IPL 2022: ಟೋಕಿಯೋ ಒಲಂಪಿಕ್ಸ್ ವಿಜೇತರಿಗೆ BCCI ಸನ್ಮಾನ; ಚಿನ್ನ ಗೆದ್ದ ನೀರಜ್ ಚೋಪ್ರಾಗೆ 1 ಕೋಟಿ ಬಹುಮಾನ

ನೀರಜ್ ಚೊಪ್ರಾ ಅವರ ಈ ಸಾಧನೆಯ ನಂತರ ಬಿಸಿಸಿಐ ಅವರಿಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಆದರೆ, ಇದುವರೆಗೂ ಈ ಬಹುಮಾನದ ಹಣವನ್ನು ಅವರಿಗೆ ನೀಡಲು ಮಂಡಳಿಗೆ ಸಾಧ್ಯವಾಗಿರಲಿಲ್ಲ.

ಸನ್ಮಾನಿಸಿದ ಕ್ಷಣ

ಸನ್ಮಾನಿಸಿದ ಕ್ಷಣ

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ವಾಂಖೆಡೆ ಸ್ಟೇಡಿಯಂನಲ್ಲಿ ಭರ್ಜರಿ ಆರಂಭ ಕಂಡಿದೆ. ಪಂದ್ಯಾವಳಿಯ ಆರಂಭಿಕ ಪಂದ್ಯವನ್ನು ವೀಕ್ಷಿಸಲು ಬಿಸಿಸಿಐನ ಉನ್ನತ ಅಧಿಕಾರಿಗಳು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಇವರೊಂದಿಗೆ ಭಾರತದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಸೇರಿದಂತೆ ಹಲವು ಪದಕ ವಿಜೇತರು  ವಿಐಪಿ ಬಾಕ್ಸ್‌ನಲ್ಲಿ ಹಾಜರಿದ್ದರು. ಅರೇ! ಐಪಿಎಲ್​ನಲ್ಲಿ ಟೋಕಿಯೋ ಓಲಂಪಿಕ್ (Tokyo Olympics Medalist) ವಿಜೇತರು ಏಕೆ ಬಂದರು? ಅವರೂ ಮ್ಯಾಚ್ ನೋಡೋಕೆ ಬಂದ್ರಾ ಅಂತ ಕೇಳಿದ್ರೆ ಇಲ್ಲಿದೆ ಉತ್ತರ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR vs CSK) ಪಂದ್ಯದ ಆರಂಭಕ್ಕೂ ಮುನ್ನ ಬಿಸಿಸಿಐ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಹೆಮ್ಮೆ ತಂದ ಕ್ರೀಡಾಪಟುಗಳನ್ನು ಸನ್ಮಾನಿಸಿತು.

    ಟೋಕಿಯೋ ಓಲಂಪಿಕ್ಸ್​ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ 1 ಕೋಟಿ ರೂ. ಮೊತ್ತದ ಬಹುಮಾನ ನೀಡಿ ಬಿಸಿಸಿಐ ಸನ್ಮಾನಿಸಿತು. ಕಂಚಿನ ಪದಕ ಗೆದ್ದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರಿಗೆ 25 ಲಕ್ಷ, ಭಾರತ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರಿಗೆ 1.25 ಕೋಟಿ ಮೊತ್ತದ ಬಹುಮಾನಗಳನ್ನು ನೀಡಿ ಬಿಸಿಸಿಐ ಸನ್ಮಾನಿಸಿದೆ.

    ದೇಶವೇ ಹೆಮ್ಮೆಪಟ್ಟಿತ್ತು!
    ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಭಾರತವೇ ಮೆಚ್ಚುವಂತಹ ಸ್ಮರಣೀಯ ಪ್ರದರ್ಶನ ನೀಡಿದ್ದರು. 121 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಅವರು ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದು ತಂದಿದ್ದರು.

    ನೀರಜ್ ಚೊಪ್ರಾ ಅವರ ಈ ಸಾಧನೆಯ ನಂತರ ಬಿಸಿಸಿಐ ಅವರಿಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಆದರೆ, ಇದುವರೆಗೂ ಈ ಬಹುಮಾನದ ಹಣವನ್ನು ಅವರಿಗೆ ನೀಡಲು ಮಂಡಳಿಗೆ ಸಾಧ್ಯವಾಗಿರಲಿಲ್ಲ.

