Anushka Sharma: ನಿಮ್ಮ ಪಕ್ಕ ಅನುಷ್ಕಾ ಶರ್ಮಾ ಕುಳಿತು IPL ನೋಡಿದರೆ ಹೇಗಿರುತ್ತೆ?

Instagram ನಲ್ಲಿ ಅವರ ವೀಡಿಯೊ 10 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ನೂರಾರು ಕಾಮೆಂಟ್‌ಗಳೊಂದಿಗೆ ವೈರಲ್ ಆಗಿದೆ.

ಅನುಷ್ಕಾ ಶರ್ಮಾ ಐಪಿಎಲ್​ನಲ್ಲಿ

ಅನುಷ್ಕಾ ಶರ್ಮಾ ಐಪಿಎಲ್​ನಲ್ಲಿ

  • Share this:
    ಐಪಿಎಲ್ 2022 ರ  (IPL 2022) ಪಂದ್ಯದಲ್ಲಿ ನಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli)  ಅವರ ಪತ್ನಿ ಅನುಷ್ಕಾ ಶರ್ಮಾ  (Anushka Sharma) ಕೆಲವೇ ಅಡಿಗಳಷ್ಟು ದೂರದಲ್ಲಿ ಕುಳಿತಿರುವುದನ್ನು ತೋರಿಸುವ ವೀಡಿಯೊವನ್ನು Instagram ಬಳಕೆದಾರರು ವೈರಲ್ ಮಾಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕಾರ್ಪೊರೇಟ್ ಬಾಕ್ಸ್‌ನಲ್ಲಿ ಕುಳಿತಿರುವ ರವೀನಾ ಅಹುಜಾ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)  ಮತ್ತು ದೆಹಲಿ ಕ್ಯಾಪಿಟಲ್ಸ್ (DC) ನಡುವಿನ ಪಂದ್ಯವನ್ನು ಬಾಲಿವುಡ್ ತಾರೆ ತನ್ನಿಂದ ಕೆಲವೇ ಸೀಟುಗಳ ದೂರದಲ್ಲಿ ಕುಳಿತು ವೀಕ್ಷಿಸಿರುವ ವಿಡಿಯೋ ಹಂಚಿಕೊಂಡಿದ್ದಾರೆ. ವಿಐಪಿ ಸೀಟಿನಿಂದ ಆಕೆಯ ವೀಡಿಯೊ Instagram ನಲ್ಲಿ ಭಾರಿ ವೈರಲ್ ಆಗಿದೆ.

    ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಒಂದೇ ವಾರದಲ್ಲಿ 10 ಮಿಲಿಯನ್ ವೀಕ್ಷಣೆಗಳನ್ನು (Viral Video)  ಗಳಿಸಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಲೈವ್ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಹೋಗಿದ್ದೆ. ಅದೃಷ್ಟವಷಾತ್ ಇದು ನನ್ನ ಜೀವನದಲ್ಲಿ ನಡೆದ ಅತ್ಯುತ್ತಮ ಅನುಭವಗಳಲ್ಲಿ ಒಂದಾಗಿದೆ" ಎಂದು ರವೀನಾ ಅಹುಜಾ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ.

    ಸ್ಟಾರ್ ನಟಿಯನ್ನು ಅತ್ಯಂತ ಸಮೀಪದಿಂದ ನೋಡುವ ಅವಕಾಶ!
    ರವೀನಾ ಅಹುಜಾ ಎಂಬುವವರು DC vs RCB IPL 2022 ಪಂದ್ಯವನ್ನು ವೀಕ್ಷಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಒಂದು ಹಂತದಲ್ಲಿ ಅನುಷ್ಕಾ ಶರ್ಮಾ ಹರ್ಷೋದ್ಗಾರವನ್ನು ಪ್ರೇಕ್ಷಕರು ಅತ್ಯಂತ ಸಮೀಪದಿಂದ ವೀಕ್ಷಿಸುವ ಅವಕಾಶ ಪಡೆಯುತ್ತಾರೆ. ಅಲ್ಲದೇ ಅಹುಜಾ ಫಿಲೌರಿ ಎಮಬುವವರು ಸಹ ನಟಿಯೊಂದಿಗಿನ ವೀಡಿಯೊವನ್ನು ಪಡೆಯುವಲ್ಲಿ ಯಶಸ್ವಿಯಾದರು.




    Instagram ನಲ್ಲಿ ಅವರ ವೀಡಿಯೊ 10 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ನೂರಾರು ಕಾಮೆಂಟ್‌ಗಳೊಂದಿಗೆ ವೈರಲ್ ಆಗಿದೆ.

    ಇದನ್ನೂ ಓದಿ: Viral Photo: ಐಪಿಎಲ್​ ಆಡ್ತಿರೋ ಹಾರ್ದಿಕ್​ ಪಾಂಡ್ಯ ಇಲ್ಲಿ ಹೆಂಗ್​ ಬಂದ್ರು? ಇದಕ್ಕೆನಾ ಅವರನ್ನು ಆಲ್​ರೌಂಡರ್​ ಅನ್ನೋದು!

    ಕಾಮೆಂಟ್‌ಗಳ ವಿಭಾಗದಲ್ಲಿ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಅವರ ಸಮೀಪದಲ್ಲಿ ಕುಳಿತು ಐಪಿಎಲ್ ಪಂದ್ಯವನ್ನು ವೀಕ್ಷಿಸಿದ್ದಕ್ಕಾಗಿ ಅನೇಕರು ಅವಳನ್ನು "ಅದೃಷ್ಟಶಾಲಿ" ಎಂದು ಕರೆದರು. ಆದರೆ ಇತರರು ಅವಳು ಕಾರ್ಪೊರೇಟ್ ಬಾಕ್ಸ್‌ಗೆ ಟಿಕೆಟ್‌ಗಳನ್ನು ಹೇಗೆ ಪಡೆದಿದ್ದಾರೆ ಎಂದು ಆಶ್ಚರ್ಯಪಟ್ಟಿದ್ದಾರೆ.

    ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 16 ರನ್ ಗಳಿಂದ ಸೋಲಿಸಿತ್ತು.

    ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ ಆರ್​ಸಿಬಿ
    ಸನ್ ರೈಸರ್ಸ್ ಹೈದರಾಬಾದ್ ತಂಡ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 2 ಸೋಲುಗಳನ್ನು ತಂಡ ಕಂಡಿದೆ. ಇನ್ನೊಂದೆಡೆ 7 ಪಂದ್ಯಗಳನ್ನು ಆಡಿರುವ ಆರ್ ಸಿಬಿ ತಂಡ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 5 ಗೆಲುವು ಹಾಗೂ 2 ಸೋಲುಗಳನ್ನು ತಂಡ ಕಂಡಿದೆ. ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ವಿರುದ್ಧ ಗೆಲುವು ಸಾಧಿಸಿದೆ.

    ಇದನ್ನೂ ಓದಿ: RCB vs SRH: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಹೈದರಾಬಾದ್​​! ತೂಫಾನ್​ನ ತಡೆಯೋಕೆ ಸಾಧ್ಯನಾ ಅಂತಿದ್ದಾರೆ ಆರ್​ಸಿಬಿ ಫ್ಯಾನ್ಸ್​​​

    ಐಪಿಎಲ್ 2022ರ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ (RCB vs SRH) ತಂಡಗಳು ಸೆಣಸಾಡಲಿವೆ. ಈ ಪಂದ್ಯವು ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7ಕ್ಕೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ.

    ಪಿಚ್ ವರದಿ:
    ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಕಳೆದ ಪಂದ್ಯವು ಕಡಿಮೆ ಸ್ಕೋರ್ ಆಗಿತ್ತು. ಅಲ್ಲದೇ ಇಂದು ತೇವಾಂಶದ ಅಂಶದಿಂದ ಕೂಡಿರುವ ಸಾಧ್ಯತೆ ಇದ್ದು, ಸ್ಪನ್ನರ್​ ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹಾಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡುವ ಸಾದ್ಯತೆ ಇದೆ.
    Published by:guruganesh bhat
    First published: