ಚೆನ್ನೈ ಸೂಪರ್ ಕಿಂಗ್ಸ್ ಪರ ಡೆವೊನ್ ಕಾನ್ವೆ (Devon Conway) ಕೇವಲ 49 ಎಸೆತಗಳಲ್ಲಿ ಗಳಿಸಿದ ಅಮೋಘ 87 ರನ್ಗಳ ಫಲವಾಗಿ ಭರ್ಜರಿ ಮೊತ್ತ ದಾಖಲಿಸಿದ್ದ ಚೆನ್ನೈಗೆ ಅಷ್ಟೆ ಭರ್ಜರಿ ಗೆಲುವು ಒಲಿದಿದೆ. ಚೆನ್ನೈನ ಬ್ಯಾಟರ್ಗಳ ಪರಿಶ್ರಮಕ್ಕೆ ಬೌಲರರ್ಗಳೂ ದನಿಗೂಡಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು (IPL 2022, CSK vs DC Highlights) ಪೆವಿಲಿಯನ್ಗೆ ಅಟ್ಟಿ ಗೆಲುವನ್ನು ಸುಲಭವಾಗಿ ವಶಪಡಸಿಕೊಂಡಿದ್ದಾರೆ. ಕೊನೆಯಲ್ಲಿ ಬ್ರಾವೋ ಖಲೀಲ್ ಅಹ್ಮದ್ ಅವರನ್ನು ಗೋಲ್ಡನ್ ಡಕ್ ಮೂಲಕ ಔಟ್ ಮಾಡಿದರು. ಈಮೂಲಕ 209 ರನ್ಗಳ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ 17.4 ಓವರ್ಗಳಲ್ಲಿ 117 ರನ್ ಗಳಿಸಷ್ಟೇ ಶಕ್ತವಾಗಿ ಗೆಲುವನ್ನು ಚೆನ್ನೈಗೆ ಬಿಟ್ಟುಕೊಟ್ಟಿದೆ.
ಚೆನ್ನೈ ಪರ ಮೊಯೀನ್ ಅಲಿ 4 ಓವರ್ಗಳಲ್ಲಿ 13 ರನ್ ನೀಡಿ 3 ವಿಕೆಟ್, ಮುಕೇಶ್ ಚೌಧರಿ 2, ಬ್ರಾವೋ 2 ವಿಕೆಟ್ ಕಬಳಿಸಿ ಡೆಲ್ಲಿ ಬ್ಯಾಟರ್ಗಳನ್ನು ಕಾಡಿ ಗೆಲುವು (CSK Won) ತಂದುಕೊಟ್ಟಿದ್ದಾರೆ.
ಪಂದ್ಯದ ಮೊದಲೇ ಹೆಚ್ಚಿದ್ದ ಕುತೂಹಲ ಪ್ರಸ್ತುತ IPL 2022ರ ಪಾಯಿಂಟ್ ಟೇಬಲ್ ಐದನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮರಳಿ ಕ್ಯಾಪ್ಟನ್ಸಿ ಜವಾಬ್ದಾರಿ ಪಡೆದುಕೊಂಡಿರುವ ಪಾಯಿಂಟ್ ಟೇಬಲ್ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಧೋನಿಯ CSK ನಡುವಿನ ಹಣಾಹಣಿ (IPL 2022, CSK vs DC Live Score Updates) ಭಾರೀ ಕುತೂಹಲ ಹುಟ್ಟಿಸುವಂತಿತ್ತು. ಈ ಪಂದ್ಯದ ಗೆಲುವಿನ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೆ ಜಿಗಿಯಿತು.
ಚೆನ್ನೈ ಬ್ಯಾಟರ್ಗಳ ಅಬ್ಬರ ಅಬ್ಬರದ ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ ಬರೋಬ್ಬರಿ 208 ರನ್ಗಳನ್ನು ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್ಗೆ ಸವಾಲಿನ ಟಾರ್ಗೆಟ್ ಅನ್ನೇ ನೀಡಿದೆ. ಡೆಲ್ಲಿ ಬೌಲರರ್ಗಳಿಗೆ ಗೋಡೆಯಂತೆ ಸವಾಲಾಗಿ ನಿಂತಿದ್ದು ಸ್ಫೋಟಕ ಬ್ಯಾಟರ್ ಡೆವೋನ್ ಕಾನ್ವೆ, 49 ಬೌಲ್ಗಳಲ್ಲಿ 87 ರನ್ಗಳನ್ನು ಸಿಡಿಸಿದರು. ಅವರು ರನ್ ಪರ್ವತದಲ್ಲಿ 5 ಸಿಕ್ಸರ್ ಮತ್ತು 7 ಬೌಂಡರಿಗಳೇ ಇದ್ದವು!
ಬೌಲಿಂಗ್ ಅಂದ್ರೆ ಇದು! ಆನಂತರ ಬೌಲಿಂಗ್ ವಿಭಾಗದಲ್ಲೂ ಚೆನ್ನೈ ಸಾಂಘಿಕ ಆಟ ಪ್ರದರ್ಶಿಸಿತು. ಚೆನ್ನೈನ ಬೌಲರ್ಗಳು ಡೆಲ್ಲಿ ಬ್ಯಾಟರ್ಗಳನ್ನು ಬಿಟ್ಟು ಬಿಡದೇ ಕಾಡಿದರು. ಇದು ಡೆಲ್ಲಿ ಬ್ಯಾಟಿಂಗ್ ಪಡೆ ರನ್ ಗಳಿಸಲು ತಿಣುಕಾಡುವಂತೆ ಮಾಡಿತು.
ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.
ಪ್ಲೇ ಆಫ್ ಪ್ರವೇಶಿಸದಿದ್ದರೂ ಅದು ಪ್ರಪಂಚದ ಅಂತ್ಯವಲ್ಲ ಪಂದ್ಯದ ನಂತರ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ, ನಾನು ಗಣಿತದ ದೊಡ್ಡ ಅಭಿಮಾನಿಯಲ್ಲ. ಸ್ಕೂಲಿನಲ್ಲಿ ಕೂಡ ನಾನು ಚೆನ್ನಾಗಿಲ್ಲ. ಈಗಲೇ ಪ್ಲೇಆಫ್ ಬಗ್ಗೆ ಯೋಚಿಸಲು ನನ್ನ ಬಳಿ ಆಗದು. ಎಲ್ಲರೂ ಐಪಿಎಲ್ ಅನ್ನು ಆನಂದಿಸಲು ಬಯಸುತ್ತೀರಿ. ಇತರ ಎರಡು ತಂಡಗಳು ಆಡುತ್ತಿರುವಾಗ, ನೀವು ಒತ್ತಡದಲ್ಲಿರಲು ಮತ್ತು ಯೋಚಿಸಲು ಬಯಸುವುದಿಲ್ಲ. ಮುಂದಿನ ಪಂದ್ಯದಲ್ಲಿ ಏನು ಮಾಡಬೇಕೆಂದು ನೀವು ಯೋಚಿಸಬೇಕು. ನಾವು ಪ್ಲೇಆಫ್ ಪ್ರವೇಶಿಸಿದರೆ ಅದು ನಿಜಕ್ಕೂ ಅದ್ಭುತವೇ ಹೌದು. ಆದರೆ ನಾವು ಪ್ಲೇ ಆಫ್ ಪ್ರವೇಶಿಸದಿದ್ದರೂ ಅದು ಪ್ರಪಂಚದ ಅಂತ್ಯವಲ್ಲ ಎಂದು ವ್ಯಾಖ್ಯಾನಿಸಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