    ಹೀಗಾಗಿ ಐಪಿಎಲ್ 2022 ರ ಉದ್ಘಾಟನಾ ಪಂದ್ಯಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಸೌರವ್ ಗಂಗೂಲಿ ಬಿಸಿಸಿಐನಿಂದ ಈ ಸ್ಟಾರ್ ಅಥ್ಲೀಟ್‌ಗೆ 1 ಕೋಟಿ ರೂಪಾಯಿ ಚೆಕ್ ನೀಡಿದರು.



    ನೀರಜ್ ಹೊರತಾಗಿ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಲೊವ್ಲಿನಾ ಬೊರ್ಗೊಹೈನ್‌ಗೆ ಬಿಸಿಸಿಐ 25 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಿದೆ.

    ಇದನ್ನೂ ಓದಿ: IPL 2022 : ಕರ್ನಾಟಕದ ಡಿಜಿ, ಐಜಿಪಿ ಅಳಿಯ IPLನ ಸ್ಟಾರ್ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್!

    ಇದೇ ಸಮಯದಲ್ಲಿ ಮೀರಾಬಾಯಿ ಚಾನು ಮತ್ತು ಕುಸ್ತಿಪಟು ರವಿ ದಹಿಯಾ ಅವರಿಗೆ ತಲಾ50 ಲಕ್ಷ ರೂ. ನೀಡಿ ಗೌರವಿಸಿದೆ ಬಿಸಿಸಿಐ. ಕಂಚಿನ ಪದಕ ಗೆದ್ದ ಬಜರಂಗ್ ಪುನಿಯಾಗೆ 25 ಲಕ್ಷ ರೂಪಾಯಿ ಮತ್ತು ಪಿವಿ ಸಿಂಧುಗೆ 25-25 ಲಕ್ಷ ರೂಪಾಯಿಗಳನ್ನು ನೀಡಿ ಸನ್ಮಾನ ಮಾಡಲಾಯಿತು.

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ನಂತರ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಕಾರಣಕ್ಕಾಗಿ ಬಿಸಿಸಿಐ ಭಾರತ ಹಾಕಿ ತಂಡಕ್ಕೆ 1.25 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ನೀಡಿದೆ. ಭಾರತ ತಂಡದ ಪರವಾಗಿ ಕ್ಯಾಪ್ಟನ್ ಮನ್ ಪ್ರೀತ್ ಸಿಂಗ್ ಚೆಕ್ ಸ್ವೀಕರಿಸಿದರು.

    ಮಹಿಳಾ ಐಪಿಎಲ್ ಶುರುವಾಗಲಿದೆ, ನೋಡೋಕೆ ರೆಡಿಯಾಗಿರಿ!
    2023 ರ ವೇಳೆಗೆ ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಬಿಸಿಸಿಐ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ (BCCI President Sourav Ganguly) ಶುಕ್ರವಾರ ಹೇಳಿದ್ದಾರೆ. ಮಹಿಳಾ ಐಪಿಎಲ್ ಅನ್ನು ಪ್ರಾರಂಭಿಸದಿದ್ದಕ್ಕಾಗಿ ಈ ಹಿಂದೆ ಟೀಕೆಗೊಳಗಾದ ಬಿಸಿಸಿಐ, ಇದೀಗ ಲೀಗ್ ಅನ್ನು ಆರಂಭಿಸಲು ಮಾಡಲು ಯೋಜನೆ ರೂಪಿಸುತ್ತಿರುವುದಾಗಿ ತಿಳಿಸಿದೆ.

    ಇದನ್ನೂ ಓದಿ: IPL ಎಂಬ ಚಿನ್ನದ ಕೋಳಿ! ಇಲ್ಲಿ ಹಣದ ಹೊಳೆ ಹರಿಯೋದು ಎಲ್ಲಿಂದ?

    ಮಹಿಳಾ ಐಪಿಎಲ್ (Women's IPL) ಮೊದಲ ಆವೃತ್ತಿಯಲ್ಲಿ ಐದು ಅಥವಾ ಆರು ತಂಡಗಳನ್ನು ಆಡಿಸಲು ಮಂಡಳಿಯು ಅವಕಾಶ ಮಾಡಿಕೊಡಲಿದೆ. ಶುಕ್ರವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯವನ್ನು ತಿಳಿಸಿದ್ದಾರೆ.
    Published by:guruganesh bhat
    First published: