IPL 2022: IPL ಹರಾಜು ಪ್ರಕ್ರಿಯೆ ಇಂದಿನಿಂದ ಆರಂಭ.. ಎಲ್ಲಿ? ಯಾವಾಗ? ಹರಾಜು ಪ್ರಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ

IPL 2022 auction: ವಿದೇಶಿ ಆಟಗಾರರ ಜೊತೆ ಭಾರತೀಯ ಪ್ಲೇಯರ್ಸ್ ಕೂಡ ಪೈಪೋಟಿಯಲ್ಲಿದ್ದು, ಪ್ರಮುಖವಾಗಿ ಶ್ರೇಯಸ್​ ಅಯ್ಯರ್​, ಇಶಾನ್​ ಕಿಶನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಮತ್ತು ಯಜುವೇಂದ್ರ ಚಹಲ್​​ ದೊಡ್ಡ ಮೊತ್ತಕ್ಕೆ ಸೇಲ್​ ಆಗುವ ಸಾಧ್ಯತೆ ದಟ್ಟವಾಗಿದೆ

ಐಪಿಎಲ್ 2022

ಐಪಿಎಲ್ 2022

 • Share this:
  ಕ್ರಿಕೆಟ್(Cricket) ಲೋಕದ ಅತ್ಯಂತ ಶ್ರೀಮಂತ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ(IPL) 2022 ಆವೃತ್ತಿಯ ಮೆಗಾ ಹರಾಜು(IPL Auction) ಪ್ರಕ್ರಿಯೆಗೆ ಉದ್ಯಾನ ನಗರಿ ಇಂದು ಮತ್ತು ನಾಳೆ ನಡೆಯಲಿದೆ. ಬೆಂಗಳೂರಿನ(Bengaluru) ಖಾಸಗಿ ಹೋಟೆಲ್ ನಲ್ಲಿ(Hotel) ಬಯೋಬಲ್(Bio Bubble) ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕೊಂಡು ನಡೆಯುತ್ತಿರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 10 ತಂಡಗಳ ಫ್ರಾಂಚೈಸಿಗಳು ಭಾಗಿಯಾಗುತ್ತಿದ್ದು ಉತ್ತಮ ಫಾರ್ಮಿನಲ್ಲಿ ಇರುವ ಆಟಗಾರರನ್ನ ಖರೀದಿ ಮಾಡಲು ಲೆಕ್ಕಾಚಾರ ಹಾಕಿಕೊಂಡಿವೆ. ಅಲ್ಲದೆ ಇಂದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಯಾವ ತಂಡ ಯಾವ ಆಟಗಾರರನ್ನು ಖರೀದಿ ಮಾಡಲಿದೆ ಎಂದು ಕೂಡ ಉತ್ತರ ಸಿಗಲಿದೆ.ಇದಕ್ಕೂ ಮೊದಲು ಮೆಗಾ ಹರಾಜು ಪ್ರಕ್ರಿಯೆ ಯಾವಾಗ ನಡೆಯಲಿದೆ. ಹರಾಜು ಪ್ರಕ್ರಿಯೆಯನ್ನು ಎಲ್ಲಿ ವೀಕ್ಷಣೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

  2018ರ ಬಳಿಕ ಇದೇ ಮೊದಲ ಸಲ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಒಟ್ಟು 590 ಆಟಗಾರರು ಹರಾಜು ಪ್ರಕ್ರಿಯೆಲ್ಲಿ ಭಾಗಿಯಾಗಲಿದ್ದಾರೆ. ಹರಾಜಿನಲ್ಲಿ 370 ಭಾರತೀಯ ಮತ್ತು 220 ವಿದೇಶಿ ಪ್ಲೇಯರ್ಸ್​ ಇದ್ದಾರೆ.

