IPL 2021: RCB ಉತ್ತಮ ಆಟವಾಡುವ ಬಗ್ಗೆ ಆಶಾವಾದಿಯಾಗಿದ್ದೇವೆ ಎಂದ ಕೊಹ್ಲಿ, ಎಬಿಡಿ

ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ನಾಲ್ಕನೇ ಸ್ಥಾನದಿಂದ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದ ನಂತರ ಮೊದಲ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ಸೋಲನುಭವಿಸಿತ್ತು

abd-kohli

abd-kohli

  • Share this:
    ಐಪಿಎಲ್ 2021ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೂಪರ್‌ ಸ್ಟಾರ್‌ಗಳಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರು ಗುರುವಾರ ಚೆನ್ನೈನ ತಮ್ಮ ಹೋಟೆಲ್‌ನಲ್ಲಿ ಚೆಕ್‌ ಇನ್‌ ಆಗಿದ್ದಾರೆ. ಏಪ್ರಿಲ್ 9 ರಂದು ಚೆನ್ನೈನಲ್ಲಿ ಪ್ರಾರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ಮೊದಲೇ ತಮ್ಮ ತಂಡ ಈ ಋತುವಿನಲ್ಲಿ ಸಕಾರಾತ್ಮಕ ವೈಬ್ಸ್‌ಗಳನ್ನು ಪಡೆಯುತ್ತಿದ್ದೇವೆಎಂದು ಈ ವೇಳೆ ಉಭಯ ಆಟಗಾರರು ಹೇಳಿದರು.

    ಟ್ರೈನಿಂಗ್‌ ಸೆಷನ್‌ಗಳಲ್ಲಿ ಭಾಗವಹಿಸುವ ಮೊದಲು ಕೊಹ್ಲಿ ಮತ್ತು ಡಿವಿಲಿಯರ್ಸ್ ಇಬ್ಬರೂ ಏಳು ದಿನಗಳ ಕಾಲ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಆಗಬೇಕಿದೆ. ಈ ವೇಳೆ, ಈ ಋತುವಿನಲ್ಲಿ ಉತ್ತಮ ಆಟವಾಡುವ ಬಗ್ಗೆ ಪಾಸಿಟಿವ್‌ ವೈಬ್ಸ್ ಇದೆ ಎಂದು ಇಬ್ಬರೂ ಹೇಳಿದ್ದಾರೆ.

    "ಇದು ಅತಿವಾಸ್ತವಿಕವಾದದ್ದು ಎಂದು ನಾನು ಭಾವಿಸುತ್ತೇನೆ. ಪ್ರಾಮಾಣಿಕವಾಗಿ, ಈ ನಡುವೆ ಸಾಕಷ್ಟು ಕ್ರಿಕೆಟ್ ಇದ್ದುದರಿಂದ ನಾವು ತುಂಬಾ ದೂರ ಹೋಗಿದ್ದೇವೆ ಎಂದು ಅನಿಸುವುದಿಲ್ಲ. ಆದರೆ ಹೌದು, ನಾವು ಮತ್ತೆ ಭಾರತದಲ್ಲಿ ಆಡುತ್ತಿದ್ದೇವೆ ಎಂದು ತುಂಬಾ ಉತ್ಸುಕರಾಗಿದ್ದೇವೆ. ಆದರೂ, ಬೇರೆ ರೀತಿಯಲ್ಲಿ, ವಿಭಿನ್ನ ಸೆಟ್ಟಿಂಗ್‌ನಲ್ಲಿ. ನಾನು ತುಂಬಾ ಆಶಾವಾದಿಯಾಗಿದ್ದೇನೆ ಮತ್ತು ಹೌದು, ಈ ಸಮಯದಲ್ಲಿ ನನಗೆ ಒಳ್ಳೆಯ ಭಾವನೆ ಇದೆ "ಎಂದು ಕೊಹ್ಲಿ ತಮ್ಮ ಟ್ವಿಟ್ಟರ್‌ ಪೇಜ್‌ನಲ್ಲಿ ಆರ್‌ಸಿಬಿ ಪೋಸ್ಟ್‌ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.

    ಮತ್ತೊಂದೆಡೆ ಡಿವಿಲಿಯರ್ಸ್ ಸಹ "ಇದು ಸುದೀರ್ಘ ಪ್ರಯಾಣವಾಗಿತ್ತು, ಆರ್‌ಸಿಬಿಗೆ ಮರಳಲು ತುಂಬಾ ಸಂತೋಷವಾಗಿದೆ. ನಿನ್ನೆಯಷ್ಟೇ ನಾವು ಐಪಿಎಲ್ ಮುಗಿಸಿದ್ದೇವೆ (ಐಪಿಎಲ್‌ 2020) ಎಂದು ಅನಿಸುತ್ತಿದೆ. ಕಳೆದ ಪಂದ್ಯಾವಳಿಯ ಮೊಮೆಂಟಮ್‌ ನಮಗಿದೆ ಎನಿಸುತ್ತಿದೆ. ಹಾಗೂ ನಾವು ಬಹಳಷ್ಟು ಫನ್‌ ಅನ್ನೂ ಹೊಂದಲಿದ್ದೇವೆ'' ಎಂದು ಹೇಳಿದರು.

    ಈ ವರ್ಷ ಅನುಭವಿ ಮತ್ತು ಹಳೆಯ ಆಟಗಾರರ ಉತ್ತಮ ಮಿಶ್ರಣವಿದೆ ಎಂದ ಎಬಿಡಿ, ಡೇನಿಯಲ್ ಕ್ರಿಶ್ಚಿಯನ್ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ಬಗ್ಗೆ ಮಾತನಾಡಿದರು. ಅಲ್ಲದೆ, ಅವರು ಈ ವರ್ಷದ ಐಪಿಎಲ್‌ನಲ್ಲಿ ಪಂದ್ಯಗಳನ್ನು ಗೆಲ್ಲಿಸಬಹುದು ಎಂದೂ ಆಶಿಸಿದರು.

    ಇನ್ನು, ಈ ಬಾರಿಯ ಐಪಿಎಲ್‌ಗೆ ಆರ್‌ಸಿಬಿ ಈಗಾಗಲೇ ತಮ್ಮ ತರಬೇತಿ ಶಿಬಿರವನ್ನು ಆರಂಭಿಸಿದೆ. ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ಮತ್ತು ಇತರರು ಈಗಾಗಲೇ ಭಾರತ ತಂಢದಲ್ಲಿ ಆಡಿ ಅಂದರೆ ರಾಷ್ಟ್ರೀಯ ಕರ್ತವ್ಯ ಮುಗಿಸಿಕೊಂಡು ನೇರವಾಗಿ ಸೇರಿಕೊಂಡಿದ್ದರು. ಆದರೆ, ಕೊಹ್ಲಿ, ಡಿವಿಲಿಯರ್ಸ್ ಮತ್ತು ತಂಡದ ಇತರೆ ಸದಸ್ಯರು ತಮ್ಮ ಕ್ವಾರಂಟೈನ್‌ ಅವಧಿ ಮುಗಿದ ಬಳಿಕ ಸೇರಿಕೊಳ್ಳಲಿದ್ದಾರೆ.

    ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ನಾಲ್ಕನೇ ಸ್ಥಾನದಿಂದ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದ ನಂತರ ಮೊದಲ ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ಸೋಲನುಭವಿಸಿತ್ತು. ಈ ಬಾರಿ ಐಪಿಎಲ್‌ನ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಟೂರ್ನಿಯ ಆರಂಭಿಕ ದಿನದಂದು ಚೆನ್ನೈನ ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ಮೂಲಕವೇ ತಮ್ಮ ಅಭಿಯಾನವನ್ನು ಆರಂಭಿಸಲಿದೆ.
    First published: