CSK ICICI Bank Credit Card: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರನ್ನು ಭೇಟಿಯಾಗಲು ಹೀಗೆ ಮಾಡಿ!
ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಚೆನ್ನೈ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಬ್ಯಾಂಕ್ ಹೇಳಿದೆ.
ಮುಂಬೈ, ಮಾರ್ಚ್ 24: ಐಪಿಎಲ್ (IPL 2022) ಶುರುವಾಗಲು ತಡವಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ಸ್ಥಾನಕ್ಕೆ ಅನಿರೀಕ್ಷಿತ ಅಚ್ಚರಿ ಎಂಬಂತೆ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ರಾಜೀನಾಮೆಯನ್ನೂ ನೀಡಿದ್ದಾರೆ. ಇದು ಸಿಎಸ್ಕೆ ಅಭಿಮಾನಿಗಳಿಗೆ(CSK Fans) ಕೊಂಚ ಶಾಕ್ ನೀಡಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಮತ್ತೊಂದು ವಿಚಾರ ಕಾದಿದೆ. ನೀವು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಅಭಿಮಾನಿಯಾಗಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ (CSK ICICI Bank Credit Card) ಖರೀದಿಸುವ ಅವಕಾಶ ನಿಮಗೆ ದೊರೆಯಲಿದೆ.
ಖಾಸಗಿ ವಲಯದ ICICI ಬ್ಯಾಂಕ್ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ (CSK) ಸಹಭಾಗಿತ್ವದಲ್ಲಿ ಸಹ-ಬ್ರಾಂಡ್ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಎಲ್ಲಾ ವ್ಯಾಪಾರಿ ಮಳಿಗೆಗಳಲ್ಲಿ ಅಥವಾ ವೀಸಾ ಕಾರ್ಡ್ಗಳನ್ನು ಸ್ವೀಕರಿಸುವ ಆನ್ಲೈನ್ ವೆಬ್ಸೈಟ್ಗಳಲ್ಲಿ ಬಳಸಬಹುದಾಗಿದೆ.
ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ ಹೊಸ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಚೆನ್ನೈ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಬ್ಯಾಂಕ್ ಹೇಳಿದೆ.
ಈ ಸಹ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ನೊಂದಿಗೆ, ಕ್ರೀಡಾಭಿಮಾನಿಗಳು ತಮ್ಮ ತಂಡದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಈ ಕಾರ್ಡ್ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ.
ಕಾರ್ಡ್ ವೈಶಿಷ್ಟ್ಯಗಳು >> ಕ್ರೆಡಿಟ್ ಕಾರ್ಡ್ ಗ್ರಾಹಕರು 2000 ರಿವಾರ್ಡ್ ಪಾಯಿಂಟ್ಗಳನ್ನು ಸೇರುವ ಮತ್ತು ನವೀಕರಣದ ಉಡುಗೊರೆಯನ್ನು ಪಡೆಯುತ್ತಾರೆ. ಅದನ್ನು CSK ಮರ್ಚಂಡೈಸ್ನೊಂದಿಗೆ ರಿಡೀಮ್ ಮಾಡಬಹುದು.
>> CSK ಪಂದ್ಯಗಳಿಗೆ ಉಚಿತ ಟಿಕೆಟ್ಗಳು!
>> ಅತಿ ಹೆಚ್ಚು ಖರ್ಚು ಮಾಡುವವರಿಗೆ ಆಟಗಾರರ ಹಸ್ತಾಕ್ಷರದೊಂದಿಗೆ ಸ್ಮರಣಿಕೆಗಳನ್ನು ಸಂಗ್ರಹಿಸಲು ಅವಕಾಶ.
>> ಆಯ್ದ ಆಟಗಾರರನ್ನು ಭೇಟಿ ಮಾಡುವ ಅವಕಾಶ!
>> ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭ್ಯಾಸ ಅವಧಿಗಳಲ್ಲಿ ಭಾಗವಹಿಸಲು ಅವಕಾಶ.
>> ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ದಿನಗಳಲ್ಲಿ ಎಲ್ಲಾ ಸಣ್ಣ ವೆಚ್ಚಗಳ ಮೇಲೆ 10 ರಿವಾರ್ಡ್ ಪಾಯಿಂಟ್ಗಳು.
>> ಇತರ ಎಲ್ಲಾ ಸಣ್ಣ ವೆಚ್ಚಗಳ ಮೇಲೆ 2 ರಿವಾರ್ಡ್ ಪಾಯಿಂಟ್ಗಳು.
>> ದೇಶೀಯ ವಿಮಾನ ನಿಲ್ದಾಣದ ಲಾಂಜ್ನಲ್ಲಿ ಪೂರಕ ಪ್ರವೇಶ ಸೌಲಭ್ಯ.
>> HPCL ಇಂಧನ ಕೇಂದ್ರಗಳಲ್ಲಿ 1 ಪ್ರತಿಶತ ಇಂಧನ ಹೆಚ್ಚುವರಿ ಶುಲ್ಕವನ್ನು ಇಲ್ಲ.
>> ಕಾರ್ಡ್ ಸಂಪರ್ಕರಹಿತ ತಂತ್ರಜ್ಞಾನವನ್ನು ಹೊಂದಿದೆ. ಇದು ಗ್ರಾಹಕರಿಗೆ ಟ್ಯಾಪ್ ಮಾಡಲು ಮತ್ತು ಪಾವತಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಕಾರ್ಡ್ ಅನ್ನು ಸ್ವೈಪ್ ಮಾಡದೆ POS ಯಂತ್ರವನ್ನು ಟ್ಯಾಪ್ ಮಾಡುವ ಮೂಲಕ ಪಾವತಿ ಮಾಡಬಹುದು.