  ಈ ಬಾರಿ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಹೊಸದಾಗಿ ಐಪಿಎಲ್ ಸೇರ್ಪಡೆಯಾಗಿರುವುದರಿಂದ 10 ತಂಡಗಳು ಆಟಗಾರರ ಖರೀದಿಗೆ ಮುಗಿ ಬೀಳಲಿವೆ. ಅಲ್ಲದೆ ಆಟಗಾರರ ಮೇಲೆ ಹಣದ ಹೊಳೆಯನ್ನು ಹರಿಸಿ ಉತ್ತಮ ತಂಡ ಕಟ್ಟುವಲ್ಲಿ ಎಲ್ಲ ಫ್ರಾಂಚೈಸಿಗಳು ಚಿಂತನೆ ನಡೆಸಿವೆ

  ಇದನ್ನೂ ಓದಿ: ಮೆಗಾ ಹರಾಜು ನಡೆಯುವ ಮುನ್ನವೇ 10 ಫ್ರಾಂಚೈಸಿಗಳಿಗೆ ಬಿಸಿಸಿಐ ಶಾಕ್

  ಹರಾಜು ಪ್ರಕ್ರಿಯೆಯಲ್ಲಿ ನಡೆಯಲಿದೆ..?

  ಫೆಬ್ರವರಿ 12 ಅಂದರೆ ಇಂದು ಹಾಗೂ ನಾಳೆ ಫೆಬ್ರವರಿ 13 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.. ಕೊರೊನಾ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಬಯೋಬಲ್ ವಾತಾವರಣ ಸೃಷ್ಟಿ ಮಾಡಿ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.

  ಹರಾಜು ಪ್ರಕ್ರಿಯೆ ಬೆಳಗ್ಗೆ 12 ಗಂಟೆಯ ಸುಮಾರಿಗೆ ಆರಂಭವಾಗಲಿದ್ದು, ಹರಾಜಿನ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 161 ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ.

  ನೇರಪ್ರಸಾರ ಹಾಗೂ ಲೈವ್ ಸ್ಟ್ರೀಮಿಂಗ್: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಈ ಹರಾಜು ಪ್ರಕ್ರಿಯೆಯ ನೇರಪ್ರಸಾರವನ್ನು ಮಾಡಲಿದೆ. ಡಿಸ್ನಿ+ ಹಾಟ್‌ಸ್ಟಾರ್ ಈ ಹರಾಜಿನ ಲೈವ್‌ಸ್ಟ್ರೀಮಿಂಗ್ ಮಾಡಲಿದೆ.

  ಹರಾಜು ಪ್ರಕ್ರಿಯೆ ಹೇಗಿರುತ್ತೆ?

  ಆಟಗಾರರನ್ನು ಬ್ಯಾಟರ್, ವೇಗಿ, ಸ್ಪಿನ್ನರ್, ಕೀಪರ್, ಆಲ್ರೌಂಡರ್ ಹೀಗೆ ಅವರ ಪಾತ್ರಕ್ಕೆ ತಕ್ಕಂತೆ ವಿಭಾಗಿಸಲಾಗಿರುತ್ತದೆ. ಈ ಪೈಕಿ 10 ಮಾರ್ಕೀ ಆಟಗಾರರ ಹರಾಜಿನೊಂದಿಗೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಂತರ ಅಂತಾರಾಷ್ಟ್ರೀಯ (ಕ್ಯಾಪ್ಡ್) ಮತ್ತು ದೇಶೀಯ (ಅನ್‌ಕ್ಯಾಪ್ಡ್) ಆಟಗಾರರನ್ನು ಅವರ ವಿಭಾಗಗಳಿಗೆ ತಕ್ಕಂತೆ ಹರಾಜಿಗೆ ಇಡಲಾಗುತ್ತದೆ.

  ಈ ರೀತಿ ಒಟ್ಟು 62 ವಿಭಾಗಗಳಿವೆ. ಮೊದಲ ದಿನವಾದ ಶನಿವಾರ 161 ಆಟಗಾರರನ್ನು ಹರಾಜಿಗೆ ಒಳಪಡಿಸಲಾಗುತ್ತದೆ. 2ನೇ ದಿನವಾದ ಭಾನುವಾರ, ಪ್ರಾಂಚೈಸಿಗಳು ಸೂಚಿಸುವ ಆಟಗಾರರನ್ನು ಮಾತ್ರ ಹರಾಜಿಗೆ ಒಳಪಡಿಸಲಾಗುತ್ತದೆ. ಈ ಪೈಕಿ ಮೊದಲ ದಿನ ಮಾರಾಟವಾಗದ ಆಟಗಾರರೂ ಸೇರಿರಬಹುದು.

  ಭಾರತದ ಆಟಗಾರರಿಗೆ ಭಾರೀ ಬೇಡಿಕೆ

  ವಿದೇಶಿ ಆಟಗಾರರ ಜೊತೆ ಭಾರತೀಯ ಪ್ಲೇಯರ್ಸ್ ಕೂಡ ಪೈಪೋಟಿಯಲ್ಲಿದ್ದು, ಪ್ರಮುಖವಾಗಿ ಶ್ರೇಯಸ್​ ಅಯ್ಯರ್​, ಇಶಾನ್​ ಕಿಶನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಮತ್ತು ಯಜುವೇಂದ್ರ ಚಹಲ್​​ ದೊಡ್ಡ ಮೊತ್ತಕ್ಕೆ ಸೇಲ್​ ಆಗುವ ಸಾಧ್ಯತೆ ದಟ್ಟವಾಗಿದೆ.

  ಯುವ ವಿಕೆಟ್ ಕೀಪರ್ ಬ್ಯಾಟರ್​ ಇಶಾನ್ ಕಿಶನ್ ಕೂಡ ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ. ಕಳೆದ ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ಕೂಡ ಈ ಸಲದ ಬಿಡ್ಡಿಂಗ್​ನಲ್ಲಿ ಗಮನ ಸೆಳೆಯುವುದು ಬಹುತೇಕ ಖಚಿತವಾಗಿದೆ.

  ಇದರ ಜೊತೆಗೆ ವಿದೇಶಿ ಪ್ಲೇಯರ್ಸ್​ಗಳಾದ ಕ್ವಿಂಟನ್ ಡಿಕಾಕ್, ಕಗಿಸೊ ರಬಾಡ, ಟ್ರೆಂಟ್​ ಬೌಲ್ಟ್​, ಡೇವಿಡ್ ವಾರ್ನರ್​, ಪ್ಯಾಟ್ ಕಮ್ಮಿನ್ಸ್​ ಹೆಚ್ಚಿನ ಬಿಡ್​​ಗೆ ಸೇಲ್​ ಆಗುವ ಸಾಧ್ಯತೆ ಇದೆ.

  ಇದನ್ನೂ ಓದಿ: 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು : ವೆಸ್ಟ್ ಇಂಡೀಸ್ ಗೆ ವೈಟ್ ವಾಶ್ ಮುಖಭಂಗ

  ಯಾವ ತಂಡದ ಬಳಿ ಎಷ್ಟು ಮೊತ್ತ?

  *ಚೆನ್ನೈ ಸೂಪರ್ ಕಿಂಗ್ಸ್: 42 ಕೋಟಿ ರೂ.

  *ರಾಯಲ್ ಚಾಲೆಂಜರ್ಸ್ ಬೆಂಗಳೂರು: 57 ಕೋಟಿ ರೂ.

  *ಮುಂಬೈ ಇಂಡಿಯನ್ಸ್: 48 ಕೋಟಿ ರೂ.

  *ಪಂಜಾಬ್ ಕಿಂಗ್ಸ್: 72 ಕೋಟಿ ರೂ.

  *ದೆಹಲಿ ಕ್ಯಾಪಿಟಲ್ಸ್: 47.5 ಕೋಟಿ ರೂ.

  *ಕೋಲ್ಕತ್ತಾ ನೈಟ್ ರೈಡರ್ಸ್: 48 ಕೋಟಿ ರೂ.

  *ರಾಜಸ್ಥಾನ್ ರಾಯಲ್ಸ್: 62 ಕೋಟಿ ರೂ.

  *ಸನ್​ ರೈಸರ್ಸ್ ಹೈದರಾಬಾದ್: 68 ಕೋಟಿ ರೂ.

  *ಲಕ್ನೋ ಸೂಪರ್ ಜೈಂಟ್ಸ್: 58 ಕೋಟಿ ರೂ.

  *ಗುಜರಾತ್ ಟೈಟಾನ್ಸ್: 52 ಕೋಟಿ ರೂ.
  Published by:ranjumbkgowda1 ranjumbkgowda1
  First published: