Future India Captains: ಟೀಂ ಇಂಡಿಯಾದ ಮುಂದಿನ ಕ್ಯಾಪ್ಟನ್ ಯಾರು? ಇಲ್ಲಿದೆ ಉತ್ತರ!

ಐಪಿಎಲ್ ಭವಿಷ್ಯದ ನಾಯಕನನ್ನು ಹುಡುಕುವ ಏಕೈಕ ಮಾರ್ಗವಾಗಿದೆ ಎಂದು ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದ ನಾಯಕರು?

ಭವಿಷ್ಯದ ನಾಯಕರು?

  • Share this:
ಟೀಂ ಇಂಡಿಯಾದ ಭವಿಷ್ಯದ ಬಗ್ಗೆ ಎಲ್ಲಿಲ್ಲದ ಕುತೂಹಲ! ಈಗಂತೂ ಐಪಿಎಲ್​ನಿಂದ ಇಡೀ ಟೀ ಇಂಡಿಯಾ ಹರಿದು ಹಂಚಿಹೋಗಿದೆ. IPL ಭವಿಷ್ಯದ ಟೀಂ ಇಂಡಿಯಾದ ನಾಯಕನನ್ನು ಆರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ. ಅಲ್ಲದೇ ರಿಷಬ್ ಪಂತ್, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ (Shreyas Iyer, Rishabh Pant, KL Rahul) ಅವರ ಹೆಸರನ್ನೂ ಭವಿಷ್ಯದ ಕ್ಯಾಪ್ಟನ್​ ಆಗುವ  ಎಂದು Ravi Shastri ಜ್ಯೋತಿಷ್ಯ ಹೇಳಿದ್ದಾರೆ.  ಐಪಿಎಲ್ 2022ರಲ್ಲಿ ಈ ಮೂವರು ತಮ್ಮ ನಾಯಕತ್ವವನ್ನು ಪ್ರದರ್ಶಿಸುವ ಅವಕಾಶವನ್ನು ಹೊಂದಿದ್ದಾರೆ. ಇವರಲ್ಲೇ ಒಬ್ಬರು ಟೀಂ ಇಂಡಿಯಾದ ಮುಂದಿನ ನಾಯಕ (Future India Captains)  ಆಗಬಹುದು ಎಂಬ ಅವರ ಮಾತು ತೂಕ ಪಡೆದುಕೊಂಡಿದೆ. 

ಸದ್ಯ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಸಹ ರವಿ ಶಾಸ್ತ್ರಿ ಶ್ಲಾಘಿಸಿದ್ದಾರೆ. IPL 2022 ಮಾರ್ಚ್ 26 ರಂದು ಆರಂಭವಾಗಲಿದೆ. ಸೀಸನ್ ಭಯಾನಕ ಕುತೂಹಲಕ್ಕೆ ಕಾರಣವಾಗಿದ್ದು ಭವಿಷ್ಯದ ನಾಯಕನ ಹುಡುಕಾಟಕ್ಕೆ ಅಣಿಯಾಗಲಿದೆ. ಒಟ್ಟು 10 ತಂಡಗಳು ಈ ಬಾರಿ ಮೈದಾನಕ್ಕಿಳಿಯಲಿವೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಅವಕಾಶ ಪಡೆದಿವೆ.

ಇದು ಬಹುದೊಡ್ಡ ಮಾರ್ಗ!
ಐಪಿಎಲ್‌ ಈ ಸೀಸನ್ ಅಂತೂ ಭಾರತದ ಭವಿಷ್ಯದ ಬಗ್ಗೆ ತುಂಬಾ ಮಹತ್ವದ್ದಾಗಿದೆ. ಏಕೆಂದರೆ ಐಪಿಎಲ್ ಭವಿಷ್ಯದ ನಾಯಕನನ್ನು ಹುಡುಕುವ ಏಕೈಕ ಮಾರ್ಗವಾಗಿದೆ ಎಂದು ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಬಲಿಷ್ಠ ನಾಯಕನನ್ನು ಹುಡುಕಲು ಅವಕಾಶ
ರೋಹಿತ್ ಶರ್ಮಾ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ವಿರಾಟ್ ಕೊಹ್ಲಿ ಅವರಂತೂ ನಾಯಕರಲ್ಲ, ಆದರೆ ಭವಿಷ್ಯದಲ್ಲಿ ಟೀಂ ಇಂಡಿಯಾವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ಭಾರತವೇ ಎದುರು ನೋಡಲಿದೆ. ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಈ ರೇಸ್‌ನಲ್ಲಿದ್ದಾರೆ. ಭಾರತ ತಂಡವು ಭವಿಷ್ಯಕ್ಕಾಗಿ ಬಲಿಷ್ಠ ನಾಯಕನನ್ನು ಹುಡುಕಬೇಕಲು ಇದು ಒಳ್ಳೆ ಅವಕಾಶ ಎಂದು ಶಾಸ್ತ್ರಿ ಐಪಿಎಲ್ ಪ್ರಸಾರ ಮಾಡಲು ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

ಹಾರ್ದಿಕ್ ಪಾಂಡ್ಯರ ಮೇಲೆ ದೇಶದ ಕಣ್ಣು!
ಕಳೆದ ಐಪಿಎಲ್‌ನಲ್ಲಿ ನಾವು ವೆಂಕಟೇಶ್ ಅಯ್ಯರ್ ಅವರನ್ನು ನೋಡಿದ್ದೇವೆ. ಅವರ ಬಗ್ಗೆ ಅದಕ್ಕೂ ಮುನ್ನ ಯಾರೂ ಕೇಳಿರಲಿಲ್ಲ. ಆದರೆ ಐಪಿಎಲ್ ಮುಗಿಯುವ ವೇಳೆಗೆ ಅವರು ಭಾರತ ತಂಡವನ್ನು ಸೇರಿಕೊಂಡರು.

ಇದನ್ನೂ ಓದಿ: ನಮ್ಮ RCB ತಂಡದ ಮಾಲೀಕರು ಯಾರು? ನಿಮಗೆ ಗೊತ್ತಿಲ್ಲದ ಮಾಹಿತಿ ಇದು!

ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಾರೋ ಇಲ್ಲವೋ ಎಂಬ ಸಸ್ಪೆನ್ಸ್ ಇನ್ನೂ ಇದೆ.  ಆದರೆ ಇಡೀ ದೇಶವು ಪಾಂಡ್ಯ ಅವರ ಪ್ರತಿಯೊಂದು ನಡೆಯನ್ನೂ ಗಮನಿಸುತ್ತಿದೆ ಎಂದು ಶಾಸ್ತ್ರಿ ಹೇಳಿದರು. ಪಾಂಡ್ಯ ಈ ವರ್ಷ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ. ಗುಜರಾತ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿದೆ.

ವೇಗದ ಬೌಲರ್​ಗಳಿಗೆ ಅನುಕೂಲ ಈ ಪಿಚ್
ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುವುದರಿಂದ ಈ ಆವೃತ್ತಿಯ ಐಪಿಎಲ್‌ನಲ್ಲಿ ವೇಗದ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಆಸ್ಟ್ರೇಲಿಯದ ಪಿಚ್‌ಗಳು ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿವೆ ಎಂದು ಶಾಸ್ತ್ರಿ ಹೇಳಿದ್ದಾರೆ.

ಇದನ್ನೂ ಓದಿ: IPL​ ಕಾಮೆಂಟೇಟರ್​ಗಳ​ ಮೇಲೆ ಹಣದ ಸುರಿಮಳೆ! ಯಾರಿಗೆ ಎಷ್ಟು ಪೇಮೆಂಟ್?

ಐಪಿಎಲ್ 15ನೇ ಸೀಸನ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ಆರಂಭವಾಗಲಿದೆ. ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ನಡುವೆ ನಡೆಯಲಿದೆ. ಮೇ 29 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದ್ದು, ರವಿಶಾಸ್ತ್ರಿ 7 ವರ್ಷಗಳ ನಂತರ ಕಾಮೆಂಟರಿ ಬಾಕ್ಸ್‌ಗೆ ಮರಳುತ್ತಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್ ವರೆಗೂ ಶಾಸ್ತ್ರಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದರು.
Published by:guruganesh bhat
First published: