ ಸ್ಕೋರ್: 162
    ಡಿಸಿಗೆ ಅತಿ ಹೆಚ್ಚು ರನ್: 426 ಶಿಖರ್ ಧವನ್
    CSK ಪರ ಅತಿ ಹೆಚ್ಚು ರನ್: 565 MS ಧೋನಿ
    ಡಿಸಿಗೆ ಹೆಚ್ಚು ವಿಕೆಟ್: 9 ಅಮಿತ್ ಮಿಶ್ರಾ
    CSK ಪರ ಅತಿ ಹೆಚ್ಚು ವಿಕೆಟ್: 16 ಡ್ವೇನ್ ಬ್ರಾವೋ

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಶ್ರೀಕರ್ ಭರತ್, ಮಿಚೆಲ್ ಮಾರ್ಷ್, ರಿಷಬ್ ಪಂತ್(w/c), ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ರಿಪಾಲ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಅನ್ರಿಚ್ ನಾರ್ಟ್ಜೆ

    ಇದನ್ನೂ ಓದಿ: RCB: ದಿನೇಶ್​ ಕಾರ್ತಿಕ್​ ಮುಂದೆ ತಲೆ ಬಾಗಿದ ಕಿಂಗ್​ ಕೊಹ್ಲಿ! ಇದಕ್ಕೆ ಎಲ್ರಿಗೂ ಇಷ್ಟ ಆಗೋದು ವಿರಾಟ್​

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಮೊಯಿನ್ ಅಲಿ, ಎಂಎಸ್ ಧೋನಿ(w/c), ಶಿವಂ ದುಬೆ, ಡ್ವೇನ್ ಬ್ರಾವೋ, ಮಹೇಶ್ ತೀಕ್ಷಣ, ಸಿಮರ್ಜೀತ್ ಸಿಂಗ್, ಮುಖೇಶ್ ಚೌಧರಿ

    ಪ್ಲೇ ಆಫ್ ಪ್ರವೇಶಿಸದಿದ್ದರೂ ಅದು ಪ್ರಪಂಚದ ಅಂತ್ಯವಲ್ಲ
    ಪಂದ್ಯದ ನಂತರ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ, ನಾನು ಗಣಿತದ ದೊಡ್ಡ ಅಭಿಮಾನಿಯಲ್ಲ. ಸ್ಕೂಲಿನಲ್ಲಿ ಕೂಡ ನಾನು ಚೆನ್ನಾಗಿಲ್ಲ. ಈಗಲೇ ಪ್ಲೇಆಫ್ ಬಗ್ಗೆ ಯೋಚಿಸಲು ನನ್ನ ಬಳಿ ಆಗದು. ಎಲ್ಲರೂ ಐಪಿಎಲ್ ಅನ್ನು ಆನಂದಿಸಲು ಬಯಸುತ್ತೀರಿ. ಇತರ ಎರಡು ತಂಡಗಳು ಆಡುತ್ತಿರುವಾಗ, ನೀವು ಒತ್ತಡದಲ್ಲಿರಲು ಮತ್ತು ಯೋಚಿಸಲು ಬಯಸುವುದಿಲ್ಲ. ಮುಂದಿನ ಪಂದ್ಯದಲ್ಲಿ ಏನು ಮಾಡಬೇಕೆಂದು ನೀವು ಯೋಚಿಸಬೇಕು. ನಾವು ಪ್ಲೇಆಫ್‌ ಪ್ರವೇಶಿಸಿದರೆ ಅದು ನಿಜಕ್ಕೂ ಅದ್ಭುತವೇ ಹೌದು. ಆದರೆ ನಾವು ಪ್ಲೇ ಆಫ್ ಪ್ರವೇಶಿಸದಿದ್ದರೂ ಅದು ಪ್ರಪಂಚದ ಅಂತ್ಯವಲ್ಲ ಎಂದು ವ್ಯಾಖ್ಯಾನಿಸಿದ್ದಾರೆ.
    Published by:guruganesh bhat
    First published: